5,000mAh ಬ್ಯಾಟರಿ ಸಾಮರ್ಥ್ಯದ ಟೆಕ್ನೋ ಪಾಪ್ 6 ಪ್ರೊ ಲಾಂಚ್‌: ಫೀಚರ್ಸ್‌ ಏನು?

|

ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳೊಂದಿಗೆ ಗುರುತಿಸಿಕೊಂಡಿರುವ ಟೆಕ್ನೋ ಕಂಪೆನಿಯು ಇದೀಗ ನೂತನವಾಗಿ ಮತ್ತೊಂದು ಹೊಸ ಫೋನ್‌ ಬಿಡುಗಡೆ ಮಾಡಿದೆ. ಅದುವೇ ಟೆಕ್ನೋ ಪಾಪ್ 6 ಪ್ರೊ. ಈ ಸ್ಮಾರ್ಟ್‌ಫೋನ್‌ 5,000mAh ಬ್ಯಾಟರಿ ಸಾಮರ್ಥ್ಯ ಒಳಗೊಂಡಿದೆ.

ಟೆಕ್ನೋ

ಟೆಕ್ನೋ ಕಂಪೆನಿಯು ಇಂದು ಜಾಗತಿಕವಾಗಿ ಟೆಕ್ನೋ ಪಾಪ್ 6 Pro(Tecno Pop 6 Pro) ಮೊಬೈಲ್‌ ಅನ್ನು ಲಾಂಚ್‌ ಮಾಡಿದೆ. ಈ ಟೆಕ್ನೋ ಪಾಪ್ 6 Pro 3GB RAM ಹಾಗೂ 32GB ಆಂತರಿಕ ಸ್ಟೋರೇಜ್‌ ಸಾಮರ್ಥ್ಯ ಹೊಂದಿದೆ. ಹಿಂಬದಿಯಲ್ಲಿ ಡ್ಯುಯಲ್‌ ಕ್ಯಾಮೆರಾ ಆಯ್ಕೆಯನ್ನು ಪಡೆದುಕೊಂಡಿದ್ದು, ಮುಖ್ಯ ಕ್ಯಾಮೆರಾವು 8 ಮೆಗಾಪಿಕ್ಸೆಲ್ ಆಯ್ಕೆಯನ್ನು ಹೊಂದಿದೆ.

ಸ್ಮಾರ್ಟ್‌ಫೋನ್‌

ಈ ಸ್ಮಾರ್ಟ್‌ಫೋನ್‌ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಆಯ್ಕೆಯನ್ನು ಒಳಗೊಂಡಿದೆ. ಜೊತೆಗೆ ಕನೆಕ್ಟಿವಿಟಿ ಆಯ್ಕೆಯಲ್ಲಿ ಬ್ಲೂಟೂತ್‌ 5 ಆಯ್ಕೆಯನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ ನೀಲಿ ಹಾಗೂ ಪೋಲಾರ್‌ ಕಪ್ಪು ಬಣ್ಣದಲ್ಲಿ ಸಿಗಲಿದೆ. ಇನ್ನು ಈ ಫೋನಿನ ಬೆಲೆ ಎಷ್ಟು, ಫೀಚರ್ಸ್‌ಗಳೇನು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಇದು 6.6 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇಯನ್ನು ಒಳಗೊಂಡಿದೆ. 120Hz ಟಚ್ ಸ್ಯಾಂಪ್ಲಿಂಗ್ ದರದ ಜೊತೆಗೆ 60 Hz ರಿಫ್ರೆಶ್ ದರ ಪಡೆದಿದೆ. ಇನ್ನು ಈ ಡಿಸ್‌ಪ್ಲೇಯ ರೆಸಲ್ಯೂಶನ್ 720 x 1,612 ಆಗಿದೆ. ಹಾಗೆಯೇ ಮುಂಭಾಗದಲ್ಲಿ ವಾಟರ್-ಡ್ರಾಪ್ ನಾಚ್ ಡಿಸ್‌ಪ್ಲೇ ಮಾದರಿಯನ್ನು ಇದು ಪಡೆದುಕೊಂಡಿದೆ. ಹಾಗೆಯೇ ಇದು ಡಿಸೈನರ್‌ ಬ್ಯಾಕ್‌ ರಚನೆಯ ವಿನ್ಯಾಸವನ್ನು ಪಡೆದಿದೆ.

ಪ್ರಸೆಸರ್‌ ಹಾಗೂ ಸ್ಟೋರೇಜ್‌ ಸಾಮರ್ಥ್ಯ

ಪ್ರಸೆಸರ್‌ ಹಾಗೂ ಸ್ಟೋರೇಜ್‌ ಸಾಮರ್ಥ್ಯ

ಟೆಕ್ನೋ ಪಾಪ್ 6 ಪ್ರೊ ಫೋನ್‌ ಕ್ವಾಡ್‌ ಕೋರ್‌ ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್‌ 12 Go ಆವೃತ್ತಿಯಿಂದ HiOS 8.6 ಜೊತೆಗೆ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್‌ಫೋನ್‌ 2GB RAM ಮತ್ತು 32GB ಆಂತರಿಕ ಸ್ಟೋರೇಜ್‌ ಸಾಮರ್ಥ್ಯದ ಆಯ್ಕೆಯನ್ನು ಪಡೆದಿದೆ. ಹೆಚ್ಚುವರಿ ಸ್ಟೋರೇಜ್‌ಗಾಗಿ ಮೈಕ್ರೋಕಾರ್ಡ್‌ ಸ್ಲಾಟ್‌ನ್ನು ಸಹ ಒಳಗೊಂಡಿದೆ.

ಡ್ಯುಯಲ್‌ ಕ್ಯಾಮೆರಾ ವಿಶೇಷತೆ

ಡ್ಯುಯಲ್‌ ಕ್ಯಾಮೆರಾ ವಿಶೇಷತೆ

ಈ ಟೆಕ್ನೋ ಪಾಪ್ 6 ಪ್ರೊ ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದೆ. ಇದರ ಪ್ರಮುಖ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇನ್ನು ಸೆಕೆಂಡರಿ ಕ್ಯಾಮೆರಾವು AI ಚಾಲಿತ ಸೆನ್ಸಾರ್‌ ಆಯ್ಕೆಯನ್ನು ಪಡೆದುಕೊಂಡಿದೆ. ಜೊತೆಗೆ ಡ್ಯುಯಲ್ ಫ್ಲ್ಯಾಷ್‌ ಲೈಟ್‌ ಆಯ್ಕೆ ನೀಡಲಾಗಿದೆ. ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದ್ದು, ಇದರಲ್ಲೂ ಸಹ ಫ್ಲ್ಯಾಷ್‌ ಆಯ್ಕೆಯನ್ನು ನೀಡಲಾಗಿದೆ.

ಬ್ಯಾಟರಿ ಸಾಮರ್ಥ ಹಾಗೂ ಇತರೆ

ಬ್ಯಾಟರಿ ಸಾಮರ್ಥ ಹಾಗೂ ಇತರೆ

ಈ ಟೆಕ್ನೋ ಪಾಪ್ 6 ಪ್ರೊ ಫೋನ್‌ 5,000mAh ಬ್ಯಾಟರಿ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದೆ. ಇದು 10W ನ ಚಾರ್ಜಿಂಗ್‌ ಆಯ್ಕೆಯನ್ನು ಬೆಂಬಲಿಸುತ್ತದೆ. ಇನ್ನುಳಿದಂತೆ 35mm ಆಡಿಯೋ ಜಾಕ್, 4G, GPS, ವೈ-ಫೈ, ಬ್ಲೂಟೂತ್, ಎಫ್‌ಎಂ ಮತ್ತು ಓಟಿಜಿ ತರಹದ ಸಂಪರ್ಕ ಫೀಚರ್ಸ್‌ಗಳು ಇದರಲ್ಲಿವೆ. ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ನಂತರ ಆಯ್ಕೆಗಳನ್ನು ಈ ಸ್ಮಾರ್ಟ್‌ಫೋನ್‌ ಪಡೆದುಕೊಂಡಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಈ ಟೆಕ್ನೋ ಪಾಪ್ 6 ಪ್ರೊ ಫೋನಿನ ಬೆಲೆ ಬಾಂಗ್ಲಾದೇಶದಲ್ಲಿ BDT 10,490 ಆಗಿದ್ದು, (ಭಾರತೀಯ ಬೆಲೆಯಲ್ಲಿ ಅಂದಾಜು 8,900 ರೂ.ಗಳಾಗಿದೆ). ಈ ಸ್ಮಾರ್ಟ್‌ಫೋನ್‌ ಪೋಲಾರ್ ಕಪ್ಪು ಮತ್ತು ನೀಲಿ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಭಾರತದಲ್ಲಿ ಈ ಸ್ಮಾರ್ಟ್‌ಫೋನ್‌ ಬಿಡುಗಡೆಯ ಬಗ್ಗೆ ಅಮೆಜಾನ್‌ನಲ್ಲಿ ಟೀಸರ್‌ ಮೂಲಕ ಮಾಹಿತಿ ನೀಡಲಾಗಿತ್ತು. ಇನ್ನೇನು ಕೆಲವು ದಿನಗಳಲ್ಲಿ ಅಮೆಜಾನ್‌ನಲ್ಲಿ ಈ ಸ್ಮಾರ್ಟ್‌ಫೋನ್‌ ಲಭ್ಯವಾಗಲಿದೆ. ಹಾಗೆಯೇ ಈ ಫೋನ್‌ನ್ನು ಅಧಿಕೃತ ಮಳಿಗೆಗಳ ಮೂಲಕವೂ ಕೊಂಡುಕೊಳ್ಳಬಹುದಾಗಿದೆ.

Best Mobiles in India

English summary
Tecno firm has now launched a new smartphone for the global market. Techno Pop 6 Pro Specifications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X