ಟೆಕ್ನೋ 'ಫ್ಯಾಂಟಮ್ 9' 6GB RAM ಸ್ಮಾರ್ಟ್‌ಫೋನ್‌ ಲಾಂಚ್!.ಬೆಲೆ 14,999ರೂ!

|

ಭಾರತೀಯ ಮೊಬೈಲ್‌ ಮಾರುಕಟ್ಟೆ ವಿಸ್ತರವಾಗಿದ್ದು, ಹೀಗಾಗಿ ಕಂಪನಿಗಳು ದೇಶಿಯ ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಲೇ ಸಾಗಿವೆ. ಈ ನಿಟ್ಟಿನಲ್ಲಿ ಈಗ ಟೆಕ್ನೋ ಕಂಪನಿಯು ಸಹ ಬಜೆಟ್‌ ಬೆಲೆಯಲ್ಲಿ ನೂತನ ಸ್ಮಾರ್ಟ್‌ಫೋನ್‌ ಒಂದನ್ನು ಲಾಂಚ್‌ ಮಾಡಿದ್ದು, ಈ ಸ್ಮಾರ್ಟ್‌ಫೋನ್ 6GB RAM ಸಾಮರ್ಥ್ಯದೊಂದಿಗೆ 128GB ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿರುವುದು ವಿಶೇಷ ಆಕರ್ಷಣೆ.

ಟೆಕ್ನೋ 'ಫ್ಯಾಂಟಮ್ 9' 6GB RAM ಸ್ಮಾರ್ಟ್‌ಫೋನ್‌ ಲಾಂಚ್!.ಬೆಲೆ 14,999ರೂ!

ಹೌದು, ಟೆಕ್ನೋ ಕಂಪನಿಯು ದೇಶಿಯ ಮಾರುಕಟ್ಟೆಗೆ 'ಫ್ಯಾಂಟಮ್ 9' ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ್ದು, ಈ ಸ್ಮಾರ್ಟ್‌ಫೋನ್‌ ತ್ರಿವಳಿ ಕ್ಯಾಮೆರಾ, ಫಿಂಗರ್‌ಪ್ರಿಂಟ್ ಸೆನ್ಸಾರ್‌ ಸೌಲಭ್ಯಗಳನ್ನು ಒಳಗೊಂಡಸಿದೆ. ಮೀಡಿಯಾ ಟೆಕ್‌ ಹಿಲಿಯೊ P35 SoC ಪ್ರೊಸೆಸರರ್‌ನಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್‌, ಆಂಡ್ರಾಯ್ಡ್‌ 9.0 ಅಪರೇಟಿಂಗ್ ಸಿಸ್ಟಮ್ ಬೆಂಬಲವನ್ನು ಸಹ ಪಡೆದಿದೆ.

ಟೆಕ್ನೋ 'ಫ್ಯಾಂಟಮ್ 9' 6GB RAM ಸ್ಮಾರ್ಟ್‌ಫೋನ್‌ ಲಾಂಚ್!.ಬೆಲೆ 14,999ರೂ!

ಬಜೆಟ್‌ ಬೆಲೆಯಲ್ಲಿ ಅತ್ಯುತ್ತಮ ಫೀಚರ್ಸ್‌ಗಳಿಂದ ಗಮನ ಸೆಳೆದಿರುವ 'ಫ್ಯಾಂಟಮ್ 9' ಸ್ಮಾರ್ಟ್‌ಫೋನ್, AMOLED ಮಾದರಿಯ ವಾಟರ್‌ ಸ್ಟೈಲ್‌ ನಾಚ್‌ ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ 'ಲ್ಯಾಪ್ಲ್ಯಾಂಡ್ ಅರೋರಾ' ಬಣ್ಣದಲ್ಲಿ ಲಭ್ಯವಾಗಲಿದೆ. ಹಾಗಾದರೇ ಟೆಕ್ನೋ 'ಫ್ಯಾಂಟಮ್ 9' ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : ಇದೇ ಜುಲೈ 12ಕ್ಕೆ ಕ್ಲೋಸ್‌ ಆಗಲಿದೆ 'ರೆಡ್ಮಿ ನೋಟ್‌ 7 ಪ್ರೊ' ಓಪೆನ್ ಸೇಲ್!ಓದಿರಿ : ಇದೇ ಜುಲೈ 12ಕ್ಕೆ ಕ್ಲೋಸ್‌ ಆಗಲಿದೆ 'ರೆಡ್ಮಿ ನೋಟ್‌ 7 ಪ್ರೊ' ಓಪೆನ್ ಸೇಲ್!

ಡಿಸ್‌ಪ್ಲೇ ಹೇಗಿದೆ

ಡಿಸ್‌ಪ್ಲೇ ಹೇಗಿದೆ

ಟೆಕ್ನೋ 'ಫ್ಯಾಂಟಮ್ 9' ಸ್ಮಾರ್ಟ್‌ಫೋನ್ 1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದ 6.4 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯ ಅನುಪಾತವು 19:5:9ರಷ್ಟಿದ್ದು, ಸ್ಕ್ರೀನ್‌ ಮತ್ತು ಬಾಹ್ಯ ಬಾಡಿಯ ನಡುವಿನ ಅಂತರವು ಶೇ. 91.47% ಆಗಿದೆ. ಹಾಗೆಯೇ ವಾಟರ್‌ಡ್ರಾಪ್ ಸ್ಟೈಲ್‌ ನಾಚ್‌ ಡಿಸೈನ್‌ಯ ಫೋನಿನ ಅಂದವನ್ನು ಹೆಚ್ಚಿಸಿದೆ.

ಪ್ರೊಸೆಸರ್‌ ಬಲ

ಪ್ರೊಸೆಸರ್‌ ಬಲ

ಟೆಕ್ನೋ 'ಫ್ಯಾಂಟಮ್ 9' ಸ್ಮಾರ್ಟ್‌ಫೋನ್ ಆಕ್ಟಾ ಕೋರ್‌ ಮೀಡಿಯಾ ಟೆಕ್‌ ಹಿಲಿಯೊ P35 SoC ಪ್ರೊಸೆಸರರ್ ಶಕ್ತಿಯನ್ನು ಹೊಂದಿದೆ. ಇದರೊಂದಿಗೆ ಆಂಡ್ರಾಯ್ಡ್‌ 9.0 ಅಪರೇಟಿಂಗ್ ಸಿಸ್ಟಮ್ ಬೆಂಬಲ ಪಡೆದಿದ್ದು, 6GB RAM ಸಾಮರ್ಥ್ಯದೊಂದಿಗೆ 128GB ಆಂತರಿಕ ಸ್ಟೋರೇಜ್‌ ಸಾಮರ್ಥ್ಯವದ ಅವಕಾಶವನ್ನು ಹೊಂದಿದೆ. ಎಸ್‌ಡಿ ಕಾರ್ಡ್‌ ಮೂಲಕ 256GB ಹೆಚ್ಚಿಸಿಕೊಳ್ಳುವ ಅವಕಾಶವಿದೆ.

ಓದಿರಿ : ಗೂಗಲ್ ಮತ್ತು ಅಮೆಜಾನ್ ದೋಸ್ತಿ!.ಟೆಕ್‌ ಮೈತ್ರಿಯ ಹೊಸ ಸೇವೆ ಏನು ಗೊತ್ತಾ? ಓದಿರಿ : ಗೂಗಲ್ ಮತ್ತು ಅಮೆಜಾನ್ ದೋಸ್ತಿ!.ಟೆಕ್‌ ಮೈತ್ರಿಯ ಹೊಸ ಸೇವೆ ಏನು ಗೊತ್ತಾ?

ಕ್ಯಾಮೆರಾ ಸ್ಪೆಷಲ್

ಕ್ಯಾಮೆರಾ ಸ್ಪೆಷಲ್

ಟೆಕ್ನೋ 'ಫ್ಯಾಂಟಮ್ 9' ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಮೂರು ರಿಯರ್‌ ಕ್ಯಾಮೆರಾಗಳನ್ನು ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾ 16ಎಂಪಿ ಸೆನ್ಸಾರ್, ಸೆಕೆಂಡರಿ ಕ್ಯಾಮೆರಾವು 8ಎಂಪಿ ಸೆನ್ಸಾರ್‌ನಲ್ಲಿದೆ ಮತ್ತು ತೃತೀಯ ಕ್ಯಾಮೆರಾವು 2ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 32ಎಂಪಿ ಸೆನ್ಸಾರ್‌ನಲ್ಲಿದ್ದು, AI ತಂತ್ರಜ್ಞಾನವನ್ನು ಸಹ ಹೊಂದಿದೆ.

