ಟಾಟಾ ಗ್ರೂಪ್‌ನಿಂದ ಶೀಘ್ರದಲ್ಲೇ ಬರಲಿದೆ ಸೂಪರ್‌ ಆಪ್‌ Neu!

|

ದೇಶದ ಪ್ರಮುಖ ಟಾಟಾ ಗ್ರೂಪ್‌ ತನ್ನ ಬಹು ನಿರೀಕ್ಷಿತ ಸೂಪರ್ ಆಪ್ Neu ಅಪ್ಲಿಕೇಶನ್‌ ಲಾಂಚ್‌ ಮಾಡಲು ಸಿದ್ಧತೆ ನಡೆಸಿದೆ. ಈ ಅಪ್ಲಿಕೇಶನ್‌ ಇದೇ ಏಪ್ರಿಲ್ 7 ರಂದು ಬಿಡುಗಡೆಯಾಗಲಿದ್ದು, ಗೂಗಲ್‌ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದಾಗಿದೆ. ಸದ್ಯ ಟಾಟಾ ಗ್ರೂಪ್‌ ಕಂಪನಿ ತನ್ನ ಡಿಜಿಟಲ್ ವಿಂಗ್‌ ಅನ್ನು ಬೆಳೆಸುವುದಕ್ಕಾಗಿ ಹೊಸ ಪ್ರಯತ್ನಗಳಿಗೆ ಮುಂದಾಗಿದೆ. ಇದೇ ಕಾರಣಕ್ಕೆ Neu ಅಪ್ಲಿಕೇಶನ್‌ ಅನ್ನು ಲಾಂಚ್‌ ಮಾಡಲು ಮುಂದಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಈಗಾಗಲೇ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಅಮೆಜಾನ್‌, ಫ್ಲಿಪ್‌ಕಾರ್ಟ್‌ ಮತ್ತು ರಿಲಯನ್ಸ್‌ ಗ್ರೂಪ್‌ನ ಜಿಯೋ ಮಾರ್ಟ್‌ ಜೊತೆಗೆ ಕಠಿಣ ಸ್ಪರ್ಧೆಯನ್ನು ನೀಡಬಹುದು ಎನ್ನಲಾಗಿದೆ.

ಟಾಟಾ ಗ್ರೂಪ್‌

ಹೌದು, ಟಾಟಾ ಗ್ರೂಪ್‌ ಕಂಪೆನಿ ಏಪ್ರಿಲ್‌ 7 ರಂದು neu ಅಪ್ಲಿಕೇಶನ್ ಲಾಂಚ್‌ ಮಾಡಲಿದೆ. ಈ ಅಪ್ಲಿಕೇಶನ್‌ ಮೂಲಕ ವಿಮಾನಯಾನ ಸಂಸ್ಥೆಗಳು, ಹೋಟೆಲ್‌ಗಳು, ಔಷಧಗಳು ಮತ್ತು ದಿನಸಿಗಳನ್ನು ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ ಬುಕ್‌ ಮಾಡಲು ಅವಕಾಶ ಸಿಗಲಿದೆ. ಸದ್ಯ ಟಾಟಾ ನ್ಯೂ ಆಪ್ ಇಂಟರ್‌ಫೇಸ್‌ನ ಫೋಟೋ ಕೂಡ ಬಹಿರಂಗವಾಗಿದೆ. ಡಾರ್ಕ್ ಥೀಮ್ ಜೊತೆಗೆ, ಈ ಅಪ್ಲಿಕೇಶನ್‌ನಲ್ಲಿ ಹಲವು ಉಪಯೋಗಗಳೊಂದಿಗೆ ಹಲವಾರು ವಿಭಿನ್ನ ಐಕಾನ್‌ಗಳನ್ನು ಕಾಣಬಹುದು. ಇನ್ನುಳಿದಂತೆ ಈ ಅಪ್ಲಿಕೇಶನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಪ್ಲಿಕೇಶನ್‌

ಟಾಟಾ Neu ಅಪ್ಲಿಕೇಶನ್‌ ಮೂಲಕ ನೀವು ವಿಮಾನಯಾನ ಟಿಕೆಟ್‌ ಬುಕ್‌ ಮಾಡಬಹುದು. ಹೋಟೆಲ್‌ ರೂಮ್‌ ಬುಕ್ಕಿಂಗ್‌, ಔಷಧಿ ಮತ್ತು ದಿನಸಿಗಳನ್ನು ಆರ್ಡರ್‌ ಮಾಡಬಹುದು. ಅಷ್ಟೇ ಅಲ್ಲ ನೀವು Neu ಅಪ್ಲಿಕೇಶನ್‌ನಿಂದ ಕಾರನ್ನು ಸಹ ಬುಕ್ ಮಾಡಲು ಸಾಧ್ಯವಾಗುತ್ತದೆ. ಇದಲ್ಲದೆ ಟಾಟಾ Neu ಅಪ್ಲಿಕೇಶನ್ ಎಲ್ಲಾ ಗುಂಪಿನ ಸೇವೆಗಳನ್ನು ಒಂದೇ ಅಪ್ಲಿಕೇಶನ್‌ನಲ್ಲಿ ಒದಗಿಸುವ ಆಲ್-ಇನ್-ಒನ್ ಪ್ಲಾಟ್‌ಫಾರ್ಮ್ ಆಗಿದೆ. ಈ ಅಪ್ಲಿಕೇಶನ್ ವಿಶೇಷ ಆಫರ್‌ಗಳು, ಪ್ರಯೋಜನಗಳನ್ನು ಸಹ ಹೊಂದಿರಲಿದೆ.

ಟಾಟಾ ಪೇ

ಇನ್ನು ಟಾಟಾ ಪೇ ಬಳಸಿಕೊಂಡು ಯಾವುದೇ ಆನ್‌ಲೈನ್ ಮತ್ತು ಅಂಗಡಿಯಲ್ಲಿ ಖರೀದಿಸಿದ ಮತ್ತು ಬಿಲ್‌ಗಳಿಗೆ ಜನರು ತಕ್ಷಣವೇ ಪಾವತಿಸಬಹುದು. ಸದ್ಯ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಟಾಟಾ Neu ಅಪ್ಲಿಕೇಶನ್ ಬಳಕೆದಾರರು ಪ್ರತಿ ಬಾರಿ ಶಾಪಿಂಗ್, ಬುಕ್ ಫ್ಲೈಟ್‌ಗಳು ಮತ್ತು ಹೋಟೆಲ್‌ಗಳು ಇತ್ಯಾದಿಗಳಿಗೆ ಬಹುಮಾನ ನೀಡುತ್ತದೆ. ಜೊತೆಗೆ ಖರ್ಚು ಮಾಡಲು, ಟಾಟಾ Neu ಅಪ್ಲಿಕೇಶನ್ ಇತರ ಸೇವೆಗಳಿಗೆ ರಿಡೀಮ್ ಮಾಡಬಹುದಾದ Neu ಕಾಯಿನ್ಸ್‌ ರೂಪದ ರಿವಾರ್ಡ್‌ಗಳನ್ನು ನೀಡಲಿದೆ.

