Subscribe to Gizbot

ದರ ಸಮರಕ್ಕೆ ಜಿಗಿದ ಟಾಟಾ ಡೊಕೊಮೊ: ಬಳಕೆದಾರರಿಗೆ ಭರ್ಜರಿ ಡೇಟಾ..!

Written By:

ಟೆಲಿಕಾಂ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ದರ ಸಮರಕ್ಕೆ ಟಾಟಾ ಡೊಕೊಮೊ ಸಹ ಸೇರಿಕೊಂಡಿದೆ. ಏರ್‌ಟೆಲ್‌-ಜಿಯೋ ಎದುರಾಗಿ ಬಳಕೆದಾರರಿಗೆ ಹೊಸ ಆಫರ್ ಗಳನ್ನು ನೀಡಲು ಮುಂದಾಗಿದೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯ ಬಳಕೆದಾರರನ್ನು ಸೆಳೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಅದರಲ್ಲಿಯೂ 3G ಬಳಕೆದಾರರಿಗೆ ಹೇಳಿ ಮಾಡಿಸಿದ ಆಫರ್ ಇದಾಗಿದೆ.

ಏರ್‌ಟೆಲ್ ಮಾದರಿಯಲ್ಲಿ ಆಫರ್ ಗಳನ್ನು ನೀಡಲು ಮುಂದಾಗಿರುವ ಟಾಟಾ ಡೊಕೊಮೊ, ರೂ.82 ರಿಂದ ರೂ.499ರ ವರೆಗೆ ವಿವಿಧ ಆಫರ್‌ಗಳನ್ನು ನೀಡುತ್ತಿದೆ. ಇದರಲ್ಲಿ ಬಳಕೆದಾರರಿಗೆ ಕರೆ ಮಾಡುವ ಅವಕಾಶ ಮತ್ತು ಡೇಟಾವನ್ನು ಬಳಕೆಗೆ ನೀಡುತ್ತಿದೆ ಎನ್ನಲಾಗಿದೆ. ಆದರೆ ಇದು 3G ಗುಣಮಟ್ಟದ ಡೇಟಾವಾಗಿರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ.499 ಪ್ಲಾನ್‌:

ರೂ.499 ಪ್ಲಾನ್‌:

ಈ ಪ್ಲಾನ್ ಅನ್ನು ಈಗಾಗಲೇ ಬಳಕೆ ಮಾಡುತ್ತಿರುವವರಿಗೆ ಮತ್ತು ನೂತನ ಬಳಕೆದಾರರಿಬ್ಬರಿಗೂ ನೀಡಲಿದೆ ಎನ್ನಲಾಗಿದೆ. ಇದರಲ್ಲಿ ಬಳಕೆದಾರರಿಗೆ 90 ದಿನಗಳ ವ್ಯಾಲಿಡಿಟಿಯೂ ದೊರೆಯಲಿದೆ. ಅಲ್ಲದೇ ದಿನಕ್ಕೆ 1.4GB ಡೇಟಾ ಸಹ ದೊರೆಯಲಿದೆ. ಇದು ಮುಗಿದ ಮೇಲೆ ಬಳಕೆದಾರರಿಗೆ 1MB ಡೇಟಾಕ್ಕೆ 10 ಪೈಸಾ ಚಾರ್ಜ್ ಮಾಡಲಿದೆ.

ಒಟ್ಟು 126 GB ಡೇಟಾ:

ಒಟ್ಟು 126 GB ಡೇಟಾ:

ಟಾಟಾ ಡೊಕೊಮೊ ಬಳಕೆದಾರರಿಗೆ ಈ ಆಪರ್ ನಲ್ಲಿ ಒಟ್ಟು 126GB ಡೇಟಾವನ್ನು ಬಳಕೆಗೆ ನೀಡಲಿದೆ ಎನ್ನಲಾಗಿದೆ. ಅಲ್ಲದೇ ಇದರೊಂದಿಗೆ ನಿತ್ಯ 250 ನಿಮಿಷಗಳ ಕಾಲ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ನೀಡಲಿದೆ. ಇದಾದ ಮೇಲೆ ದರವನ್ನು ವಿಧಿಸಲಿದೆ.

ಉಚಿತ SMS:

ಉಚಿತ SMS:

ಇದಲ್ಲದೇ ಬಳಕೆದಾರರಿಗೆ ನಿತ್ಯ 100SMS ಸೆಂಡ್ ಮಾಡುವ ಅವಕಾಶವನ್ನು ನೀಡಲಿದೆ. ಇದಾದ ಮೇಲೆ ಹೆಚ್ಚಿನ SMSಗಳನ್ನು ಕಳುಹಿಸುವ ಅವಕಾಶವು ಇಲ್ಲ ಎನ್ನಲಾಗಿದೆ. ಇದು ಎಲ್ಲಾ ಬಳಕೆದಾರರಿಗೂ ದೊರೆಯಲಿದೆ.

How to Send a WhatsApp Message Without Saving the Contact in Your Phone - GIZBOT KANNADA
ಆಪ್ ನಲ್ಲಿ ಮಾತ್ರ:

ಆಪ್ ನಲ್ಲಿ ಮಾತ್ರ:

ಟಾಟಾ ಡೊಕೊಮೊ ಬಳಕೆದಾರರಿಗೆ ನೀಡಿರುವ ಈ ಆಪರ್ ಕೇಲವ ಟಾಟಾ ಡೊಕೊಮೊ ಆಪ್ ನಲ್ಲಿ ಮಾತ್ರವೇ ದೊರೆಯಲಿದೆ ಎನ್ನಲಾಗಿದೆ. ಬೇರೆ ಕಡೆಗಳಲ್ಲಿ ರೀಚಾರ್ಜ್ ಮಾಡಿಸಿಕೊಂಡರೆ ದೊರೆಯುವುದಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Tata Docomo’s Rs 499 Prepaid Plan Now Offering 126GB 3G Data for 90 Days. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot