ಟಾಟಾ ಪ್ಲೇನಿಂದ ಹೊಸ ಪ್ಲ್ಯಾನ್; ಜಸ್ಟ್‌ 250ರೂ.ಗೆ 200ಕ್ಕೂ ಅಧಿಕ ಚಾನಲ್‌ ಸಿಗುತ್ತೆ!

|

ಪ್ರಮುಖ DTH (ಡೈರೆಕ್ಟ್-ಟು-ಹೋಮ್) ಆಪರೇಟರ್ ಆಗಿ ಗುರುತಿಸಿಕೊಂಡಿರುವ ಟಾಟಾ ಪ್ಲೇ ಸಂಸ್ಥೆಯು ಕೆಲವು ಆಕರ್ಷಕ ಯೋನೆಗಳ ಮೂಲಕ ಗ್ರಾಹಕರನ್ನು ಆಕರ್ಷಿಸಿದೆ. ಇದೀಗ ಟಾಟಾ ಪ್ಲೇ ಸಂಸ್ಥೆಯು ಹೊಸ 'ಸೂಪರ್ ಸೇವರ್ ಪ್ಯಾಕ್‌ಗಳನ್ನು' ಬಿಡುಗಡೆ ಮಾಡಿದ್ದು, ಇದು ಬಳಕೆದಾರರು ತಮ್ಮ ಟಿವಿ ಬಿಲ್‌ಗಳಲ್ಲಿ ಹಣವನ್ನು ಉಳಿಸಲು ಸಹಾಯ ಮಾಡುತ್ತದೆ. ಈ ಹೊಸ ಪ್ಯಾಕ್‌ಗಳು ಮತ್ತು ಬೆಲೆಗಳು ಭಾರತದಾದ್ಯಂತ ಎಲ್ಲಾ ಟಾಟಾ ಪ್ಲೇ ಗ್ರಾಹಕರಿಗೆ ಲಭ್ಯವಿರುತ್ತವೆ.

ಸೇವರ್

ಹೌದು, ಟಾಟಾ ಪ್ಲೇ ಸಂಸ್ಥೆಯು ಸೂಪರ್ ಸೇವರ್ ಪ್ಯಾಕ್‌ಗಳನ್ನು ಪರಿಚಯಿಸಿದೆ. ಚಂದಾದಾರರು ಮೊಬೈಲ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ತಮ್ಮ ಟಾಟಾ ಪ್ಲೇ ಖಾತೆಗೆ ಲಾಗ್ ಇನ್ ಮಾಡುವ ಮೂಲಕ ಅಥವಾ ಹತ್ತಿರದ ಟಾಟಾ ಪ್ಲೇ ಡೀಲರ್‌ಗಳನ್ನು ತಲುಪುವ ಮೂಲಕ ಈ ಸೂಪರ್ ಕೈಗೆಟುಕುವ ಪ್ಯಾಕ್‌ಗಳನ್ನು ಖರೀದಿಸಬಹುದು. ಟಾಟಾ ಪ್ಲೇ ಹಿಂದಿ ಸೂಪರ್ ವ್ಯಾಲ್ಯೂ ಪ್ಯಾಕ್ ಸ್ಟಾರ್ ಪ್ಲಸ್, ಸೆಟ್, ಕಲರ್ಸ್, ಜೀ ಟಿವಿ, ಸ್ಟಾರ್ ಗೋಲ್ಡ್, ಸೋನಿ ಮ್ಯಾಕ್ಸ್, ಜೀ ಸಿನಿಮಾ, ಕಲರ್ಸ್ ಸಿನೆಪ್ಲೆಕ್ಸ್, ಆಜ್ ತಕ್, ಎನ್‌ಡಿಟಿವಿ ಮತ್ತು 203 ಇತರ ಚಾನೆಲ್‌ಗಳನ್ನು 249ರೂ. ನಲ್ಲಿ ಪಡೆಯಬಹುದು.

ಮನರಂಜನೆಯನ್ನು

'ಮನರಂಜನೆ ಮಾನವನ ಮೂಲಭೂತ ಅವಶ್ಯಕತೆಯಾಗಿದೆ. ಆದಾಗ್ಯೂ, ಏರುತ್ತಿರುವ ಬೆಲೆಗಳು ಆಹಾರ ಮತ್ತು ಇಂಧನದಂತಹ ಅಗತ್ಯತೆಗಳ ನಡುವೆ ಆಯ್ಕೆ ಮಾಡಲು ಜನರನ್ನು ಒತ್ತಾಯಿಸುತ್ತಿವೆ ಮತ್ತು ಮನರಂಜನೆಯಂತಹ ವಿವೇಚನೆಯ ಖರ್ಚುಗಳನ್ನು ಮಾಡುತ್ತವೆ. ದೇಶದ ಅತಿದೊಡ್ಡ ವಿಷಯ ವಿತರಕರಾಗಿ, ಮನರಂಜನೆಯನ್ನು ಹೆಚ್ಚು ಕೈಗೆಟುಕುವಂತೆ ಮಾಡಲು ನಾವು ಅದನ್ನು ತೆಗೆದುಕೊಳ್ಳುತ್ತೇವೆ.' ಎಂದು ಟಾಟಾ ಪ್ಲೇನ ಎಂಡಿ ಮತ್ತು ಸಿಇಒ ಹರಿತ್ ನಾಗ್ಪಾಲ್ ಹೇಳಿದರು.

