ಟಾಟಾ ಪ್ಲೇ ಫೈಬರ್‌ನಿಂದ ಒಂದು ತಿಂಗಳ ಉಚಿತ ಬ್ರಾಡ್‌ಬ್ಯಾಂಡ್‌ ಪ್ಲಾನ್‌ ಆಫರ್‌!

|

ಇಂದಿನ ದಿನಗಳಲ್ಲಿ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿವೆ. ತಡೆರಹಿತ ಇಂಟರ್‌ನೆಟ್‌ ಪ್ರಯೋಜನಕ್ಕಾಗಿ ಹೆಚ್ಚಿನ ಮಂದಿ ಬ್ರಾಡ್‌ಬ್ಯಾಂಡ್‌ ಯೋಜನೆಗಳನ್ನು ಬಯಸುತ್ತಾರೆ. ಇದೇ ಕಾರಣಕ್ಕೆ ಹಲವು ಖಾಸಗಿ ಕಂಪೆನಿಗಳು ಸೇರಿದಂತೆ ಟೆಲಿಕಾಂ ಕಂಪೆನಿಗಳು ಕೂಡ ಬ್ರಾಡ್‌ಬ್ಯಾಂಡ್‌ ಸೇವೆ ನೀಡುತ್ತಿವೆ. ಇದರಲ್ಲಿ ಟಾಟಾ ಪ್ಲೇ ಫೈಬರ್‌ (ಟಾಟಾ ಸ್ಕೈ ಬ್ರಾಡ್‌ಬ್ಯಾಂಡ್‌)ಕೂಡ ಒಂದಾಗಿದೆ. ಟಾಟಾ ಪ್ಲೇ ಫೈಬರ್ ಇದೀಗ ತನ್ನ ಹೊಸ ಚಂದಾದಾರರಿಗೆ ಗುಡ್‌ ನ್ಯೂಸ್‌ ಅನ್ನು ನೀಡಿದೆ. ಹೊಸದಾಗಿ ಚಂದಾದಾರಿಕೆ ತೆಗೆದುಕೊಳ್ಳುವವರಿಗೆ ಒಂದು ತಿಂಗಳ ಉಚಿತ ಬ್ರಾಡ್‌ಬ್ಯಾಂಡ್‌ ಸೇವೆ ನೀಡುವುದಾಗಿ ಹೇಳಿದೆ.

ಟಾಟಾ ಸ್ಕೈ ಫೈಬರ್‌

ಹೌದು, ಟಾಟಾ ಸ್ಕೈ ಫೈಬರ್‌ ಇದೀಗ ಟಾಟಾ ಫ್ಲೈ ಫೈಬರ್‌ ಕಂಪೆನಿಯಾಗಿ ಬದಲಾಗಿದೆ. ಇದೇ ಸದಂರ್ಭದಲ್ಲಿ ತನ್ನ ಹೊಸ ಚಂದಾದಾರರಿಗೆ ಒಂದು ತಿಂಗಳ ಉಚಿತ ಬ್ರಾಡ್‌ಬ್ಯಾಂಡ್‌ ಸೇವೆ ನೀಡುವುದಾಗಿ ಘೋಷಿಸಿದೆ. ಅದರಲ್ಲೂ ತನ್ನ 1,150ರೂ. ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಉಚಿತವಾಗಿ ನೀಡುವುದಾಗಿ ಹೇಳಿದೆ. ಹೊಸ 'ಪ್ರಯತ್ನಿಸಿ ಮತ್ತು ಖರೀದಿಸಿ' ಯೋಜನೆಯಡಿಯಲ್ಲಿ ಗ್ರಾಹಕರಿಗೆ ಈ ಯೋಜನೆಯನ್ನು ಉಚಿತವಾಗಿ ಒದಗಿಸುತ್ತಿದೆ. ಇದರ ಮೂಲಕ ಕಂಪನಿಯು ಬಳಕೆದಾರರಿಗೆ ಮೊದಲು ಸೇವೆಯ ಗುಣಮಟ್ಟವನ್ನು ಪರೀಕ್ಷಿಸುವುದಕ್ಕೆ ಅವಕಾಶ ನೀಡಿದೆ. ಸೇವೆಯ ಗುಣಮಟ್ಟ ಒಪ್ಪಿಗೆಯಾದ ನಂತರ ಬ್ರಾಡ್‌ಬ್ಯಾಂಡ್‌ ಕನೆಕ್ಟಿವಿಟಿಯನ್ನು ಖರೀದಿಸುವ ಆಯ್ಕೆ ನೀಡಿದೆ. ಹಾಗಾದ್ರೆ ಟಾಟಾ ಪ್ಲೇ ಫೈಬರ್‌ ನೀಡುತ್ತಿರುವ ಉಚಿತ ಬ್ರಾಡ್‌ಬ್ಯಾಂಡ್‌ ಪ್ಲಾನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟಾಟಾ ಪ್ಲೇ ಫೈಬರ್‌

