ಟಾಟಾ ಪ್ಲೇ ಬಿಂಜ್‌ ಓಟಿಟಿ ಸೇವೆ ಈಗ ಎಲ್ಲರಿಗೂ ಲಭ್ಯ; ಬೆಲೆ ವಿವರ ಇಲ್ಲಿದೆ!

|

ಟಾಟಾ ಸ್ಕೈ ಇದೀಗ ಟಾಟಾ ಪ್ಲೇ (Tata Play) ಹೆಸರಿನಿಂದ ಗುರುತಿಸಿಕೊಂಡಿದೆ. ಟಾಟಾ ಪ್ಲೇ ಬಿಂಜ್‌ ಹೆಸರಿನ (Binge) ಓವರ್-ದಿ-ಟಾಪ್ (OTT) ಸೇವೆಯನ್ನು ಪ್ರಾರಂಭಿಸಿ ವೀಕ್ಷಕರ ಗಮನ ಸೆಳೆದಿತ್ತು. ಅಂದಹಾಗೆ ಟಾಟಾ ಪ್ಲೇಯ ಈ ಬಿಂಜ್ ಸೇವೆಯು ಟಾಟಾ ಪ್ಲೇ ಬಳಕೆದಾರರಿಗೆ ಮಾತ್ರ ಲಭ್ಯವಿತ್ತು. ಆದರೆ ಇದೀಗ ಸಂಸ್ಥೆಯು ಬಿಂಜ್ ಸೇವೆಯನ್ನು ಟಾಟಾ ಪ್ಲೇಯೇತರ ಬಳಕೆದಾರರಿಗೂ ಲಭ್ಯ ಮಾಡಲು ನಿರ್ಧರಿಸಿದೆ.

ಬಿಂಜ್

ಹೌದು, ಟಾಟಾ ಪ್ಲೇ ಸಂಸ್ಥೆಯು ತನ್ನ ಬಿಂಜ್ (Binge) ಓಟಿಟಿ ಸೇವೆಯನ್ನು ಈಗ ಎಲ್ಲರಿಗೂ ಮುಕ್ತ ಮಾಡಲು ಮುಂದಾಗಿದೆ. ಇನ್ನು ಈ ಅಪ್ಲಿಕೇಶನ್ ಡಿಸ್ನಿ+ಹಾಟ್‌ಸ್ಟಾರ್, ಜೀ5, ವೂಟ್‌, ಸೋನಿಲೈವ್, MX ಪ್ಲೇಯರ್‌, ಪ್ಲ್ಯಾನೆಟ್‌ ಮರಾಠಿ, ಸೋನಿ ನೆಕ್ಸ್ಟ್‌, Hoichoi, ಎರೋಸ್‌ ನವ್‌ ಸೇರಿದಂತೆ ಇತರೆ 25 ವಿಡಿಯೋ ಆನ್‌ ಡಿಮ್ಯಾಂಡ್‌ ಸೇವೆಗಳೊಂದಿಗೆ ಟೈ-ಅಪ್‌ ಹೊಂದಿದೆ. ಈ ಓಟಿಟಿ ಸೇವೆಗಳು ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಲಭ್ಯವಿರುತ್ತವೆ.

ಟಾಟಾ ಪ್ಲೇ ಬಿಂಜ್ ಎಲ್ಲರಿಗೂ ಲಭ್ಯ

ಟಾಟಾ ಪ್ಲೇ ಬಿಂಜ್ ಎಲ್ಲರಿಗೂ ಲಭ್ಯ

ಟಾಟಾ ಪ್ಲೇ ಬಿಂಜ್ ಓಟಿಟಿ ಸೇವೆಯನ್ನು ಎರಡು ವರ್ಷಗಳ ಹಿಂದೆ ಪ್ರಾರಂಭಿಸಲಾಯಿತು. ಆದರೆ ಈ ಸೇವೆಯು ಟಾಟಾ ಪ್ಲೇ ಚಂದಾದಾರರಿಗೆ ಮಾತ್ರ ಸೀಮಿತವಾಗಿತ್ತು. ಆದ್ರೆ ಈಗ, ಇದು ಟಾಟಾ ಪ್ಲೇ ಚಂದಾದಾರರು ಸೇರಿದಂತೆ ಇತರೆ ಎಲ್ಲ ಬಳಕೆದಾರರಿಗೂ ಸಹ ಲಭ್ಯ ಎಂದು ಕಂಪನಿಯು ಘೋಷಿಸಿದೆ. ಬಿಂಜ್ ಆಪ್‌ ಡಿಸ್ನಿ+ಹಾಟ್‌ಸ್ಟಾರ್, ZEE5, Voot, SonyLIV, MX ಜೀ5, ವೂಟ್‌, ಸೋನಿಲೈವ್, MX ಪ್ಲೇಯರ್‌, ಪ್ಲ್ಯಾನೆಟ್‌ ಮರಾಠಿ, ಸೋನಿ ನೆಕ್ಸ್ಟ್‌, Hoichoi, ಎರೋಸ್‌ ನವ್‌ ಸೇರಿದಂತೆ ಇತರೆ 25 ವಿಡಿಯೋ ಆನ್‌ ಡಿಮ್ಯಾಂಡ್‌ ಸೇವೆಗಳೊಂದಿಗೆ ಸಂಯೋಜನೆ ಹೊಂದಿದೆ.

