ಟೆಲಿಗ್ರಾಮ್‌ನಿಂದ ಹೊಸ ಪ್ರೀಮಿಯಂ ಆವೃತ್ತಿ ಘೋಷಣೆ! ಹೊಸ ಫೀಚರ್ಸ್‌ ಏನಿದೆ?

|

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ಗಳಲ್ಲಿ ಟೆಲಿಗ್ರಾಮ್‌ ಕೂಡ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ವಾಟ್ಸಾಪ್‌ಗೆ ಪ್ರಬಲ ಪೈಪೋಟಿ ನೀಡುವ ನಿಟ್ಟಿನಲ್ಲಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡುತ್ತಲೇ ಬಂದಿದೆ. ಸದ್ಯ ಇದೀಗ ಟೆಲಿಗ್ರಾಮ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಪ್ರೀಮಿಯಂ ಮೆಂಬರ್‌ಶಿಪ್‌ ಅನ್ನು ನೀಡಲು ಮುಂದಾಗಿದೆ. ಟೆಲಿಗ್ರಾಮ್‌ ಪ್ರೀಮಿಯಂ ಆವೃತ್ತಿಯನ್ನು ಈಗಾಗಲೇ ಘೋಷಣೆ ಮಾಡಲಾಗಿದ್ದು, ಇನ್ನು ಕೂಡ ಅಧಿಕೃತವಾಗಿ ಪ್ರಾರಂಭವಾಗಿಲ್ಲ. ಆದರೆ ಇದು ಇದೇ ತಿಂಗಳು ಲೈವ್‌ ಆಗಲಿದೆ ಎಂದು ಟೆಲಿಗ್ರಾಮ್‌ ಕಂಪೆನಿ ಖಚಿತಪಡಿಸಿದೆ.

ಟೆಲಿಗ್ರಾಮ್‌

ಹೌದು, ಟೆಲಿಗ್ರಾಮ್‌ ಸಂಸ್ಥಾಪಕ ಪಾವೆಲ್ ಡುರೊವ್ ಅವರು ಟೆಲಿಗ್ರಾಮ್‌ ಅಪ್ಲಿಕೇಶನ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಪ್ರೀಮಿಯಂ ಸದಸ್ಯತ್ವವನ್ನು ನೀಡಲಿದೆ ಎಂದು ಘೋಷಿಸಿದ್ದಾರೆ. ಈ ಹೊಸ ಸದಸ್ಯತ್ವ ಈ ತಿಂಗಳು ಲೈವ್ ಆಗಲಿದೆ ಎಂದು ಪ್ರಕಟಿಸಿದ್ದಾರೆ. ಇನ್ನು ಈ ಹೊಸ ಪ್ರೀಮಿಯಂ ಸದಸ್ಯತ್ವದಿಂದ ಏನೆಲ್ಲಾ ಫೀಚರ್ಸ್‌ಗಳು ನಿಮಗೆ ಲಭ್ಯವಾಗಲಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೆಲಿಗ್ರಾಮ್‌

ಟೆಲಿಗ್ರಾಮ್‌ ಅಪ್ಲಿಕೇಶನ್‌ ಶೀಘ್ರದಲ್ಲೇ ಪ್ರೀಮಿಯಂ ಮೆಂಬರ್‌ಶಿಪ್‌ ಅನ್ನು ಪ್ರಾರಂಭಿಸಲಿದೆ. ಪ್ರೀಮಿಯಂ ಮೆಂಬರ್‌ಶಿಪ್‌ ಪಡೆದುಕೊಂಡ ಬಳಕೆದಾರರು ಕೆಲವು ಆಕರ್ಷಕ ಫೀಚರ್ಸ್‌ಗಳನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗಲಿದೆ. "ಮಿತಿಗಳಿಲ್ಲದ" ಅನುಭವವನ್ನು ಒದಗಿಸಲು ಪ್ರೀಮಿಯಂ ಮೆಂಬರ್‌ಶಿಪ್‌ ಪರಿಚಯಿಸಲಾಗ್ತಿದೆ ಎಂದು ಟೆಲಿಗ್ರಾಮ್‌ ಹೇಳಿದೆ. ಇದಕ್ಕಾಗಿ ನೀವು ಹಣವನ್ನು ಪಾವತಿಸುವ ಮೂಲಕ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದಾಗಿದೆ. ಇದು ಹೆಚ್ಚುವರಿ ಫೀಚರ್ಸ್‌ಗಳು, ವೇಗ ಮತ್ತು ಸಂಪನ್ಮೂಲಗಳನ್ನು ಪಡೆಯಲು ಯಾರಿಗಾದರೂ ಅನುಮತಿಸುವ ಚಂದಾದಾರಿಕೆ ಯೋಜನೆಯಾಗಿದೆ. ಇದು ಬಳಕೆದಾರರಿಗೆ ಹೊಸ ವೈಶಿಷ್ಟ್ಯಗಳನ್ನು ಪಡೆಯುವ ಕ್ಲಬ್‌ಗೆ ಸೇರಲು ಅನುಮತಿಸುತ್ತದೆ.

