ಭಾರತದಲ್ಲಿ 20,000ರೂ. ಒಳಗೆ ಲಭ್ಯವಾಗುವ ಟ್ಯಾಬ್ಲೆಟ್‌ಗಳು: ಫೀಚರ್ಸ್‌ ಏನು?

|

ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ಗಳಂತೆಯೇ ಟ್ಯಾಬ್ಲೆಟ್‌ಗಳು ಸಹ ಹೆಚ್ಚು ಬಳಕೆ ಮಾಡುವ ಗ್ಯಾಜೆಟ್‌ಗಳಾಗಿವೆ. ಇವುಗಳ ಮೂಲಕ ಇ-ಪುಸ್ತಕಗಳನ್ನು ಓದಬಹುದಾಗಿದೆ ಹಾಗೂ ಸಿನಿಮಾವನ್ನು ಹೆಚ್ಚಿನ ರೆಸಲ್ಯೂಶನ್‌ನಲ್ಲಿ ವೀಕ್ಷಣೆ ಮಾಡಬಹುದಾಗಿದೆ. ಅದರಂತೆ ಸ್ಮಾರ್ಟ್‌ ಗ್ಯಾಜೆಟ್‌ ತಯಾರಿಕಾ ಕಂಪೆನಿಗಳಲ್ಲಿ ಪ್ರಮುಖವಾದ ಒಪ್ಪೋ, ನೋಕಿಯಾ, ಮೊಟೊರೊಲಾ, ರಿಯಲ್‌ಮಿ ಸಂಸ್ಥೆಯ ಗ್ಯಾಜೆಟ್‌ಗಳು ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿಕೊಂಡಿವೆ.

ಟ್ಯಾಬ್ಲೆಟ್‌

ಹೌದು, ಮಾರುಕಟ್ಟೆಯಲ್ಲಿ ಟ್ಯಾಬ್ಲೆಟ್‌ಗಳಿಗೆ ಬೇಡಿಕೆ ಹೆಚ್ಚಿದಂತೆಲ್ಲಾ ಅವುಗಳನ್ನು ವಿವಿಧ ಕಂಪೆನಿಗಳು ಹಲವು ಫೀಚರ್ಸ್‌ ಜೊತೆ ತಯಾರಿಸಿ ಮಾರುಕಟ್ಟೆಗೆ ಪರಿಯಿಸುತ್ತಿದೆ. ಅದರಂತೆ ಉತ್ತಮ ಡಿಸ್‌ಪ್ಲೇ ಇರುವ, ಅತ್ಯುತ್ತಮ ಕ್ಯಾಮೆರಾ ಆಯ್ಕೆ ಇರುವ ಹಾಗೂ ಹೆಚ್ಚಿನ ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿರುವ ಅದರಲ್ಲೂ ಭಾರತದಲ್ಲಿ 20,000ರೂ. ಒಳಗೆ ಲಭ್ಯವಾಗುವ ಪ್ರಮುಖ ಟ್ಯಾಬ್ಲೆಟ್‌ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ನೀವೇನಾದರೂ ಟ್ಯಾಬ್ಲೆಟ್‌ಗಳನ್ನು ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಈ ಲೇಖನ ಉಪಯುಕ್ತವಾಗಲಿದೆ ಓದಿರಿ.

ನೋಕಿಯಾ T20

ನೋಕಿಯಾ T20

ನೋಕಿಯಾ T20 ಟ್ಯಾಬ್ಲೆಟ್‌ ಅನ್ನು ನೀವು 15,499 ರೂ. ಗಳಿಗೆ ಖರೀದಿ ಮಾಡಬಹುದು. ಈ ಟ್ಯಾಬ್ಲೆಟ್‌ 10.40 ಇಂಚಿನ 2000x1200 ಪಿಕ್ಸೆಲ್‌ ರೆಸಲ್ಯೂಶನ್ ಸಾಮರ್ಥ್ಯ ಇರುವ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಯುನಿಸೊಕ್ T610 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, 3GBRAM ಮತ್ತು 32GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ. ಇನ್ನುಳಿದಂತೆ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, 8 ಮೆಗಾಪಿಕ್ಸೆಲ್ ರಿಯರ್‌ ಕ್ಯಾಮೆರಾ ಜೊತೆಗೆ 8200mAh ಸಾಮರ್ಥ್ಯ ಬ್ಯಾಟರಿ ಪಡೆದುಕೊಂಡಿದೆ.

ಒಪ್ಪೋ ಪ್ಯಾಡ್ ಏರ್

ಒಪ್ಪೋ ಪ್ಯಾಡ್ ಏರ್

ಒಪ್ಪೋ ಪ್ಯಾಡ್ ಏರ್ ಟ್ಯಾಬ್ಲೆಟ್‌ಗೆ 16,999ರೂ. ಬೆಲೆ ನಿಗದಿ ಮಾಡಲಾಗಿದೆ. ಈ ಗ್ಯಾಜೆಟ್‌ 10.36 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಇದು 2000x1200 ಪಿಕ್ಸೆಲ್‌ ರೆಸಲ್ಯೂಶನ್ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸುವ ಈ ಡಿವೈಸ್ 4GB RAM ಹಾಗೂ 64GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಪಡೆದುಕೊಂಡಿದೆ. ಇದರ ಜೊತೆಗೆ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹಾಗೂ 8 ಮೆಗಾಪಿಕ್ಸೆಲ್ ರಿಯರ್‌ ಕ್ಯಾಮೆರಾ ಆಯ್ಕೆಯೊಂದಿಗೆ 7100mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ.

