ಭಾರತದಲ್ಲಿ ಟೆಕ್ನೋ ಕ್ಯಾಮನ್‌ 19 ಸರಣಿ ಬಿಡುಗಡೆ! ಬೆಲೆ ಎಷ್ಟು?

|

ಮೊಬೈಲ್‌ ಮಾರುಕಟ್ಟೆಯಲ್ಲಿ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಟೆಕ್ನೋ ಕಂಪೆನಿ ಪ್ರಸಿದ್ಧಿ ಪಡೆದುಕೊಂಡಿದೆ. ವಿಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಬಜೆಟ್‌ ಬೆಲೆಯಲ್ಲಿ ಪರಿಚಯಸಿ ಸ್ಮಾರ್ಟ್‌ಫೋನ್‌ ಪ್ರಿಯರ ಗಮನ ಸೆಳೆದಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಸದ್ಯ ಇದೀಗ ಭಾರತದ ಮಾರುಕಟ್ಟೆಯಲ್ಲಿ ಹೊಸ ಟೆಕ್ನೋ ಕ್ಯಾಮನ್‌ 19 ಮತ್ತು ಟೆಕ್ನೋ ಕ್ಯಾಮನ್‌ 19 ನಿಯೋ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.

ಟೆಕ್ನೋ

ಹೌದು, ಟೆಕ್ನೋ ಕಂಪೆನಿ ಭಾರತದಲ್ಲಿ ಟೆಕ್ನೋ ಕ್ಯಾಮನ್‌ 19 ಮತ್ತು ಟೆಕ್ನೋ ಕ್ಯಾಮನ್‌ 19 ನಿಯೋ ಫೋನ್‌ಗಳನ್ನು ಲಾಂಚ್‌ ಮಾಡಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ಕ್ಯಾಮೆರಾ ಕೇಂದ್ರಿತ ಫೋನ್‌ಗಳಾಗಿದ್ದು, ಮೆಮೊರಿ ಫ್ಯೂಷನ್ ಟೆಕ್ನಾಲಜಿಯೊಂದಿಗೆ ಬರುತ್ತವೆ. ಇನ್ನು ಈ ಎರಡೂ ಸ್ಮಾರ್ಟ್‌ಫೋನ್‌ಗಳು ಮೀಡಿಯಾಟೆಕ್‌ ಹಿಲಿಯೋ G85 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿವೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ಗಳು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಒಳಗೊಂಡಿವೆ. ಆದರೆ ಮುಖ್ಯ ಕ್ಯಾಮೆರಾಗಳು ಮಾತ್ರ ಭಿನ್ನವಾಗಿವೆ.

ಟೆಕ್ನೋ

ಟೆಕ್ನೋ ಕಂಪೆನಿ ಪರಿಚಯಿಸಿರುವ ಟೆಕ್ನೋ ಕ್ಯಾಮನ್‌ 19 ಮತ್ತು ಟೆಕ್ನೋ ಕ್ಯಾಮನ್‌ 19 ನಿಯೋ ಸ್ಮಾರ್ಟ್‌ಫೋನ್‌ಗಳು 6GB RAM ಅನ್ನು ಹೊಂದಿವೆ. ಆದರೆ ಮೆಮೊರಿ ಫ್ಯೂಷನ್‌ ಟೆಕ್ನಾಲಜಿಯನ್ನು ಬಳಸುವ ಮೂಲಕ RAM ಅನ್ನು ಹೆಚ್ಚುವರಿಯಾಗಿ 5GB ಪಡೆದುಕೊಳ್ಳಬಹುದು. ಇದರಿಂದ ನಿಮಗೆ 11GB RAM ಲಭ್ಯವಾಗಲಿದೆ. ಇನ್ನು ಟೆಕ್ನೋ ಕ್ಯಾಮನ್‌ 19 ಸ್ಮಾರ್ಟ್‌ಫೋನ್‌ ಆರಂಭಿಕ ಬೆಲೆ 14,999ರೂ ಆಗಿದೆ. ಹಾಗೆಯೇ ಟೆಕ್ನೋ ಕ್ಯಾಮನ್‌ 19 ನಿಯೋ ಫೋನ್‌ ಆರಂಭಿಕ ಬೆಲೆ 12,999ರೂ.ಆಗಿದೆ. ಇನ್ನುಳಿದಂತೆ ಈ ಎರಡು ಸ್ಮಾರ್ಟ್‌ಫೋನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟೆಕ್ನೋ ಕ್ಯಾಮನ್‌ 19 ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ

ಟೆಕ್ನೋ ಕ್ಯಾಮನ್‌ 19 ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ

ಟೆಕ್ನೋ ಕ್ಯಾಮನ್ 19 ಸ್ಮಾರ್ಟ್‌ಫೋನ್‌ 6.8 ಇಂಚಿನ ಫುಲ್‌ ಹೆಚ್‌ಡಿ + ಎಲ್‌ಟಿಪಿಎಸ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು 1,080x2,460 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 500 ನಿಟ್ಸ್ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 84.72% ಸ್ಕ್ರೀನ್‌ ಟು ಬಾಡಿ ನಡುವಿನ ಅನುಪಾತವನ್ನು ಹೊಂದಿದೆ. ಹಾಗೆಯೇ ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಪಡೆದುಕೊಂಡಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ಇದು ಆಕ್ಟಾ-ಕೋರ್ ಮೀಡಿಯಾಟೆಕ್‌ ಹಿಲಿಯೋ G85 SoC ಪ್ರೊಸೆಸರ್‌ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ 512GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ. ಇನ್ನು ಟೆಕ್ನೋ ಕಂಪೆನಿ ಹೇಳಿರುವಂತೆ ಈ ಸ್ಮಾರ್ಟ್‌ಫೋನ್‌ನಲ್ಲಿ ಹೈಪರ್‌ಇಂಜಿನ್ ಟೆಕ್ನಾಲಜಿ ಮತ್ತು ಸೂಪರ್ ಬೂಸ್ಟ್ ಫಂಕ್ಷನ್‌ ಅಳವಡಿಸಿರುವುದರಿಂದ ತೊದಲುವಿಕೆ -ಕಡಿಮೆಯಿರುವ ಪರ್ಫಾರ್ಮೆನ್ಸ್ ಅನ್ನು ನೀಡಲಿದೆ.

ಕ್ಯಾಮೆರಾ ಫೀಚರ್ಸ್‌ ಹೇಗಿದೆ?

ಕ್ಯಾಮೆರಾ ಫೀಚರ್ಸ್‌ ಹೇಗಿದೆ?

ಈ ಸ್ಮಾರ್ಟ್‌ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಒಳಗೊಂಡಿದೆ. ಇದರಲ್ಲಿ ಪ್ರೈಮರಿ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಪ್ತ್‌ ಸೆನ್ಸಾರ್‌ ಹೊಂದಿದೆ. ಮೂರನೇ ಕ್ಯಾಮೆರಾದ ವಿವರ ಬಹಿರಂಗವಾಗಿಲ್ಲ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಸೂಪರ್‌ನೈಟ್, ನೈಟ್ ಮೋಡ್ ಫಿಲ್ಟರ್‌, ವಿಡಿಯೋ ಎಚ್‌ಡಿಆರ್, ಪ್ರೊ ಮೋಡ್, ವಿಡಿಯೋ ಬೊಕೆ, ಫಿಲ್ಮ್ ಮೋಡ್ ಅನ್ನು ಒಳಗೊಂಡಿದೆ. ಇದಲ್ಲದೆ ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಸಾಮರ್ಥ್ಯ ಏನು? ಇತರೆ ಫೀಚರ್ಸ್‌ಗಳೇನು?

ಬ್ಯಾಟರಿ ಸಾಮರ್ಥ್ಯ ಏನು? ಇತರೆ ಫೀಚರ್ಸ್‌ಗಳೇನು?

ಇನ್ನು ಟೆಕ್ನೋ ಕ್ಯಾಮನ್‌ 19 ಫೋನ್ 5,000mAh ಸಾಮರ್ಥ್ಯ ಬ್ಯಾಟರಿಯನ್ನು ಹೊಂದಿದೆ. ಇದು 18W ಫ್ಲ್ಯಾಷ್ ಚಾರ್ಜಿಂಗ್‌ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, ವೈ-ಫೈ, ಜಿಪಿಎಸ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಬೆಂಬಲಿಸಲಿದೆ. ಇದಲ್ಲದೆ ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ಹೊಂದಿದೆ.

ಟೆಕ್ನೋ ಕ್ಯಾಮನ್‌ 19 ನಿಯೋ ಫೋನ್‌ ಡಿಸ್‌ಪ್ಲೇ

ಟೆಕ್ನೋ ಕ್ಯಾಮನ್‌ 19 ನಿಯೋ ಫೋನ್‌ ಡಿಸ್‌ಪ್ಲೇ

ಟೆಕ್ನೋ ಕ್ಯಾಮನ್‌ 19 ನಿಯೋ ಸ್ಮಾರ್ಟ್‌ಫೋನ್‌ 6.8-ಇಂಚಿನ ಫುಲ್‌ HD+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,080x2,460 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನಿನ ಡಿಸ್‌ಪ್ಲೇ ಸ್ಕ್ರೀನ್‌ ಟು ಬಾಡಿ ನಡುವಿನ ಅನುಪಾತ 84.72% ಆಗಿದೆ. ಈ ಡಿಸ್‌ಪ್ಲೇ 500 ನಿಟ್ಸ್ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಹಾಗೆಯೇ 20:9 ರಚನೆಯ ಅನುಪಾತವನ್ನು ಪಡೆದುಕೊಂಡಿದೆ.