ಟಾಟಾ ಪ್ಲೇ ಫೈಬರ್‌ ತನ್ನ ಗ್ರಾಹಕರಿಗೆ 1,150ರೂ. ಪ್ಲಾನ್ ಅನ್ನು ಒಂದು ತಿಂಗಳ ತನಕ ಉಚಿತವಾಗಿ ನೀಡುತ್ತಿದೆ. ಪ್ರಯತ್ನಿಸಿ ಮತ್ತು ಖರೀದಿಸಿ ಯೋಜನೆಯಲ್ಲಿ ಉಚಿತ ಸೇವೆ ನೀಡುತ್ತಿದೆ. ಇನ್ನು ಈ ಪ್ಲಾನ್‌ನಲ್ಲಿ 200 Mbps ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗದೊಂದಿಗೆ ಹೆಚ್ಚಿನ ವೇಗದ ಇಂಟರ್ನೆಟ್ ಕನೆಕ್ಟಿವಿಟಿಯನ್ನು ಪಡೆಯಬಹುದಾಗಿದೆ. ಈ ಯೋಜನೆ ಹೊಸ ಚಂದಾದಾರರಿಗೆ ಮಾತ್ರ ಉಚಿತವಾಗಿ ಲಭ್ಯವಾಗಲಿದೆ. ಇದಕ್ಕಾಗಿ ಬಳಕೆದಾರರು ಒಂದು ಬಾರಿ ರಿಫಂಡ್‌ ಮಾಡಬಹುದಾದ 1,500ರೂ.ಗಳ ಸೆಕ್ಯುರಿಟಿ ಡೆಪೋಸಿಟ್‌ ಮಾಡಬೇಕಾಗುತ್ತದೆ.

ಟಾಟಾ ಪ್ಲೇ ಫೈಬರ್‌

ಇನ್ನು ಟಾಟಾ ಪ್ಲೇ ಫೈಬರ್‌ನ ಪ್ರಯತ್ನಿಸಿ ಮತ್ತು ಖರೀದಿಸಿ ಪ್ಲಾನ್‌ ಕಂಪನಿಯ ಪ್ರಮೋಷನಲ್‌ ಆಫರ್‌ ಆಗಿದೆ. ಸದ್ಯ ಈ ಪ್ಲಾನ್‌ ನವ ದೆಹಲಿ, ಬೆಂಗಳೂರು, ಚೆನ್ನೈ, ಗ್ರೇಟರ್ ನೋಯ್ಡಾ, ಮುಂಬೈ ಮತ್ತು ದೇಶದ ಕೆಲವು ಆಯ್ದ ಪ್ರದೇಶಗಳಲ್ಲಿ ಮಾತ್ರ ಲಭ್ಯವಿದೆ. ಇನ್ನು ಪ್ರಯತ್ನಿಸಿ ಮತ್ತು ಖರೀದಿಸಿ ಯೋಜನೆಯ ಗ್ರಾಹಕರು 1000GB ಗಿಂತ ಹೆಚ್ಚಿನ ವೇಗದ ಡೇಟಾವನ್ನು ಉಚಿತವಾಗಿ ಪಡೆಯುತ್ತಾರೆ. ಇದಲ್ಲದೆ ಕಂಪನಿಯಿಂದ ರಿಫಂಡ್‌ ಪಡೆಯಬೇಕಾದರೆ 30 ದಿನಗಳ ನಂತರ ನಿಮ್ಮ ಕನೆಕ್ಟಿವಿಟಿಯನ್ನು ಕ್ಯಾನ್ಸಲ್‌ ಮಾಡಬೇಕಾಗುತ್ತದೆ. 30 ದಿನಗಳ ಸೇವೆಯನ್ನು ನೀವು ರದ್ದುಗೊಳಿಸಿದರೆ ಮಾತ್ರ ನಿಮಗೆ 500ರೂ. ಶುಲ್ಕ ವಿಧಿಸಲಾಗುತ್ತದೆ. 1,000ರೂ.ಗಳನ್ನು ರಿಫಂಡ್‌ ಮಾಡಲಾಗುತ್ತದೆ.

ಟಾಟಾ

ಇದಲ್ಲದೆ ನೀವು ಟಾಟಾ ಪ್ಲೇ ಫೈಬರ್‌ ಪ್ಲಾನ್‌ಗಳ ಜೊತೆಗೆ ಮುಂದುವರಿಯಲು ಬಯಸಿದರೆ, ನಿಮಗೆ ಉತ್ತಮ ಆಫರ್‌ಗಳು ಕೂಡ ದೊರೆಯಲಿದೆ. ಇದಕ್ಕಾಗಿ ನೀವು ಕನಿಷ್ಟ 3 ತಿಂಗಳ ಕಾಲ 100 Mbps ಪ್ಲಾನ್‌ಗೆ ಹೋಗಲು ನಿರ್ಧರಿಸಿದರೆ, ನಿಮಗೆ 1,500ರೂ.ಗಳ ಕಂಪ್ಲಿಟ್‌ ರಿಫಂಡ್‌ ಲಭ್ಯವಾಗಲಿದೆ. ಹಾಗೆಯೇ ನೀವು 3 ತಿಂಗಳವರೆಗೆ 50 Mbps ಪ್ಲಾನ್‌ ಅನ್ನು ಆರಿಸಿಕೊಂಡರೆ, ನಿಮಗೆ ಕೇವಲ 500 ರೂಪಾಯಿಗಳ ಮರುಪಾವತಿ ದೊರೆಯಲಿದೆ. ಇನ್ನುಳಿದ 1,000ರೂ. ಸೆಕ್ಯುರಿಟಿ ಡೆಪಾಸಿಟ್‌ ಭದ್ರತಾ ಠೇವಣಿ ವ್ಯಾಲೆಟ್‌ನಲ್ಲಿರುತ್ತದೆ. ಜೊತೆಗೆ, ಮೂರು ತಿಂಗಳ ಸಕ್ರಿಯ ಸೇವೆಯ ನಂತರ ನಿಮಗೆ 1000ರೂ. ಮರುಪಾವತಿಸಲಾಗುತ್ತದೆ, ಉಳಿದ 500ರೂ. ಭದ್ರತಾ ಠೇವಣಿ ವ್ಯಾಲೆಟ್‌ನಲ್ಲಿ ಉಳಿಯುತ್ತದೆ.

Best Mobiles in India

English summary
Tata Play Fiber Broadband is currently offering its Rs 1,150 broadband plan free of cost

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X