ಫೇಸ್‌ಬುಕ್‌ನಲ್ಲಿ ಇನ್ನಷ್ಟು ಕಲಿಯಬೇಕೇ?

By Shwetha
|

ಫೇಸ್‌ಬುಕ್ ಎಂಬ ದೈತ್ಯ ತಾಣ ಇಂದು ವಿಶ್ವದ ಬಳಕೆದಾರರ ಮನವನ್ನು ಗೆದ್ದಿದೆ. ಹೆಚ್ಚು ಹೆಚ್ಚು ಸುಧಾರಿತ ತಂತ್ರಗಾರಿಕೆಯೊಂದಿಗೆ ಈ ತಾಣ ಬಳಕೆದಾರರಿಗೆ ಸಮೀಪವಾಗುತ್ತಿದೆ. ಫೇಸ್‌ಬುಕ್‌ನಲ್ಲಿ ನಿಮ್ಮ ಹೆಸರಿಗೆ ಉಚ್ಛಾರಣೆ ಮಾರ್ಗದರ್ಶವನ್ನು ಸೇರಿಸಬಹುದು? ನೀವು ಫೋಸ್ಟ್ ಮಾಡಿರುವ ಫೋಟೋಗಳಿಗೆ ಇನ್ನಷ್ಟು ಬಣ್ಣವನ್ನು ಭರ್ತಿ ಮಾಡಬಹುದು.

ಓದಿರಿ: ಫೇಸ್‌ಬುಕ್ ಬಳಸುವಾಗ ತಲೆಯಲ್ಲಿರಲಿ ಕಟ್ಟಕಡೆಯ ಎಚ್ಚರ!!!

ಇಂದಿನ ಲೇಖನದಲ್ಲಿ ಫೇಸ್‌ಬುಕ್‌ನಲ್ಲಿ ಇನ್ನಷ್ಟು ತಂತ್ರಗಳನ್ನು ನಿರ್ವಹಿಸುವುದು ಹೇಗೆ ಎಂಬುದನ್ನು ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಸರಳವಾದ ಈ ಫೇಸ್‌ಬುಕ್ ಸಲಹೆಗಳು ನಿಮ್ಮನ್ನು ಸಾಮಾಜಿಕ ತಾಣದಲ್ಲಿ ನಿಸ್ಸೀಮನಾಗಿಸುವುದರಲ್ಲಿ ಸಂದೇಹವೇ ಇಲ್ಲ. ಅದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಿಂದ ತಿಳಿದುಕೊಳ್ಳಿ.

ಉಚ್ಛಾರಣಾ ಮಾರ್ಗದರ್ಶಿ ಸೇರ್ಪಡೆ

ಉಚ್ಛಾರಣಾ ಮಾರ್ಗದರ್ಶಿ ಸೇರ್ಪಡೆ

ನಿಮ್ಮ ಪ್ರೊಫೈಲ್‌ನಲ್ಲಿ "ಅಬೌಟ್" ಸೆಕ್ಶನ್‌ನಲ್ಲಿ "ಡೀಟೈಲ್ಸ್ ಅಬೌಟ್ ಯು" ನಂತರ "ನೇಮ್ ಪ್ರೊನೌನ್ಸಿಯೇಶನ್" ಇದನ್ನು ಕ್ಲಿಕ್ ಮಾಡಿ. ಇಲ್ಲಿ ಫೇಸ್‌ಬುಕ್ ನಿಮಗೆ ನಿಮ್ಮ ಹೆಸರಿನ ಪ್ರಥಮ ಮತ್ತು ಕೊನೆಯ ಹೆಸರಿಗಾಗಿ ಸಲಹೆಗಳನ್ನು ನೀಡುತ್ತದೆ.

ಒನ್ ಟೈಮ್ ಪಾಸ್‌ವರ್ಡ್

ಒನ್ ಟೈಮ್ ಪಾಸ್‌ವರ್ಡ್

ಸಾರ್ವಜನಿಕ ಕಂಪ್ಯೂಟರ್‌ನಿಂದ ಲಾಗಿನ್ ಮಾಡುತ್ತಿದ್ದೀರಾ? ನಿಮ್ಮ ಖಾಸಗಿ ಪಾಸ್‌ವರ್ಡ್ ಬಳಸದೇ "otp" 32665 ಅನ್ನು ಟೈಪ್ ಮಾಡಿಕೊಳ್ಳಬಹುದಾಗಿದೆ. ಇಲ್ಲಿ ನಿಮಗೆ ಎಂಟು ಅಕ್ಷರಗಳ ಪಾಸ್‌ಕೋಡ್ ದೊರಕಲಿದೆ.

