ಡಿ.1ರ ಮೊದಲೇ ನಿಮ್ಮ ಮೊಬೈಲ್ ರೀಚಾರ್ಜ್ ಮಾಡಿಸಿ!..ಮುಂದೆ ಏನಾಗುತ್ತೆ ಗೊತ್ತಾ?

|

ಪ್ರಸ್ತುತ ಭಾರತವು ವಿಶ್ವದಲ್ಲೇ ಅತ್ಯಂತ ಅಗ್ಗದ ಮೊಬೈಲ್ ಡೇಟಾ ಬೆಲೆಗಳನ್ನು ಹೊಂದಿರುವ ದೇಶವಾಗಿದೆ. ಆದರೆ, ನವೆಂಬರ್ ತಿಂಗಳು ಕಳೆದ ನಂತರ ಇಂತಹದೊಂದು ಹೆಗ್ಗಳಿಕೆ ಭಾರತದ ಬಳಿ ಇರುವುದಿಲ್ಲ. ಏಕೆಂದರೆ, ಏರ್‌ಟೆಲ್, ವೊಡಾಫೋನ್ ಮತ್ತು ರಿಲಯನ್ಸ್ ಜಿಯೋ ಸೆಂಬರ್‌ನಲ್ಲಿ ಸುಂಕವನ್ನು ಹೆಚ್ಚಿಸಲು ಯೋಜಿಸುವುದನ್ನು ಸೂಚಿಸಿದ್ದಾರೆ. ಈ ಹೆಚ್ಚಳವು ಸಣ್ಣದಾಗಿರುವುದಿಲ್ಲ. ಅವುಗಳು ಬೆಲೆಗಳನ್ನು 20 ರಿಂದ 30 ಪ್ರತಿಶತದಷ್ಟು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಟೆಲಿಕಾಂ ತಜ್ಞ ರೋಹನ್ ಧಮಿಜಾ ಅವರು ಹೇಳಿದ್ದಾರೆ.

ಏಷ್ಯಾದ ಶ್ರೀಮಂತ ವ್ಯಕ್ತಿ

2016 ರಲ್ಲಿ, ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ತಮ್ಮ ಟೆಲಿಕಾಂ ಉದ್ಯಮ ರಿಲಯನ್ಸ್ ಜಿಯೋವನ್ನು ಪ್ರಾರಂಭಿಸುವ ಮೂಲಕ ಉದ್ಯಮದಲ್ಲಿ ಕ್ರಾಂತಿಯನ್ನುಂಟು ಮಾಡಿದರು. ರಿಲಯನ್ಸ್ ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದಂತೆ ಬೆಲೆಗಳನ್ನು ಕಡಿತಗೊಳಿಸಿತು. ಇದು ಇತರ ಟೆಲಿಕಾಂಗಳು ಸಹ ಇದನ್ನು ಅನುಸರಿಸಲು ಒತ್ತಾಯಿಸಿತು. ಆದರೆ, ಇದೀಗ ಟೆಲಿಕಾಂ ಸಂಕಷ್ಟದ ಹಾದಿಯಲ್ಲಿದೆ. ಇದರಿಂದಾಗಿಯೇ ಭಾರತೀಯರು ಇನ್ನು ಮುಂದೆ ದತ್ತಾಂಶಕ್ಕಾಗಿ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ ಎಂಬುದು ಸ್ಪಷ್ಟವಾಗಿದೆ.

ಟೆಲಿಕಾಂ

ದೇಶದ ಟೆಲಿಕಾಂನಲ್ಲಿ ಡೇಟಾ ಮತ್ತು ಕರೆಗಳ ಕಡಿಮೆ ಬೆಲೆಗಳು ಗ್ರಾಹಕರಿಗೆ ವರದಾನವಾಗಿದ್ದರೂ, ಅಸ್ತಿತ್ವದಲ್ಲಿರುವ ಟೆಲಿಕಾಂ ಆಟಗಾರರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಕ್ಷೀಣಿಸುತ್ತಿರುವ ಸ್ಪರ್ಧೆಯ ಹಿನ್ನೆಲೆಯಲ್ಲಿ ಕೆಲವು ಟೆಲಿಕಾಂ ಕಂಪೆನಿಗಳು ಮುಚ್ಚಿವೆ ಅಥವಾ ವಿಲೀನಗೊಂಡಿವೆ. ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್‌ನ ಅಂಕಿಅಂಶಗಳ ಪ್ರಕಾರ, ಸಾಮಾನ್ಯ ಉದ್ಯಮದ ಮೆಟ್ರಿಕ್ ಬಳಕೆದಾರರ ಸರಾಸರಿ ಆದಾಯವು 2015 ರಿಂದ 2018 ರವರೆಗೆ 50 ಪ್ರತಿಶತಕ್ಕಿಂತಲೂ ಕಡಿಮೆಯಾಗಿರುವುದನ್ನು ತಜ್ಞರು ತಿಳಿಸಿದ್ದಾರೆ.