ಟಾಟಾ ಪ್ಲೇ ಬಿಂಜ್ ಪ್ಯಾಕ್‌ಗಳ ದರ ವಿವರ:

ಟಾಟಾ ಪ್ಲೇ ಬಿಂಜ್ ಪ್ಯಾಕ್‌ಗಳ ದರ ವಿವರ:

ಟಾಟಾ ಪ್ಲೇ ಬಿಂಜ್ 59ರೂ, 99ರೂ, 175ರೂ ಮತ್ತು 299ರೂ. ಗಳ ಮಾಸಿಕ ಪ್ಯಾಕೇಜ್‌ಗಳಲ್ಲಿ ಲಭ್ಯವಿದೆ. 199 ರೂ ಮತ್ತು 299 ರೂ ಮಾಸಿಕ ಸಂಪರ್ಕಿತ ಡಿವೈಸ್‌ಗಳ ಪ್ರವೇಶಿಸಬಹುದು. ಆದರೆ ಇನ್ನುಳಿದ ಪ್ಯಾಕ್‌ಗಳು ಮೊಬೈಲ್ ಡಿವೈಸ್‌ಗೆ ಮಾತ್ರ ಸಂಪರ್ಕ ಪಡೆದಿವೆ. ಹೆಚ್ಚುವರಿಯಾಗಿ, ಒಂದೇ ಬೆಲೆಯ ಪ್ಯಾಕ್‌ ನ್ಲಲಿ ವಿವಿಧ OTT ಅಪ್ಲಿಕೇಶನ್ ಗಳ ಸಂಯೋಜನೆ ಇದೆ. ಉದಾಹರಣೆಗೆ- 59ರೂ ಪ್ಯಾಕ್ ಮೂರು ಆಯ್ಕೆಗಳನ್ನು ಹೊಂದಿದ್ದು, MX ಸ್ಟಾರ್ಟರ್, ಜೀ5 ಸ್ಟಾರ್ಟರ್ ಮತ್ತು ವೂಟ್‌ ಸ್ಟಾರ್ಟರ್. ಬಳಕೆದಾರರು ಯಾವ ಆಪ್‌ಗಳನ್ನು ಹೆಚ್ಚು ವೀಕ್ಷಿಸುತ್ತೀರಿ ಎಂಬುದರ ಆಧಾರದ ಮೇಲೆ, ಅದಕ್ಕೆ ಅನುಗುಣವಾಗಿ ಪ್ಯಾಕ್‌ ಆಯ್ಕೆ ಮಾಡಬಹುದು.

ಟಾಟಾಪ್ಲೇ

ಇತ್ತೀಚಿಗೆ ಟಾಟಾ ಪ್ಲೇ (Tata Play), MX ಪ್ಲೇಯರ್‌ ಓಟಿಟಿ ಜತೆ ಜೊತೆಯಾಗಿದ್ದು, ಈ ಮೂಲಕ MX ಪ್ಲೇಯರ್‌ ವೀಡಿಯೊ ಸ್ಟ್ರೀಮಿಂಗ್ ಆಪ್‌ ಟಾಟಾ ಪ್ಲೇ ಬಿಂಜ್ ಪ್ಯಾಕ್‌ನಲ್ಲಿ ಸಿಗಲಿದೆ. ಟಾಟಾಪ್ಲೇ ಬಿಂಜ್‌ನಲ್ಲಿ 16 ಓಟಿಟಿ ಆಪ್‌ಗಳು ಇದ್ದವು, ಇದೀಗ MX ಪ್ಲೇಯರ್‌ ಸೇರ್ಪಡೆಯಿಂದ ಟಾಟಾ ಪ್ಲೇ ಬಿಂಜ್ ನಲ್ಲಿ 17 ಓಟಿಟಿ ಆಪ್‌ಗಳು ದೊರೆಯಲಿವೆ. ಇನ್ನು ನೂತನವಾಗಿ ಸೇರ್ಪಡೆಯಾಗಿರುವ MX ಪ್ಲೇಯರ್‌ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಮತ್ತು ಇತರ ಭಾಷೆಗಳಲ್ಲಿ ಲಭ್ಯ. ಟಾಟಾಪ್ಲೇ ಬಿಂಜ್ (Tata Play Binge) ಆರಂಭಿಕ ಯೋಜನೆಯು 59ರೂ. ಆಗಿದೆ.

ಟಾಟಾಪ್ಲೇ ಬಿಂಜ್ ಆರಂಭಿಕ ಪ್ಯಾಕ್‌ನಲ್ಲಿ ಈ OTT ಆಪ್ಸ್‌ ಲಭ್ಯ:

ಟಾಟಾಪ್ಲೇ ಬಿಂಜ್ ಆರಂಭಿಕ ಪ್ಯಾಕ್‌ನಲ್ಲಿ ಈ OTT ಆಪ್ಸ್‌ ಲಭ್ಯ:

ಡಿಸ್ನಿ+ ಹಾಟ್‌ಸ್ಟಾರ್
ಜೀ5
ಸೋನಿಲೈವ್
Voot ಸೆಲೆಕ್ಟ್‌
MX ಪ್ಲೇಯರ್
hoichoi
Chaupal

ಪ್ಲಾನೆಟ್ ಮರಾಠಿ

ವೋಟ್ ಕಿಡ್ಸ್
ನಮ್ಮ ಫ್ಲಿಕ್ಸ್
ಪ್ಲಾನೆಟ್ ಮರಾಠಿ
ಸನ್ NXT
ಹಂಗಾಮಾ ಪ್ಲೇ
ಎರೋಸ್ ನೌ
ShemarooMe
ವೋಟ್ ಕಿಡ್ಸ್
ಕ್ಯೂರಿಯಾಸಿಟಿ ಸ್ಟ್ರೀಮ್
EPIC ON
DocuBay

Best Mobiles in India

English summary
Tata Play to now offer its Binge OTT service to Everyone: Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X