ಟೆಕ್ ಜಗತ್ತಿನ ದಾನ ಶೂರ ಬಿಲಿಯಾಧಿಪತಿಗಳು

Written By:

ಪ್ರಪಂಚದಲ್ಲೂ ಕೆಲವರು ಬಿಲಿಯಾಧಿಪತಿಗಳಿದ್ದಾರೆ. ತಾವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯನ್ನು ಮೋಜಿಗಾಗಿ ಬಳಸದೇ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುವವರು. ಈ ನಿರ್ಧಾರಕ್ಕೆ ಇವರು ಬದ್ಧರಾಗಿದ್ದಾರೆ ಎಂದಾದಲ್ಲಿ ಇದು ಯಾವುದೇ ಆಮಿಷಗಳಿಗೆ ಬಲಿಯಾಗಿ ಅಲ್ಲ. ಬದಲಿಗೆ ಸ್ವತಃ ತಾವೇ ತೆಗೆದುಕೊಂಡಿರುವ ನಿರ್ಧಾರವಾಗಿದೆ.

ಓದಿರಿ: ಭಾರತದಲ್ಲಿರುವ ಟಾಪ್ ಟೆಕ್ ಕಂಪೆನಿಗಳು

ಬಿಲ್ ಗೇಟ್ಸ್, ಮಾರ್ಕ್ ಜುಕರ್‌ ಬರ್ಗ್, ಸ್ಟೀವ್ ಕೇಸ್, ಮಾರ್ಕ್ ಬೆನಿಯೊಫ್ ಮೊದಲಾದ ಬಿಲಿಯಾಧೀಶರು ಸ್ವತಃ ತಮ್ಮ ಮಕ್ಕಳಿಗಾಗಿ ಕೂಡ ಆಸ್ತಿಯನ್ನು ಮುಡಿಪಾಗಿಡದೇ ದೇಣಿಗೆ ನೀಡಿದ್ದಾರೆ. ಮಕ್ಕಳ ಖರ್ಚಿಗೆ ಎಷ್ಟು ಬೇಕೋ ಅಷ್ಟು ಮಾತ್ರ ದುಡ್ಡನ್ನು ಉಳಿಸಿ ನಂತರದ್ದನ್ನು ಸಮಾಜ ಮುಖಿ ಕಾರ್ಯಗಳಿಗೆ ಇವರು ಬಳಸಿಕೊಳ್ಳುತ್ತಿದ್ದಾರೆ. ಅಂತಹ ಮಹಾನ್ ವ್ಯಕ್ತಿಗಳ ಪರಿಚಯವನ್ನೇ ಇಂದಿನ ಲೇಖನದಲ್ಲಿ ನಾವು ನಿಮಗೆ ಮಾಡಿಕೊಡಲಿದ್ದೇವೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಮಾಹಿತಿ ಪಡೆದುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೈಕ್ರೋಸಾಫ್ಟ್ ಸಹ ಸ್ಥಾಪಕರು

ಮೈಕ್ರೋಸಾಫ್ಟ್ ಸಹ ಸ್ಥಾಪಕರು

ಬಿಲ್ ಗೇಟ್ಸ್

ಗೇಟ್ಸ್ ತಮ್ಮ $84.9 ಬಿಲಿಯನ್ ಆಸ್ತಿಯನ್ನು ಮಕ್ಕಳಿಗೆ ಬಿಟ್ಟುಕೊಟ್ಟವರಲ್ಲ. ಅವರು ಸಣ್ಣ ಮೊತ್ತ ಅಂದರೆ ಒಬ್ಬೊಬ್ಬರಿಗೆ $10 ಮಿಲಿಯನ್ ಅನ್ನು ಹಂಚಿದ್ದಾರೆ ಉಳಿದ ಮೊತ್ತವನ್ನು ದೇಣಿಗೆಯ ರೂಪದಲ್ಲಿ ನೀಡಿದ್ದಾರೆ.

AOL ಸಹಸ್ಥಾಪಕರು

AOL ಸಹಸ್ಥಾಪಕರು

ಸ್ಟೀವ್ ಕೇಸ್

ಹೆಚ್ಚಿನ ಅಮೇರಿಕನ್ನರು ಆನ್‌ಲೈನ್ ಸಂಪರ್ಕಕ್ಕ ಬರುವಂತಾಗಲು ಸ್ವೀವ್ ಕಾರಣರಾಗಿದ್ದಾರೆ. ತಮ್ಮ ಗಳಿಕೆಯ ಹೆಚ್ಚುವರಿಯನ್ನು ತಂತ್ರಜ್ಞಾನ ಸುಧಾರಣೆಯಲ್ಲಿ ಮುಡಿಪಾಗಿಟ್ಟವರು ಸ್ವೀವ್.

