ವಾಟ್ಸಾಪ್‌ ಕಾಲ್‌ ಮಾಡಬೇಕಿದ್ರೆ ಇನ್ಮುಂದೆ ಹಣ ಪಾವತಿಸಬೇಕು?... COAI ಪ್ರಸ್ತಾಪ ಏನು?

|

ತಂತ್ರಜ್ಞಾನ ಮುಂದುವರೆದಂತೆ ಇಂಟರ್ನೆಟ್‌ ಕಾಲ್‌ ಹಾಗೂ ಮೆಸೆಜ್‌ಗಳ ಸೇವೆ ಸಹ ಈಗ ಹೆಚ್ಚಾಗಿ ಬಳಕೆಯಲ್ಲಿದೆ. ಈ ರೀತಿಯ ಈ ಸೇವೆ ನೀಡಲೆಂದೇ ಹಲವಾರು ಆಪ್‌ಗಳು ಬಳಕೆದಾರರಿಗೆ ಲಭ್ಯ ಇದ್ದು, ಅದರಲ್ಲೂ ಹೆಚ್‌ಡಿ ಗುಣಮಟ್ಟದ ಕರೆ ಸೇವೆ ನೀಡುತ್ತಿರುವುದು ವಿಶೇಷ. ಈ ಎಲ್ಲಾ ಬೆಳವಣಿಗೆ ನಡುವೆ ಇನ್ಮುಂದೆ ನೀವು ವಾಟ್ಸಾಪ್‌ ಸೇರಿದಂತೆ ಇನ್ನಿತರೆ ಇಂಟರ್ನೆಟ್‌ ಕಾಲ್‌ ಆಯ್ಕೆ ಇರುವ ಆಪ್‌ಗಳಿಗೆ ಹಣ ಪಾವತಿಸಬೇಕಾಗಬಹುದು.

ವಾಟ್ಸಾಪ್‌

ಹೌದು, ಈಗಾಗಲೇ ವಾಟ್ಸಾಪ್‌, ವೈಬರ್‌, ಟೆಲಿಗ್ರಾಮ್, ಸಿಗ್ನಲ್ ಸೇರಿದಂತೆ ಇನ್ನಿತರೆ ಆಪ್‌ಗಳು ಬಳಕೆದಾರರಿಗೆ ಇಂಟರ್ನೆಟ್ ಕಾಲ್‌ ಸೌಲಭ್ಯ ಕಲ್ಪಿಸಿವೆ. ಇದರಿಂದ ಬಳಕೆದಾರರು ಸುಲಭವಾಗಿ ಬೇಕಾದವರ ಜೊತೆ ಮಾತನಾಡಿಕೊಳ್ಳಬಹುದು. ವಿಷಯ ಎಂದರೆ ಈ ರೀತಿಯ ಓವರ್‌ ದಿ ಟಾಪ್‌ (OTT) ಬಳಕೆಗೆ ಶುಲ್ಕವನ್ನು ವಿಧಿಸಲು ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (COAI) ಸರ್ಕಾರಕ್ಕೆ ಒತ್ತಾಯ ಮಾಡಿದೆ.

 ಶುಲ್ಕ ವಿಧಿಸಲು ಸಜ್ಜು

ಶುಲ್ಕ ವಿಧಿಸಲು ಸಜ್ಜು

ಟೆಲಿಕಾಂ ಆಪರೇಟರ್‌ಗಳ ಉದ್ಯಮ ಸಂಸ್ಥೆಯಾಗಿರುವ ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ವಾಟ್ಸಾಪ್‌, ಸಿಗ್ನಲ್‌ ಹಾಗೂ ಗೂಗಲ್‌ ಡ್ಯೂ ನಂತರ ದೊಡ್ಡ ದೊಡ್ಡ ಪ್ಲಾಟ್‌ಫಾರ್ಮ್‌ನಲ್ಲಿ ಇಂಟರ್ನೆಟ್‌ ಆಧಾರಿತ ಕರೆ ಹಾಗೂ ಮೆಸೆಜ್‌ಗಳಿಗೆ ಬಳಕೆಯ ಶುಲ್ಕ ವಿಧಿಸಲು ಪರವಾನಗಿ ಹಾಗೂ ನಿಯಂತ್ರಣ ಚೌಕಟ್ಟನ್ನು ರಚಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದೆ.

ಟೆಲಿಕಾಂ

ಈ ಬಗ್ಗೆ ಕಳೆದ ವಾರ ಟೆಲಿಕಾಂ ಕಾರ್ಯದರ್ಶಿ ಕೆ. ರಾಜಾರಾಮನ್‌ಗೆ ಅವರಿಗೆ ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ ಡೈರೆಕ್ಟರ್ ಜನರಲ್ ಎಸ್‌ಪಿ ಕೊಚ್ಚರ್ ಅವರು ಪತ್ರ ಬರೆದಿದ್ದು, ಮೈಕ್ರೋ, ಸಣ್ಣ ಮತ್ತು ಮಧ್ಯಮ ಉದ್ಯಮ ವಿಭಾಗದಲ್ಲಿ ನೆಟ್‌ವರ್ಕ್ ಬಳಕೆಯ ಆಧಾರದ ಮೇಲೆ ಶುಲ್ಕಗಳನ್ನು ಸೀಮಿತಗೊಳಿಸಬಹುದು. ಹಾಗೆಯೇ ಕರೆ ಮತ್ತು ಸಂದೇಶ ಸೇವೆಯನ್ನು ನೀಡುವ ಓವರ್-ದಿ-ಟಾಪ್ ಆಪ್‌ಗಳನ್ನು ಟೆಲಿಕಾಂ ಸೇವಾ ಪೂರೈಕೆದಾರರು ಎಂದು ವ್ಯಾಖ್ಯಾನಿಸಬಹುದು ಎಂದು ಪ್ರಸ್ತಾಪಿಸಿದ್ದಾರೆ.

ಟೆಲಿಕಾಂ ಸಂಸ್ಥೆಗಳು ಮಾಡಿದ್ದ ಖರ್ಚು ವ್ಯರ್ಥವೇ?

ಟೆಲಿಕಾಂ ಸಂಸ್ಥೆಗಳು ಮಾಡಿದ್ದ ಖರ್ಚು ವ್ಯರ್ಥವೇ?

ಟೆಲಿಕಾಂ ಸಂಸ್ಥೆಗಳನ್ನು ರಚಿಸುವ ಆರಂಭದಲ್ಲಿ ಇದಕ್ಕೆ ಬೇಕಾದ ಎಲ್ಲಾ ರೀತಿಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಟೆಲಿಕಾಂ ಕಂಪೆನಿಗಳು ಕೋಟಿಗಟ್ಟಲೇ ಖರ್ಚು ಮಾಡಿವೆ. ಹಾಗೆಯೇ ತೆರಿಗೆ ರೂಪದಲ್ಲಿ ಸರ್ಕಾರಕ್ಕೂ ಬಹಳ ಹಣ ನೀಡಿವೆ. ಅಂತಹುದರಲ್ಲಿ ಈಗ ಅಸ್ತಿತ್ವದಲ್ಲಿರುವ ಇಂಟರ್‌ನೆಟ್ ಕರೆ ಹಾಗೂ ಸಂದೇಶ ಸೇವೆಗಳನ್ನು ಒದಗಿಸುವ ಒಟಿಟಿ ಸಂಸ್ಥೆಗಳಿಂದ ಸರ್ಕಾರಕ್ಕೆ ಹಾಗೂ ಟೆಲಿಕಾಂ ಸಂಸ್ಥೆಗಳಿಗೆ ಯಾವುದೇ ಹೆಚ್ಚುವರಿ ಲಾಭವಿಲ್ಲ. ಈ ಕಾರಣಕ್ಕೆ ಈ ರೀತಿಯ ಸೇವೆ ನೀಡುತ್ತಿರುವ ಆಪ್‌ಗಳಿಗೆ ಶುಲ್ಕ ವಿಧಿಸಬೇಕು ಎಂದು ಒತ್ತಾಯಿಸಲಾಗಿದೆ.

ಹಾಗಿದ್ರೆ, ವಾಟ್ಸಾಪ್‌ ಕಾಲ್‌ಗೆ ಪಾವತಿ ಮಾಡಬೇಕೆ?

ಹಾಗಿದ್ರೆ, ವಾಟ್ಸಾಪ್‌ ಕಾಲ್‌ಗೆ ಪಾವತಿ ಮಾಡಬೇಕೆ?

ಸದ್ಯಕ್ಕೆ ದೂರಸಂಪರ್ಕ ಸೇವಾ ಪೂರೈಕೆದರರು (ಟಿಎಸ್‌ಪಿ) ತಮ್ಮ ದೂರಸಂಪರ್ಕ ಸೇವೆಗಳ ಭಾಗವಾಗಿ ಓಟಿಟಿ ಗಳಿಂದ ಆದಾಯವನ್ನು ಪಡೆಯುತ್ತಿವೆ. ಅಂದರೆ ಯಾವುದೇ ಓಟಿಟಿ ಪ್ಲಾಟ್‌ಫಾರ್ಮ್‌ ಒಂದಲ್ಲಾ ಒಂದು ಸೇವೆ ನೀಡುತ್ತಾ ಬರುತ್ತಿದ್ದು, ಇದಕ್ಕಾಗಿ ಅವರು ತಮ್ಮ ಸಿಮ್‌ಗಳಿಗೆ ರೀಚಾರ್ಜ್‌ ಮಾಡಿಕೊಂಡು ಈ ಪ್ಲಾಟ್‌ಫಾರ್ಮ್‌ಗಳನ್ನು ಬಳಕೆ ಮಾಡಲು ಮುಂದಾಗುತ್ತಿದ್ದಾರೆ.

ಡೇಟಾ

ನೇರವಾಗಿ ಹೇಳಬೇಕು ಎಂದರೆ ಹೆಚ್ಚಿನ ಇಂಟರ್ನೆಟ್‌ ಕರೆಗಳನ್ನು ಮಾಡುವುದರಿಂದ ಡೇಟಾ ಸಹ ಖಾಲಿಯಾಗುತ್ತಾ ಬರುತ್ತದೆ. ಹೀಗಾಗಿ ಬಳಕೆದಾರರು ಟೆಲಿಕಾಂ ಸೇವೆಗಳಿಗೆ ಮತ್ತೆ ಹಣ ಪಾವತಿ ಮಾಡಿ ಆ ಸೇವೆ ಪಡೆಯಲು ಮುಂದಾಗುತ್ತಾರೆ. ಇದರಿಂದ ಈ ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಒಂದು ರೀತಿಯ ಲಾಭವೂ ಹೌದು. ಅದಾಗ್ಯೂ ವಾಟ್ಸಾಪ್‌ ಸೇರಿದಂತೆ ಇನ್ನಿತರೆ ಈ ರೀತಿಯ ಆಪ್‌ಗಳಿಗೆ ಶುಲ್ಕ ವಿಧಿಸಬೇಕೆ? ಅಥವಾ ಬೇಡವೇ ಎಂಬ ಬಗ್ಗೆ ಇನ್ನೂ ಸಹ ಯಾವುದೇ ನಿಖರ ಮಾಹಿತಿ ಹೊರಬಿದ್ದಿಲ್ಲ. ಅಕಸ್ಮಾತ್ ಏನಾದರೂ ಈ ವಾಟ್ಸಾಪ್‌ ಕರೆ, ಸಂದೇಶಗಳಿಗೆ ಶುಲ್ಕ ವಿಧಿಸಲು ಮುಂದಾದರೆ ನೀವು ಈಗ ತಿಂಗಳಿಗೋ ಅಥವಾ ವರ್ಷಕ್ಕೋ ಮಾಡಿಸಿಕೊಳ್ಳುತ್ತಿರುವ ರೀಚಾರ್ಜ್‌ ಪ್ಲ್ಯಾನ್‌ ಇನ್ನಷ್ಟು ದುಬಾರಿಯಾಗಬಹುದು.

Best Mobiles in India

English summary
Telcos appeal for Regulatory Framework To Levy Usage charge On OTT s,

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X