ಆಪರೇಟರ್

ಇದು ಖಂಡಿತವಾಗಿಯೂ ಟಾಟಾ ಪ್ಲೇ ನಿಂದ ಇದೊಂದು ಮಹತ್ತರ ಹೆಜ್ಜೆಯಂತೆ ಕಾಣುತ್ತದೆ. ಕಂಪನಿಯು ಈಗಾಗಲೇ ಭಾರತದಲ್ಲಿ ಪ್ರಮುಖ DTH (ಡೈರೆಕ್ಟ್-ಟು-ಹೋಮ್) ಆಪರೇಟರ್ ಆಗಿದೆ. ಮತ್ತು ಈ ರೀತಿಯ ಕ್ರಮಗಳೊಂದಿಗೆ, ಇದು ದೊಡ್ಡ ಮಾರುಕಟ್ಟೆ ಪಾಲನ್ನು ಪಡೆಯಲು ಸಾಧ್ಯವಾಗುತ್ತದೆ. 100 mbps ವೇಗದ ಕೆಲವು ಜನಪ್ರಿ ಬ್ರಾಡ್‌ಬ್ಯಾಂಡ್‌ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ ಫೈಬರ್‌ 699ರೂ. ಪ್ಲಾನ್‌ ಸೌಲಭ್ಯಗಳು

ಜಿಯೋ ಫೈಬರ್‌ 699ರೂ. ಪ್ಲಾನ್‌ ಸೌಲಭ್ಯಗಳು

ಜಿಯೋ ಫೈಬರ್‌ 699ರೂ. ಪ್ಲಾನ್‌ ನಿಮಗೆ 100 mbps ವೇಗದ ಅನಿಯಮಿತ ಇಂಟರ್ನೆಟ್ ಪ್ರಯೋಜನ ನೀಡಲಿದೆ. ಹಾಗೆಯೇ ಈ ಪ್ಲಾನ್‌ನಲ್ಲಿ ಹೆಚ್ಚುವರಿಯಾಗಿ, ಬಳಕೆದಾರರು ತಿಂಗಳಿಗೆ 100ರೂ. ಪಾವತಿಸುವ ಮೂಲಕ 6 ಮನರಂಜನಾ ಅಪ್ಲಿಕೇಶನ್‌ಗಳಿಗೆ ಮತ್ತು ಪ್ರತಿ ತಿಂಗಳು 200ರೂ. ಹೆಚ್ಚುವರಿ ಪಾವತಿಸುವ ಮೂಲಕ 14 ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ.

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಯೋಜನೆ ಸೌಲಭ್ಯಗಳು

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಯೋಜನೆ ಸೌಲಭ್ಯಗಳು

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ 100Mbps ಬ್ರಾಡ್‌ಬ್ಯಾಂಡ್ ಪ್ಲಾನ್‌ 799 ರೂ.ಬೆಲೆ ಹೊಂದಿದೆ. ಈ ಪ್ಲಾನ್‌ನಲ್ಲಿ ಬಳಕೆದಾರರು ಅನಿಯಮಿತ ಸ್ಥಳೀಯ ಮತ್ತು STD ಕರೆ ಸೌಲಭ್ಯ ಲಭ್ಯವಿದೆ. ಜೊತೆಗೆ 100Mbps ವೇಗದೊಂದಿಗೆ ಅನಿಯಮಿತ ಡೇಟಾ ದೊರೆಯಲಿದೆ. ಇದಲ್ಲದೆ ಈ ಪ್ಲಾನ್‌ನಲ್ಲಿ FASTag ಕ್ಯಾಶ್‌ಬ್ಯಾಕ್ ಆಫರ್‌ ಮತ್ತು ವಿಂಕ್‌, ಅಪೋಲೋ, ಎಕ್ಸ್‌ಟ್ರಿಮ್‌ ಪ್ರಿಮೀಯಂಗೆ ಪ್ರವೇಶ ದೊರೆಯಲಿದೆ.

ಟಾಟಾ ಪ್ಲೇ ಯೋಜನೆ ಸೌಲಭ್ಯಗಳು

ಟಾಟಾ ಪ್ಲೇ ಯೋಜನೆ ಸೌಲಭ್ಯಗಳು

ಟಾಟಾ ಪ್ಲೇ 100 Mbps ಬ್ರಾಡ್‌ಬ್ಯಾಂಡ್‌ ಪ್ಲಾನ್‌ ನಿಮಗೆ 30 ದಿನಗಳ ಅವಧಿಗೆ 850 ರೂ.ಬೆಲೆಯಲ್ಲಿ ಲಭ್ಯವಾಗಲಿದೆ. ಆದರೆ 3 ತಿಂಗಳ ಅವಧಿಗೆ ಖರೀದಿಸಿದರೆ 2,400ರೂ. ಪಾವತಿಸಬೇಕಾಗುತ್ತದೆ. ಈ ಪ್ಲಾನ್‌ನಲ್ಲಿ ಜನರು ಅನಿಯಮಿತ ಡೇಟಾ ಸೌಲಭ್ಯವನ್ನು ಪಡೆಯಬಹುದಾಗಿದೆ.

ACT ಫೈಬರ್‌ನೆಟ್ ಯೋಜನೆ ಸೌಲಭ್ಯಗಳು

ACT ಫೈಬರ್‌ನೆಟ್ ಯೋಜನೆ ಸೌಲಭ್ಯಗಳು

ಎಸಿಟಿ (ACT) ಕಂಪೆನಿ ಭಾರತದಲ್ಲಿ ಎಲ್ಲಾ ನಗರಗಳಲ್ಲಿ 100 Mbps ಬ್ರಾಡ್‌ಬ್ಯಾಂಡ್ ಪ್ಲಾನ್‌ ನೀಡುತ್ತಿಲ್ಲ. ಆದರೆ ಚೆನ್ನೈನಲ್ಲಿ ಮಾತ್ರ ಅನಿಯಮಿತ ಡೇಟಾ ಪ್ರಯೋಜನ ನೀಡುವ 100 Mbps ಬ್ರಾಡ್‌ಬ್ಯಾಂಡ್ ಪ್ಲಾನ್‌ ನೀಡುತ್ತಿದೆ. ಈ ಪ್ಲಾನ್‌ ಅಧಿಕೃತ ಸೈಟ್‌ನ ಪ್ರಕಾರ ತಿಂಗಳಿಗೆ ಸುಮಾರು 820 ರೂ. ಬೆಲೆ ಹೊಂದಿದೆ. ಇದು ಕೆಲವು ಆಕರ್ಷಕ ಓಟಿಟಿ ಪ್ರಯೋಜನ ಒಳಗೊಂಡಿದೆ.

ಜಿಯೋ ಫೈಬರ್‌ 999ರೂ. ಪ್ಲಾನ್‌ ಸೌಲಭ್ಯಗಳು

ಜಿಯೋ ಫೈಬರ್‌ 999ರೂ. ಪ್ಲಾನ್‌ ಸೌಲಭ್ಯಗಳು

ಜಿಯೋ ಫೈಬರ್‌ 999ರೂ. ಪ್ಲಾನ್‌ನಲ್ಲಿ ನೀವು 150 mbps ವೇಗದ ಅನಿಯಮಿತ ಇಂಟರ್‌ನೆಟ್‌ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಪ್ಲಾನ್‌ ಅಮೆಜಾನ್ ಪ್ರೈಮ್ ವೀಡಿಯೊ ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ನೀಡಲಾದ ಎಲ್ಲಾ ವಿಷಯಗಳಿಗೆ ಪ್ರವೇಶವನ್ನು ನೀಡುತ್ತದೆ.

ಜಿಯೋ ಫೈಬರ್‌ 1499ರೂ. ಪ್ಲಾನ್‌ ಸೌಲಭ್ಯಗಳು

ಜಿಯೋ ಫೈಬರ್‌ 1499ರೂ. ಪ್ಲಾನ್‌ ಸೌಲಭ್ಯಗಳು

ಜಿಯೋ ಫೈಬರ್‌ ಯೋಜನೆಯು 300 mbps ವೇಗದೊಂದಿಗೆ ಅನಿಯಮಿತ ಇಂಟರ್ನೆಟ್ ಅನ್ನು ನೀಡುತ್ತದೆ. ಈ ಯೋಜನೆಯು ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ನೆಟ್‌ಫ್ಲಿಕ್ಸ್ ಬೇಸಿಕ್‌ಗೆ ಪ್ರವೇಶವನ್ನು ನೀಡುತ್ತದೆ, ಇದು ರೂ 199 ಮೌಲ್ಯದ್ದಾಗಿದೆ.

