ಟೆಲಿಗ್ರಾಮ್‌ ಪ್ರೀಮಿಯಂನಲ್ಲಿದೆ ವಾಟ್ಸಾಪ್‌ನಲ್ಲಿಯೂ ಇಲ್ಲದ ಅಚ್ಚರಿಯ ಫೀಚರ್ಸ್‌!

|

ಟೆಲಿಗ್ರಾಮ್‌ ಅಪ್ಲಿಕೇಶನ್‌ ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಈಗಾಗಲೇ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿ ಮೆಟಾ ಒಡೆತನದ ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್‌ಗೆ ಪ್ರಬಲ ಪೈಪೋಟಿ ನೀಡುತ್ತಿದೆ. ವಾಟ್ಸಾಪ್‌ನ ಜನಪ್ರಿಯತೆಯನ್ನು ಹಿಂದಿಕ್ಕುವ ಪ್ರಯತ್ನದಲ್ಲಿ ಟೆಲಿಗ್ರಾಮ್‌ ಹೆಚ್ಚು ಹೆಚ್ಚು ಹೊಸ ಫೀಚರ್ಸ್‌ಗಳನ್ನು ಬಳಕೆದಾರರಿಗೆ ನೀಡುತ್ತಾ ಬಂದಿದೆ. ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸದಾಗಿ ಪ್ರೀಮಿಯಂ ಸೇವೆಗಳನ್ನು ಪರಿಚಯಿಸಿದೆ. ಅದರಲ್ಲೂ ಟೆಲಿಗ್ರಾಮ್‌ ಪ್ರೀಮಿಯಂನಲ್ಲಿರುವ ಒಂದು ಫೀಚರ್ಸ್‌ ವಾಟ್ಸಾಪ್‌ನಲ್ಲಿ ಕೂಡ ಲಭ್ಯವಿಲ್ಲ ಎಂದು ಹೇಳಲಾಗಿದೆ.

ಟೆಲಿಗ್ರಾಮ್‌

ಹೌದು, ಟೆಲಿಗ್ರಾಮ್‌ ಅಪ್ಲಿಕೇಶನ್‌ ಅಂತಿಮವಾಗಿ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಪ್ರೀಮಿಯಂ ಸೇವೆಗಳನ್ನು ಪ್ರಾರಂಭಿಸಿದೆ. ಪ್ರೀಮಿಯಂ ಸೇವೆಯನ್ನು ಚಂದಾದಾರಿಕೆ ಪ್ಲಾನ್‌ಗಳ ಮೂಲಕ ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ಸಾಮಾನ್ಯ ಬಳಕೆದಾರರಿಗಿಂತ ಪ್ರೀಮಿಯಂ ಬಳಕೆದಾರರು ಹೆಚ್ಚುವರಿ ಫೀಚರ್ಸ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಪ್ರೀಮಿಯಂ ಅಲ್ಲದ ಬಳಕೆದಾರರಿಗೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಆದರೆ ಹೆಚ್ಚುವರಿ ಫೀಚರ್ಸ್‌ ಬಯಸುವ ಬಳಕೆದಾರರು ಟೆಲಿಗ್ರಾಮ್‌ ಪ್ರೀಮಿಯಂ ಆವೃತ್ತಿಯನ್ನು ಹಣ ಪಾವತಿಸುವ ಮೂಲಕ ಪಡೆದುಕೊಳ್ಳಬೇಕಾಗುತ್ತದೆ.

ಟೆಲಿಗ್ರಾಮ್‌

ಇನ್ನು ಟೆಲಿಗ್ರಾಮ್‌ ಪರಿಚಯಿಸಿರುವ ಹೊಸ ಪ್ರೀಮಿಯಂ ಸೇವೆಯಲ್ಲಿ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಕಾಣಬಹುದಾಗಿದೆ. ಇದರಲ್ಲಿ 4GB ಫೈಲ್ ಅಪ್‌ಲೋಡ್‌, ವೇಗವಾದ ಡೌನ್‌ಲೋಡ್‌, ವಿಶೇಷ ಸ್ಟಿಕ್ಕರ್‌ಗಳು ಮತ್ತು ರಿಯಾಕ್ಷನ್‌, ಸುಧಾರಿತ ಚಾಟ್ ನಿರ್ವಹಣೆ ಸೇರಿದಂತೆ ಹೆಚ್ಚಿನ ಫೀಚರ್ಸ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಟೆಲಿಗ್ರಾಮ್ ಪ್ರೀಮಿಯಂ ಅಲ್ಲದ ಬಳಕೆದಾರರಿಗೆ ಕೆಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಅನುಮತಿಸುವುದಕ್ಕೆ ಅವಕಾಶವನ್ನು ಕೂಡ ನೀಡಿದೆ. ಹಾಗಾದ್ರೆ ಟೆಲಿಗ್ರಾಮ್‌ನ ಹೊಸ ಪ್ರೀಮಿಯಂ ಸೇವೆಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟೆಲಿಗ್ರಾಮ್‌

ಟೆಲಿಗ್ರಾಮ್‌ ತನ್ನ ಪ್ರೀಮಿಯಂ ಸೇವೆಯ ಮೂಲಕ ಹಣ ಗಳಿಸುವುದಕ್ಕೆ ಮುಂದಾಗಿದೆ. ಪ್ರಸ್ತುತ 70 ಕೋಟಿ ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿರುವ ಟೆಲಿಗ್ರಾಮ್‌ ಹೊಸ ಪ್ರೀಮಿಯಂ ಸೇವೆಯ ಮೂಲಕ ಹೊಸ ಹೆಜ್ಜೆ ಇಟ್ಟಿದೆ. ಇದರ ಪ್ರೀಮಿಯಂ ಸೇವೆಯು $4.99 (ಅಂದಾಜು 390ರೂ) ರಿಂದ $6 (ಅಂದಾಜು 470ರೂ) ವರೆಗೆ ಇರಲಿದೆ ಎಂದು ಟೆಕ್ಕ್ರಂಚ್‌ ವರದಿ ಮಾಡಿದೆ. ಈ ಹೊಸ ಸೇವೆಯ ಮೂಲಕ ಪ್ರತಿಯೊಂದರಲ್ಲೂ 200 ಚಾಟ್‌ಗಳೊಂದಿಗೆ 20 ಚಾಟ್ ಫೋಲ್ಡರ್‌ಗಳನ್ನು ಕ್ರಿಯೆಟ್‌ ಮಾಡುವ ಅವಕಾಶವನ್ನು ನೀಡಿದೆ. ಇದಲ್ಲದೆ ಅಪ್ಲಿಕೇಶನ್‌ನಲ್ಲಿ ನಾಲ್ಕು ಖಾತೆಗಳನ್ನು ಸೇರಿಸುವುದು ಮತ್ತು 10 ಚಾಟ್‌ಗಳನ್ನು ಪಿನ್ ಮಾಡುವ ಫೀಚರ್ಸ್‌ಗಳನ್ನು ಕೂಡ ನೀಡಲಾಗಿದೆ.

ಟೆಲಿಗ್ರಾಮ್ ಪ್ರೀಮಿಯಂನಲ್ಲಿರುವ ಹೊಸ ಫೀಚರ್ಸ್‌ಗಳು!

ಟೆಲಿಗ್ರಾಮ್ ಪ್ರೀಮಿಯಂನಲ್ಲಿರುವ ಹೊಸ ಫೀಚರ್ಸ್‌ಗಳು!

4GB ಅಪ್‌ಲೋಡ್‌
ಟೆಲಿಗ್ರಾಮ್‌ನಲ್ಲಿ ಸಾಮಾನ್ಯ ಬಳಕೆದಾರರು ಇದೀಗ 2GB ಗಾತ್ರದ ಫೈಲ್‌ಗಳನ್ನು ಅಪ್‌ಲೋಡ್ ಮಾಡಬಹದಾಗಿದೆ. ಆದರೆ ನೀವು ಟೆಲಿಗ್ರಾಮ್‌ ಪ್ರೀಮಿಯಂ ಸೇವೆಯನ್ನು ಪಡೆದುಕೊಂಡರೆ 4GB ಗಾತ್ರದ ಫೈಲ್‌ಗಳನ್ನು ಸುಲಭವಾಗಿ ಅಪ್‌ಲೋಡ್‌ ಮಾಡಬಹುದಾಗಿದೆ. ಅಂದರೆ 4 ಗಂಟೆಗಳ 1080p ವೀಡಿಯೊ ಅಥವಾ 18 ದಿನಗಳ ಉತ್ತಮ ಗುಣಮಟ್ಟದ ಆಡಿಯೊಗೆ ಸಾಕಷ್ಟು ಸ್ಥಳಾವಕಾಶವನ್ನು ನೀಡಲಿದೆ. ಇದರಿಂದ ನೀವು ಹೆಚ್ಚುವರಿ ದೊಡ್ಡ ಡಾಕ್ಯುಮೆಂಟ್‌ಗಳನ್ನು ಕಳುಹಿಸಬಹುದಾಗಿದೆ. ಅಲ್ಲದೆ ಪ್ರೀಮಿಯಂ ಬಳಕೆದಾರರು ಕಳುಹಿಸಿದ ಫೈಲ್‌ಗಳನ್ನು ಪ್ರೀಮಿಯಂ ಮತ್ತು ಪ್ರೀಮಿಯಂ ಅಲ್ಲದ ಬಳಕೆದಾರರು ಕೂಡ ಡೌನ್‌ಲೋಡ್ ಮಾಡಬಹುದು.

ಫಾಸ್ಟರ್‌ ಡೌನ್‌ಲೋಡ್ ವೇಗ

ಫಾಸ್ಟರ್‌ ಡೌನ್‌ಲೋಡ್ ವೇಗ

ಟೆಲಿಗ್ರಾಮ್‌ ಪ್ರೀಮಿಯಂನ ಬಹುಮುಖ್ಯವಾದ ಫೀಚರ್ಸ್‌ಗಳಲ್ಲಿ ಫಾಸ್ಟರ್‌ ಡೌನ್‌ಲೋಡ್‌ ಸ್ಪೀಡ್‌ ಕೂಡ ಸೇರಿದೆ. ಇದರಿಂದ ನೀವು ಟೆಲಿಗ್ರಾಮ್‌ನಲ್ಲಿ ಯಾವುದೇ ಫೈಲ್‌ ಅಥವಾ ವೀಡಿಯೊಗಳನ್ನು ವೇಗವಾಗಿ ಡೌನ್‌ಲೋಡ್‌ ಮಾಡಲು ಸಾಧ್ಯವಾಗಲಿದೆ. ಪ್ರೀಮಿಯಂ ಚಂದಾದಾರರು ಮೀಡಿಯಾ ಮತ್ತು ಫೈಲ್‌ಗಳನ್ನು ಸಾಧ್ಯವಾದಷ್ಟು ವೇಗದಲ್ಲಿ ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಅನ್‌ಲಿಮಿಟೆಡ್‌ ಕ್ಲೌಡ್ ಸ್ಟೋರೇಜ್‌ನಲ್ಲಿ ನಿಮ್ಮ ನೆಟ್‌ವರ್ಕ್ ಎಷ್ಟು ವೇಗವಾಗಿ ಇರುತ್ತದೋ ಅಷ್ಟು ವೇಗವಾಗಿ ಫೈಲ್‌ಗಳನ್ನು ಡೌನ್‌ಲೋಡ್‌ ಮಾಡಲು ಸಾಧ್ಯವಾಗಲಿದೆ. ಇದರಿಂದ ಪ್ರೀಮಿಯಂ ಸೇವೆಯನ್ನು ಪಡೆದುಕೊಂಡವರು ಎಲ್ಲರಿಗಿಂತ ವೇಗವಾಗಿ ಫೈಲ್‌ಗಳನ್ನು ಡೌನ್‌ಲೋಡ್‌ ಮಾಡುವುದಕ್ಕೆ ಅವಕಾಶ ಸಿಗಲಿದೆ.

ದ್ವಿಗುಣಗೊಂಡ ಮಿತಿಗಳು(Doubled limits)

ದ್ವಿಗುಣಗೊಂಡ ಮಿತಿಗಳು(Doubled limits)

ಟೆಲಿಗ್ರಾಮ್ ಪ್ರೀಮಿಯಂ ಸೇವೆಯಲ್ಲಿ ನಿಮಗೆ ಲಭ್ಯವಾಗುವ ಮತ್ತೊಂದು ಉತ್ತಮ ಫೀಚರ್ಸ್‌ಗಳಲ್ಲಿ ದ್ವಿಗುಣಗೊಂಡ ಮಿತಿ ಒಂದಾಗಿದೆ. ಪ್ರೀಮಿಯಂ ಬಳಕೆದಾರರು ಅಪ್ಲಿಕೇಶನ್‌ನಲ್ಲಿ ಬಹುತೇಕ ಎಲ್ಲದಕ್ಕೂ ಹೆಚ್ಚಿನ ಮಿತಿಗಳನ್ನು ಪಡೆಯುತ್ತಾರೆ. ಅಂದರೆ ಟೆಲಿಗ್ರಾಮ್‌ ಪ್ರೀಮಿಯಂ ಚಂದಾದಾರರು 1000 ಚಾನಲ್‌ಗಳನ್ನು ಅನುಸರಿಸಬಹುದು, ತಲಾ 200 ಚಾಟ್‌ಗಳೊಂದಿಗೆ 20 ಚಾಟ್ ಫೋಲ್ಡರ್‌ಗಳನ್ನು ಕ್ರಿಯೆಟ್‌ ಮಾಡಬಹುದು. ಜೊತೆಗೆ ಯಾವುದೇ ಟೆಲಿಗ್ರಾಮ್ ಅಪ್ಲಿಕೇಶನ್‌ಗೆ ನಾಲ್ಕನೇ ಅಕೌಂಟ್‌ ಅನ್ನು ಸೇರಿಸುವ ಮೂಲಕ ಮೇನ್‌ ಲಿಸ್ಟ್‌ನಲ್ಲಿ 10 ಚಾಟ್‌ಗಳನ್ನು ಪಿನ್ ಮಾಡಬಹುದು. ಹಾಗೆಯೇ ನಿಮ್ಮ ನೆಚ್ಚಿನ 10 ಸ್ಟಿಕ್ಕರ್‌ಗಳನ್ನು ಸೇವ್‌ ಮಾಡಬಹುದಾಗಿದೆ.

ವಾಯ್ಸ್‌ ಟು ಕನ್ವರ್ಷನ್

ವಾಯ್ಸ್‌ ಟು ಕನ್ವರ್ಷನ್

ಟೆಲಿಗ್ರಾಮ್‌ ಪ್ರೀಮಿಯಂ ನಲ್ಲಿ ನೀವು ವಾಯ್ಸ್‌ ಟು ಕನ್ವರ್ಷನ್‌ ಫೀಚರ್ಸ್‌ ಅನ್ನು ಕೂಡ ಪಡೆದುಕೊಳ್ಳಬಹುದು. ನೀವು ಬಯಸಿದ ವಾಯ್ಸ್‌ ಮೆಸೇಜ್‌ಗಳನ್ನು ಟೆಕ್ಸ್ಟ್‌ ಮೆಸೇಜ್‌ಗಳಾಗಿ ಪರಿವರ್ತಿಸುವುದಕ್ಕೆ ಅವಕಾಶವಿದೆ. ಅಂದರೆ ವಾಯ್ಸ್‌ ಮೆಸೇಜ್‌ ಅನ್ನು ಟೆಕ್ಸ್ಟ್‌ ಆಗಿ ಕನ್ವರ್ಟ್‌ ಮಾಡಬಹುದು. ನೀವು ವಾಯ್ಸ್‌ ಮೆಸೇಜ್‌ಗಳನ್ನು ಕೇಳಲು ಆಗುವುದಿಲ್ಲ ಎಂದಾಗ ಈ ಫೀಚರ್ಸ್‌ ನಿಮಗೆ ಸಹಾಯ ಮಾಡಲಿದೆ. ಇದಲ್ಲದೆ ನೀವು ಕನ್ವರ್ಷನ್‌ ಮಾಡಿದ ನಂತರ ಅದನ್ನು ಇನ್ನಷ್ಟು ಅಪ್ಡೇಟ್‌ ಮಾಡುವುದಕ್ಕೆ ರೇಟಿಂಗ್‌ ಕೂಡ ನೀಡಬಹುದಾಗಿದೆ.

ಅನಿಮೇಟೆಡ್ ಪ್ರೊಫೈಲ್ ಪಿಕ್ಚರ್ಸ್‌

ಅನಿಮೇಟೆಡ್ ಪ್ರೊಫೈಲ್ ಪಿಕ್ಚರ್ಸ್‌

ಟೆಲಿಗ್ರಾಮ್‌ ಪ್ರೀಮಿಯಂನಲ್ಲಿ ಅನಿಮೇಟೆಡ್ ಪ್ರೊಫೈಲ್ ಚಿತ್ರಗಳು ಫೀಚರ್ಸ್‌ ಲಭ್ಯವಾಗಲಿದೆ. ಈ ಮಾದರಿಯ ಫೀಚರ್ಸ್‌ ಅನ್ನು ನೀವು ಯಾವುದೇ ಮೆಸೇಜಿಂಗ್‌ ಅಪ್ಲಿಕೇಶನ್‌ನಲ್ಲಿ ನೋಡುವುದಕ್ಕೆ ಸಾಧ್ಯವಿಲ್ಲ. ಈ ಫೀಚರ್ಸ್‌ ಮೂಲಕ ಪ್ರೀಮಿಯಂ ಬಳಕೆದಾರರು ತಮ್ಮ ಪ್ರೊಫೈಲ್‌ನಲ್ಲಿ ಪ್ರೊಫೈಲ್‌ ವೀಡಿಯೊಗಳನ್ನು ಚಾಟ್‌ಗಳು ಮತ್ತು ಚಾಟ್ ಲಿಸ್ಟ್‌ ಸೇರಿದಂತೆ ಅಪ್ಲಿಕೇಶನ್‌ನಲ್ಲಿ ಎಲ್ಲರಿಗೂ ಅನಿಮೇಟೆಡ್ ಮಾಡುವುದಕ್ಕೆ ಅವಕಾಶ ನೀಡಿದೆ. ಇದರಿಂದ ನಿಮ್ಮ ಪ್ರೊಫೈಲ್‌ನಲ್ಲಿ ಆನಿಮೇಟೆಡ್‌ ಪಿಕ್ಚರ್ಸ್‌ಗಳನ್ನು ಕಾಣುವುದಕ್ಕೆ ಸಾಧ್ಯವಾಗಲಿದೆ.

ಪ್ರೀಮಿಯಂ

ಇನ್ನು ಟೆಲಿಗ್ರಾಮ್‌ ಪರಿಚಯಿಸಿರುವ ಹೊಸ ಪ್ರೀಮಿಯಂ ಫೀಚರ್ಸ್‌ಗಳಲ್ಲಿ ಕೆಲವು ಫೀಚರ್ಸ್‌ಗಳು ಪ್ರೀಮಿಯಂ ಅಲ್ಲದ ಬಳಕೆದಾರರು ಕೂಡ ಪಡೆದುಕೊಳ್ಳಬಹುದಾಗಿದೆ. ಅಂದರೆ ಪ್ರೀಮಿಯಂ ಬಳಕೆದಾರರು ಕಳುಹಿಸಿದ ಹೆಚ್ಚುವರಿ-ದೊಡ್ಡ ದಾಖಲೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಹಾಗೆಯೇ ಪ್ರೀಮಿಯಂ ಬಳಕೆದಾರರು ಕಳುಹಿಸಿದ ಸ್ಟಿಕ್ಕರ್‌ಗಳನ್ನು ವೀಕ್ಷಿಸುವುದಕ್ಕೆ ಕೂಡ ಸಾಧ್ಯವಾಗಲಿದೆ.

Best Mobiles in India

Read more about:
English summary
telegram premium announced with ad-free experience and faster download speed

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X