ಹೊಸ Nxtwear S ಸ್ಮಾರ್ಟ್‌ಗ್ಲಾಸ್‌ ಪರಿಚಯಿಸಿದ TCL ಕಂಪೆನಿ!

|

ಟಿಸಿಎಲ್‌ ಕಂಪೆನಿ ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ ಡಿವೈಸ್‌ಗಳಿಗೆ ಜನಪ್ರಿಯತೆ ಪಡೆದುಕೊಂಡಿದೆ. ಇದೀಗ ಅದೇ ಹಾದಿಯಲ್ಲಿ ಮುಂದುವರೆದಿರುವ ಟಿಸಿಎಲ್‌ ಕಂಪೆನಿ ಹೊಸ ಸ್ಮಾರ್ಟ್‌ಗ್ಲಾಸ್‌ ಅನ್ನು ಪರಿಚಯಿಸಿದೆ. ಇದನ್ನು ನೆಕ್ಸ್ಟ್‌ವೇರ್‌ ಎಸ್‌ ಸ್ಮಾರ್ಟ್‌ಗ್ಲಾಸ್‌ ಎಂದು ಹೆಸರಿಸಲಾಗಿದೆ. ಈ ಹೊಸ ಸ್ಮಾರ್ಟ್‌ಗ್ಲಾಸ್‌ಗಳಿಗಾಗಿ ಟಿಸಿಎಲ್‌ ಕಂಪೆನಿ ಕಿಕ್‌ಸ್ಟಾರ್ಟರ್‌ ಅಭಿಯಾನವನ್ನು ತೆರೆದಿದೆ. ಇನ್ನು ಈ ಹೊಸ ಸ್ಮಾರ್ಟ್‌ಗ್ಲಾಸ್‌ ಮೈಕ್ರೋ OLED ಅನ್ನು ಹೊಂದಿದ್ದು, ಇದು 1080p ಫುಲ್‌ಹೆಚ್‌ಡಿ ವ್ಯೂ ನೀಡಲಿದೆ.

ಸ್ಮಾರ್ಟ್‌ಗ್ಲಾಸ್‌

ಹೌದು, ಟಿಸಿಎಲ್‌ ಕಂಪೆನಿ ಹೊಸ ನೆಕ್ಸ್ಟ್‌ವೇರ್‌ ಎಸ್‌ ಸ್ಮಾರ್ಟ್‌ಗ್ಲಾಸ್‌ ಅನ್ನು ಪರಿಚಯಿಸಿದೆ. ಇದು ಹೊಸ ಆಕರ್ಷಕ ವಿನ್ಯಾಸವನ್ನು ಹೊಂದಿದ್ದು, ಸ್ಮಾರ್ಟ್‌ಗ್ಲಾಸ್‌ ಪ್ರಿಯರ ಗಮನಸೆಳೆದಿದೆ. ಇನ್ನು Nxtwear S ಸ್ಮಾರ್ಟ್‌ಗ್ಲಾಸ್‌ ಅನ್ನು ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು, PC ಗಳು ಮತ್ತು ಹಲವಾರು ಗೇಮಿಂಗ್ ಕನ್ಸೋಲ್‌ಗಳೊಂದಿಗೆ ಬಳಸಬಹುದು. ಆಡಿಯೊವನ್ನು ಕೇಳಲು ಸ್ಮಾರ್ಟ್‌ಫೋನ್ ಬ್ಲೂಟೂತ್ ಮೂಲಕ ನಿಮ್ಮ ಇಯರ್‌ಫೋನ್‌ಗಳನ್ನು ಕನೆಕ್ಟ್‌ ಮಾಡಬಹುದಾಗಿದೆ. ಇನ್ನುಳಿದಂತೆ ಈ ಹೊಸ ಸ್ಮಾರ್ಟ್‌ಗ್ಲಾಸ್‌ನ ವಿಶೇಷತೆ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

