Just In
Don't Miss
- Movies
''ನನ್ನ ಲೈಂಗಿಕ ಜೀವನ ಆಸಕ್ತಿಕರವಾಗಿಲ್ಲ ಅದಕ್ಕೆ ಕರಣ್ ನನ್ನನ್ನು ಆಹ್ವಾನಿಸಿಲ್ಲ''
- News
ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿತ ಐಪಿಎಸ್ ಐಎಎಸ್ ಅಧಿಕಾರಿ ಹೇಗಿದ್ದಾರೆ? ಹೊಸ ನಿಯಮವೇನು?
- Lifestyle
ಶುಂಠಿ ಹೆಚ್ಚು ತಿಂದ್ರೆ ಈ ಅಡ್ಡಪರಿಣಾಮ ಉಂಟಾಗುತ್ತೆ, ಹುಷಾರ್!
- Sports
ಕಾಮನ್ವೆಲ್ತ್ ಗೇಮ್ಸ್ 2022: 10ನೇ ದಿನದಲ್ಲಿ ಭಾರತಕ್ಕೆ ಸಿಕ್ಕ ಪದಕಗಳೆಷ್ಟು? ಎಷ್ಟನೇ ಸ್ಥಾನ?
- Automobiles
ಬಹುನೀರಿಕ್ಷಿತ ರಾಯಲ್ ಎನ್ಫೀಲ್ಡ್ ಹಂಟರ್ 350 ಮೋಟಾರ್ಸೈಕಲ್ ಬಿಡುಗಡೆ
- Finance
ಕೇರಳ ಲಾಟರಿ: 'ಫಿಫ್ಟಿ ಫಿಫ್ಟಿ ಲಾಟರಿ FF-11' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Education
CSB Recruitment 2022 : 66 ಸೈಂಟಿಸ್ಟ್-ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ದಕ್ಷಿಣ ಭಾರತದಲ್ಲಿ ಚಾರಣಕ್ಕೆ ಸೂಕ್ತವಾದ 8 ಪ್ರಸಿದ್ದ ತಾಣಗಳು
ಟೆಕ್ನೋ ಸ್ಪಾರ್ಕ್ 9T ಸ್ಮಾರ್ಟ್‌ಫೋನ್ ಸೇಲ್ ಆರಂಭ; ಅಗ್ಗದ ಬೆಲೆಯಲ್ಲಿ ಲಭ್ಯ!
ಟೆಕ್ನೋ ಕಂಪನಿಯು ನೂತನವಾಗಿ ಬಿಡುಗಡೆ ಮಾಡಿರುವ ಅಗ್ಗದ ಬೆಲೆಯ ಟೆಕ್ನೋ ಸ್ಪಾರ್ಕ್ 9T ಸ್ಮಾರ್ಟ್‌ಫೋನ್ ಭಾರತದಲ್ಲಿ ಮಾರಾಟಕ್ಕೆ ಪ್ರಾರಂಭಿಸಿದೆ. ಜನಪ್ರಿಯ ಇ ಕಾಮರ್ಸ್ ತಾಣ ಅಮೆಜಾನ್ ಮೂಲಕ ಈ ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯವಿರುತ್ತದೆ. ಇದು ಎಂಟ್ರಿ ಲೆವೆಲ್ ಮಾದರಿಯ ಫೋನ್ ಆಗಿದ್ದು, ಇದರ ಆರಂಭಿಕ ಬೆಲೆ 9,299ರೂ. ಆಗಿದೆ. ಜೊತೆಗೆ ವರ್ಚುವಲ್ RAM ಅನ್ನು ವಿಸ್ತರಿಸಬಹುದಾದ ಆಯ್ಕೆ ಇರುವುದು ಆಕರ್ಷಕ ಎನಿಸಿದೆ.

ಹೌದು, ಟೆಕ್ನೋ ಸ್ಪಾರ್ಕ್ 9T ಸ್ಮಾರ್ಟ್‌ಫೋನ್ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ಮೂಲಕ ಮಾರಾಟ ಶುರು ಮಾಡಿದೆ. ಈ ಫೋನ್ 4GB RAM ಮತ್ತು 64GB ಇಂಟರ್ ಸ್ಟೋರೇಜ್ ಅನ್ನು ಹೊಂದಿದ್ದು, ಮೀಡಿಯಾ ಟೆಕ್ ಹಿಲಿಯೋ G35 SoC ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದೆ. ಇನ್ನು ಈ ಫೋನ್ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯ ಹೊಂದಿದೆ.

ಹಾಗೆಯೇ ಈ ಸ್ಮಾರ್ಟ್‌ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಟರ್ಕೋಯಿಸ್ ಸಯಾನ್, ಅಟ್ಲಾಂಟಿಕ್ ಬ್ಲೂ, ಐರಿಸ್ ಪರ್ಪಲ್ ಮತ್ತು ಟಹೀಟಿ ಗೋಲ್ಡ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಹಾಗಾದರೇ ಟೆಕ್ನೋ ಸ್ಪಾರ್ಕ್ 9T ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ವಿನ್ಯಾಸ ಹೇಗಿದೆ?
ಟೆಕ್ನೋ ಸ್ಪಾರ್ಕ್ 9T ಸ್ಮಾರ್ಟ್‌ಫೋನ್ 6.6 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 1,080 x 2,408 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಡಿಸ್‌ಪ್ಲೇ 90.1% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಒಳಗೊಂಡಿದೆ. ಇದಲ್ಲದೆ ಈ ಡಿಸ್‌ಪ್ಲೇ 401ppi ಅನ್ನು ಹೊಂದಿದ್ದು, ಡಾಟ್‌ನಾಚ್ ಡಿಸ್‌ಪ್ಲೇ ವಿನ್ಯಾಸವನ್ನು ಪಡೆದಿದೆ.

ಪ್ರೊಸೆಸರ್ ಬಲ ಏನು?
ಟೆಕ್ನೋ ಸ್ಪಾರ್ಕ್ 9T ಸ್ಮಾರ್ಟ್‌ಫೋನ್ ಅಮೆಜಾನ್ ಪೇಜ್‌ನಲ್ಲಿ ಲೈವ್ ಆಗಿದೆ. ಲೈವ್ ಪೇಜ್‌ನಲ್ಲಿನ ಮಾಹಿತಿಯಂತೆ ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೋ G35 SoC ಪ್ರೊಸೆಸರ್ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್ 11 ಅನ್ನು ಆಧರಿಸಿ HiOS 7.6 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಜೊತೆಗೆ 3GB ವರ್ಚುವಲ್ RAM ಅನ್ನು ವಿಸ್ತರಿಸಬಹುದಾಗಿದೆ. ಇದರಿಂದ ಒಟ್ಟು RAM ಗಾತ್ರ 7GB RAM ಆಗಲಿದೆ. ಇದಲ್ಲದೆ ಮೆಮೊರಿ ಕಾರ್ಡ್ ಮೂಲಕ ಸ್ಟೋರೇಜ್ ಗಾತ್ರವನ್ನು 512GB ವರೆಗೆ ವಿಸ್ತರಣೆ ಮಾಡಬಹುದಾಗಿದೆ.

ಕ್ಯಾಮೆರಾ ಸೆಟ್‌ಅಪ್ ಯಾವುದು?
ಟೆಕ್ನೋ ಸ್ಪಾರ್ಕ್ 9T ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯ ಹೊಂದಿದೆ. ಇದು ಎಲ್ಇಡಿ ಫ್ಲ್ಯಾಷ್ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಪೋಟ್ರೇಟ್ ಯೂನಿಟ್ ಮತ್ತು ಮೂರನೇ ಕ್ಯಾಮೆರಾ AI ಲೆನ್ಸ್ ಅನ್ನು ಒಳಗೊಂಡಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಫ್ರಂಟ್ ಫೇಸಿಂಗ್ ಸೆಲ್ಫಿ ಕ್ಯಾಮೆರಾ ಇದೆ.

ಬ್ಯಾಟರಿ ಬ್ಯಾಕ್‌ಅಪ್ ಎಷ್ಟಿದೆ?
ಇತರೆ ಫೀಚರ್ಸ್‌ಗಳೇನು? ಟೆಕ್ನೋ ಸ್ಪಾರ್ಕ್ 9T ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಒಂದು ಗಂಟೆಗಿಂತ ಕಡಿಮೆ ಅವಧಿಯ ಚಾರ್ಜಿಂಗ್‌ನಲ್ಲಿ ಸ್ಮಾರ್ಟ್‌ಫೋನ್ ಶೇಕಡಾ 50 ರಷ್ಟು ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಸಿ ಪೋರ್ಟ್, ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಹ್ಯಾಂಡ್‌ಸೆಟ್ ಅನ್ನು ಲಾಕ್ ಮಾಡಲು ಮತ್ತು ಅನ್‌ಲಾಕ್ ಮಾಡಲು ಸೈಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ನೀಡಲಾಗಿದೆ.

ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಟೆಕ್ನೋ ಸ್ಪಾರ್ಕ್ 9T ಸ್ಮಾರ್ಟ್‌ಫೋನ್ ಲಾಂಚ್ ಪ್ರೈಸ್‌ಟ್ಯಾಗ್‌ನಲ್ಲಿ 9,299ರೂ. ಬೆಲೆ ಹೊಂದಿದೆ. ಇದು ಲಾಂಚ್ ಪ್ರೈಸ್ ಟ್ಯಾಗ್ ಆಗಿದ್ದು, ಈ ಬೆಲೆ ಎಷ್ಟು ದಿನಗಳ ವರೆಗೆ ಲಭ್ಯವಾಗಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಈ ಸ್ಮಾರ್ಟ್‌ಫೋನ್ ಅನ್ನು ನೀವು ಟರ್ಕೋಯಿಸ್ ಸಯಾನ್, ಅಟ್ಲಾಂಟಿಕ್ ಬ್ಲೂ, ಐರಿಸ್ ಪರ್ಪಲ್ ಮತ್ತು ಟಹೀಟಿ ಗೋಲ್ಡ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನು ಟೆಕ್ನೋ ಸ್ಪಾರ್ಕ್ 9T ಆಗಸ್ಟ್ 5 ರಿಂದ ಅಮೆಜಾನ್‌ನ್ ಸೈಟ್‌ನಲ್ಲಿ ತನ್ನ ಮೊದಲ ಸೇಲ್ ನಡೆಸಲಿದೆ.

ಟೆಕ್ನೋ ಕಂಪೆನಿ ಈಗಾಗಲೇ ಜುಲೈ ತಿಂಗಳಿನಲ್ಲಿಯೇ ಭಾರತದಲ್ಲಿ ತನ್ನ ಟೆಕ್ನೋ ಸ್ಮಾರ್ಕ್ 9 ಸರಣಿಯಲ್ಲಿ ಹೊಸ ಟೆಕ್ನೋ ಸ್ಪಾರ್ಕ್ 9 ಅನ್ನು ಲಾಂಚ್ ಮಾಡಿತ್ತು. ಈ ಸ್ಮಾರ್ಟ್‌ಫೋನ್ ತನ್ನ ವಿಶೇಷ ಫೀಚರ್ಸ್‌ಗಳು ಹಾಗೂ ಬೆಲೆಯ ಕಾರಣಕ್ಕೆ ಸಾಕಷ್ಟು ಗಮನಸೆಳೆದಿದೆ. ಈ ಸ್ಮಾರ್ಟ್‌ಫೋನ್ ಬಜೆಟ್ ಸ್ಮಾರ್ಟ್‌ಫೋನ್ ಆಗಿದ್ದು, 10,000ರೂ. ಒಳಗೆ ಲಭ್ಯವಾಗುವ ಆಕರ್ಷಕ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದೆನಿಸಿಕೊಂಡಿದೆ. ಈ ಸ್ಮಾರ್ಟ್‌ಫೋನ್ ಅನ್ನು ಇನ್ಫಿನಿಟಿ ಬ್ಲಾಕ್ ಮತ್ತು ಸ್ಕೈ ಮಿರರ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ.

ಟೆಕ್ನೋ ಸ್ಪಾರ್ಕ್ 9 ಸ್ಮಾರ್ಟ್‌ಫೋನ್
ಟೆಕ್ನೋ ಸ್ಪಾರ್ಕ್ 9 ಸ್ಮಾರ್ಟ್‌ಫೋನ್ 6.6 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೀಡಿಯಾಟೆಕ್ G37 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಈ ಫೋನ್ ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು AI ಕ್ಯಾಮೆರಾವನ್ನು ಹೊಂದಿದೆ. ಈ ಕ್ಯಾಮೆರಾ LED ಫ್ಲ್ಯಾಷ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ DTS ಹೊಂದಿರುವ ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ. ಇದಲ್ಲದೆ ವರ್ಚುವಲ್ 5GB RAM ಅನ್ನು ಕೂಡ ಬೆಂಬಲಿಸಲಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086