ಅನ್‌ಸಬ್‌ಸ್ಕ್ರೈಬ್

ಅನ್‌ಸಬ್‌ಸ್ಕ್ರೈಬ್

ಜನಪ್ರಿಯ ಫೇಸ್‌ಬುಕ್ ಪೋಸ್ಟ್‌ನಲ್ಲಿ ಯಾರಾದರೂ ಕಮೆಂಟ್ ಮಾಡಿದಲ್ಲಿ ವೈಯಕ್ತಿಕ ಅಧಿಸೂಚನೆಗಳನ್ನು ಆಫ್ ಮಾಡಬಹುದು. ನಿಮ್ಮ ವೆಬ್ ಬ್ರೌಸರ್‌ನ ಬಲ ಮೇಲ್ಭಾಗದಲ್ಲಿ ಗ್ಲೋಬ್ ಐಕಾನ್ ಅನ್ನು ಕ್ಲಿಕ್ ಮಾಡುವ ಮೂಲಕ ಇದನ್ನು ನಿಲ್ಲಿಸಬಹುದು.

ಟರ್ನ್ ಆಫ್ ನೋಟಿಫಿಕೇಶನ್

ಟರ್ನ್ ಆಫ್ ನೋಟಿಫಿಕೇಶನ್

ಇನ್ನು ಮೊಬೈಲ್‌ನಲ್ಲಿ ಇದನ್ನು ಮಾಡಲು ಮೂಲ ಪೋಸ್ಟ್ ಅನ್ನು ವೀಕ್ಷಿಸಲು ಕ್ಲಿಕ್ ಮಾಡಿ ನಂತರ ಪೋಸ್ಟ್‌ನ ಕೆಳ ಬಲಭಾಗದಲ್ಲಿರುವ ಕೆಳ ಬಾಣದ ಗುರುತನ್ನು ಕ್ಲಿಕ್ ಮಾಡಿ. "ಟರ್ನ್ ಆಫ್ ನೋಟಿಫಿಕೇಶನ್" ಆಯ್ಕೆಯನ್ನು ನೀವು ಕಾಣುತ್ತೀರಿ.

ಯಾರಿಗೂ ತಿಳಿಯದಂತೆ ಪೋಸ್ಟ್ ಮಾಡುವುದು

ಯಾರಿಗೂ ತಿಳಿಯದಂತೆ ಪೋಸ್ಟ್ ಮಾಡುವುದು

ನಿಮ್ಮ ವೈಯಕ್ತಿಕ ವಿಚಾರವನ್ನು ಮರೆಮಾಡಲು ಯತ್ನಿಸಿದ್ದೀರಾ? "ಎಡ ಭಾಗದಲ್ಲಿರುವ ಫ್ಯಾಮಿಲ್ ಏಂಡ್ ರಿಲೇಶನ್‌ಶಿಪ್ಸ್ ಕಾಣುತ್ತೀರಿ. ಇಲ್ಲಿ ರಿಲೇಶನ್‌ಶಿಪ್, ಆಯ್ಕೆಯನ್ನು ನನಗೆ ಮಾತ್ರ ಎಂಬುದಾಗಿ ಬದಲಾಯಿಸಿಕೊಳ್ಳಿ.

ಪಿಕ್ಚರ್ ಪರ್ಫೆಕ್ಟ್

ಪಿಕ್ಚರ್ ಪರ್ಫೆಕ್ಟ್

ಪಠ್ಯ ಸೇರಿಸುವುದು, ಕ್ವಿರ್ಕಿ ಸ್ಟಿಕ್ಕರ್ಸ್, ಸ್ಕೂಬಾ ಗೇರ್, ಸನ್‌ಗ್ಲಾಸ್ ಮುಂತಾದವುಗಳನ್ನು ಸೇರಿಸಿ ಇನ್ನಷ್ಟು ಮನರಂಜಕವನ್ನಾಗಿಸಬಹುದು.

ಭದ್ರತಾ ಪರಿಶೀಲನೆ

ಭದ್ರತಾ ಪರಿಶೀಲನೆ

"ಸೆಕ್ಯುರಿಟಿ ಚೆಕಪ್" ಇವು ಬಳಕೆದಾರರಿಗೆ ಅವರ ಖಾತೆಯನ್ನು ಇನ್ನಷ್ಟು ಭದ್ರಪಡಿಸುತ್ತದೆ. ಫೇಸ್‌ಬುಕ್‌ನಿಂದ ಲಾಗ್ಔಟ್ ಮಾಡಿಕೊಳ್ಳುವುದು ಬಳಕೆದಾರರ ಖಾತೆಯನ್ನು ಇನ್ನಷ್ಟು ಸುಭದ್ರಗೊಳಿಸುತ್ತದೆ.

Best Mobiles in India

English summary
Did you know you can add a pronunciation guide to your name on Facebook? Overlay colorful text on the photos you post? How about mark the end of a relationship without your 500 closest friends getting notified.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X