ಟೆಲಿಗ್ರಾಮ್‌ನಲ್ಲಿ ವಾಟ್ಸಾಪ್‌ ಅನ್ನೇ ಮೀರಿಸುವ ಫೀಚರ್ಸ್‌!; ಬಳಕೆದಾರರಿಗೆ ಸಾಕಷ್ಟು ಅನುಕೂಲ

,

|

ಪ್ರಮುಖ ಮೆಸೆಜಿಂಗ್‌ ಪ್ಲಾಟ್‌ಫಾರ್ಮ್ ಆದ ಟೆಲಿಗ್ರಾಮ್ನಲ್ಲಿ ಸಾಕಷ್ಟು ಬೆಳವಣಿಗೆಗಳು ಕಂಡುಬರುತ್ತಿದ್ದು, ವಾಟ್ಸಾಪ್‌ಗಿಂತಲೂ ವಿಭಿನ್ನ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬರುತ್ತಿದೆ. ಇದರ ನಡುವೆ ಈಗ ಬಳಕೆದಾರರು ಹೊಸ ಸೌಲಭ್ಯ ಪಡೆಯಬಹುದಾಗಿದ್ದು, ಈ ಮೂಲಕ ಯಾವುದೇ ಭಾಷೆಯ ತೊಂದರೆ ಇಲ್ಲದೆ ಯಾವುದೇ ಮೆಸೆಜ್‌ಗಳನ್ನು ಒಂದೇ ಬಾರಿಗೆ ‍ಭಾಷಾಂತರಿಸಿ ಓದಬಹುದಾಗಿದೆ. ಅಷ್ಟೇ ಅಲ್ಲದೆ ಇದರೊಂದಿಗೆ ಇತರೆ ಫೀಚರ್ಸ್‌ಗಳನ್ನು ಸಹ ಪರಿಚಯಿಸಿದೆ.

ಟೆಲಿಗ್ರಾಮ್‌ನಲ್ಲಿ ವಾಟ್ಸಾಪ್‌ ಅನ್ನೇ ಮೀರಿಸುವ ಫೀಚರ್ಸ್‌!

ಹೌದು, ಟೆಲಿಗ್ರಾಮ್ ಇದೀಗ ನೈಜ-ಸಮಯದ ಅನುವಾದ ಫೀಚರ್ಸ್‌ ಅನ್ನು ಪರಿಚಯಿಸುತ್ತಿದೆ. ಇದಿಷ್ಟು ಮಾತ್ರವಲ್ಲದೆ, ಪ್ರೊಫೈಲ್ ಚಿತ್ರದ ವಿಚಾರದಲ್ಲಿ ಹೊಸ ಸೌಲಭ್ಯ ನೀಡಲು ಮುಂದಾಗಿದ್ದು, ಎಮೋಜಿ ಬಳಕೆಯಲ್ಲಿ ಬಳಕೆದಾರರು ಇನ್ನಷ್ಟು ಹೊಸ ರೀತಿಯ ಅನುಭವ ಪಡೆಯಬಹುದಾಗಿದೆ. ಹಾಗಿದ್ರೆ, ಟೆಲಿಗ್ರಾಮ್‌ನ ಈ ಹೊಸ ಫೀಚರ್ಸ್‌ಗಳು ಹೇಗೆಲ್ಲಾ ಕೆಲಸ ಮಾಡಲಿವೆ?, ಇವುಗಳ ಅಗತ್ಯತೆ ಏನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಟೆಲಿಗ್ರಾಮ್‌ನಲ್ಲಿ ಭಾಷಾನುವಾದ ಫೀಚರ್ಸ್‌