ಟಾಟಾ Neu ಅಪ್ಲಿಕೇಶನ್

ಟಾಟಾ Neu ಅಪ್ಲಿಕೇಶನ್ ಅನ್ನು ಪ್ರಾರಂಭಿಸುವ ಮೊದಲು, ಅಪ್ಲಿಕೇಶನ್ ಅನ್ನು ಟಾಟಾ ಸ್ಟೀಲ್‌ನ ಉದ್ಯೋಗಿಗಳಿಗೆ ಬಳಕೆಗೆ ಲಭ್ಯಗೊಳಿಸಲಾಗಿತ್ತು. ಜೊತೆಗೆ, ಸೂಪರ್ ಆಪ್ ಪ್ರಚಾರಕ್ಕಾಗಿ ಟಾಟಾ ಸ್ಟೀಲ್ ತನ್ನ ಎಲ್ಲಾ ಉದ್ಯೋಗಿಗಳಿಗೆ 1000-1000 ಸೂಪರ್ ನಿಯೋ ಕಾಯಿನ್‌ಗಳನ್ನು ನೀಡಿದೆ. ಇದರ ಸಹಾಯದಿಂದ ಟಾಟಾ ಸ್ಟೀಲ್ ಉದ್ಯೋಗಿಗಳು ಅಪ್ಲಿಕೇಶನ್‌ನಿಂದ ಯಾವುದೇ ವಸ್ತುವನ್ನು ಖರೀದಿಸುವ ಫ್ರೀಡಂ ಹೊಂದಿದ್ದಾರೆ. ಸದ್ಯ ಏಪ್ರಿಲ್ 7 ರಂದು ಈ ಅಪ್ಲಿಕೇಶನ್‌ ಬಿಡುಗಡೆ ಆಗಲಿದ್ದು, ಎಲ್ಲಾ ಬಳಕೆದಾರರಿಗೂ ಲಭ್ಯವಾಗಲಿದೆ.

UPI-ಆಧಾರಿತ ಅಪ್ಲಿಕೇಶನ್‌

ಇನ್ನು ಭಾರತದಲ್ಲಿ ಹೊಸ UPI-ಆಧಾರಿತ ಅಪ್ಲಿಕೇಶನ್‌ ಅನ್ನು ಪರಿಚಯಿಸಲು ಟಾಟಾ ಗ್ರೂಪ್ ಸಿದ್ಧತೆ ನಡೆಸಿದೆ. ಥರ್ಡ್-ಪಾರ್ಟಿ ಅಪ್ಲಿಕೇಶನ್ ಪ್ರೊವೈಡರ್ಸ್ (ಟಿಪಿಎಪಿ) ಆಗಿ ಕಾರ್ಯನಿರ್ವಹಿಸಲು ಟಾಟಾ ಗ್ರೂಪ್ ಅನುಮತಿ ಕೋರಿದೆ. ಟಾಟಾ ಗ್ರೂಪ್‌ನ ಟಾಟಾ ಡಿಜಿಟಲ್ ಹೊಸ ಪಾವತಿ ಸೇವೆಗಾಗಿ ಐಸಿಐಸಿಐ ಬ್ಯಾಂಕ್‌ನೊಂದಿಗೆ ಮಾತುಕತೆ ನಡೆಸುತ್ತಿದೆ. ಇದಲ್ಲದೆ ಟಾಟಾ ಗ್ರೂಪ್ ಇತರ ಖಾಸಗಿ ವಲಯದ ಬ್ಯಾಂಕಿಂಗ್ ಸಂಸ್ಥೆಗಳೊಂದಿಗೆ ಸಹಭಾಗಿತ್ವದಲ್ಲಿ ಕೆಲಸ ಮಾಡುವುದಕ್ಕೆ ಮುಂದಾಗಿದೆ. ಟಾಟಾ Neu ಅಪ್ಲಿಕೇಶನ್‌ ಮೂಲಕ ಹೆಚ್ಚಿನ UPI ಪಾವತಿಗಳನ್ನು ಸೂಪರ್ ಅಪ್ಲಿಕೇಶನ್‌ನಾದ್ಯಂತ ಸುಲಭವಾಗಿ ಸಕ್ರಿಯಗೊಳಿಸಬಹುದು ಎಂದು ಹೇಳಲಾಗಿದೆ.

Most Read Articles
Best Mobiles in India

Read more about:
English summary
Tata Neu is an all-in-one platform that provides all the group's services on a single app.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X