ಪ್ರೀಮಿಯಂ ಚಂದಾದಾರರಿಗೆ ಮಾಸಿಕ ಶುಲ್ಕದಲ್ಲಿ ಕಡಿತಗೊಳಿಸಿದ ಟೆಲಿಗ್ರಾಮ್!

|

ಟೆಲಿಗ್ರಾಮ್‌ ಇತ್ತೀಚೆಗೆ ವೇಗವಾಗಿ ಬೆಳೆಯುತ್ತಿರುವ ಸಾಮಾಜಿಕ ಮಾಧ್ಯಮವಾಗಿದೆ, ವಾಟ್ಸಾಪ್‌ಗೆ ಪ್ರತಿಸ್ಫರ್ಧಿಯಾಗಿರುವ ಟೆಲಿಗ್ರಾಮ್ ಭಾರತದಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ. ಈಗಾಗಲೇ ಟೆಲಿಗ್ರಾಮ್‌ ಆಪ್‌ನಲ್ಲಿ ಹಲವಾರು ಆಕರ್ಷಕ ಫೀಚರ್ಸ್‌ ನೀಡಲಾಗಿದ್ದು, ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಕಂಪೆನಿ ಭಾರತೀಯ ಬಳಕೆದಾರರಿಗೆ ಹತ್ತಿರವಾಗಲಿದೆ. ಅದೂ ಸಹ ಚಂದಾದಾರಿಕೆ ಶುಲ್ಕವನ್ನು ಕಡಿಮೆ ಮಾಡುವ ಮೂಲಕ.

ಟೆಲಿಗ್ರಾಮ್‌

ಹೌದು, ಟೆಲಿಗ್ರಾಮ್‌ ಭಾರತೀಯ ಬಳಕೆದಾರರಿಗೆ ಮಾಸಿಕ ಶುಲ್ಕದಲ್ಲಿ ಹೆಚ್ಚಿನ ಡಿಸ್ಕೌಂಟ್‌ ನೀಡಿದೆ. ಎನ್‌ಕ್ರಿಪ್ಟೆಡ್‌ ಮೆಸೇಜಿಂಗ್‌ ಸೇವೆಗೆ ರಿಯಾಯಿತಿ ನೀಡಲಾಗಿದ್ದು, ಭಾರತೀಯ ಬಳಕೆದಾರರು ತಿಂಗಳಿಗೆ ಈಗ ಕೇವಲ 179 ರೂ.ಗಳನ್ನು ಮಾತ್ರ ಪಾವತಿಸಬೇಕಿದೆ. ಮಾಸಿಕ ದರ ಈ ಮೊದಲು 469ರೂ.ಇತ್ತು. ಇದರಿಂದ ಹೆಚ್ಚಿನ ಬಳಕೆದಾರರನ್ನು ಆಕರ್ಷಿಸಲು ಸಾಧ್ಯವಾಗದ ಕಾರಣ ಈ ನಿಯಮ ಅನುಸರಿಸಿದೆ.

