ಭಾರತದಲ್ಲಿ TCL ಕಂಪೆನಿಯಿಂದ ಮೂರು ಹೊಸ ಸ್ಮಾರ್ಟ್‌ಟಿವಿ ಅನಾವರಣ!

|

ಟೆಕ್‌ ವಲಯದಲ್ಲಿ TCL ಕಂಪೆನಿ ಜನಪ್ರಿಯ ಎಲೆಕ್ಟ್ರಾನಿಕ್ಸ್‌ ಬ್ರ್ಯಾಂಡ್‌ ಆಗಿ ಗುರುತಿಸಿಕೊಂಡಿದೆ. ಈಗಾಗಲೇ ಹಲವು ಮಾದರಿಯ ಎಲೆಕ್ಟ್ರಾನಿಕ್ಸ್‌ ಗ್ಯಾಜೆಟ್ಸ್‌ಗಳನ್ನು ಪರಿಚಯಿಸಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಸ್ಮಾರ್ಟ್‌ಟಿವಿ ವಿಭಾಗದಲ್ಲಿಯೂ ಸೈ ಎನಿಸಿಕೊಂಡಿದೆ. ಸದ್ಯ ಇದೀಗ TCL ಕಂಪೆನಿ ದೊಡ್ಡ ಗಾತ್ರವನ್ನು ಹೊಂದಿರುವ ಹೊಸ ಮಾದರಿಯ ಮೂರು ಹೊಸ ಸ್ಮಾರ್ಟ್‌ಟಿವಿಗಳನ್ನು ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ಟಿವಿಗಳು ಆಡಿಯೋ ಮತ್ತು ಇಮೇಜಿಂಗ್‌ನಲ್ಲಿ ಹೊಸ ಆವಿಷ್ಕಾರವನ್ನು ಒಳಗೊಂಡಿವೆ ಎನ್ನಲಾಗಿದೆ.

TCL

ಹೌದು, TCL ಕಂಪೆನಿ ಮೂರು ಹೊಸ ಸ್ಮಾರ್ಟ್‌ಟಿವಿಗಳನ್ನು ಬಿಡುಗಡೆ ಮಾಡಿದೆ. ಇವುಗಳನ್ನು TCL C835, TCL C635, TCL P735 ಸ್ಮಾರ್ಟ್‌ಟಿವಿಗಳು ಎಂದು ಹೆಸರಿಸಲಾಗಿದೆ. ಈ ಮೂರು ಮಾದರಿಗಳು ಕೂಡ ವಿಭಿನ್ನ ಗಾತ್ರದ ಸ್ಮಾರ್ಟ್‌ಟಿವಿಗಳನ್ನು ಹೊಂದಿವೆ. ಇದರಲ್ಲಿ ಗೇಮಿಂಗ್‌, ಗೂಗಲ್‌, ಮಿನಿ ಎಲ್‌ಇಡಿ 4K ಗೂಗಲ್‌ ಟಿವಿಗಳನ್ನು ಕಾಣಬಹುದಾಗಿದೆ. ಈ ಸ್ಮಾರ್ಟ್‌ಟಿವಿಗಳು ಹೊಸ ಜನರೇಷನ್‌ ಟೆಕ್ನಾಲಜಿಯನ್ನು ಒಳಗೊಂಡಿದ್ದು,ಡಾಲ್ಬಿ ಲ್ಯಾಬೊರೇಟರೀಸ್‌ನೊಂದಿಗೆ ಸಹಕರಿಸಿದೆ.

ಟಿಸಿಎಲ್‌

ಟಿಸಿಎಲ್‌ ಬಿಡುಗಡೆ ಮಾಡಿರುವ ಮೂರು ಸ್ಮಾರ್ಟ್‌ಟಿವಿಗಳಲ್ಲಿ TCL 144Hz VRR, C635 ಗೇಮಿಂಗ್ QLED 4K TV ಆಗಿದೆ. ಹಾಗೆಯೇ TCL P735 4K ಹೆಚ್‌ಡಿಆರ್‌ ಗೂಗಲ್‌ ಟಿವಿ ಆಗಿದೆ. ಜೊತೆಗೆ TCL C835 ಹೊಸ ಜನರೇಷನ್ ಮಿನಿ ಎಲ್‌ಇಡಿ 4K ಗೂಗಲ್‌ ಟಿವಿ ಆಗಿದೆ. ಇದರಲ್ಲಿ TCL C835 ನ್ಯೂ ಜನರೇಷನ್ ಮಿನಿ ಎಲ್‌ಇಡಿ 4K ಗೂಗಲ್‌ ಟಿವಿ 144Hz VRR ಟಾಪ್-ಎಂಡ್ ರೂಪಾಂತರವಾಗಿದೆ. ಇದು 55-ಇಂಚಿನ, 65-ಇಂಚಿನ ಮತ್ತು 75 ಇಂಚಿನ ಆಯ್ಕೆಗಳಲ್ಲಿ ಬರಲಿದೆ. ಹಾಗಾದ್ರೆ ಟಿಸಿಎಲ್‌ ಪರಿಚಯಿಸಿರುವ ಸ್ಮಾರ್ಟ್‌ಟಿವಿಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

TCL C835

TCL C835

TCL C835 ನ್ಯೂ ಜನರೇಷನ್ ಮಿನಿ ಎಲ್‌ಇಡಿ 4K ಗೂಗಲ್‌ ಟಿವಿ ಆಗಿದೆ. ಈ ಸ್ಮಾರ್ಟ್‌ಟಿವಿ 55-ಇಂಚಿನ, 65-ಇಂಚಿನ ಮತ್ತು 75 ಇಂಚಿನ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಟಿವಿ 144Hz VRR, ONKYO, IMAX ವರ್ಧಿತ, ಡಾಲ್ಬಿ ವಿಷನ್‌ IQ, ಡಾಲ್ಬಿ ಅಟ್ಮೋಸ್‌, ಹೆಚ್‌ಡಿಆರ್‌ 10+, MEMC, ಹೆಚ್‌ಡಿಎಂಐ 2.1 ಸೇರಿದಂತೆ ಅನೇಕ ಹೊಸ ಮಾದರಿಯ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದಲ್ಲದೆ ಗೇಮಿಂಗ್‌ ಪ್ರಿಯರಿಗಾಗಿ 144Hz VRR ಅನ್ನು ಕೂಡ ನೀಡಲಾಗಿದೆ. ಇದರಿಂದ ಫಾಸ್ಟರ್‌ ರಸ್ಪಾನ್ಸಿವ್‌, ತೀಕ್ಷ್ಣವಾದ ಚಿತ್ರಣ ಮತ್ತು ಸುಗಮವಾದ ಗೇಮ್‌ ಪ್ಲೇ ನೀಡಲಿದೆ. ಈ ಸ್ಮಾರ್ಟ್‌ಟಿವಿಯು ಗೂಗಲ್ ಟಿವಿ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

TCL C635

TCL C635

TCL C635 ಗೇಮಿಂಗ್ ಕ್ಯೂಎಲ್‌ಇಡಿ 4K TV 120Hz DLG ಮತ್ತು ಗೇಮ್ ಮಾಸ್ಟರ್‌ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಟಿವಿ ಮಾಡೆಲ್‌ 43 ಇಂಚಿನ, 50 ಇಂಚಿನ, 55 ಇಂಚಿನ, 65 ಇಂಚಿನ ಮತ್ತು 75 ಇಂಚಿನ ಆಯ್ಕೆಗಳಲ್ಲಿ ಬರಲಿದೆ. ಇದರಲ್ಲಿ ವೈಡ್ ಕಲರ್ ಗ್ಯಾಮಟ್, 4K HDR ಮತ್ತು MEMCಯೊಂದಿಗೆ ಸಂಯೋಜಿಸಲ್ಪಟ್ಟಿದೆ. ಇದು ಡಾಲ್ಬಿ ಅಟ್ಮಾಸ್ ಅನ್ನು ಹೊಂದಿದ್ದು, ಪ್ರೀಮಿಯಂ ಮನರಂಜನಾ ಅನುಭವವನ್ನು ನೀಡುತ್ತದೆ. ಜೊತೆಗೆ ಗೂಗಲ್‌ ಡ್ಯೂ ಅನ್ನು ಬೆಂಬಲಿಸುವ ವೀಡಿಯೊ ಕರೆ ಕ್ಯಾಮೆರಾವನ್ನು ಸಹ ಹೊಂದಿದೆ.