Nxtwear

ಟಿಸಿಎಲ್‌ ಕಂಪೆನಿಯ ಹೊಸ Nxtwear S ಸ್ಮಾರ್ಟ್‌ಗ್ಲಾಸ್‌ ಸುಮಾರು 13 ಅಡಿ ದೂರದ ವ್ಯೂವ್‌ ಅನ್ನು ಕೂಡ 140 ಇಂಚಿನ ಟಿವಿ ವೀಕ್ಷಣೆಯ ಅನುಭವವನ್ನು ನೀಡಲಿದೆ. ಇನ್ನು ಈ ಸ್ಮಾರ್ಟ್ ಗ್ಲಾಸ್‌ TUV ರೈನ್‌ಲ್ಯಾಂಡ್ ಲೋ ಬ್ಲೂ ಲೈಟ್ ಪ್ರಮಾಣೀಕರಣವನ್ನು ಹೊಂದಿದೆ. ಇದು ಮೈಕ್ರೋ OLED ಅನ್ನು ಹೊಂದಿದ್ದು,1080p FHD ವೀಕ್ಷಣೆಯನ್ನು ನೀಡುತ್ತದೆ. ಅಲ್ಲದೆ ಈ ಸ್ಮಾರ್ಟ್‌ಗ್ಲಾಸ್‌ 2D ಕಂಟೆಂಟ್‌ ಅನ್ನು ನೀಡಲಿದೆ. ಜೊತೆಗೆ ವಿಂಡೋಸ್‌ ಮತ್ತು ಆಂಡ್ರಾಯ್ಡ್‌ OS ಎರಡಕ್ಕೂ ಕೂಡ ಹೊಂದಿಕೊಳ್ಳಲಿದೆ.

ಲ್ಯಾಪ್‌ಟಾಪ್‌ಗಳು

ನೆಕ್ಸ್ಟ್‌ವೇರ್‌ S ಸ್ಮಾರ್ಟ್‌ಗ್ಲಾಸ್‌ ಅನ್ನು ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಹಲವಾರು ಗೇಮಿಂಗ್ ಕನ್ಸೋಲ್‌ಗಳ ಜೊತೆಗೆ ಬಳಸಬಹುದು. ಅಲ್ಲದೆ ಸ್ಮಾರ್ಟ್‌ಗ್ಲಾಸ್‌ ನಲ್ಲಿ ಆಡಿಯೊವನ್ನು ಕೇಳಲು ಸ್ಮಾರ್ಟ್‌ಫೋನ್ ಬ್ಲೂಟೂತ್ ಮೂಲಕ ನಿಮ್ಮ ಇಯರ್‌ಫೋನ್‌ಗಳನ್ನು ಕನೆಕ್ಟ್‌ ಮಾಡಬಹುದಾಗಿದೆ. ಇದಲ್ಲದೆ ಮ್ಯಾಗ್ನೆಟಿಕ್ ಪೊಗೊ ಪಿನ್ ಕನೆಕ್ಟರ್ ಅನ್ನು ಬಳಸುವ ಡಿವೈಸ್‌ಗಳಿಗೆ ಅಡಾಪ್ಟರ್ ಮೂಲಕ ಬಳಸಿದಾಗ ಈ ಸ್ಮಾರ್ಟ್ ಗ್ಲಾಸ್‌ಗಳು iOS ನೊಂದಿಗೆ ಕೂಡ ಕಾರ್ಯನಿರ್ವಹಿಸಲಿವೆ.