ಭಾರತದಲ್ಲಿ 120 ಮಿಲಿಯನ್‌ ಗ್ರಾಹಕರು

ಭಾರತದಲ್ಲಿ 120 ಮಿಲಿಯನ್‌ ಗ್ರಾಹಕರು

ಭಾರತದಲ್ಲಿ ಶರವೇಗದಲ್ಲಿ ಮುನ್ನುಗುತ್ತಿರುವ ವಾಟ್ಸಾಪ್‌ಗೆ ಪೈಪೋಟಿ ನೀಡಲು ಟೆಲಿಗ್ರಾಮ್‌ ಈ ನಿರ್ಧಾರ ಪ್ರಕಟಿಸಿದೆ ಎನ್ನಲಾಗಿದೆ. ವಿಶ್ವದಾದ್ಯಂತ ಟೆಲಿಗ್ರಾಮ್‌ 700 ಮಿಲಿಯನ್‌ಗಿಂತಲೂ ಹೆಚ್ಚಿನ ಮಾಸಿಕ ಸಕ್ರಿಯ ಬಳಕೆದಾರರನ್ನು ಪಡೆದುಕೊಂಡಿದ್ದು, ಪ್ರಮುಖ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್‌ ಮಾರುಕಟ್ಟೆಯಲ್ಲಿ ಒಂದಾಗಿದೆ. ಆದರೆ, ವಾಟ್ಸಾಪ್‌ ಈಗಾಗಲೇ ಭಾರತದಲ್ಲಿ 500 ಮಿಲಿಯನ್‌ ಗ್ರಾಹಕರನ್ನು ಪಡೆದಿದ್ದು, ಈ 500 ಮಿಲಿಯನ್‌ ವಾಟ್ಸಾಪ್‌ ಬಳಕೆದಾರರನ್ನು ಹಿಂದಿಕ್ಕಲು ಟೆಲಿಗ್ರಾಮ್‌ ಮುಂದಾಗಿದೆ. ಅದರಂತೆ ಭಾರತದಲ್ಲಿ ಭದ್ರ ನೆಲೆ ಕಂಡುಕೊಂಡಿರುವ ಟೆಲಿಗ್ರಾಮ್‌ 120 ಮಿಲಿಯನ್‌ಗಿಂತಲೂ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಪಡೆದುಕೊಂಡಿದೆ.

techARC

ಈ ಸಂಬಂಧ techARC ಅಧ್ಯಯನ ವರದಿ ನೀಡಿದೆ. ಇದರಲ್ಲಿ ಐದು ಭಾರತೀಯ ಪ್ರತಿಸ್ಪಂಧಕರು ವಾಟ್ಸಾಪ್‌ಗಿಂತ ಹೆಚ್ಚನದಾಗಿ ಟೆಲಿಗ್ರಾಮ್ ಕಡೆಗೇ ಮುಖ ಮಾಡುತ್ತಾರೆ ಎಂದು ತಿಳಿಸಿದೆ. ಇದಕ್ಕೆ ಕಾರಣವನ್ನೂ ತಿಳಿಸಿರುವ techARC, ಟೆಲಿಗ್ರಾಮ್‌ ಸೆಕ್ಯೂರ್‌ ಸಂದೇಶಗಳ ಜೊತೆಗೆ ಚಾನಲ್‌, ದೊಡ್ಡ ಮಟ್ಟದ ಗ್ರೂಫ್‌ ರಚನೆ, ದೊಡ್ಡ ಫೈಲ್‌ಗಳ ರವಾನೆಗಳ ಫೀಚರ್ಸ್‌ ಇರುವುದರಿಂದ ಇದನ್ನು ಹೆಚ್ಚಾಗಿ ಬಳಸಲು ಮುಂದಾಗಿದ್ದಾರೆ ಎಂದು ಉಲ್ಲೇಖಿಸಿದೆ. ಅಷ್ಟೇ ಅಲ್ಲದೆ ಇದಕ್ಕೆ ನಿದರ್ಶನ ಎಂಬಂತೆ ಈ ಸಮೀಕ್ಷೆಯಲ್ಲಿ ಭಾಗಿಯಾದವರಲ್ಲಿ 32 % ಜನರು ಸೂಕ್ಷ್ಮ ಸಂದೇಶಗಳನ್ನು ಕಳುಹಿಸಲು ಟೆಲಿಗ್ರಾಮ್‌ ಬಳಕೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಕಳೆದ ತಿಂಗಳಷ್ಟೇ ಅಪ್‌ಡೇಟ್‌ ಆಗಿತ್ತು