ಟೆಲಿಗ್ರಾಮ್‌ನಲ್ಲಿ ಭಾಷಾನುವಾದ, ಪ್ರೊಫೈಲ್ ಪಿಕ್ಚರ್ ಮೇಕರ್ಸ್‌ ಮತ್ತು ಎಮೋಜಿ ವಿಭಾಗಗಳು ಸೇರಿದಂತೆ ವಿವಿಧ ಫೀಚರ್ಸ್‌ಗಳನ್ನು ಪರಿಚಯಿಸಲಾಗಿದೆ. ಅದರಲ್ಲೂ ಒಟ್ಟಾರೆ ಭಾಷಾನುವಾದ ಫೀಚರ್ಸ್‌ ಅನ್ನು ಸಾಕಷ್ಟು ಬಳಕೆದಾರರು ನಿರೀಕ್ಷಿಸುತ್ತಿದ್ದು, ಕೊನೆಗೂ ಬಳಕೆಗೆ ನೀಡಲಾಗಿದೆ. ಈ ಮೂಲಕ ಬಳಕೆದಾರರು ಸಂಪೂರ್ಣ ಚಾಟ್‌ಗಳು, ಗ್ರೂಪ್‌ಗಳು ಮತ್ತು ಚಾನೆಲ್‌ಗಳನ್ನು ನೈಜ ಸಮಯದಲ್ಲಿ ಭಾಷಾಂತರದ ಲಿಸ್ಟ್‌ ಅನ್ನ ಬಳಕೆ ಮಾಡಿಕೊಂಡು ಅಗತ್ಯ ಭಾಷೆಗೆ ಅನುವಾದಿಸಬಹುದಾಗಿದೆ. ಆದರೆ, ಇದು ಪ್ರೀಮಿಯಂ ಚಂದಾದಾರಿಕೆ ಪಡೆದವರಿಗೆ ಮಾತ್ರ ಲಭ್ಯವಿದೆ ಎಂಬುದು ನಿಮ್ಮ ಗಮನಕ್ಕಿರಲಿ.

ಪ್ರೀಮಿಯಂ ಸದಸ್ಯರಲ್ಲದವರು ಸಹ ಇದನ್ನು ಈಗಾಗಲೇ ಬಳಕೆ ಮಾಡುತ್ತಿದ್ದಾರೆ. ಆದರೆ, ಪ್ರತಿ ಸಂದೇಶವನ್ನು ಒಂದೊಂದಾಗಿ ಭಾಷಾಂತರಿಸುವ ಅಗತ್ಯ ಇದೆ. ಇದು ಬಳಕೆದಾರರ ಸಮಯ ಹಾಗೂ ತಾಳ್ಮೆ ಪರಿಶೀಲಿಸುವ ಕೆಲಸವಾಗಿದೆ. ಈ ಕಾರಣಕ್ಕೆ ಒಟ್ಟಾರೆಯಾಗಿ ಭಾಷಾಂತರಿಸುವ ಫೀಚರ್ಸ್‌ ಅನ್ನು ಪರಿಚಯಿಸಲಾಗಿದ್ದು, ಬಹಳ ಪ್ರಯೋಜನಕಾರಿ ಎನ್ನಬಹುದು.

ಟೆಲಿಗ್ರಾಮ್ ಪ್ರೊಫೈಲ್ ಪಿಕ್ಚರ್ ಮೇಕರ್ಸ್

ಪ್ರೊಫೈಲ್ ಪಿಕ್ಚರ್ ಮೇಕರ್ಸ್ ಮೂಲಕ ಬಳಕೆದಾರರು ತಮ್ಮ ಖಾತೆಯನ್ನು ವರ್ಣರಂಜಿತವನ್ನಾಗಿ ಮಾಡಬಹುದಾಗಿದೆ. ಯಾಕೆಂದರೆ ಈ ಫೀಚರ್ಸ್‌ನಲ್ಲಿ ಬಳಕೆದಾರರು ಸ್ಟಿಕ್ಕರ್ ಅಥವಾ ಅನಿಮೇಟೆಡ್ ಎಮೋಜಿಯನ್ನು ತಮ್ಮ ವೈಯುಕ್ತಿಕ ಅಕೌಂಟ್‌, ಗ್ರೂಪ್‌ ಹಾಗೂ ಚಾನಲ್‌ಗಳ ಪ್ರೊಫೈಲ್ ಚಿತ್ರವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ಎಲ್ಲಾ ಬಳಕೆದಾರರು ತಮ್ಮ ಫೋಟೋಗಳಿಗೆ ಅನಿಮೇಟೆಡ್ ಮತ್ತು ಕಸ್ಟಮ್ ಎಮೋಜಿಗಳನ್ನು ಬಳಸಬಹುದಾಗಿದ್ದು, ವಿಶೇಷ ಎನಿಸಲಿದೆ. ಇದರಲ್ಲಿ ಎಮೋಜಿ ವಿಭಾಗಗಳನ್ನು ಆಡ್‌ ಮಾಡಲಾಗಿದ್ದು, ಬಳಕೆದಾರರ ಬಳಕೆಯನ್ನು ಸುಲಭವಾಗಿಸಲು ಸ್ಟಿಕ್ಕರ್ ಹಾಗೂಎಮೋಜಿಗಳನ್ನು ವರ್ಗಗಳ ಪ್ರಕಾರ ವಿಂಗಡಿಸಲಾಗಿದೆ.

