ಟೆಲಿಗ್ರಾಮ್‌ನಲ್ಲಿ ಹೊಸ ಫೀಚರ್ಸ್‌; ಸೂಕ್ಷ್ಮ ಫೋಟೋ, ವಿಡಿಯೋ ಬ್ಲರ್‌ ಮಾಡಿ!

|

ಮೆಸೆಜಿಂಗ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಮುಖವಾಗಿರುವ ವಾಟ್ಸಾಪ್‌, ಮೆಸೆಂಜರ್‌ ಹಾಗೂ ಸಿಗ್ನಲ್‌ ನಂತೆಯೇ ಟೆಲಿಗ್ರಾಮ್‌ ಸಹ ಬಳಕೆದಾರರಿಗೆ ವಿಭಿನ್ನ ರೀತಿಯಲ್ಲಿ ಸೇವೆ ನೀಡುತ್ತಾ ಬರುತ್ತಿದೆ. ಇದರೊಂದಿಗೆ ಕಾಲಕಾಲಕ್ಕೆ ಟೆಲಿಗ್ರಾಮ್‌ನಲ್ಲಿ ಭಿನ್ನ ವಿಭಿನ್ನ ಫೀಚರ್ಸ್‌ ಲಭ್ಯವಿದ್ದು, ಈಗಾಗಲೇ ಲಭ್ಯ ಇರುವ ಸಾಕಷ್ಟು ಫೀಚರ್ಸ್‌ಗಳ ಜೊತೆಗೆ ಈಗ ಹೊಸದಾಗಿ ಘೋಷಣೆ ಮಾಡಲಾದ ಫೀಚರ್ಸ್‌ಗಳು ಇನ್ಮುಂದೆ ಬಳಕೆದಾರರಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲಿದೆ.

ದೀರ್ಘ

ಹೌದು, ದೀರ್ಘ ಫೈಲ್‌ಗಳು ಹಾಗೂ ದೊಡ್ಡ ಸದಸ್ಯರ ಗ್ರೂಪ್‌ ರಚನೆಗೆ ಟೆಲಿಗ್ರಾಮ್‌ ಹೆಸರಾಗಿದ್ದು, ಬಳಕೆದಾರರು ಅಗತ್ಯಕ್ಕೆ ತಕ್ಕಂತೆ ಈ ಆಪ್‌ ಬಳಕೆ ಮಾಡಿಕೊಂಡು ಬರುತ್ತಿದ್ದಾರೆ. ಇದರ ನಡುವೆ ಈಗ ಟೆಲಿಗ್ರಾಮ್‌ ಬಳಕೆದಾರರ ಅನುಭವವನ್ನು ಇನ್ನಷ್ಟು ಹೆಚ್ಚಿಗೆ ಮಾಡುವುದಕ್ಕೆ ಮುಂದಾಗಿದ್ದು, ಬ್ಲರ್ ಟೂಲ್‌ನೊಂದಿಗೆ ಮೀಡಿಯಾ ಎಡಿಟರ್ ಫೀಚರ್ಸ್‌ ಲಭ್ಯವಾಗಲಿದೆ. ಹಾಗಿದ್ರೆ, ಈ ಹೊಸ ಫೀಚರ್ಸ್‌ ಹೇಗೆ ಕೆಲಸ ಮಾಡಲಿದೆ?, ಇದರಿಂದ ಆಗುವ ಪ್ರಯೋಜನ ಏನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಬ್ಲರ್‌ ಆಯ್ಕೆ

ಬ್ಲರ್‌ ಆಯ್ಕೆ

ಎನ್‌ಕ್ರಿಪ್ಟ್ ಫೀಚರ್ಸ್‌ ಆಯ್ಕೆ ಇರುವ ಮೆಸೆಜಿಂಗ್ ಪ್ಲಾಟ್‌ಫಾರ್ಮ್ ಟೆಲಿಗ್ರಾಮ್‌ನ ಹೊಸ ಅಪ್‌ಡೇಟ್ ಇದಾಗಿದ್ದು, ಇನ್ಮುಂದೆ ಬಳಕೆದಾರರು ಚಿತ್ರ ಮತ್ತು ವಿಡಿಯೋಗಳ ಭಾಗಗಳನ್ನು ಹೈಡ್‌ ಮಾಡಲು ಅಥವಾ ಬ್ಲರ್‌ ಮಾಡಲು ಹೊಸ ಟೂಲ್ಸ್‌ ಆಯ್ಕೆ ನೀಡಲಾಗಿದೆ.

ಸೂಕ್ಷ್ಮ ವಿಷಯಗಳನ್ನು ಮರೆಮಾಡಬಹುದು

ಸೂಕ್ಷ್ಮ ವಿಷಯಗಳನ್ನು ಮರೆಮಾಡಬಹುದು

ಕೆಲವು ನೀತಿ ನಿಯಮಗಳ ಅನುಸಾರ ಸಾಮಾಜಿಕ ಜಾಲತಾಣಗಳಲ್ಲಿ ಸೂಕ್ಷ್ಮ ಮಾಹಿತಿಯನ್ನು ಇದ್ದ ಹಾಗೆಯೇ ತೋರಿಸಬಾರದು. ಇದನ್ನು ಮರೆಮಾಚಲೆಂದೇ ಹಲವಾರು ಪ್ಲಾಟ್‌ಫಾರ್ಮ್‌ಗಳು ಈ ಸಂಬಂಧ ಟೂಲ್ಸ್‌ಗಳನ್ನು ನೀಡಿದೆ. ಹಾಗೆಯೇ ಈಗ ಟೆಲಿಗ್ರಾಮ್‌ನಲ್ಲಿ ಈ ಹೊಸ ಸೌಲಭ್ಯ ಕಲ್ಪಿಸಲಾಗಿದ್ದು, ಅನಗತ್ಯ ಹಾಗೂ ಸೂಕ್ಷ್ಮ ವಿಷಯಗಳನ್ನು ಸುಲಭವಾಗಿ ಬ್ಲರ್‌ ಮಾಡಬಹುದಾಗಿದೆ.

 ಬ್ಲರ್‌ ಮಾಡಲು ಟೂಲ್ಸ್‌

ಬ್ಲರ್‌ ಮಾಡಲು ಟೂಲ್ಸ್‌

ಇನ್ನು ಸೂಕ್ಷ್ಮ ವಿಷಯವನ್ನು ಬ್ಲರ್‌ ಮಾಡಲು ಅಥವಾ ಇಮೇಜ್‌ಗೆ ಬ್ಲರ್ ಬ್ರಷ್‌ನ ಬಣ್ಣವನ್ನು ಹೊಂದಿಸಲು ಐಡ್ರಾಪರ್ ಟೂಲ್ಸ್‌ಗಳನ್ನು ಬಳಕೆ ಮಾಡಬಹುದು ಎಂದು ಟೆಲಿಗ್ರಾಮ್‌ ಮಾಹಿತಿ ನೀಡಿದೆ. ಹಾಗೆಯೇ ಚಿತ್ರಗಳು ಅಥವಾ ವಿಡಿಯೋಗಳಿಗೆ ಪಠ್ಯವನ್ನು ಸೇರಿಸುವಾಗ, ಪಠ್ಯದ ಗಾತ್ರ, ಫಾಂಟ್ ಮತ್ತು ಬ್ಯಾಕ್‌ಡ್ರಾಪ್ ಅನ್ನು ಹೊಂದಿಸುವ ಸಾಮರ್ಥ್ಯವನ್ನು ಟೆಲಿಗ್ರಾಮ್ ಈ ಫೀಚರ್ಸ್‌ ನಲ್ಲಿ ನೀಡಿದೆ.

ಎಡಿಟಿಂಗ್‌

ಎಡಿಟಿಂಗ್‌ ಆಯ್ಕೆಯಲ್ಲಿ ಪ್ಲಸ್ ಐಕಾನ್ ಅನ್ನು ಟ್ಯಾಪ್ ಮಾಡುವ ಮೂಲಕ ಆಯತಾಕಾರ, ಬಾಣದ ಆಕಾರ, ನಕ್ಷತ್ರದಾಕಾರ ಮತ್ತು ಚಾಟ್ ಬಬಲ್‌ಗಳಂತಹ ಆಕಾರಗಳನ್ನು ತ್ವರಿತವಾಗಿ ಸೇರಿಸಬಹುದಾಗಿದೆ. ಹಾಗೆಯೆ ಬ್ಲರ್ ಮಾಡಲಾಗುವ ಚಿತ್ರ ಅಥವಾ ವಿಡಿಯೋಗೆ ಮಿನುಗುವ ಲೇಯರ್ ಆಯ್ಕೆ ಇರುವ ಸ್ಪಾಯ್ಲರ್ ಎಫೆಕ್ಟ್‌ ಅನ್ನು ಸಹ ಬಳಕೆದಾರರು ಅನ್ವಯಿಸಬಹುದು ಎಂದು ಟೆಲಿಗ್ರಾಮ್‌ ತಿಳಿಸಿದೆ.

ಟೂಲ್ಸ್‌ಗಳ

ಈ ಇಮೇಜ್ ಎಡಿಟಿಂಗ್ ಟೂಲ್ಸ್‌ಗಳ ಹೊರತಾಗಿಯೂ ಹಲವು ಫೀಚರ್ಸ್‌ ಅನ್ನು ಟೆಲಿಗ್ರಾಮ್‌ ನೀಡಿದೆ. ಅದರಲ್ಲಿ ಸ್ಟೋರೇಜ್‌ ಆಯ್ಕೆಗೆ ಹೆಚ್ಚಿನ ಗಮನ ನೀಡಲಾಗಿದೆ.ಈ ಮೂಲಕ ಖಾಸಗಿ ಚಾಟ್‌ಗಳು, ಗ್ರೂಪ್‌ಗಳು ಮತ್ತು ಚಾನಲ್‌ಗಳಲ್ಲಿ ನೀವು ಆಯ್ಕೆ ಮಾಡಿದ ಚಾಟ್‌ಗಳನ್ನು ಹೊರತುಪಡಿಸಿ, ನಿರ್ದಿಷ್ಟ ಸಮಯದ ನಂತರ ಆಟೋಮ್ಯಾಟಿಕ್‌ ಆಗಿ ಸಂಗ್ರಹಿಸಲಾದ ಡೇಟಾವನ್ನು ಡಿಲೀಟ್ ಮಾಡಲಾಗುತ್ತದೆ.

ಫೀಚರ್ಸ್‌

ಈ ಫೀಚರ್ಸ್‌ ಮೂಲಕ ಬಳಕೆದಾರರು ಯಾವುದೇ ಸಮಯದಲ್ಲಿ ಟೆಲಿಗ್ರಾಮ್ ಕ್ಲೌಡ್‌ನಿಂದ ಈ ಫೈಲ್‌ಗಳನ್ನು ಮರು-ಡೌನ್‌ಲೋಡ್ ಮಾಡಬಹುದು. ಹಾಗೆಯೇ ವರ್ಷಗಳವರೆಗೆ ಬಳಕೆದಾರರು ಗರಿಷ್ಠ ಕ್ಯಾಶ್ ಗಾತ್ರವನ್ನು ಹೊಂದಿಸಬಹುದು ಅಥವಾ ನಿರ್ದಿಷ್ಟ ಸಮಯದ ನಂತರ ಬಳಕೆಯಾಗದ ಕಂಟೆಂಟ್‌ ಅನ್ನು ಆಟೋಮ್ಯಾಟಿಕ್‌ ಆಗಿ ಡಿಲೀಟ್‌ ಆಗುವಂತೆ ಮಾಡಬಹುದು.

ಅನಿಮೇಟೆಡ್

ಇದಿಷ್ಟೇ ಅಲ್ಲದೆ ನೀವು ಮಾತ್ರ ಸಂಪರ್ಕದಲ್ಲಿರುವ ಸಂಪರ್ಕಗಳಿಗಾಗಿ ಪ್ರೊಫೈಲ್ ಚಿತ್ರಗಳನ್ನು ಆಯ್ಕೆ ಮಾಡಲು ಅನುಮತಿಸಿದೆ. ಜೊತೆಗೆ ಅನಿಮೇಟೆಡ್ ಮತ್ತು ಸಂವಾದಾತ್ಮಕ ಎಮೋಜಿಗಳು ಆಯ್ಕೆ ಸಹ ನೀಡಲಾಗಿದ್ದು, ಟೆಲಿಗ್ರಾಮ್ ಇನ್ನಷ್ಟು ಆಕರ್ಷಕವಾಗುವಂತೆ ಮಾಡಲಾಗಿದೆ. ಇದಿಷ್ಟೇ ಅಲ್ಲದೆ ಗ್ರೂಪ್‌ ಅಡ್ಮಿನ್‌ ಗ್ರೂಪ್‌ ನ ಸದಸ್ಯರನ್ನು ಹೈಡ್‌ ಮಾಡುವ ಆಯ್ಕೆ ಸಹ ನೀಡಲಾಗಿರುವುದು ಮತ್ತಷ್ಟು ವಿಶೇಷ.

Best Mobiles in India

English summary
Telegram's New Update Includes Revamped Media Editor with Blur Tool.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X