ಮತ್ತೆ ಬಿಗ್ ಆಫರ್‌ ನೀಡಿದ ಟಾಟಾ ಪ್ಲೇ!..ಟಿವಿ ಚಾನೆಲ್‌ ಜೊತೆ ಓಟಿಟಿ ವಿಡಿಯೋ ಲಭ್ಯ!

|

ದೇಶದ ಪ್ರಮುಖ ಡಿಟುಹೆಚ್‌ ಸಂಸ್ಥೆಯಾಗಿರುವ ಟಾಟಾ ಪ್ಲೇ (Tata Play) ಯ ಟಾಟಾ ಪ್ಲೇ ಬಿಂಜ್+ (Tata Play Binge+) ಸ್ಮಾರ್ಟ್ ಸೆಟ್-ಟಾಪ್ ಬಾಕ್ಸ್ (STB) ಭಾರತದಾದ್ಯಂತ ಗ್ರಾಹಕರಿಗೆ ಲಭ್ಯವಿದೆ. ಈ ಸೆಟ್‌ ಟಾಪ್‌ ಬಾಕ್ಸ್‌ ಆಕರ್ಷಕ ಪ್ರೈಸ್‌ ಟ್ಯಾಗ್‌ ಹೊಂದಿದ್ದು, ಹಾಗೆಯೇ ಟಾಟಾ ಪ್ಲೇ ಒಂದು ತಿಂಗಳ ಉಚಿತ ಟಾಟಾ ಪ್ಲೇ ಬಿಂಜ್ ಸೇವೆಯನ್ನು ಸಹ ನೀಡುತ್ತಿದೆ.

ಬಿಂಜ್+ ಸ್ಮಾರ್ಟ್

ಹೌದು, ಟಾಟಾ ಪ್ಲೇಯ ಬಿಂಜ್+ ಸ್ಮಾರ್ಟ್ ಸೆಟ್-ಟಾಪ್ ಬಾಕ್ಸ್ ಈಗ ಖರೀದಿಗೆ ಲಭ್ಯವಿದೆ. ಗ್ರಾಹಕರು ಈ ಸೆಟ್‌ ಟಾಪ್‌ ಬಾಕ್ಸ್‌ ಅನ್ನು 1999ರೂ. ಗಳ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಈ ಡಿವೈಸ್‌ ಟಿವಿಯಲ್ಲಿ ಲೀನಿಯರ್ ಟಿವಿ ಚಾನೆಲ್‌ಗಳು ಮತ್ತು OTT (ಓವರ್-ದಿ-ಟಾಪ್) ಕಂಟೆಂಟ್‌ಗಳನ್ನು ವೀಕ್ಷಿಸಲು ನಿಮಗೆ ಅನುವು ಮಾಡಿಕೊಡುತ್ತದೆ.

ಟಾಟಾ ಪ್ಲೇ

ಟಾಟಾ ಪ್ಲೇನ ಈ ಸೆಟ್‌ ಟಾಪ್‌ ಬಾಕ್ಸ್‌ ಸಹಾಯದಿಂದ ಗ್ರಾಹಕರು OTT ಪ್ಲಾಟ್‌ಫಾರ್ಮ್‌ಗಳಿಂದ ನೇರವಾಗಿ ಕಂಟೆಂಟ್‌ ಅನ್ನು ಸ್ಟ್ರೀಮ್ ಮಾಡಲು ಸಾಧ್ಯವಾಗುತ್ತದೆ. ಇನ್ನು ಟಾಟಾ ಪ್ಲೇ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಡಿವೈಸ್ 2199ರೂ. ಗಳಿಗೆ ಲಭ್ಯವಿದೆ. ಆದಾಗ್ಯೂ, ಗ್ರಾಹಕರು ಆನ್‌ಲೈನ್‌ನಲ್ಲಿ ಖರೀದಿಸಿದರೆ 1999ರೂ.ಗೆ ಪಡೆಯಬಹುದು. ಖರೀದಿ ಮಾಡುವಾಗ ಕೂಪನ್ ಕೋಡ್ 'TPL200' ಅನ್ನು ಬಳಸಿ, ಸುಮಾರು 200ರೂ ಇನ್‌ಸ್ಟಂಟ್‌ ರಿಯಾಯಿತಿಯನ್ನು ಪಡೆಯಬಹುದು.

ಕ್ಯಾಶ್‌ಬ್ಯಾಕ್

ಇನ್ನು ಮೊಬಿಕ್ವಿಕ್‌ (Mobikwik) ಮತ್ತು ಪೇಜಪ್ (PayZapp) ನಿಂದ ಸಹ ಆಫರ್‌ಗಳು ಇದ್ದು, 50ರೂ. ವರೆಗೆ ಕ್ಯಾಶ್‌ಬ್ಯಾಕ್ ಅನ್ನು ಪಡೆಯಬಹುದು. ಇನ್ನು ಈಗಾಗಲೇ ಅಸ್ತಿತ್ವದಲ್ಲಿರುವ ಟಾಟಾ ಪ್ಲೇ ಗ್ರಾಹಕರು Binge+ STB ಗೆ ಅಪ್‌ಗ್ರೇಡ್ ಮಾಡಲು ಬಯಸಿದರೆ, 1799ರೂ ಪಾವತಿಸಬೇಕಾಗುತ್ತದೆ. ಇನ್ನು ಗ್ರಾಹಕರು ಇನ್‌ಸ್ಟಾಲ್‌ ಶುಲ್ಕವಾಗಿ 350 ರೂ. ಮತ್ತು 100ರೂ. ಅನ್ನು ಸಕ್ರಿಯಗೊಳಿಸುವ ಶುಲ್ಕವಾಗಿ ಪಾವತಿಸಬೇಕಾಗುತ್ತದೆ ಎಂದು ಟಾಟಾ ಪ್ಲೇ ಉಲ್ಲೇಖಿಸಿದೆ.

