ವಿದ್ಯಾರ್ಥಿಗಳಿಗೆ ಏರ್‌ಟೆಲ್‌ನಿಂದ ರೂ.400 ಕ್ಕಿಂತ ಕಡಿಮೆಗೆ ಟಾಪ್‌ ವಾಯ್ಸ್ ಕರೆ, ರೋಮಿಂಗ್‌ ಪ್ಲಾನ್‌ಗಳು

Written By:

ಸ್ಟೂಡೆಂಟ್ ಲೈಫೇ ಜೀವನದಲ್ಲಿ ಅತಿ ಹೆಚ್ಚು ಎಂಜಾಯ್ ಲೈಫ್‌. ಆದ್ದರಿಂದ ಎಲ್ಲರೂ ಸಹ ಸ್ಟೂಡೆಂಟ್ ಲೈಫ್‌ ಇಸ್‌ ಎಂಜಾಯ್ ಲೈಫ್‌ ಅನ್ನೋದು. ಯಾರಾದ್ರು ಡೊಮೆಸ್ಟಿಕ್‌ ಲೈಫ್‌ ಇಸ್‌ ಎಂಜಾಯ್‌ ಲೈಫ್‌ ಅನ್ನೋದನ್ನ ಕೇಳಿದ್ದೀರಾ. ಖಂಡಿತಾ ಸಾಧ್ಯವಿಲ್ಲ.

ವಿದ್ಯಾರ್ಥಿ ಜೀವನದಲ್ಲಿ ಗೆಳೆಯ, ಗೆಳೆತಿಯರೊಂದಿಗೆ ಶೇರ್‌ ಮಾಡಿಕೊಳ್ಳಲು ಹಲವಾರು ಮಾಹಿತಿಗಳು ಇರುತ್ತವೆ. ಅಂದಹಾಗೆ ಮೊಬೈಲ್‌ನಲ್ಲಿ ಬ್ಯಾಲೆನ್ಸ್ ಇಲ್ಲ ಅನ್ನುವವರು ಒಂದು ಕಡೆಯಾದರೆ, ಇನ್ನೂ ಹಲವು ವಿದ್ಯಾರ್ಥಿಗಳು ತಮ್ಮ ಸ್ನೇಹಿತರಿಗೆ ಹಾಟ್‌ಸ್ಪಾಟ್‌ ಮೂಲಕ ಇಂಟರ್ನೆಟ್‌ ಶೇರ್‌ ಮಾಡಿದರೆ ಬಿಲ್‌ ಹೆಚ್ಚಾಗುತ್ತದೆ ಎಂದು ಚಿಂತಿಸುತ್ತಾರೆ. ಮೊಬೈಲ್‌ ಬಳಸುವ ವಿದ್ಯಾರ್ಥಿಗಳು ಇಂತಹ ಚಿಂತೆಗಳಿಗೆಲ್ಲಾ ಬ್ರೇಕ್ ಹಾಕಿ. ನಾವು ತಿಳಿಸುವ ಏರ್‌ಟೆಲ್‌ ಟ್ಯಾರಿಫ್ ಪ್ಲಾನ್‌ಗಳನ್ನು ತಿಳಿಯಿರಿ.

ಹೌದು, ಏರ್‌ಟೆಲ್‌(Airtel) ವಿದ್ಯಾರ್ಥಿಗಳಿಗಾಗಿ ರೂ.400 ಕ್ಕಿಂತ ಕಡಿಮೆ ಬೆಲೆಯಲ್ಲಿ ಹಲವು ಟ್ಯಾರಿಫ್ ಪ್ಲಾನ್‌ಗಳನ್ನು ನೀಡುತ್ತಿದ್ದು, ಅವುಗಳು ಯಾವುದು ಎಂದು ಲೇಖನದ ಸ್ಲೈಡರ್‌ಗಳನ್ನು ಓದಿ ತಿಳಿಯಿರಿ. ಈ ಟ್ಯಾರಿಫ್‌ ಪ್ಲಾನ್‌ಗಳಿಗೆ ತಿಂಗಳ ಅಂತ್ಯದಲ್ಲಿ ಬಿಲ್‌ ಪಾವತಿಸಬೇಕಷ್ಟೆ.

ಏರ್‌ಟೆಲ್ ಉಚಿತ 3ಜಿಯನ್ನು ಬಳಸುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ.18 ಕ್ಕೆ 150 ಸ್ಥಳೀಯ ಎಸ್‌ಎಂಎಸ್‌ಗಳು

ರೂ.18 ಕ್ಕೆ 150 ಸ್ಥಳೀಯ ಎಸ್‌ಎಂಎಸ್‌ಗಳು

ನೀವು ಹೆಚ್ಚು ವಾಯ್ಸ್ ಕರೆಗಿಂತ ಮೆಸೇಜ್‌ ಸೆಂಡ್‌ಮಾಡುವ ಹವ್ಯಾಸಿಗರೆ ಹಾಗಿದ್ದಲ್ಲಿ, ರೂ.18 ಕ್ಕೆ 150 ಸ್ಥಳೀಯ ಎಸ್‌ಎಂಎಸ್‌ಗಳ ಪ್ಲಾನ್‌ ಅನ್ನು ಸ್ವೀಕರಿಸಬಹುದು. ಈ ಪ್ಲಾನ್‌ 14 ದಿನಗಳವರೆಗೆ ವ್ಯಾಲಿಡಿಟಿ ಹೊಂದಿದೆ.

ರೂ.21 ಕ್ಕೆ ಉಚಿತ ಇನ್‌ಕಮಿಂಗ್‌ ಕರೆಗಳು

ರೂ.21 ಕ್ಕೆ ಉಚಿತ ಇನ್‌ಕಮಿಂಗ್‌ ಕರೆಗಳು

ನೀವು ಹೆಚ್ಚಾಗಿ ಪ್ರವಾಸ ಮಾಡುವವರೇ ಆಗಿದ್ದಲ್ಲಿ, ಈ ಪ್ಲಾನ್‌ ಅತ್ಯುತ್ತಮವಾಗಿದೆ. ರೂ.21 ಕ್ಕೆ ಉಚಿತ ಇನ್‌ಕಮಿಂಗ್‌ ಕರೆಗಳು ಲಭ್ಯವಿದ್ದು, ಔಟ್‌ಗೋಯಿಂಗ್‌ ಕರೆಗಳಿಗೆ ನಿಮಿಷಕ್ಕೆ 80 ಪೈಸೆ ಚಾರ್ಜ್‌ ಆಗುತ್ತದೆ. ಎಸ್‌ಟಿಡಿ ಕರೆಗಳಿಗೆ ನಿಮಿಷಕ್ಕೆ 1.15 ರೂ ಚಾರ್ಜ್‌ ಆಗಲಿದ್ದು, 5 ದಿನ ವ್ಯಾಲಿಡಿಟಿ ಇರುತ್ತದೆ.

ಎಲ್ಲಾ ಮೊಬೈಲ್‌ ಕರೆಗಳಿಗೆ ಸೆಕೆಂಡ್‌ಗೆ 1 ಪೈಸೆ

ಎಲ್ಲಾ ಮೊಬೈಲ್‌ ಕರೆಗಳಿಗೆ ಸೆಕೆಂಡ್‌ಗೆ 1 ಪೈಸೆ

ನೀವು ಹೆಚ್ಚಾಗಿ ಮೊಬೈಲ್‌ನಲ್ಲಿ ಮಾತನಾಡುವ ವ್ಯಕ್ತಿಯೇ ಆಗಿದ್ದಲ್ಲಿ, ಈ ಪ್ಲಾನ್ ಉತ್ತಮವಾಗಿದೆ. 27 ರೂ ರೀಚಾರ್ಜ್‌ ಮಾಡಿಸುವುದರ ಮುಖಾಂತರ ಒಂದು ಸೆಕೆಂಡ್‌ಗೆ 1 ಪೈಸೆ ಚಾರ್ಜ್‌ ಆಗುತ್ತದೆ. ಅಲ್ಲದೇ 28 ದಿನಗಳ ವ್ಯಾಲಿಡಿಟಿ ಇರುತ್ತದೆ.

ರೂ.46 ಕ್ಕೆ 120MB 2G/3G/4G ಡಾಟಾ

ರೂ.46 ಕ್ಕೆ 120MB 2G/3G/4G ಡಾಟಾ

ನೀವು ಹೆಚ್ಚಾಗಿ ಇಂಟರ್ನೆಟ್‌ ಬಳಸುತ್ತೀರಾ? ಹಾಗಿದ್ದಲ್ಲಿ ರೂ.46 ಕ್ಕೆ ರೀಚಾರ್ಜ್‌ ಮಾಡಿಸಿ 120MB 2G/3G/4G ಡಾಟಾ ಪಡೆಯಿರಿ. ಈ ಪ್ಲಾನ್‌ ನಿಮಗೆ 28 ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ.

ರೂ.100 ರೀಚಾರ್ಜ್‌ ಮಾಡಿಸಿ ರೂ.83.96 ಟಾಕ್‌ಟೈಮ್‌ ಪಡೆಯಿರಿ.

ರೂ.100 ರೀಚಾರ್ಜ್‌ ಮಾಡಿಸಿ ರೂ.83.96 ಟಾಕ್‌ಟೈಮ್‌ ಪಡೆಯಿರಿ.

ರೂ.100 ರೀಚಾರ್ಜ್‌ ಮಾಡಿಸಿ ರೂ.83.96 ಟಾಕ್‌ಟೈಮ್‌ ಪಡೆಯಿರಿ. ಈ ರೀಚಾರ್ಜ್ ಅನ್‌ಲಿಮಿಟೆಡ್‌ ವ್ಯಾಲಿಡಿಟಿ ಇರುತ್ತದೆ.