ಪಿಸಿಕಲ್‌

ಈ ಡಿವೈಸ್‌ನಲ್ಲಿ ಪಿಸಿಕಲ್‌ ಕಂಟ್ರೋಲ್‌ ವ್ಯೂ ವಿಧಾನಗಳು ಮತ್ತು ವಾಲ್ಯೂಮ್ ಹೊಂದಾಣಿಕೆಯ ನಡುವೆ ಬದಲಾಯಿಸಲು ಬಳಸಬಹುದಾದ ಡಯಲ್ ಅನ್ನು ಕೂಡ ನೀಡಲಾಗಿದೆ. ಅಲ್ಲದೆ ಮಾನಿಟರ್ 90% ಕ್ಕಿಂತ ಹೆಚ್ಚು DCI-P3 ವ್ಯಾಪ್ತಿಯನ್ನು ಹೊಂದಿದೆ ಎಂದು ಹೇಳಲಾಗಿದೆ. ಈ ಸ್ಮಾರ್ಟ್‌ಗ್ಲಾಸ್‌ ಒಟ್ಟಾರೆ 47 ಪಿಕ್ಸೆಲ್‌ಗಳು/ ಡಿಗ್ರಿ ರೇಟಿಂಗ್ ಹೊಂದಿದೆ. ಇನ್ನು ಈ ಸ್ಮಾರ್ಟ್‌ಗ್ಲಾಸ್‌ ಹಿಂದಿನ ಸ್ಮಾರ್ಟ್‌ಗ್ಲಾಸ್‌ಗಳಿಗೆ ಹೋಲಿಸಿದರೆ ಸಾಕಷ್ಟು ಅಪ್ಡೇಟ್‌ ಅನ್ನು ಪಡೆದುಕೊಂಡಿದೆ.

ಸ್ಮಾರ್ಟ್‌ಗ್ಲಾಸ್‌

ಇನ್ನು ಈ ಸ್ಮಾರ್ಟ್‌ಗ್ಲಾಸ್‌ ಮೂಲಕ ಬಳಕೆದಾರರು ಚಲನಚಿತ್ರ ಗುಣಮಟ್ಟದ ಆಡಿಯೋ ಸ್ಪಷ್ಟತೆಯನ್ನು ನೀಡಲಿದೆ. ಇದು ಬಳಕೆದಾರರಿಗೆ ಖಾಸಗಿ ವೀಕ್ಷಣೆಯ ಅನುಭವವನ್ನು ನೀಡಲಿದೆ. ಇದರ ಪಾಕೆಟ್ ಗಾತ್ರದ ಚೌಕಟ್ಟು ಇದನ್ನು ಸುಲಭವಾಗಿ ಸಾಗಿಸುವುದಕ್ಕೆ ಅವಕಾಶವಿದೆ. ಸದ್ಯ TCL ಕಂಪೆನಿ ಹೊಸ ನೆಕ್ಸ್ಟ್‌ವೇರ್‌ S ಸ್ಮಾರ್ಟ್‌ಗ್ಲಾಸ್‌ಗಾಗಿ ಕ್ರೌಡ್‌ಫಂಡಿಂಗ್ ಅಭಿಯಾನವು ಈಗಾಗಲೇ 681 ಬೆಂಬಲಿಗರಿಂದ ಚಂದಾದಾರಿಕೆಗಳಲ್ಲಿ $239,000 ಕ್ಕಿಂತ ಹೆಚ್ಚು ಸಾಧಿಸಿದೆ ಎಂದು ಹೇಳಲಾಗಿದೆ. ಈ ಕ್ರೌಡ್‌ಫಂಡಿಂಗ್ ಅಭಿಯಾನವು ನವೆಂಬರ್ ಆರಂಭದವರೆಗೆ ಇರುತ್ತದೆ. ಸದ್ಯ ಈ ಸ್ಮಾರ್ಟ್‌ಗ್ಲಾಸ್‌ ಕಿಕ್‌ಸ್ಟಾರ್ಟರ್ ಮೂಲಕ ಮಾತ್ರ ಲಭ್ಯವಿದೆ. ಇದರ ಬೆಲೆ ರಿಯಾಯಿತಿ ದರದಲ್ಲಿ $329 (27,101ರೂ)ಬೆಲೆಯಿಂದ ಪ್ರಾರಂಭವಾಗುತ್ತವೆ.

Best Mobiles in India

Read more about:
English summary
TCL Nxtwear S smartglass launched: Details

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X