ವಾಟ್ಸಾಪ್‌ಗೆ ಸೆಡ್ಡು ಹೊಡೆಯಲು ಟೆಲಿಗ್ರಾಮ್‌ನಿಂದ ಹೊಸ ಫೀಚರ್ಸ್‌ ಬಿಡುಗಡೆ!

|

ಜನಪ್ರಿಯ ಇನ್ಸಟಂಟ್‌ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಗಳಲ್ಲಿ ಒಂದಾದ ಟೆಲಿಗ್ರಾಮ್‌ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ. ಕಾಲಕಾಲಕ್ಕೆ ತಕ್ಕಂತೆ ಹೊಸ ಆಪ್ಡೇಟ್‌ಗಳನ್ನು ನೀಡುತ್ತಿರುವ ಟೆಲಿಗ್ರಾಮ್‌ ತನ್ನ ಬೀಟಾ ಅಪ್ಲಿಕೇಶನ್‌ನಲ್ಲಿ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಸದ್ಯ ಈ ಹೊಸ ಫೀಚರ್ಸ್‌ ಮೂಲಕ ಬಳಕೆದಾರರು ವೀಡಿಯೊ ಕರೆ ಮಾಡುವ ಅವಕಾಶವನ್ನು ಸಹ ನೀಡಿದೆ ಎಂದು ಹೇಳಲಾಗ್ತಿದೆ. ಈ ಮೂಲಕ ತನ್ನ ಪ್ರತಿಸ್ಪರ್ಧಿ ವಾಟ್ಸಾಪ್‌ಗೆ ಸೆಡ್ಡು ಹೊಡೆಯಲು ಟೆಲಿಗ್ರಾಮ್ ತಯಾರಿ ನಡೆಸಿದೆ.

ಟೆಲಿಗ್ರಾಮ್‌

ಹೌದು, ಟೆಲಿಗ್ರಾಮ್‌ ತನ್ನ ಬಳಕೆದಾರರಿಗೆ ವೀಡಿಯೋ ಕರೆ ಬೆಂಬಲಿಸುವ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಸದ್ಯ ಈ ಹೊಸ ಫೀಚರ್ಸ್‌ ಅನ್ನು ಬೀಟಾ ವರ್ಷನ್‌ನಲ್ಲಿ ಮಾತ್ರ ಪರಿಚಯಿಸಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ. ಇನ್ನು ನೀವು ಮೈಕ್ರೋಸಾಫ್ಟ್‌ನ ಆಪ್ ಸೆಂಟರ್ ಪ್ಲಾಟ್‌ಫಾರ್ಮ್‌ನಿಂದ ಆವೃತ್ತಿ 0.7 ಬೀಟಾ ಅಥವಾ ಅಪ್ಲಿಕೇಶನ್‌ನ ಅನ್ನು ಹೊಸದಾಗಿ ಡೌನ್‌ಲೋಡ್ ಮಾಡಿದರೆ ಈ ಫೀಚರ್ಸ್‌ ಲಭ್ಯವಾಗಲಿದೆ. ಇನ್ನು ಈ ಹೊಸ ಫೀಚರ್ಸ್‌ ಆರಂಭಿಕ ಹಂತದಲ್ಲಿದ್ದರೂ, ಟೆಲಿಗ್ರಾಮ್ ತನ್ನ ಪ್ರತಿಸ್ಪರ್ಧಿಗಳಾದ ವಾಟ್ಸಾಪ್ ಮತ್ತು ವೈಬರ್ ಗೆ ಸ್ಪರ್ಧೆ ನಿಡಲು ತಯಾರಿ ನಡೆಸಿದೆ. ಇನ್ನುಳಿದಂತೆ ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಟೆಲಿಗ್ರಾಮ್

ಇನ್ನು ಟೆಲಿಗ್ರಾಮ್ ಈಗಾಗಲೇ ತನ್ನ ಬಳಕೆದಾರರಿಗೆ ವಾಯ್ಸ್‌ ಕರೆಗಳನ್ನ ಬೆಂಬಲಿಸುವ ಫಿಚರ್ಸ್‌ ಪರಿಚಯಿಸಿ ನಾಲ್ಕು ವರ್ಷಗಳಾಗಿವೆ, ಆದರು ಇಲ್ಲಿಯವರೆಗೂ ವೀಡಿಯೋ ಕರೆ ಫೀಚರ್ಸ್‌ ಪರಿಚಯಿಸಿರಲಿಲ್ಲ. ಆದರೆ ಇದೀಗ ಅಂತಿಮವಾಗಿ ವೀಡಿಯೊ ಕರೆ ಫೀಚರ್ಸ್‌ ಅನ್ನು ಬಿಡುಗಡೆ ಮಾಡಿದೆ. ಆದರೆ ಇದು ಸದ್ಯ ಕೇವಲ ಬೀಟಾ ಬಳಕೆದಾರರಿಗೆ ಮಾತ್ರ ಲಬ್ಯವಾಗಲಿದೆ.ಎಲ್ಲಾ ಬಳಕೆದಾರರಿಗೆ ಲಭ್ಯವಾಗಲು ಈ ಫೀಚರ್ಸ್‌ ಅನ್ನು ಇನ್ನು ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷಿಸಬೇಕು ಇದಕ್ಕಾಗಿ ಇದನ್ನು ಪರೀಕ್ಷಿಸಲು ಟೆಲಿಗ್ರಾಮ್ ಬೀಟಾ ಪ್ರೋಗ್ರಾಂಗೆ ಸೇರಬೇಕು ಎನ್ನಲಾಗಿದೆ.

