ಕಳೆದ ಮೊಬೈಲ್‌ ಪತ್ತೆಹಚ್ಚಲು ಇದ್ದ ಏಕೈಕ ಮಾರ್ಗ ಮುಚ್ಚಿದರೆ 3 ವರ್ಷ ಜೈಲು!!

ಐಎಂಇಐ ಸಂಖ್ಯೆ ಬದಲಿಸಿ ಪೊಲೀಸರಿಗೆ ಮೊಬೈಲ್ ಪತ್ತೆಹಚ್ಚಲು ಸಾಧ್ಯವಾಗದ ಹಾಗೆ ಮಾಡುತ್ತಿದ್ದರು ಎಂದು ಹೇಳಲಾಗಿತ್ತು.!!

|

ಕಳೆದುಹೋದ ಮೊಬೈಲ್‌ ಫೋನ್‌ಗಳನ್ನು ಪತ್ತೆಹಚ್ಚಲು ಪೊಲೀಸರಿಗಿರುವ ಏಕೈಕ ಮಾರ್ಗವನ್ನು ಮುಚ್ಚುತ್ತಿದ್ದ ಖದೀಮರಿಗೆ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.! ಮೊಬೈಲ್‌ಗ‌ಳ ಐಎಂಇಐ (15 ಅಂಕಿಗಳ ಸೀರಿಯಲ್‌ ನಂಬರ್‌) ಸಂಖ್ಯೆಯನ್ನೇನಾದರೂ ಬದಲಾಯಿಸಲು ಅಥವಾ ತಿರಚಲು ಹೋದರೆ ಕಂಬಿ ಹಿಂದೆ ನಿಲ್ಲಬೇಕಿದೆ.!!

ಇತ್ತೀಚಿನ ಕೆಲವು ದಿವಸಗಳ ಹಿಂದಷ್ಟೆ ಐಎಂಇಐ (15 ಅಂಕಿಗಳ ಸೀರಿಯಲ್‌ ನಂಬರ್‌) ಸಂಖ್ಯೆಯನ್ನು ಬದಲಾಯಿಸುವ ಕುತಂತ್ರ ಕಳ್ಳರಿಗೆ ಸಿಕ್ಕಿರುವುದಾಗಿ ವರದಿಯಾಗಿತ್ತು. ಆ ತಂತ್ರಜ್ಞಾನದಿಂದ ಅವರು ಐಎಂಇಐ ಸಂಖ್ಯೆ ಬದಲಿಸಿ ಪೊಲೀಸರಿಗೆ ಮೊಬೈಲ್ ಪತ್ತೆಹಚ್ಚಲು ಸಾಧ್ಯವಾಗದ ಹಾಗೆ ಮಾಡುತ್ತಿದ್ದರು ಎಂದು ಹೇಳಲಾಗಿತ್ತು.!!

ಕಳೆದ ಮೊಬೈಲ್‌ ಪತ್ತೆಹಚ್ಚಲು ಇದ್ದ ಏಕೈಕ ಮಾರ್ಗ ಮುಚ್ಚಿದರೆ 3 ವರ್ಷ ಜೈಲು!!

ಹಾಗಾಗಿ, ಮೊಬೈಲ್‌ ಕಳ್ಳತನಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರ ಮೊಬೈಲ್‌ಗ‌ಳ ಐಎಂಇಐ ಸಂಖ್ಯೆಯನ್ನೇನಾದರೂ ಬದಲಾಯಿಸಲು ಅಥವಾ ತಿರಚಲು ಹೋದರೆ ಅದು ಅಪರಾಧ ಎಂದು ಘೋಷಿಸಿದೆ. ಯಾರಾದರೂ ಐಎಂಇಐ ಸಂಖ್ಯೆಯನ್ನು ತಿರುಚಿದರೆ, ಅಂಥವರಿಗೆ 3 ವರ್ಷಗಳವರೆಗೆ ಜೈಲು ಹಾಗೂ ದಂಡ ವಿಧಿಸುವುದಾಗಿ ತಿಳಿಸಿದೆ.!!

ಕಳೆದ ಮೊಬೈಲ್‌ ಪತ್ತೆಹಚ್ಚಲು ಇದ್ದ ಏಕೈಕ ಮಾರ್ಗ ಮುಚ್ಚಿದರೆ 3 ವರ್ಷ ಜೈಲು!!

ಮೊಬೈಲ್ ಉತ್ಪಾದಕನ ಹೊರತಾಗಿ ಬೇರೆ ಯಾರಾದರೂ ಉದ್ದೇಶ ಪೂರ್ವಕವಾಗಿ ಐಎಂಇಐ ಸಂಖ್ಯೆಯನ್ನು ಹೊರತೆಗೆಯುವುದು, ಬದಲಿಸುವುದು ಅಥವಾ ತಿರುಚುವುದನ್ನು ಮಾಡಿದರೆ ಅದು ಕಾನೂನುಬಾಹಿರ ಎಂದು ಹೊಸ ನಿಯಮ ಹೇಳುತ್ತಿದ್ದು, ಇನ್ನಾದರೂ ಮೊಬೈಲ್ ಕಳ್ಳರು ಹೆದರುತ್ತಾರಾ? ಎಂದು ನೋಡಬೇಕು.!!

ಓದಿರಿ: ಆಪ್‌ ಡೌನ್‌ಲೋಡ್ ಮಾಡಲು ಮೆಮೊರಿ ಇಲ್ಲವೇ?..ಲಿಂಕ್ ಅನ್ನೇ ಆಪ್ ಮಾಡಿ!!

Best Mobiles in India

English summary
The government has made tampering of IMEI number -- a unique 15-digit serial number of mobile devices .to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X