ಸೇಲ್ಸ್‌ಫೋರ್ಸ್ ಸಿಇಒ

ಸೇಲ್ಸ್‌ಫೋರ್ಸ್ ಸಿಇಒ

ಮಾರ್ಕ್ ಬೆನಿಯೊಫ್

ಬೆನಿಯೋಫ್ ಇತ್ತೀಚೆಗೆ ತಾನೇ ಎಸ್ಎಫ್ ಗೀವ್ಸ್ ಹೆಸರಿನ ಕ್ಯಾಂಪೈನ್ ಅನ್ನು ಲಾಂಚ್ ಮಾಡಿದ್ದು, 60 ದಿನಗಳಲ್ಲಿ ಇದು ಸ್ಯಾನ್ ಫ್ರಾನ್ಸಿಸ್ಕೊ ಆಧಾರಿತ ಲಾಭದಾಯಕವಲ್ಲದ ಪ್ರೊಗ್ರಾಮ್‌ಗಳಿಗೆ $10 ಮಿಲಿಯನ್ ಅನ್ನು ಇದು ದೇಣಿಗೆಯಾಗಿ ನೀಡಿದೆ.

ಕ್ವಾಲ್‌ಕಾಮ್ ಸಹಸ್ಥಾಪಕರು

ಕ್ವಾಲ್‌ಕಾಮ್ ಸಹಸ್ಥಾಪಕರು

ಇರ್‌ವಿನ್ ಜೇಕೋಬ್ಸ್

ತಮ್ಮ ಪತ್ನಿ ಜೋನ್‌ನೊಂದಿಗೆ, ಜೇಕೋಬ್ಸ್ $500 ಮಿಲಿಯನ್ ಅನ್ನು ಚಾರಿಟಿಗಳಿಗೆ ದಾನವಾಗಿ ನೀಡಿದ್ದಾರೆ. ಗಿವಿಂಗ್ ಪ್ಲೆಡ್ಜ್ ಯೋಜನಗೆ ಇವರು ಸಹಿ ಹಾಕಿದ್ದು, ತಮ್ಮ ಆದಾಯದ ಅರ್ಧದಷ್ಟನ್ನು ತಾವೇ ನಿರ್ಮಿಸಿದ ಇಲೆಕ್ಟ್ರಾನಿಕ್ ಸಂಸ್ಥೆಗಳಿಗೆ ಇವರು ದೇಣಿಗೆಯಾಗಿ ನೀಡಿದ್ದಾರೆ.

ಇಬೇ ಸ್ಥಾಪಕರು

ಇಬೇ ಸ್ಥಾಪಕರು

ಪಿರ್ರೆ ಒಮ್ನಿಡಿಯಾರ್

ಒಮ್ನಿಡಿಯಾರ್ ಮತ್ತು ಪತ್ನಿ ಪಾಮ್ ಇಬೇ ಸಂಸ್ಥೆಯಲ್ಲಿ ತಾವು ಗಳಿಸಿರುವ $1 ಬಿಲಿಯನ್ ಸಂಪತ್ತನ್ನು ಸಾರ್ವಜನಿಕ ಏಳಿಗೆಗಾಗಿ ದಾನಮಾಡಿದ್ದಾರೆ. ಗಿವಿಂಗ್ ಪ್ಲೆಡ್ಜ್್ಗೆ ಇವರು 2010 ರಲ್ಲಿ ಸಹಿ ಮಾಡಿದ್ದರು.

ಇಂಟೆಲ್ ಸಹಸ್ಥಾಪಕರು

ಇಂಟೆಲ್ ಸಹಸ್ಥಾಪಕರು

ಗೋರ್ಡನ್ ಮೂರೆ

$1 ಬಿಲಿಯನ್‌ಗಿಂತಲೂ ಅಧಿಕ ಮೊತ್ತವನ್ನು ಗೋರ್ಡನ್ ಚಾರಿಟಿಗಳಿಗೆ ದಾನವಾಗಿ ನೀಡಿದ್ದಾರೆ. 2001 ರಲ್ಲಿ ಮೂರ್ ಫೌಂಡೇಶನ್‌ಗೆ ತಮ್ಮ ಆಸ್ತಿಯ ಅರ್ಧಭಾಗವನ್ನು ಇವರು ದಾನ ಮಾಡಿದ್ದಾರೆ.

ತೆಸ್ಲಾ ಸಿಇಒ

ತೆಸ್ಲಾ ಸಿಇಒ

ಇಲಾನ್ ಮಸ್ಕ್

ತಮ್ಮ ಆದಾಯದ $12.9 ಬಿಲಿಯನ್ ಅನ್ನು ಇವರು ದಾನ ಮಾಡಿದ್ದು, 2012 ರಲ್ಲಿ ಗಿವಿಂಗ್ ಪ್ಲೆಡ್ಜ್‌ಗೆ ಇವರು ಸಹಿ ಮಾಡಿದ್ದಾರೆ.

ಗೂಗಲ್ ಸಿಇಒ

ಗೂಗಲ್ ಸಿಇಒ

ಲ್ಯಾರಿ ಪೇಜ್

ತಾವು ಗಳಿಸಿದ ಅಪಾರ ಸಂಪತ್ತನ್ನು ಲ್ಯಾರಿ ಪೇಜ್ ದಾನ ಧರ್ಮಗಳಿಗೆ ವಿನಿಯೋಗಿಸಿದ್ದಾರೆ. ತಮ್ಮ ಮಕ್ಕಳಿಗೆ ಸ್ವತ್ತಿನ ಕಾಲಭಾಗವನ್ನು ಇವರು ದಾನ ಮಾಡಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
We've rounded up some of the other most generous people in tech, all of whom have decided to donate large portions of their wealth to charity rather than leave all of it to their children.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot