ಟೆಲಿಗ್ರಾಮ್‌ ಸೇರಲಿದೆ ಹೊಸ ಅನಿಮೇಟೆಡ್‌ ಎಮೋಜಿ ಫೀಚರ್ಸ್‌!

|

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ಗಳಲ್ಲಿ ಟೆಲಿಗ್ರಾಮ್‌ ಕೂಡ ಒಂದಾಗಿದೆ. ಟೆಲಿಗ್ರಾಮ್‌ ತನ್ನ ವಿಶೇಷ ಫೀಚರ್ಸ್‌ಗಳ ಮೂಲಕ ವಾಟ್ಸಾಪ್‌ಗೆ ಪೈಪೋಟಿ ನೀಡುತ್ತಲೇ ಬಂದಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಲು ಪ್ಲಾನ್‌ ರೂಪಿಸಿದೆ. ಈ ಫೀಚರ್ಸ್‌ಗಳು ಇದೇ ತಿಂಗಳು ಟೆಲಿಗ್ರಾಮ್‌ ಸೇರಲಿದ್ದು, ಬಳಕೆದಾರರ ಅನುಭವವನ್ನು ಹೆಚ್ಚಿಸಲಿವೆ ಎಂದು ಹೇಳಲಾಗಿದೆ.

ಟೆಲಿಗ್ರಾಮ್‌

ಹೌದು, ಟೆಲಿಗ್ರಾಮ್‌ ಅಪ್ಲಿಕೇಶನ್‌ ಈ ತಿಂಗಳು ಹೊಸ ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಟೆಲಿಗ್ರಾಮ್‌ ಇದೀಗ ಮ್ಯೂಟ್ ಡ್ಯುರೇಷನ್‌, ಮೋರ್‌ ಅನಿಮೇಟೆಡ್ ಎಮೋಜಿಗಳು ಮತ್ತು ಇತರ ವಿಷಯಗಳ ಜೊತೆಗೆ ಸುಧಾರಿತ ಸಂದೇಶ ಅನುವಾದಗಳನ್ನು ಒಳಗೊಂಡಂತೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸಲಿದೆ. ಇನ್ನುಳಿದಂತೆ ಈ ಹೊಸ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಕಸ್ಟಮ್ ನೋಟಿಫಿಕೇಶನ್ ಸೌಂಡ್ಸ್

ಕಸ್ಟಮ್ ನೋಟಿಫಿಕೇಶನ್ ಸೌಂಡ್ಸ್

ಕಸ್ಟಮ್ ನೋಟಿಫಿಕೇಶನ್ ಸೌಂಡ್ಸ್ ಫೀಚರ್ಸ್‌ ಬಳಕೆದಾರರಿಗೆ ಯಾವುದೇ ಧ್ವನಿಯನ್ನು ನೋಟಿಫಿಕೇಶನ್‌ ಟೋನ್ ಆಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ. ಇದನ್ನು ಅಪ್ಲಿಕೇಶನ್‌ನಲ್ಲಿ ಕಸ್ಟಮ್ ಆಲರ್ಟ್‌ಗಳನ್ನು ಕ್ರಿಯೆಟ್‌ ಮಾಡುವುದಕ್ಕೆ ಕೂಡ ಬಳಸಬಹುದಾಗಿದೆ. ಇದಲ್ಲದೆ ಬಳಕೆದಾರರು ತಮ್ಮ ಉದ್ದೇಶಕ್ಕಾಗಿ 300KB ಗಾತ್ರದ ಐದು ಸೆಕೆಂಡ್‌ಗಳ ಅಡಿಯಲ್ಲಿ ಆಡಿಯೊ ಫೈಲ್‌ಗಳು ಮತ್ತು ವಾಯ್ಸ್‌ ಮೆಸೇಜ್‌ಗಳನ್ನು ಬಳಸಬಹುದಾಗಿದೆ. ಹಾಗೆಯೇ ಬಳಕೆದಾರರು ತಮ್ಮ ಎಲ್ಲಾ ಡಿವೈಸ್‌ಗಳಲ್ಲಿ ಸೆಟ್ಟಿಂಗ್ಸ್‌ > ನೋಟಿಫಿಕೇಶನ್‌ ಮತ್ತು ವಾಯ್ಸ್‌ಗಳ ಮೂಲಕ ವಾಯ್ಸ್‌ ಮೆಸೇಜ್‌ ಅನ್ನು ಪ್ರವೇಶಿಸಬಹುದು.