ಮೊಟೊರೊನಾ ಮೊಟೊ ಟ್ಯಾಬ್ G62

ಮೊಟೊರೊನಾ ಮೊಟೊ ಟ್ಯಾಬ್ G62

ಮೊಟೊರೊನಾ ಮೊಟೊ ಟ್ಯಾಬ್ G62ಗೆ 17,999 ರೂ. ಗಳನ್ನು ನಿಗದಿ ಮಾಡಲಾಗಿದೆ. ಈ ಡಿವೈಸ್ 10.61 ಇಂಚಿನ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ 1200x2000 ಪಿಕ್ಸೆಲ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಇದರ ಜೊತೆಗೆ ಓಎಸ್ ಆಂಡ್ರಾಯ್ಡ್ 12 ನಲ್ಲಿ ರನ್‌ ಆಗಲಿದ್ದು, 4GB RAM ಹಾಗೂ 64GBಇಂಟರ್ನಲ್‌ ಸ್ಟೋರೇಜ್‌ನೊಂದಿಗೆ ರಿಯರ್‌ ಹಾಗೂ ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಇದರ ಜೊತೆ 7700mAh ಸಾಮರ್ಥ್ಯದ ಬ್ಯಾಟರಿ ಶಕ್ತಿ ಈ ಡಿವೈಸ್‌ಗಿದೆ.

ರಿಯಲ್‌ಮಿ ಪ್ಯಾಡ್ X

ರಿಯಲ್‌ಮಿ ಪ್ಯಾಡ್ X

ರಿಯಲ್‌ಮಿ ಪ್ಯಾಡ್ X ಟ್ಯಾಬ್ಲೆಟ್ ಅನ್ನು ನೀವು 19,999ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಈ ಡಿವೈಸ್ 11.00 ಇಂಚಿನ 1200x2000 ಪಿಕ್ಸೆಲ್‌ ರೆಸಲ್ಯೂಶನ್‌ ಇರುವ ಡಿಸ್‌ಪ್ಲೇ ಹೊಂದಿದ್ದು, ಸ್ನಾಪ್‌ಡ್ರಾಗನ್ 695 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಇದರಲ್ಲಿದ್ದು, 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹಾಗೂ 13 ಮೆಗಾಪಿಕ್ಸೆಲ್ ರಿಯರ್‌ ಕ್ಯಾಮೆರಾ ಆಯ್ಕೆಯ ಜೊತೆಗೆ 8340mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ A8 (LTE)

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ A8 (LTE)

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ A8 (LTE ) ಟ್ಯಾಬ್ಲೆಟ್‌ಗೆ 18,499ರೂ. ಬೆಲೆ ಇದೆ. ಈ ಟ್ಯಾಬ್ಲೆಟ್ 10.50 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಆಕ್ಟಾ-ಕೋರ್ ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 3GB RAM ಹಾಗೂ 32GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಇದ್ದು, 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹಾಗೂ 8 ಮೆಗಾಪಿಕ್ಸೆಲ್ ರಿಯರ್‌ ಕ್ಯಾಮೆರಾ ಇದರಲ್ಲಿದೆ. ಇನ್ನುಳಿದಂತೆ 7040mAh ಸಾಮರ್ಥ್ಯದ ಬ್ಯಾಟರಿಯ ಬಲ ಪಡೆದುಕೊಂಡಿದೆ.

TCL 10 ಟ್ಯಾಬ್ ಮ್ಯಾಕ್ಸ್ (Wi-Fi)

TCL 10 ಟ್ಯಾಬ್ ಮ್ಯಾಕ್ಸ್ (Wi-Fi)

TCL 10 ಟ್ಯಾಬ್ ಮ್ಯಾಕ್ಸ್ (Wi-Fi) ಟ್ಯಾಬ್ಲೆಟ್ ಅನ್ನು ನೀವು 18,999ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಈ ಟ್ಯಾಬ್ಲೆಟ್ 10.36 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 2000x1200 ಪಿಕ್ಸೆಲ್‌ ರೆಸಲ್ಯೂಶನ್ ನೀಡಲಿದೆ. ಹಾಗೆಯೇ ಓಎಸ್ ಆಂಡ್ರಾಯ್ಡ್ 10 ನಲ್ಲಿ ರನ್‌ ಆಗಲಿದ್ದು, 4GB RAM ಮತ್ತು 64GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಇದರಲ್ಲಿದೆ. ಜೊತೆಗೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹಾಗೂ 13 ಮೆಗಾಪಿಕ್ಸೆಲ್ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, 8000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ.

Best Mobiles in India

English summary
tablet are the most used gadgets like smartphones and laptops. Tablets available under Rs. 20,000 in India are detailed.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X