ಹೊಸ ಪ್ರೀಮಿಯಂ ಫೀಚರ್ಸ್‌ಗಳು

ಹೊಸ ಪ್ರೀಮಿಯಂ ಫೀಚರ್ಸ್‌ಗಳು

ಟೆಲಿಗ್ರಾಮ್‌ ಪರಿಚಯಿಸಲಿರುವ ಪ್ರೀಮಿಯಂ ಮೆಂಬರ್‌ಶಿಪ್‌ನಲ್ಲಿ ಬಳಕೆದಾರರು ಕಳುಹಿಸಿದ ಹೆಚ್ಚುವರಿ-ದೊಡ್ಡ ಡಾಕ್ಯುಮೆಂಟ್‌ಗಳು, ಮೀಡಿಯಾ ಮತ್ತು ಸ್ಟಿಕ್ಕರ್‌ಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಅದೇ ರೀತಿಯಲ್ಲಿ ಪ್ರತಿಕ್ರಿಯಿಸಲು ಸಂದೇಶಕ್ಕೆ ಈಗಾಗಲೇ ಪಿನ್ ಮಾಡಲಾದ ಪ್ರೀಮಿಯಂ ರೆಸ್ಪಾನ್ಸ್‌ಗಳನ್ನು ಸೇರಿಸಲು ಟ್ಯಾಪ್ ಮಾಡಬೇಕಾಗುತ್ತದೆ. ಇನ್ನು ಕಂಪನಿಯು ಸಾರ್ವಜನಿಕ ಚಾನೆಲ್‌ಗಳಲ್ಲಿ ಜಾಹೀರಾತುಗಳನ್ನು ಪರೀಕ್ಷಿಸುತ್ತಿರುವಾಗ ಮತ್ತು ಅವರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಯಶಸ್ವಿಯಾಗಿದ್ದಾರೆ ಎಂದು ಟೆಲಿಗ್ರಾಮ್‌ ಸಂಸ್ಥಾಪಕ ಡುರೊವ್ ಹೇಳಿಕೊಂಡಿದ್ದಾರೆ.

ಟೆಲಿಗ್ರಾಮ್‌

ಇನ್ನು ಟೆಲಿಗ್ರಾಮ್‌ ಪ್ರೀಮಿಯಂ ಆಯ್ಕೆಯ ಬೆಲೆ ಎಷ್ಟು ಅನ್ನೊದು ಇನ್ನು ಬಹಿರಂಗವಾಗಿಲ್ಲ. ಆದರೆ ಪ್ರೀಮಿಯಂ ಆಯ್ಕೆಯನ್ನು ತೆಗೆದುಕೊಳ್ಳವ ಬಳಕೆದಾರರು ಚಂದಾದಾರಿಕೆಯನ್ನು ಪಾವತಿಸಬೇಕಾಗುತ್ತದೆ. ಚಂದಾದಾರಿಕೆ ಪಡೆದುಕೊಂಡ ಬಳಕೆದಾರರಿಗೆ ಪ್ರೀಮಿಯಂ ಸ್ಟಿಕ್ಕರ್‌ಗಳು ಮತ್ತು ವಿಶೇಷ ಪ್ರತಿಕ್ರಿಯೆ ಎಮೋಜಿಗಳನ್ನು ಅನ್‌ಲಾಕ್ ಮಾಡಲು ಪ್ರವೇಶವನ್ನು ನೀಡುತ್ತದೆ. ಈ ಸೇವೆಯನ್ನು ಸದ್ಯಕ್ಕೆ iOS ಬೀಟಾ ಅಪ್ಲಿಕೇಶನ್‌ನಲ್ಲಿ ಗುರುತಿಸಲಾಗಿದೆ. ಈ ಫೀಚರ್ಸ್‌ ಆಂಡ್ರಾಯ್ಡ್‌ನಲ್ಲಿ ಯಾವಾಗ ಲಭ್ಯವಾಗಲಿದೆ ಎಂಬುದರ ಬಗ್ಗೆ ಟೆಲಿಗ್ರಾಮ್‌ ಇನ್ನು ಅಧಿಕೃತ ಮಾಹಿತಿ ನೀಡಿಲ್ಲ.

ಟೆಲಿಗ್ರಾಮ್‌

ಇದಲ್ಲದೆ ಟೆಲಿಗ್ರಾಮ್‌ ಇತ್ತೀಚಿಗೆ ಹಲವು ಆಯ್ಕೆಯ ಫೀಚರ್ಸ್‌ಗಳನ್ನು ಪರಿಚಯಿಸಿತ್ತು. ಇದರಲ್ಲಿ ಕಸ್ಟಮ್ ನೋಟಿಫಿಕೇಶನ್ ಸೌಂಡ್ಸ್ ಫೀಚರ್ಸ್‌ ಕೂಡ ಸೇರಿದೆ. ಈ ಫೀಚರ್ಸ್‌ ಬಳಕೆದಾರರಿಗೆ ಯಾವುದೇ ಧ್ವನಿಯನ್ನು ನೋಟಿಫಿಕೇಶನ್‌ ಟೋನ್ ಆಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ. ಇದನ್ನು ಅಪ್ಲಿಕೇಶನ್‌ನಲ್ಲಿ ಕಸ್ಟಮ್ ಆಲರ್ಟ್‌ಗಳನ್ನು ಕ್ರಿಯೆಟ್‌ ಮಾಡುವುದಕ್ಕೆ ಕೂಡ ಬಳಸಬಹುದಾಗಿದೆ. ಇದಲ್ಲದೆ ಬಳಕೆದಾರರು ತಮ್ಮ ಉದ್ದೇಶಕ್ಕಾಗಿ 300KB ಗಾತ್ರದ ಐದು ಸೆಕೆಂಡ್‌ಗಳ ಅಡಿಯಲ್ಲಿ ಆಡಿಯೊ ಫೈಲ್‌ಗಳು ಮತ್ತು ವಾಯ್ಸ್‌ ಮೆಸೇಜ್‌ಗಳನ್ನು ಬಳಸಬಹುದಾಗಿದೆ. ಹಾಗೆಯೇ ಬಳಕೆದಾರರು ತಮ್ಮ ಎಲ್ಲಾ ಡಿವೈಸ್‌ಗಳಲ್ಲಿ ಸೆಟ್ಟಿಂಗ್ಸ್‌ > ನೋಟಿಫಿಕೇಶನ್‌ ಮತ್ತು ವಾಯ್ಸ್‌ಗಳ ಮೂಲಕ ವಾಯ್ಸ್‌ ಮೆಸೇಜ್‌ ಅನ್ನು ಪ್ರವೇಶಿಸಬಹುದು.ಇನ್ನು ಟೆಲಿಗ್ರಾಮ್‌ ಕಸ್ಟಮ್‌ ಮ್ಯೂಟ್‌ ಡ್ಯುರೇಷನ್‌ ಫೀಚರ್ಸ್‌ ಅನ್ನು ಪರಿಚಯಿಸುವುದಕ್ಕೆ ಸಿದ್ಧತೆ ನಡೆಸಿದೆ. ಈ ಫೀಚರ್ಸ್‌ ನಿರ್ಧಿಷ್ಟ ಅವಧೀಗೆ ಅಧಿಸೂಚನೆಗಳನ್ನು ವಿರಾಮಗೊಳಿಸುವ ಸಾಮರ್ಥ್ಯವನ್ನು ಸೇರಿಸಿದೆ.

Best Mobiles in India

English summary
Telegram announces a new premium membership service with new features

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X