 ಏರ್‌ಟೆಲ್, ವೊಡಾಫೋನ್ ಐಡಿಯಾ

ಈ ವರ್ಷದ ಹೊತ್ತಿಗೆ, ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ರಿಲಯನ್ಸ್ ಎಂಬ ಮೂರು ಪ್ರಮುಖ ಖಾಸಗಿ ಕಂಪೆನಿಗಳು ಮಾತ್ರ ಉಳಿದಿವೆ. ಜೊತೆಗೆ ಟೆಲಿಕಾಂ ಸ್ಪೆಕ್ಟ್ರಮ್ ಅನ್ನು ಹರಾಜು ಹಾಕಿದಾಗ ಸರ್ಕಾರಕ್ಕೆ ಹೆಚ್ಚಿನ ಬೆಲೆಗಳನ್ನು ಪಾವತಿಸಿದ ನಂತರ ಏರ್ಟೆಲ್ ಮತ್ತು ವೊಡಾಫೋನ್ ತಮ್ಮ ಸಾಲದ ಹೊರೆಗಳನ್ನು ನಿರ್ವಹಿಸಲು ಪ್ರಯಾಸಪಡುತ್ತಿವೆ. ಇದು ಭವಿಷ್ಯದಲ್ಲಿ ದೇಶದ ಟೆಲಿಕಾಂ ಕ್ಷೇತ್ರಕ್ಕೆ ಹಾನಿಕಾರಕ. ಹಾಗಾಗಿ, ಭಾರತೀಯರು ಇನ್ನು ಅಗ್ಗದ ಮೊಬೈಲ್ ಡೇಟಾ ಬೆಲೆಗಳನ್ನು ನಿರೀಕ್ಷಿಸುವುದು ಸಹ ಕಷ್ಟ ಎಂದು ಹೇಳಲಾಗಿದೆ.

1.3 ಶತಕೋಟಿಗಿಂತಲೂ ಹೆಚ್ಚು ಜನರಿರುವ ಭಾರತದಲ್ಲಿ ವ್ಯಾಪಕವಾದ ಸ್ಮಾರ್ಟ್‌ಫೋನ್ ಅಳವಡಿಕೆಗೆ ಬಾಗಿಲು ತೆರೆಯುವ ಮೂಲಕ ಜಿಯೋ ಕಟ್-ರೇಟ್ ಯೋಜನೆಗಳು ಯಶಸ್ವಿಯಾದವು. ಗ್ರಾಹಕ ಸಂಶೋಧನಾ ಸಂಸ್ಥೆಯ ಇತ್ತೀಚಿನ ವರದಿಯ ಪ್ರಕಾರ, ಯುನೈಟೆಡ್ ಸ್ಟೇಟ್ಸ್‌ನಲ್ಲಿ $ 12 ಬೆಲೆಗೆ ಹೋಲಿಸಿದರೆ, ಭಾರತದ ಒಂದು ಗಿಗಾಬೈಟ್ ಬೆಲೆ ಕೇವಲ 26 ಸೆಂಟ್ಸ್ ಆಗಿದೆ. ವಾಟ್ಸಾಪ್, ಯೂಟ್ಯೂಬ್ ಮತ್ತು ಟಿಕ್‌ಟಾಕ್ ಸೇರಿದಂತೆ ಇಂಟರ್ನೆಟ್ ಆಧಾರಿತ ಅಪ್ಲಿಕೇಶನ್‌ಗಳನ್ನು ಬಳಸುತ್ತಿರುವ ಭಾರತೀಯರು ವಿಶ್ವದಲ್ಲೇ ಅತಿದೊಡ್ಡ ಬಳಕೆದಾರರಾಗಿದ್ದಾರೆ.

Best Mobiles in India

English summary
Now the telecom industry is at a crossroads. Alarmed by the state of the business, Cabinet approved a small bailout of sorts on Thursday by postponing certain payments that the telecom companies owe to the government.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X