ಪ್ರೊಸೆಸರ್‌ ಕಾರ್ಯವೈಖರಿ ಏನು?

ಪ್ರೊಸೆಸರ್‌ ಕಾರ್ಯವೈಖರಿ ಏನು?

ಟೆಕ್ನೋ ಕ್ಯಾಮನ್‌ 19 ನಿಯೋ ಸ್ಮಾರ್ಟ್‌ಫೋನ್‌ ಕೂಡ ಮೀಡಿಯಾಟೆಕ್‌ ಹಿಲಿಯೋ G85 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. RAM ಅನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ನೀಡಲಾಗಿದ್ದು, ನಿಮಗೆ ಒಟ್ಟು 11GB RAM ಲಭ್ಯವಾಗಲಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ 512G ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ವಿಶೇಷ ಏನಿದೆ?

ಕ್ಯಾಮೆರಾ ವಿಶೇಷ ಏನಿದೆ?

ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ ಡ್ಯುಯಲ್ ಫ್ಲ್ಯಾಷ್‌ನೊಂದಿಗೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಡಿಜಿಟಲ್ ಜೂಮ್, ಆಟೋ ಫ್ಲ್ಯಾಶ್, ಫೇಸ್‌ ಡಿಟೇಕ್ಷನ್‌, ಟಚ್‌ ದಿ ಫೋಕಸ್‌, ಅನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್‌ ಏನಿದೆ?

ಬ್ಯಾಟರಿ ಮತ್ತು ಇತರೆ ಫೀಚರ್ಸ್‌ ಏನಿದೆ?

ಟೆಕ್ನೋ ಕ್ಯಾಮನ್‌ 19 ನಿಯೋ ಸ್ಮಾರ್ಟ್‌ಫೋನ್ 18W ಫ್ಲ್ಯಾಷ್ ಚಾರ್ಜಿಂಗ್ ಬೆಂಬಲಿಸುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, ವೈ-ಫೈ, ಜಿಪಿಎಸ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಟೆಕ್ನೋ ಕ್ಯಾಮನ್‌ 19 ಸ್ಮಾರ್ಟ್‌ಫೋನ್‌ ಬೆಲೆ 11GB RAM (6GB + 5GB ಮೆಮೊರಿ ಫ್ಯೂಶನ್‌) + 128GB ಸ್ಟೋರೇಜ್‌ ಆಯ್ಕೆಗೆ 14,999ರೂ.ಬೆಲೆಯನ್ನು ಹೊಂದಿದೆ. ಇದು ಇಕೋ ಬ್ಲಾಕ್, ಜಿಯೋಮ್ಯಾಟ್ರಿಕ್‌ ಗ್ರೀನ್‌ ಮತ್ತು ಸೀ ಸಾಲ್ಟ್ ವೈಟ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

 ಟೆಕ್ನೋ ಕ್ಯಾಮನ್‌ 19 ನಿಯೋ

ಇನ್ನು ಟೆಕ್ನೋ ಕ್ಯಾಮನ್‌ 19 ನಿಯೋ ಸ್ಮಾರ್ಟ್‌ಫೋನ್‌ ಬೆಲೆ 11GB RAM (6GB + 5GB ಮೆಮೊರಿ ಫ್ಯೂಶನ್‌) + 128GB ಸ್ಟೋರೇಜ್ ಆಯ್ಕೆಗೆ 12,999ರೂ. ಬೆಲೆಯನ್ನು ನಿಗಧಿಪಡಿಸಲಾಗಿದೆ. ಈ ಸ್ಮಾರ್ಟ್‌ಫೋನ್‌ ಡ್ರೀಮ್‌ಲ್ಯಾಂಡ್ ಗ್ರೀನ್, ಇಕೋ ಬ್ಲ್ಯಾಕ್ ಮತ್ತು ಐಸ್ ಮಿರರ್ ಬಣ್ಣಗಳಲ್ಲಿ ದೊರೆಯಲಿದೆ. ಇನ್ನು ಈ ಎರಡು ಸ್ಮಾರ್ಟ್‌ಫೋನ್‌ಗಳು ಇದೇ ಜುಲೈ 23 ರಿಂದ ರಿಟೇಲ್‌ ಸ್ಟೋರ್‌ ಮತ್ತು ಅಮೆಜಾನ್ ಮೂಲಕ ಮಾರಾಟವಾಗಲಿದೆ.

Best Mobiles in India

English summary
Tecno Camon 19, Camon 19 Neo With MediaTek Helio G85 SoC Launched in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X