ಸನ್‌ನೆಕ್ಸ್ಟ್‌

ಹೊಸ ಟಾಟಾ ಪ್ಲೇಯ ಬಿಂಜ್+ ಸ್ಮಾರ್ಟ್ ಸೆಟ್-ಟಾಪ್ ಬಾಕ್ಸ್ ಖರೀದಿಯ ಮೇಲೆ ಗ್ರಾಹಕರು ಒಂದು ತಿಂಗಳವರೆಗೆ ಉಚಿತ ಟಾಟಾ ಪ್ಲೇ ಬಿಂಜ್ ಚಂದಾದಾರಿಕೆಯನ್ನು ಪಡೆಯುತ್ತಾರೆ. ಇನ್ನು ಟಾಟಾ ಪ್ಲೇಯ ಬಿಂಜ್ ಚಂದಾದಾರಿಕೆಯಲ್ಲಿ, ಗ್ರಾಹಕರು ಉಚಿತ ಡಿಸ್ನಿ+ ಹಾಟ್‌ಸ್ಟಾರ್‌ (Disney+ Hotstar), ಜೀ5 (ZEE5), ವೂಟ್‌ ಸೆಲೆಕ್ಟ್‌ (Voot Select), ಸನ್‌ನೆಕ್ಸ್ಟ್‌ (SunNXT), ಎಮ್‌ಎಕ್ಸ್‌ ಪ್ಲೇಯರ್‌ (MXPlayer), Hoichoi, Chaupal, ವೂಟ್‌ ಕಿಡ್ಸ್‌ (Voot Kids), ಎರೋಸ್‌ ನವ್‌ (Eros Now), ಎಪಿಕ್‌ ಆನ್‌ (Epic ON), NammaFlix, Curiosity, Planet Marathi, ShemarooMe, Hungama, ಅನ್ನು ಉಚಿತವಾಗಿ ಪಡೆಯುತ್ತಾರೆ.

ಸಾಧನಗಳಲ್ಲಿ

ಗ್ರಾಹಕರು ಬಹು ಸಾಧನಗಳಲ್ಲಿ 16 OTT ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಬಯಸಿದರೆ ಟಾಟಾ ಪ್ಲೇಯ ಬಿಂಜ್+ (Tata Play Binge) ಮಾಸಿಕ ವೆಚ್ಚ 299 ರೂ. ಹಾಗೆಯೇ ಟಾಟಾ ಪ್ಲೇ ಸಬ್‌ಸ್ಕ್ರಿಪ್ಶನ್‌ಗಳಲ್ಲಿ ಹಲವಾರು ಹಂತಗಳಿವೆ.

ಟಾಟಾ ಪ್ಲೇಯ ಬಿಂಜ್+ ಸ್ಮಾರ್ಟ್ ಸೆಟ್-ಟಾಪ್ ಬಾಕ್ಸ್ ಫೀಚರ್ಸ್‌

ಟಾಟಾ ಪ್ಲೇಯ ಬಿಂಜ್+ ಸ್ಮಾರ್ಟ್ ಸೆಟ್-ಟಾಪ್ ಬಾಕ್ಸ್ ಫೀಚರ್ಸ್‌

ಟಾಟಾ ಪ್ಲೇಯ ಬಿಂಜ್+ ಸ್ಮಾರ್ಟ್ ಸೆಟ್-ಟಾಪ್ ಬಾಕ್ಸ್ ನಿಮಗೆ ಒಟಿಟಿ ಮತ್ತು ಲೀನಿಯರ್ ಟಿವಿಯ ನಡುವೆ ಬದಲಾಯಿಸುವ ಅನುಕೂಲವನ್ನು ಕೇವಲ ಒಂದು ಬಟನ್ ಕ್ಲಿಕ್ ಮಾಡುವ ಮೂಲಕ ನೀಡುತ್ತದೆ. ನೀವು ಕಳೆದುಕೊಂಡಿರುವ ಬಿಂಜ್+ ಸ್ಮಾರ್ಟ್ ಸೆಟ್-ಟಾಪ್ ಬಾಕ್ಸ್ ಮೂಲಕ ಕಳೆದ ಏಳು ದಿನಗಳ ವಿಷಯಕ್ಕೆ ನೀವು ಪ್ರವೇಶವನ್ನು ಪಡೆಯಬಹುದು. ಬಿಲ್ಟ್‌ಇನ್‌ ಕ್ರೋಮ್‌ಕಾಸ್ಟ್‌ ಇದ್ದು, ವಾಯಿಸ್‌ ಅಸಿಸ್ಟಂಟ್‌ ಸಂಯೋಜಿತ ರಿಮೋಟ್ ಸಹ ಪಡೆದಿದೆ.

Best Mobiles in India

English summary
Tata Play Binge+ STB Available at Rs 1999: Customers will Get OTT and DTH.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X