ಟೆಲಿಗ್ರಾಮ್

ಇದಲ್ಲದೆ ಟೆಲಿಗ್ರಾಮ್ ಸ್ವತಂತ್ರ ಟೆಲಿಗ್ರಾಮ್ ಅಥವಾ ಟೆಲಿಗ್ರಾಮ್ ಎಕ್ಸ್ ಅಪ್ಲಿಕೇಶನ್‌ಗಳ ಜೊತೆಗೆ ಸ್ಥಾಪಿಸಲಾದ ಸ್ವತಂತ್ರ ಬೀಟಾ ಆಪ್‌ಗಳನ್ನು ಬಿಡುಗಡೆ ಮಾಡುತ್ತಿದೆ. ದೃಡೀಕರಣ ಪ್ರಕ್ರಿಯೆಯು ಪೂರ್ಣಗೊಂಡ ನಂತರ, ಕಂಟ್ಯಾಕ್ಟ್‌ ಲೀಸ್ಟ್‌ನಲ್ಲಿರುವ ಜನರಿಗೆ ಮಾತ್ರ ನೀವು ವೀಡಿಯೊ ಕರೆ ಮಾಡಲು ಸಾಧ್ಯವಾಗುತ್ತದೆ. ಆದೂ ಕೂಡ ನೀವು ಸಂಪರ್ಕಿಸುವ ಬಳಕೆದಾರರು ಬೀಟಾ 7 ವರ್ಷನ್‌ ಹೊಂದಿದ್ದರೆ ಮಾತ್ರ ಸಾಧ್ಯವಾಗಲಿದೆ. ಇದಲ್ಲದೆ ಟೆಲಿಗ್ರಾಮ್ ವೀಡಿಯೊ ಕರೆ ಇಂಟರ್ಫೇಸ್ ಇತರ ಪ್ಲಾಟ್‌ಫಾರ್ಮ್‌ಗಳು ನೀಡುವಂತೆಯೇ ಇರುತ್ತದೆ. ರಿಯರ್‌ ಮತ್ತು ಸೆಲ್ಫಿ ಕ್ಯಾಮೆರಾಗಳ ನಡುವೆ ತಿರುಗಿಸಲು, ವೀಡಿಯೊ ಬಟನ್ ಆಫ್ / ಆಫ್ ಮಾಡಲು, ಮ್ಯೂಟ್ ಮಾಡಲು ಮತ್ತು ಬಟನ್ ಸ್ಥಗಿತಗೊಳಿಸಲು ಇದು ಆನ್-ಸ್ಕ್ರೀನ್ ಬಟನ್ ಅನ್ನು ಸಹ ಹೊಂದಿದೆ.

ಅಪ್ಲಿಕೇಶನ್

ಇನ್ನು ಸಣ್ಣ ವಿಂಡೋದಲ್ಲಿ ಭಾಗವಹಿಸುವವರನ್ನು ದೊಡ್ಡ ವಿಂಡೋದಲ್ಲಿ ಸರಳ ಟ್ಯಾಪ್ ಮೂಲಕ ಬದಲಾಯಿಸಬಹುದಾಗಿದೆ. ಇದಲ್ಲದೆ ಪಿಕ್ಚರ್-ಇನ್-ಪಿಕ್ಚರ್ (ಪಿಐಪಿ) ಮೋಡ್ ಸಹ ಸ್ವಲ್ಪ ಟ್ರಿಕಿ ಆಗಿದೆ. ಅದನ್ನು ಕೆಲಸ ಮಾಡಲು, ಮೇಲಿನ ಎಡಭಾಗದಲ್ಲಿರುವ ಹಿಂದಿನ ಬಾಣದ ಗುರುತನ್ನು ಟ್ಯಾಪ್ ಮಾಡಬೇಕಾಗುತ್ತದೆ. ಈ ಕ್ರಿಯೆಯು "ಪಿಕ್ಚರ್-ಇನ್-ಪಿಕ್ಚರ್ ಮೋಡ್‌ನಲ್ಲಿ ವೀಡಿಯೊಗಳನ್ನು ಪ್ಲೇ ಮಾಡಲು ಇತರ ಅಪ್ಲಿಕೇಶನ್‌ಗಳ ಮೇಲೆ ಸೆಳೆಯಲು" ಅನುಮತಿ ಕೇಳುವ ಪಾಪ್-ಅಪ್ ಅನ್ನು ಅನುಮತಿಸುತ್ತದೆ. ಅಲ್ಲದೆ, ಅಪ್ಲಿಕೇಶನ್‌ಗೆ ಅನುಮತಿ ದೊರೆತ ನಂತರ, ಮೇಲಿನ ಎಡಭಾಗದಲ್ಲಿ ಹಿಂದಿನ ಬಾಣವನ್ನು ಟ್ಯಾಪ್ ಮಾಡಿ ಅಥವಾ ಹಿಂದಿನ ಗೆಸ್ಚರ್ ಪಿಪಿ ಮೋಡ್ ಅನ್ನು ಅನುಮತಿಸುತ್ತದೆ.

Best Mobiles in India

English summary
The Telegram video calling feature is reportedly still buggy and needs a lot of refinement.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X