ಜಿಯೋ ಫೈಬರ್‌ 2499ರೂ. ಪ್ಲಾನ್‌ ಸೌಲಭ್ಯಗಳು

ಜಿಯೋ ಫೈಬರ್‌ 2499ರೂ. ಪ್ಲಾನ್‌ ಸೌಲಭ್ಯಗಳು

ಜಿಯೋ ಫೈಬರ್‌ 2499ರೂ. ಪ್ಲಾನ್‌ನಲ್ಲಿ 500 mbps ವೇಗದ ಅನ್‌ಲಿಮಿಟೆಡ್‌ ಇಂಟರ್‌ನೆಟ್‌ ಪ್ರಯೋಜನ ದೊರೆಯಲಿದೆ. ಜೊತೆಗೆ ಈ ಪ್ಲಾನ್‌ನಲ್ಲಿ ಅಮೆಜಾನ್ ಪ್ರೈಮ್ ವೀಡಿಯೊ ಮತ್ತು ನೆಟ್‌ಫ್ಲಿಕ್ಸ್ ಸ್ಟ್ಯಾಂಡರ್ಡ್‌ಗೆ ಪ್ರವೇಶವನ್ನು ಪಡೆದುಕೊಳ್ಳಬಹುದಾಗಿದೆ.

ಏರ್‌ಟೆಲ್‌ 1,099ರೂ. ಬ್ರಾಡ್‌ಬ್ಯಾಂಡ್‌ ಪ್ಲಾನ್‌

ಏರ್‌ಟೆಲ್‌ 1,099ರೂ. ಬ್ರಾಡ್‌ಬ್ಯಾಂಡ್‌ ಪ್ಲಾನ್‌

ಏರ್‌ಟೆಲ್‌ ಟೆಲಿಕಾಂನ ಈ ಪ್ಲಾನ್‌ನಲ್ಲಿ ಅಮೆಜಾನ್‌ ಪ್ರೈಮ್‌ ಮತ್ತು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಚಂದಾದಾರಿಕೆ ಕೂಡ ಲಭ್ಯವಾಗಲಿದೆ. ಜೊತೆಗೆ 200 Mbps ಅನಿಯಮಿತ ಇಂಟರ್‌ನೆಟ್‌ ವೇಗವನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಈ ಪ್ಲಾನ್‌ನಲ್ಲಿ 14 OTT ಗಳಿಗೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಲಾಗಿನ್ ಮತ್ತು ಏರ್‌ಟೆಲ್ 4K ಎಕ್ಸ್‌ಸ್ಟ್ರೀಮ್ ಬಾಕ್ಸ್‌ನಲ್ಲಿ 350 ಚಾನಲ್‌ಗಳನ್ನು ವೀಕ್ಷಿಸಬಹುದಾಗಿದೆ.

ಏರ್‌ಟೆಲ್‌ 3,999ರೂ ಬ್ರಾಡ್‌ಬ್ಯಾಂಡ್‌ 1Gbps ಪ್ಲ್ಯಾನ್‌

ಏರ್‌ಟೆಲ್‌ 3,999ರೂ ಬ್ರಾಡ್‌ಬ್ಯಾಂಡ್‌ 1Gbps ಪ್ಲ್ಯಾನ್‌

ಏರ್‌ಟೆಲ್‌ನ ಈ ಯೋಜನೆ ದುಬಾರಿ ಬ್ರಾಡ್‌ಬ್ಯಾಂಡ್ ಯೋಜನೆಯಾಗಿದ್ದು, 3,999 ರೂ. ಪ್ರೈಸ್‌ಟ್ಯಾಗ್ ಪಡೆದಿದೆ. ಈ ಯೋಜನೆಯಲ್ಲಿ, ಗ್ರಾಹಕರು ಅನಿಯಮಿತ ಇಂಟರ್ನೆಟ್ ಮತ್ತು ಬೃಹತ್ 1 Gbps ಇಂಟರ್ನೆಟ್ ವೇಗವನ್ನು ಪಡೆಯುತ್ತಾರೆ. ವಾಯಿಸ್ ಕರೆ ಪ್ರಯೋಜನಗಳ ಜೊತೆಗೆ, ಗ್ರಾಹಕರಿಗೆ ಅನಿಯಮಿತ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳು ಸಿಗುತ್ತವೆ. ಹೆಚ್ಚುವರಿ ಪ್ರಯೋಜನಗಳನ್ನು ನೋಡುವುದಾದರೇ ಗ್ರಾಹಕರಿಗೆ ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಏರ್ಟೆಲ್ ಎಕ್ಸ್ಟ್ರೀಮ್ ಆಪ್ ಪ್ರೀಮಿಯಂನ ಉಚಿತ ಚಂದಾದಾರಿಕೆ ಲಭ್ಯ.

Best Mobiles in India

English summary
Tata Play Launches Super Saver Pack Under Rs. 250: Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X