ಟಾಟಾಪ್ಲೇ ಬಿಂಜ್‌ನಲ್ಲಿ ಈಗ 17 OTT ಆಪ್ಸ್‌; ತಿಂಗಳ ಶುಲ್ಕ ಬರೀ 59ರೂ.!

|

ಜನಪ್ರಿಯ ಟಾಟಾ ಪ್ಲೇ ಮತ್ತು MX ಪ್ಲೇಯರ್ ಅಧಿಕ ಮನರಂಜನಾ ಕಂಟೆಂಟ್‌ ಒದಗಿಸಲು ಸಜ್ಜಾಗಿವೆ. ಟಾಟಾ ಪ್ಲೇ ಬಿಂಜ್ ಎಂಬ ಆಲ್-ಇನ್-ಒನ್ ಓಟಿಟಿ (OTT) ಸೇವೆಯನ್ನು ನೀಡುತ್ತದೆ. ಈ ಬಿಂಜ್‌ ಪ್ಯಾಕ್‌ ಡಿಸ್ನಿ+ ಹಾಟ್‌ಸ್ಟಾರ್, ಜೀ5, ವೂಟ್‌ ಸೆಲೆಕ್ಟ್‌, ಸೋನಿ ಲೈವ್‌ ಎರೋಸ್‌ ನವ್‌ (ErosNow) ಸೇರಿದಂತೆ ಇತರೆ ಓಟಿಟಿ ಅಪ್ಲಿಕೇಶನ್‌ಗಳ ಆಯ್ಕೆ ಒಳಗೊಂಡಿದೆ. ಇದೀಗ ಟಾಟಾಪ್ಲೇ ಜನಪ್ರಿಯ MX ಪ್ಲೇಯರ್ ಟಾಟಾ ಪ್ಲೇ ಬಿಂಜ್ ನಲ್ಲಿ ಸೇರಿಸಿದೆ.

ಪ್ಲೇಯರ್‌

ಹೌದು, MX ಪ್ಲೇಯರ್ ವಿಡಿಯೋ ಪ್ಲೇಯರ್‌ ಅಪ್ಲಿಕೇಶನ್ ಆಗಿದ್ದು, ಆಂಡ್ರಾಯ್ಡ್‌ ನಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದೆ. ಬಳಿಕ ಈ ಆಪ್‌ ಚಲನಚಿತ್ರ, ಇತರೆ ಶೋ/ಕಾರ್ಯಕ್ರಮಗಳು ಸೇರ್ಪಡೆ ಮಾಡಿಕೊಳ್ಳುವ ಮೂಲಕ ಓಟಿಟಿ ಆಪ್‌ ಆಗಿ ಬದಲಾಯಿತು. ಇದೀಗ MX ಪ್ಲೇಯರ್ ಆಪ್‌ ಟಾಟಾಪ್ಲೇ ಬಿಂಜ್‌ ಸೇರ್ಪಡೆ ಆಗಿದೆ. ಈ ಮೂಲಕ ಟಾಟಾಪ್ಲೇ ಬಿಂಜ್ ಒಂದೇ ಸೂರಿನಡಿ ಒಟ್ಟು 17 ಓಟಿಟಿ ಆಪ್‌ಗಳ ಆಯ್ಕೆಯನ್ನು ಪಡೆದಿದೆ.

ಪ್ಲೇಯರ್‌

ಟಾಟಾ ಪ್ಲೇ (Tata Play) ಮತ್ತು MX ಪ್ಲೇಯರ್‌ ಜೊತೆಯಾಗಿದ್ದು, ಈ ಮೂಲಕ MX ಪ್ಲೇಯರ್‌ ವೀಡಿಯೊ ಸ್ಟ್ರೀಮಿಂಗ್ ಆಪ್‌ ಟಾಟಾ ಪ್ಲೇ ಬಿಂಜ್ ಪ್ಯಾಕ್‌ನಲ್ಲಿ ಸಿಗಲಿದೆ. ಟಾಟಾಪ್ಲೇ ಬಿಂಜ್‌ನಲ್ಲಿ 16 ಓಟಿಟಿ ಆಪ್‌ಗಳು ಇದ್ದವು, ಇದೀಗ MX ಪ್ಲೇಯರ್‌ ಸೇರ್ಪಡೆಯಿಂದ ಟಾಟಾ ಪ್ಲೇ ಬಿಂಜ್ ನಲ್ಲಿ 17 ಓಟಿಟಿ ಆಪ್‌ಗಳು ದೊರೆಯಲಿವೆ. ಇನ್ನು ನೂತನವಾಗಿ ಸೇರ್ಪಡೆಯಾಗಿರುವ MX ಪ್ಲೇಯರ್‌ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಮತ್ತು ಇತರ ಭಾಷೆಗಳಲ್ಲಿ ಲಭ್ಯ. ಟಾಟಾಪ್ಲೇ ಬಿಂಜ್ (Tata Play Binge) ಆರಂಭಿಕ ಯೋಜನೆಯು 59ರೂ. ಆಗಿದೆ.

ಹೊಂದಿದೆ

ಹಾಗೆಯೇ MX ಪ್ಲೇಯರ್‌ 5,000 ಚಲನಚಿತ್ರಗಳು ಮತ್ತು 800+ ಕಾರ್ಯಕ್ರಮಗಳನ್ನು ಒಳಗೊಂಡಿದೆ. ಅಲ್ಲದೇ ಈ MX ಪ್ಲೇಯರ್ 300 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಇನ್ನು ಟಾಟಾಪ್ಲೇ ಜೊತೆಗಿನ ಪಾಲುದಾರಿಕೆಯೊಂದಿಗೆ, MX ಪ್ಲೇಯರ್ ಟಾಟಾ ಪ್ಲೇ ಬಿಂಜ್‌ನಲ್ಲಿ ಜಾಹೀರಾತು-ಮುಕ್ತ ಕಂಟೆಂಟ್‌ ನೀಡುತ್ತದೆ. ಇನ್ನು ಈ ಆಪ್‌ನಲ್ಲಿ ಬಳಕೆದಾರರು MX ಒರಿಜಿನಲ್‌ಗಳು, ಬಾಲಿವುಡ್ ಚಲನಚಿತ್ರಗಳು, ಹಾಲಿವುಡ್ ಚಲನಚಿತ್ರಗಳು, ದಕ್ಷಿಣ-ಭಾರತೀಯ ಡಬ್ಬಿಂಗ್ ಚಲನಚಿತ್ರಗಳು, ಕೊರಿಯನ್ ನಾಟಕಗಳು ಮತ್ತು ಇತರೆ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.

ಟಾಟಾಪ್ಲೇ ಬಿಂಜ್ ಆರಂಭಿಕ ಪ್ಯಾಕ್‌ನಲ್ಲಿ ಈ OTT ಆಪ್ಸ್‌ ಲಭ್ಯ:

ಟಾಟಾಪ್ಲೇ ಬಿಂಜ್ ಆರಂಭಿಕ ಪ್ಯಾಕ್‌ನಲ್ಲಿ ಈ OTT ಆಪ್ಸ್‌ ಲಭ್ಯ:

ಡಿಸ್ನಿ+ ಹಾಟ್‌ಸ್ಟಾರ್
ಜೀ5
ಸೋನಿಲೈವ್
Voot ಸೆಲೆಕ್ಟ್‌
MX ಪ್ಲೇಯರ್
hoichoi
Chaupal

ವೋಟ್ ಕಿಡ್ಸ್

ನಮ್ಮ ಫ್ಲಿಕ್ಸ್
ಪ್ಲಾನೆಟ್ ಮರಾಠಿ
ಸನ್ NXT
ಹಂಗಾಮಾ ಪ್ಲೇ
ಎರೋಸ್ ನೌ
ShemarooMe
ವೋಟ್ ಕಿಡ್ಸ್
ಕ್ಯೂರಿಯಾಸಿಟಿ ಸ್ಟ್ರೀಮ್
EPIC ON
DocuBay

ಕೆಲವು ಜನಪ್ರಿಯ ಬ್ರಾಡ್‌ಬ್ಯಾಂಡ್‌ ಯೋಜನೆಗಳ ಮಾಹಿತಿ:

ಕೆಲವು ಜನಪ್ರಿಯ ಬ್ರಾಡ್‌ಬ್ಯಾಂಡ್‌ ಯೋಜನೆಗಳ ಮಾಹಿತಿ:

ಟಾಟಾ ಪ್ಲೇ ಯೋಜನೆ ಸೌಲಭ್ಯಗಳು
ಟಾಟಾ ಪ್ಲೇ 100 Mbps ಬ್ರಾಡ್‌ಬ್ಯಾಂಡ್‌ ಪ್ಲಾನ್‌ ನಿಮಗೆ 30 ದಿನಗಳ ಅವಧಿಗೆ 850 ರೂ.ಬೆಲೆಯಲ್ಲಿ ಲಭ್ಯವಾಗಲಿದೆ. ಆದರೆ 3 ತಿಂಗಳ ಅವಧಿಗೆ ಖರೀದಿಸಿದರೆ 2,400ರೂ. ಪಾವತಿಸಬೇಕಾಗುತ್ತದೆ. ಈ ಪ್ಲಾನ್‌ನಲ್ಲಿ ಜನರು ಅನಿಯಮಿತ ಡೇಟಾ ಸೌಲಭ್ಯವನ್ನು ಪಡೆಯಬಹುದಾಗಿದೆ.

ಜಿಯೋ ಫೈಬರ್‌ 699ರೂ. ಪ್ಲಾನ್‌ ಸೌಲಭ್ಯಗಳು

ಜಿಯೋ ಫೈಬರ್‌ 699ರೂ. ಪ್ಲಾನ್‌ ಸೌಲಭ್ಯಗಳು

ಜಿಯೋ ಫೈಬರ್‌ 699ರೂ. ಪ್ಲಾನ್‌ ನಿಮಗೆ 100 mbps ವೇಗದ ಅನಿಯಮಿತ ಇಂಟರ್ನೆಟ್ ಪ್ರಯೋಜನ ನೀಡಲಿದೆ. ಹಾಗೆಯೇ ಈ ಪ್ಲಾನ್‌ನಲ್ಲಿ ಹೆಚ್ಚುವರಿಯಾಗಿ, ಬಳಕೆದಾರರು ತಿಂಗಳಿಗೆ 100ರೂ. ಪಾವತಿಸುವ ಮೂಲಕ 6 ಮನರಂಜನಾ ಅಪ್ಲಿಕೇಶನ್‌ಗಳಿಗೆ ಮತ್ತು ಪ್ರತಿ ತಿಂಗಳು 200ರೂ. ಹೆಚ್ಚುವರಿ ಪಾವತಿಸುವ ಮೂಲಕ 14 ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ.

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಯೋಜನೆ ಸೌಲಭ್ಯಗಳು

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಯೋಜನೆ ಸೌಲಭ್ಯಗಳು

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ 100Mbps ಬ್ರಾಡ್‌ಬ್ಯಾಂಡ್ ಪ್ಲಾನ್‌ 799 ರೂ.ಬೆಲೆ ಹೊಂದಿದೆ. ಈ ಪ್ಲಾನ್‌ನಲ್ಲಿ ಬಳಕೆದಾರರು ಅನಿಯಮಿತ ಸ್ಥಳೀಯ ಮತ್ತು STD ಕರೆ ಸೌಲಭ್ಯ ಲಭ್ಯವಿದೆ. ಜೊತೆಗೆ 100Mbps ವೇಗದೊಂದಿಗೆ ಅನಿಯಮಿತ ಡೇಟಾ ದೊರೆಯಲಿದೆ. ಇದಲ್ಲದೆ ಈ ಪ್ಲಾನ್‌ನಲ್ಲಿ FASTag ಕ್ಯಾಶ್‌ಬ್ಯಾಕ್ ಆಫರ್‌ ಮತ್ತು ವಿಂಕ್‌, ಅಪೋಲೋ, ಎಕ್ಸ್‌ಟ್ರಿಮ್‌ ಪ್ರಿಮೀಯಂಗೆ ಪ್ರವೇಶ ದೊರೆಯಲಿದೆ.

Best Mobiles in India

English summary
Tata Play Binge New Offers 17 OTT Including MX Player. Starting at just Rs 59 per month.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X