TCL P735 4K ಹೆಚ್‌ಡಿಆರ್‌ ಗೂಗಲ್‌ ಟಿವಿ

TCL P735 4K ಹೆಚ್‌ಡಿಆರ್‌ ಗೂಗಲ್‌ ಟಿವಿ

TCL P735 4K ಹೆಚ್‌ಡಿಆರ್‌ ಗೂಗಲ್‌ ಟಿವಿ ವೈಡ್ ಕಲರ್ ಗ್ಯಾಮಟ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ಟಿವಿ 4K HDR ಮತ್ತು MEMC (ಮೋಶನ್ ಎಸ್ಟಿಮೇಶನ್, ಮೋಶನ್ ಕಂಪೆನ್ಸಷನ್) ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಇದು HDMI 2.1ಕ್ಕಿಂತ ಹೆಚ್ಚಿನ ವೀಡಿಯೊ ರೆಸಲ್ಯೂಶನ್‌ಗಳನ್ನು ಮತ್ತು ವೇಗವಾದ ರಿಫ್ರೆಶ್ ರೇಟ್‌ಗಳನ್ನು ಬೆಂಬಲಿಸಲಿದೆ. ಜೊತೆಗೆ ALLM ಆಪ್ಟಿಮೈಸೇಶನ್ ಫೀಚರ್ಸ್‌ಗಳನ್ನು ಕೂಡ ಒಳಗೊಂಡಿದೆ. ಇದ ಸುಗಮವಾದ ಗೇಮ್‌ಪ್ಲೇ ನೀಡುವುದಕ್ಕಾಗಿ ಆಟೋಮ್ಯಾಟಿಕ್‌ ಸ್ವಿಚಿಂಗ್ ಟು ಲೊ-ಲಾಗ ಪ್ರೆಸೆಟ್ಸ್ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಟಿವಿ 43 ಇಂಚಿನ, 50 ಇಂಚಿನ, 55 ಇಂಚಿನ ಮತ್ತು 65 ಇಂಚಿನ ಆಯ್ಕೆಗಳಲ್ಲಿ ಬರಲಿದೆ.

ವಿಶೇಷ ಫೀಚರ್ಸ್‌

ವಿಶೇಷ ಫೀಚರ್ಸ್‌

ಟಿಸಿಎಲ್‌ ತನ್ನ ಸ್ಮಾರ್ಟ್‌ಟಿವಿಗಳಲ್ಲಿ ಬ್ರೈಟ್‌ನೆಸ್‌, ಕಾಂಟ್ರಾಸ್ಟ್, ಕಲರ್‌ ಮತ್ತು ವಿವರಗಳೊಂದಿಗೆ ಅಲ್ಟ್ರಾ-ವಿವಿಡ್ ಚಿತ್ರದ ಗುಣಮಟ್ಟವನ್ನು ನೀಡಲು ಡಾಲ್ಬಿಯ ಆಡಿಯೊವಿಶುವಲ್ ತಂತ್ರಜ್ಞಾನದೊಂದಿಗೆ ಸಹಕರಿಸುತ್ತದೆ. ಡಾಲ್ಬಿ ವಿಷನ್‌ನೊಂದಿಗಿನ ಪ್ರದರ್ಶನಗಳು ಹೆಚ್ಚು ಎದ್ದುಕಾಣುವ, ಜೀವಮಾನದ ಚಿತ್ರಗಳನ್ನು ನೀಡುತ್ತವೆ. ಸರೌಂಡ್ ಸೌಂಡ್ ಅನ್ನು ಅನುಭವಿಸಲು ಟಿವಿ ಡಾಲ್ಬಿ ಅಟ್ಮಾಸ್ ಅನ್ನು ಸಹ ಬೆಂಬಲಿಸುತ್ತದೆ, ಇದು ನಿಮಗೆ ಥಿಯೇಟರ್ ತರಹದ ಅನುಭವವನ್ನು ನೀಡುತ್ತದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

TCL C835 ನ್ಯೂ ಜನರೇಷನ್ ಮಿನಿ ಎಲ್‌ಇಡಿ 4K ಗೂಗಲ್‌ ಟಿವಿ 144Hz VRR ಟಾಪ್-ಎಂಡ್ ರೂಪಾಂತರವಾಗಿದೆ. ಇದರ 55 ಇಂಚಿನ ಆಯ್ಕೆಯು 1,19,990ರೂ, 65-ಇಂಚಿನ ಆಯ್ಕೆಯು 1,59,990ರೂ. ಮತ್ತು 75 ಇಂಚಿನ ಆಯ್ಕೆಯು 2,29,990ರೂ.ಬೆಲೆಯಲ್ಲಿ ಬರಲಿದೆ.
ಇನ್ನು TCL C635 ಸ್ಮಾರ್ಟ್‌ಟಿವಿಯ 43-ಇಂಚಿನ ಆಯ್ಕೆಯು 44,990ರೂ, 50 ಇಂಚಿನ ಆಯ್ಕೆಯು 54,990ರೂ, 55 ಇಂಚಿನ ಆಯ್ಕೆಯು 64,990ರೂ, 65 ಇಂಚಿನ ಆಯ್ಕೆಯು 85,990ರೂ ಮತ್ತು 75 ಇಂಚಿನ ಆಯ್ಕೆಯು 149,9900ರೂ.ಬೆಲೆಯನ್ನು ಹೊಂದಿದೆ.
ಇದಲ್ಲದೆ TCL P735 ಸ್ಮಾರ್ಟ್‌ಟಿವಿಯ 43 ಇಂಚಿನ ಆಯ್ಕೆಯು 35,990ರೂ, 50-ಇಂಚಿನ ಆಯ್ಕೆಯು 41,990ರೂ, 55-ಇಂಚಿನ ಆಯ್ಕೆಯು 49,990ರೂ, ಮತ್ತು 65 ಇಂಚಿನ ಆಯ್ಕೆಯು 69,990ರೂ.ಬೆಲೆಯನ್ನು ಹೊಂದಿದೆ.

ಹೆಚ್ಚುವರಿ ಆಫರ್‌ ಏನಿದೆ?

ಹೆಚ್ಚುವರಿ ಆಫರ್‌ ಏನಿದೆ?

ಟಿಸಿಎಲ್‌ ಕಂಪೆನಿ ಪರಿಚಯಿಸಿರುವ ಸ್ಮಾರ್ಟ್‌ಟಿವಿಗಳನ್ನು ಖರೀದಿಸುವವರಿಗೆ ಹೆಚ್ಚುವರಿ ಆಫರ್‌ಗಳನ್ನು ಸಹ ನೀಡಲಾಗ್ತಿದೆ. ನೀವು TCL ಕಂಪೆನಿಯ ಹೊಸ ಸರಣಿಯ ಸ್ಮಾರ್ಟ್‌ಟಿವಿಗಳನ್ನು ಪ್ರಿ-ಬುಕಿಂಗ್ ಮಾಡಿದರೆ ನಿಮಗೆ 10,990ರೂ.ಮೌಲ್ಯದ ಸೌಂಡ್ ಬಾರ್ ದೊರೆಯಲಿದೆ. 2999ರೂ. ಮೌಲ್ಯದ ವೀಡಿಯೊ ಕರೆ ಕ್ಯಾಮೆರಾ ಉಚಿತವಾಗಿ ಸಿಗಲಿದೆ. ಇದಲ್ಲದೆ ಹೆಚ್ಚುವರಿಯಾಗಿ SBI ಗ್ರಾಹಕರು 10% ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು. ಈ ಆಫರ್ ರಿಲಯನ್ಸ್ ಡಿಜಿಟಲ್ ಮತ್ತು ಕ್ರೋಮಾದಲ್ಲಿ ಲಭ್ಯವಿದೆ.

Best Mobiles in India

Read more about:
English summary
TCL has launched three Smart TVs in india:price

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X