ಕಸ್ಟಮ್ ಮ್ಯೂಟ್ ಡ್ಯುರೇಷನ್‌

ಕಸ್ಟಮ್ ಮ್ಯೂಟ್ ಡ್ಯುರೇಷನ್‌

ಇನ್ನು ಟೆಲಿಗ್ರಾಮ್‌ ಕಸ್ಟಮ್‌ ಮ್ಯೂಟ್‌ ಡ್ಯುರೇಷನ್‌ ಫೀಚರ್ಸ್‌ ಅನ್ನು ಪರಿಚಯಿಸುವುದಕ್ಕೆ ಸಿದ್ಧತೆ ನಡೆಸಿದೆ. ಈ ಫೀಚರ್ಸ್‌ ನಿರ್ಧಿಷ್ಟ ಅವಧೀಗೆ ಅಧಿಸೂಚನೆಗಳನ್ನು ವಿರಾಮಗೊಳಿಸುವ ಸಾಮರ್ಥ್ಯವನ್ನು ಸೇರಿಸಿದೆ. ಬಳಕೆದಾರರು ಒಂದು ಗಂಟೆ, 2 ಗಂಟೆಗಳು, ಒಂದು ವಾರ, ಎರಡು ವಾರಗಳು, ಮೂರು ತಿಂಗಳುಗಳು ಸೇರಿದಂತೆ ವಿವಿಧ ಆಯ್ಕೆಗಳಿಂದ ಆಯ್ಕೆ ಮಾಡಬಹುದು. ಪ್ರತಿ ಚಾಟ್ ಆಲರ್ಟ್‌ಗಳನ್ನು ಮಾರ್ಪಡಿಸಲು ಸುವ್ಯವಸ್ಥಿತ ಮೆನುವನ್ನು ಹೊಂದಿದೆ ಎಂದು ಟೆಲಿಗ್ರಾಮ್ ಹೇಳಿಕೊಂಡಿದೆ. ಜೊತೆಗೆ ಬಳಕೆದಾರರು ಸೈಲೆಂಟ್‌ ಆಗಿ ನೋಟಿಫಿಕೇಶನ್‌ ಸ್ವೀಕರಿಸಲು ಧ್ವನಿಯನ್ನು ನಿಷ್ಕ್ರಿಯಗೊಳಿಸಬಹುದಾಗಿದೆ.

ನ್ಯೂ ಆಟೋ-ಡಿಲೀಟ್ ಮೆನು ಇನ್ ಪ್ರೋಫೈಲ್ಸ

ನ್ಯೂ ಆಟೋ-ಡಿಲೀಟ್ ಮೆನು ಇನ್ ಪ್ರೋಫೈಲ್ಸ

ಟೆಲಿಗ್ರಾಮ್‌ ಬಳಕೆದಾರರು ವೈಯಕ್ತಿಕ ಪ್ರೊಫೈಲ್‌ಗಳಲ್ಲಿ ಆಟೋ ಡಿಲೀಟ್‌ ಮೆಸೇಜ್‌ ಆಯ್ಕೆಯನ್ನು ಸಕ್ರಿಯಗೊಳಿಸಲು ಮುಂದಾಗಿದೆ. ಈ ಫೀಚರ್ಸ್‌ ಇದೀಗ ಎರಡು ದಿನಗಳು, ಮೂರು ವಾರಗಳು ಮತ್ತು ನಾಲ್ಕು ತಿಂಗಳುಗಳು ಸೇರಿದಂತೆ ವಿವಿಧ ಆಯ್ಕೆಗಳನ್ನು ಬೆಂಬಲಿಸುತ್ತದೆ. ಆಟೋ-ಡಿಲೀಟ್‌ ಫೀಚರ್ಸ್‌ ಅನ್ನು ಸಕ್ರಿಯಗೊಳಿಸಲು, ಬಳಕೆದಾರರು ಚಾಟ್‌ನ ಇನ್ಫರ್‌ಮೇಶನ್‌ ಪೇಜ್‌ ನಲ್ಲಿರುವ ಮೂರು ಚುಕ್ಕೆಗಳನ್ನು ಟ್ಯಾಪ್ ಮಾಡಬೇಕಾಗುತ್ತದೆ.

ರಿಪ್ಲೈ ಟು ಫಾರ್ವರ್ಡ್ ಮೆಸೇಜ್‌

ರಿಪ್ಲೈ ಟು ಫಾರ್ವರ್ಡ್ ಮೆಸೇಜ್‌

ಟೆಲಿಗ್ರಾಮ್‌ ಅಪ್ಲಿಕೇಶನ್‌ ಬಳಕೆದಾರರು ಇತರ ಚಾಟ್‌ಗಳಿಗೆ ಸಂದೇಶವನ್ನು ಫಾರ್ವರ್ಡ್ ಮಾಡಿದಾಗ ರಿಪ್ಲೇ ಪ್ರಿವ್ಯೂಗಳನ್ನು ನೀಡುವ ಫೀಚರ್ಸ್‌ ಹೊಂದಿದೆ. ಇದು ಪ್ರತಿಯಾಗಿ, ಇತರ ಬಳಕೆದಾರರಿಗೆ ಇತರ ಬಳಕೆದಾರರು ಹೊಂದಿರುವ ಸಂಭಾಷಣೆಗೆ ಹೆಚ್ಚಿನ ಸಂದರ್ಭವನ್ನು ನೀಡಲಿದೆ ಎಂದು ಹೇಳಲಾಗಿದೆ.

ಇಂಪ್ರೋವೆಡ್ ಮೆಸೇಜ್ ಟ್ರಾನ್ಸ್‌ಲೇಷನ್

ಇಂಪ್ರೋವೆಡ್ ಮೆಸೇಜ್ ಟ್ರಾನ್ಸ್‌ಲೇಷನ್

ಟೆಲಿಗ್ರಾಮ್ ಅಪ್ಲಿಕೇಶನ್‌ ಐಒಎಸ್‌ನಲ್ಲಿ ಮೆಸೇಜ್ ಟ್ರಾನ್ಸ್ಲೇಷನ್ ಅನ್ನು ಅಪ್ಡೇಟ್‌ ಮಾಡಲು ಮುಂದಾಘಿದೆ. ಈ ಫೀಚರ್ಸ್‌ ಇದೀಗ ಉಕ್ರೇನಿಯನ್ ಸೇರಿದಂತೆ ಹೆಚ್ಚಿನ ಭಾಷೆಗಳಿಂದ ಮೆಸೇಜ್ ಟ್ರಾನ್ಸ್‌ಲೇಷನ್ ಬೆಂಬಲಿಸುತ್ತದೆ.

ಸುಧಾರಿತ PiP ಮೋಡ್

ಸುಧಾರಿತ PiP ಮೋಡ್

ಇದಲ್ಲದೆ ಟೆಲಿಗ್ರಾಮ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಪಿಕ್ಚರ್-ಇನ್-ಪಿಕ್ಚರ್ ಮೋಡ್‌ನಲ್ಲಿ ಅಪ್ಡೇಟ್‌ಗಳನ್ನು ಮಾಡಲು ಮುಂದಾಗಿದೆ. ಅದರ ಆಂಡ್ರಾಯ್ಡ್‌ ಅಪ್ಲಿಕೇಶನ್‌ನಲ್ಲಿ ಹೊಸ ಅಪ್ಡೇಟ್‌ ಜೊತೆಗೆ ಹೊಸ ಗೆಸ್ಚರ್‌ಗಳನ್ನು ಸೇರಿಸಿದೆ. ಅದರ ಗಾತ್ರವನ್ನು ಬದಲಾಯಿಸಲು ಪಿಂಚ್ ಮಾಡಿ ಮತ್ತು ತ್ವರಿತವಾಗಿ ಮುಚ್ಚಲು X ಅನ್ನು ಟ್ಯಾಪ್ ಮಾಡಬಹುದಾಗಿದೆ.

ಹೆಚ್ಚಿನ ಅನಿಮೇಟೆಡ್ ಎಮೋಜಿಗಳು

ಹೆಚ್ಚಿನ ಅನಿಮೇಟೆಡ್ ಎಮೋಜಿಗಳು

ಇನ್ನು ಟೆಲಿಗ್ರಾಮ್‌ ಕಂಪನಿಯು ತನ್ನ ಪ್ಲಾಟ್‌ಫಾರ್ಮ್‌ಗೆ ಹೊಸ ಅನಿಮೇಟೆಡ್ ಎಮೋಜಿಗಳನ್ನು ಕೂಡ ಸೇರಿಸಿದೆ. ಈ ಪಟ್ಟಿಯಲ್ಲಿ ಪಿಜ್ಜಾ, ಬರ್ಗರ್, ಫ್ರೆಂಚ್ ಫ್ರೈಸ್, ಡೋನಟ್, ಕುಕೀಸ್, ಪೈ ಮತ್ತು ಪ್ಯಾನ್‌ಕೇಕ್‌ಗಳು ಸೇರಿವೆ.

Best Mobiles in India

Read more about:
English summary
Telegram has announced new features including mute durations

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X