ಕ್ಯಾಮೆರಾ ಫೀಚರ್ಸ್

ಕ್ಯಾಮೆರಾ ಫೀಚರ್ಸ್

ಮೂರು ಕ್ಯಾಮೆರಾ ಹೊಂದಿರುವ ಟೆಕ್ನೋ 'ಫ್ಯಾಂಟಮ್ 9' ಸ್ಮಾರ್ಟ್‌ಫೋನಿನಲ್ಲಿ ಸೆಲ್ಫಿಗೆ ವಿಶೇಷ ಸ್ಥಾನ ನೀಡಲಾಗಿದೆ. ಕ್ಯಾಮೆರಾವು AR ಮೋಡ್, HDR, ಆಟೋ ಸೆನ್ಸ್‌ ಡಿಟೆಕ್ಷನ್, ಬ್ಯೂಟಿ ಆಯ್ಕೆಗಳು, Bokeh ಮೋಡ್‌, ಇಮೋಜಿಗಳು ಸೇರಿದಂತೆ ಹಲವು ಎಡಿಟಿಂಗ್ ಆಯ್ಕೆಗಳನ್ನು ನೀಡಲಾಗಿದೆ. ವಿಡಿಯೊ ಗುಣಮಟ್ಟವು 1080p ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿರಲಿದೆ.

ಓದಿರಿ : ಭಾರತದಲ್ಲಿ 'ನೋಕಿಯಾ 9 ಪ್ಯೂರ್‌ವ್ಯೂವ್' ಬಿಡುಗಡೆ!. ಬೆಲೆ ಎಷ್ಟು ಗೊತ್ತಾ? ಓದಿರಿ : ಭಾರತದಲ್ಲಿ 'ನೋಕಿಯಾ 9 ಪ್ಯೂರ್‌ವ್ಯೂವ್' ಬಿಡುಗಡೆ!. ಬೆಲೆ ಎಷ್ಟು ಗೊತ್ತಾ?

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ಟೆಕ್ನೋ 'ಫ್ಯಾಂಟಮ್ 9' ಸ್ಮಾರ್ಟ್‌ಫೋನ್ 3,500mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ಅತ್ಯುತ್ತಮ ಚಾರ್ಜರ್‌ ಸೌಲಭ್ಯವನ್ನು ಪಡೆದುಕೊಂಡಿದೆ. ಹಾಗೆಯೇ GPS+GLONASS, ವೈಫೈ, ಬ್ಲೂಟೂತ್ 5.0, 4G ಮತ್ತು VoLTE ಆಯ್ಕೆಗಳನ್ನು ಸೇರಿದಂತೆ ಇತ್ತೀಚಿನ ಪ್ರಮುಖ ಸೌಲಭ್ಯಗಳನ್ನು ಸಹ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಟೆಕ್ನೋ 'ಫ್ಯಾಂಟಮ್ 9' ಸ್ಮಾರ್ಟ್‌ಫೋನ್ ಇದೀಗ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಆಗಿದ್ದು, ಇದೇ ಜುಲೈ 17ರಂದು ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್‌ ಮೂಲಕ ಸೇಲ್‌ ಆರಂಭಿಸಲಿದೆ. ಲ್ಯಾಪ್ಲ್ಯಾಂಡ್ ಅರೋರಾ ಬಣ್ಣದ ಒಂದೇ ಆಯ್ಕೆಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ ಬೆಲೆಯು 14,999ರೂ.ಗಳು ಆಗಿದೆ.

ಓದಿರಿ : ಅಗ್ಗದ ಬೆಲೆಯ 'ಇನ್‌ಫಿನಿಕ್ಸ್‌ ಹಾಟ್‌ 7' ಫೋನ್‌ ಸೇಲ್ ಡೇಟ್‌ ಫಿಕ್ಸ್‌!ಓದಿರಿ : ಅಗ್ಗದ ಬೆಲೆಯ 'ಇನ್‌ಫಿನಿಕ್ಸ್‌ ಹಾಟ್‌ 7' ಫೋನ್‌ ಸೇಲ್ ಡೇಟ್‌ ಫಿಕ್ಸ್‌!

Best Mobiles in India

English summary
The Tecno Phantom 9 has been launched in India with a price tag of Rs 14,999. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X