ಕಳೆದ ತಿಂಗಳಷ್ಟೇ ಅಪ್‌ಡೇಟ್‌ ಆಗಿತ್ತು

ಹೌದು, ಕಳೆದ ತಿಂಗಳು ಪ್ರೀಮಿಯಂ ಟೆಲಿಗ್ರಾಮ್‌ ಚಂದಾದಾರರಿಗೆ ಹೆಚ್ಚಿನ ಮೋಜನ್ನು ನೀಡಲು ಉಚಿತ ಎಮೋಜಿಗಳ ಆಯ್ಕೆಯನ್ನು ನೀಡಲಾಗಿತ್ತು. ಈ ಮೂಲಕ ಬಳಕೆದಾರರು ತಮ್ಮ ಭಾವನೆಗಳನ್ನು ತೋರ್ಪಡಿಸಿಕೊಳ್ಳಬಹುದಾಗಿದೆ. ಇದು ಇನ್ನಷ್ಟು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ ಮಿತಿಯಿಲ್ಲದ ಎಮೋಜಿಗಳನ್ನು ಬಳಕೆ ಮಾಡುವ ಅವಕಾಶ ನೀಡಲಾಗಿರುವುದರಿಂದ ಬಳಕೆದಾರರು ಹೆಚ್ಚಾಗಿ ಆಕರ್ಷಿತರಾಗುತ್ತಿದ್ದಾರೆ.

ಕಸ್ಟಮ್‌

ಇದರೊಂದಿಗೆ ಗ್ರೂಫ್‌ಗಳಲ್ಲಿ ಕಸ್ಟಮ್‌ ಪ್ರತಿಕ್ರಿಯೆ ಎಂಬ ಹೊಸ ಆಯ್ಕೆಯನ್ನೂ ಸಹ ಟೆಲಿಗ್ರಾಮ್‌ ನೀಡಿದೆ. ಈ ಮೂಲಕ ಗ್ರೂಫ್‌ ನ ಅಡ್ಮಿನ್‌ ಕಸ್ಟಮ್‌ ಪ್ರತಿಕ್ರಿಯೆಯನ್ನು ಅನುಮತಿಸಬೇಕೆ? ಅಥವಾ ಬೇಡವೇ ಎಂಬ ಬಗ್ಗೆ ನಿರ್ಧಾರ ಮಾಡಬಹುದಾಗಿದೆ. ಈ ಫೀಚರ್ಸ್‌ ಮೂಲಕ ಗ್ರೂಫ್‌ಗಳಲ್ಲಿ ನಡೆಯುವ ಚಟುವಟಿಗಳ ಮೇಲೆ ಅಡ್ಮಿನ್‌ ನಿಗಾ ಇಡಬಹುದಾಗಿದೆ.

ಎಮೋಜಿ

ಈಗ ಮತ್ತೆ ಅನಿಮಮೇಟೆಡ್‌ ಎಮೋಜಿ ಸ್ಟೇಟಸ್‌ ಆಯ್ಕೆಯನ್ನೂ ಸಹ ನೀಡಲಾಗಿದ್ದು, ಪ್ರೀಮಿಯಂ ಸದಸ್ಯರು ತಮ್ಮ ಭಾವನೆಗಳು, ಅಥವಾ ಇನ್ನಿತರೆ ಮಾಹಿತಿಯನ್ನು ತಕ್ಷಣಕ್ಕೆ ಇತರರಿಗೆ ತಿಳಿಯುವಂತೆ ಮಾಡಬಹುದಾಗಿದೆ. ಇದೂ ಸಹ ವಾಟ್ಸಾಪ್‌ ಹಾಗೂ ಫೇಸ್‌ಬುಕ್‌ ಸ್ಟೇಟಸ್‌ಗಳಂತೆ ಇದ್ದು, ಬಳಕೆದಾರರ ಸಕ್ರಿಯ ಸ್ಥಿತಿಯನ್ನು ಈ ಮೂಲಕ ತಿಳಿಸಬಹುದಾಗಿದೆ. ಇನ್ನು ಭಾರತವನ್ನು ಹೊರತುಪಡಿಸಿ ಟೆಲಿಗ್ರಾಮ್‌ನ ಜಾಗತಿಕ ಚಂದಾದಾರಿಕೆಯು ಮಾಸಿಕವಾಗಿ $4.99(408ರೂ. ಗಳು) ರಿಂದ $6 (490ರೂ. ಗಳು) ಡಾಲರ್‌ ಇದೆ.

Best Mobiles in India

English summary
Telegram a competitor to WhatsApp, has been attracting customers in India. Now Telegram has reduced the monthly plan.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X