ಟೆಲಿಗ್ರಾಮ್‌ನಲ್ಲಿ ವಾಟ್ಸಾಪ್‌ ಅನ್ನೇ ಮೀರಿಸುವ ಫೀಚರ್ಸ್‌!

ಟೆಲಿಗ್ರಾಮ್‌ ನೆಟ್‌ವರ್ಕ್ ಫೀಚರ್ಸ್‌

ಇದೆಲ್ಲದರ ಜೊತೆಗೆ ನೆಟ್‌ವರ್ಕ್ ಬಳಕೆಯ ಫೀಚರ್ಸ್‌ ಬಳಕೆದಾರರಿಗೆ ಸಾಕಷ್ಟು ಅನುಕೂಲ ಮಾಡಿಕೊಡಲಿದೆ. ಈ ಮೂಲಕ ಬಳಕೆದಾರರು ಟೆಲಿಗ್ರಾಮ್‌ ಎಷ್ಟು ಡೇಟಾವನ್ನು ಬಳಕೆ ಮಾಡಿದೆ ಎಂಬುದನ್ನು ಸುಲಭವಾಗಿ ಕಂಡುಕೊಳ್ಳಬಹುದಾಗಿದೆ. ಅದರಲ್ಲೂ ಆಟೋ ಸೇವ್‌ ಫೀಚರ್ಸ್‌ ಆಯ್ಕೆ ಇರುವುದರಿಂದ ಯಾವ ಫಾರ್ಮಟ್‌ನಲ್ಲಿ ಮೀಡಿಯಾ ಫೈಲ್‌ಗಳನ್ನು ಗ್ಯಾಲರಿಗೆ ಸೇವ್ ಮಾಡಬೇಕು ಎಂಬ ಆಯ್ಕೆಯನ್ನು ನೀಡುತ್ತದೆ. ಗ್ರೂಪ್‌ ಅಡ್ಮಿನ್‌ಗೆ ವಿಶೇಷ ಅನುಮತಿ ನೀಡಲಾಗಿದ್ದು, ಈ ಮೂಲಕ ಫೋಟೋಗಳು, ವಿಡಿಯೋಗಳು ಅಥವಾ ವಾಯ್ಸ್‌ ನೋಟ್ ಗ್ರೂಪ್‌ ಗಳು ಇದ್ದರೆ ಇವುಗಳನ್ನು ನಿಯಂತ್ರಿಸುವ ಅಧಿಕಾರ ಇನ್ಮುಂದೆ ಅಡ್ಮಿನ್‌ಗೆ ಇರಲಿದೆ. ಇದಿಷ್ಟೇ ಅಲ್ಲದೆ, ನೀವು ಆ ಫೈಲ್‌ಗಳನ್ನು ಕ್ಲೌಡ್‌ನಲ್ಲಿ ಸಂಗ್ರಹಿಸಲು ಬಯಸಿದರೆ ಅಥವಾ ಅದರಿಂದ ಹೊರ ತೆಗೆಯಲು ಬಯಸಿದರೆ ಬಳಕೆದಾರರಿಗೆ ಹೆಚ್ಚುವರಿ ಆಯ್ಕೆಯನ್ನು ನೀಡಲಾಗಿದೆ.

ಇನ್ನು ಬೋಟ್ ಚಾಟ್ ಆಯ್ಕೆಯನ್ನು ಕೂಡ ಸೇರಿಸಿದ್ದು, ನಿಮ್ಮ ಆಪಲ್‌ ಮತ್ತು ಗೂಗಲ್‌ ಐಡಿ ಯೊಂದಿಗೆ ಮರು-ಲಾಗಿನ್ ಪ್ರಕ್ರಿಯೆಗೆ ಎಸ್‌ಎಮ್‌ಎಸ್‌ ಕೋಡ್ ಅಗತ್ಯವಿಲ್ಲ. ಹಾಗೆಯೇ ಹೆಚ್ಚುವರಿ ಸಂವಾದಾತ್ಮಕ ಎಮೋಜಿ ಆಯ್ಕೆಗಳನ್ನು ಸಹ ವಾರ್ಷಿಕ ಪ್ರೀಮಿಯಂ ಚಂದಾದಾರಿಕೆ ಇರುವವರಿಗೆ ನೀಡಲಾಗಿದೆ.

ಟೆಲಿಗ್ರಾಮ್‌ನಲ್ಲಿ ವಾಟ್ಸಾಪ್‌ ಅನ್ನೇ ಮೀರಿಸುವ ಫೀಚರ್ಸ್‌!

ಟೆಲಿಗ್ರಾಮ್‌ನಲ್ಲಿರುವ ಈ ಆಯ್ಕೆ ವಾಟ್ಸಾಪ್‌ಗಿಂತ ಭಿನ್ನ!

ಟೆಲಿಗ್ರಾಮ್‌ ಇತ್ತೀಚೆಗೆ ಆಟೋ ಡಿಲೀಟ್‌ ಫೀಚರ್ಸ್‌ ಅನ್ನು ಸಹ ಪರಿಚಯಿಸಿದ್ದು, ಇದು ಸಾಕಷ್ಟು ಯಶಸ್ಸು ಕಂಡಿದೆ. ಇದು ವಾಟ್ಸಾಪ್‌ಗಿಂತ ಬಹಳ ವಿಭಿನ್ನವಾಗಿ ಕೆಲಸ ಮಾಡಲಿದ್ದು, ಬಳಕೆದಾರರಿಗೆ ಇದರಿಂದ ಸಾಕಷ್ಟು ಅನುಕೂಲ ಪಡೆದಿದ್ದಾರೆ ಎಂದೇ ಹೇಳಬಹುದು. ಈ ಫೀಚರ್ಸ್‌ ಮೂಲಕ ಬಳಕೆದಾರರು ಟೆಲಿಗ್ರಾಮ್‌ನಲ್ಲಿರುವ ಎಲ್ಲಾ ಚಾಟ್‌ಗಳನ್ನು ಆಟೋ ಡಿಲೀಟ್‌ ಮಾಡಬಹುದಾಗಿದೆ. ಅಂದರೆ ಇದಕ್ಕಾಗಿ ಬಳಕೆದಾರರು ಡಿಲೀಟ್‌ ಟೈಮರ್ ಅನ್ನು ಸೆಟ್‌ ಮಾಡುವ ಅವಕಾಶವನ್ನು ಟೆಲಿಗ್ರಾಮ್ ನೀಡಿದೆ. ಇದರಿಂದಾಗಿ ಭಾರೀ ಸಂಖ್ಯೆಯಲ್ಲಿ ಬರುವ ಮೆಸೆಜ್‌ಗಳನ್ನು ಡಿಲೀಟ್‌ ಮಾಡುವ ತಲೆನೋವು ತಪ್ಪಿದಂತಾಗುತ್ತದೆ.

Best Mobiles in India

English summary
New features have been introduced in leading messaging platform Telegram. In this, translation features, profile picture maker features are special.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X