 ರೂ.249 ಕ್ಕೆ ವಿಶೇಷ ರೀಚಾರ್ಜ್‌ ಕಾಂಬೊ

ರೂ.249 ಕ್ಕೆ ವಿಶೇಷ ರೀಚಾರ್ಜ್‌ ಕಾಂಬೊ

ಅಂದಹಾಗೆ ಇದನ್ನು ಕಾಂಬೊ ಎಂದು ವಿಶೇಷ ಕಾರಣದಿಂದ ಕರೆಯಲಾಗುತ್ತದೆ,. ರೂ.249 ರೀಚಾರ್ಜ್‌ನಿಂದ ಸಂಪೂರ್ಣ ಟಾಕ್‌ಟೈಮ್‌ ಬ್ಯಾಲೆನ್ಸ್ ಪಡೆಯುತ್ತೀರಿ. ಅಲ್ಲದೇ ವಿಶೇಷವಾಗಿ 5 ಸ್ಥಳೀಯ ಏರ್‌ಟೆಲ್‌ನಿಂದ ಏರ್‌ಟೆಲ್‌ಗೆ ರಾತ್ರಿ ವೇಳೆ ಎಸ್‌ಎಂಎಸ್‌ ಆಫರ್‌ ಸಿಗುತ್ತದೆ. ಎಸ್‌ಎಂಎಸ್‌ ಆಫರ್‌ ವ್ಯಾಲಿಡಿಟಿ 2 ದಿನಗಳು ಇರುತ್ತವೆ.

ಇತರೆ ಕಾಂಬೊ ಪ್ಲಾನ್‌

ಇತರೆ ಕಾಂಬೊ ಪ್ಲಾನ್‌

ನಿಮ್ಮ ಮೊಬೈಲ್ ಅನ್ನು ರೂ.257 ರಿಂದ ರೀಚಾರ್ಜ್‌ ಮಾಡಿಸಿ. ಇದರಿಂದ ಅನ್‌ಲಿಮಿಟೆಡ್‌ ವ್ಯಾಲಿಡಿಟಿಯ ರೂ.100 ಟಾಕ್‌ಟೈಮ್‌ ಬ್ಯಾಲೆನ್ಸ್ ಬರುತ್ತದೆ. 500MB 3G/4G ಡಾಟಾ ತಿಂಗಳ ವ್ಯಾಲಿಡಿಟಿಯೊಂದಿಗೆ ದೊರೆಯುತ್ತದೆ.

ರೂ.350 ಕ್ಕೆ ಪೂರ್ಣ ಟಾಕ್‌ಟೈಮ್‌

ರೂ.350 ಕ್ಕೆ ಪೂರ್ಣ ಟಾಕ್‌ಟೈಮ್‌

ಟ್ಯಾರಿಫ್‌ ಪ್ಲಾನ್‌ ಹೇಳುವಂತೆ ರೂ.350 ರೀಚಾರ್ಜ್‌ ಮಾಡಿಸಿದರೆ ಟಾಕ್‌ಟೈಮ್ ರೂ.350 ಬರುತ್ತದೆ.

 ರೂ.199 ಕ್ಕೆ 3 ಪ್ಯಾಕ್‌ಗಳನ್ನು ಪಡೆಯಿರಿ (ಪೋಸ್ಟ್‌ಪೇಡ್)

ರೂ.199 ಕ್ಕೆ 3 ಪ್ಯಾಕ್‌ಗಳನ್ನು ಪಡೆಯಿರಿ (ಪೋಸ್ಟ್‌ಪೇಡ್)

ರೂ.199 ಕ್ಕೆ 6 ವಿವಿಧ ಪ್ಯಾಕ್‌ಗಳಲ್ಲಿ 3 ಪ್ಯಾಕ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರಲ್ಲಿ 120MB ಡಾಟಾ, 270 ನಿಮಿಷ ಸ್ಥಳೀಯ ಕರೆಗಳು, 80 ನಿಮಿಷ ಎಸ್‌ಟಿಡಿ ಕರೆಗಳು, 120 ನಿಮಿಷ ರೋಮಿಂಗ್‌ ಕರೆಗಳು, 200 ರಾಷ್ಟ್ರೀಯ ಎಸ್‌ಎಂಎಸ್‌, 6 ನಿಮಿಷ ಅಂತರರಾಷ್ಟ್ರೀಯ ಕರೆಗಳು(ಅಮೆರಿಕ, ಬ್ರಿಟನ್‌, ಕೆನಡಾ)

ರೂ.399 ಕ್ಕೆ 11 ಪ್ಯಾಕ್‌ಗಳು (ಪೋಸ್ಟ್‌ಪೇಡ್)

ರೂ.399 ಕ್ಕೆ 11 ಪ್ಯಾಕ್‌ಗಳು (ಪೋಸ್ಟ್‌ಪೇಡ್)

ರೂ.399 ರೀಚಾರ್ಜ್‌ ಮಾಡಿಸುವುದರಿಂದ ಮೇಲೆ ತಿಳಿಸಿದ 6 ಪ್ಯಾಕ್‌ಗಳ ರೀತಿಯಲ್ಲಿ ವಿವಿಧ ರೀತಿಯ ನಿಮ್ಮ ಅಗತ್ಯಕ್ಕೆ ತಕ್ಕ ಪ್ಯಾಕ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 

Read more about:
English summary
Tariff Offers: Top 10 Airtel Internet, Voice Calls, Roaming Plans for Students, Priced Under Rs. 400. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot