ನಿಜಕ್ಕೂ 2 ದಿನ ಇಂಟರ್‌ನೆಟ್ ಸ್ಥಗಿತವಾಗಲಿದೆಯಾ?..ಏನಿದು ಕುತೋಹಲ ಸುದ್ದಿ?!

|

ಎರಡು ದಿನಗಳ ಕಾಲ ವಿಶ್ವಾದ್ಯಂತ ಇಂಟರ್‌ನೆಟ್ ಸ್ಥಗಿತ ಎಂಬ ಸುದ್ದಿ ನಿಮ್ಮ ಕಿವಿಗೆ ಈಗಾಗಲೇ ಬಿದ್ದಿರಬಹುದು. ಆದರೆ, ಇದು ಸಂಪೂರ್ಣ ನಿಜವಲ್ಲ. ಏಕೆಂದರೆ, ಐಸಿಎಎನ್‌ಎನ್‌ ತನ್ನ ಸರ್ವರ್‌ಗಳನ್ನು ಅಪ್‌ಡೇಟ್‌ ಮಾಡಲು ನಿರ್ಧರಿಸಿದ್ದು, ಇದರಿಂದಾಗಿ ಜಗತ್ತಿನಾದ್ಯಂತ ಇಂಟರ್‌ನೆಟ್‌ ವೇಗ ಶನಿವಾರದವರೆಗೆ ಸ್ವಲ್ಪಮಟ್ಟಿಗೆ ಕುಂಠಿತಗೊಳ್ಳಲಿದೆ ಎನ್ನಬಹುದು ಅಷ್ಟೆ.!

ಹೌದು, ವಿಶ್ವಾದ್ಯಂತ ಡೊಮೇನ್ ನೇಮ್‌ಗಳನ್ನು ಹಂಚುವ ಹಾಗೂ ಇಂಟರ್‌ನೆಟ್‌ ಡೊಮೇನ್‌ಗಳನ್ನು ನಿಯಂತ್ರಿಸುವ ಐಸಿಎಎನ್‌ಎನ್‌ ತನ್ನ ಸರ್ವರ್‌ಗಳನ್ನು ಅಪ್‌ಡೇಟ್‌ ಮಾಡಲು ನಿರ್ಧರಿಸಿದೆ. ಡೊಮೇನ್ ನೇಮ್‌ಗಳ ರಕ್ಷಣೆಗಾಗಿ ಕ್ರಿಪ್ಟೋಗ್ರಾಫಿಕ್‌ ಕೀ ಅಗತ್ಯವಿದ್ದು, ಅದನ್ನು ಅಳವಡಿಸಲು ಅಪ್‌ಡೇಟ್‌ ಮಾಡಲಾಗುತ್ತಿದೆ. ಇದು ಜನರಿಗೆ ಹೆಚ್ಚಿ ಸಮಸ್ಯೆಯಾಗುವುದಿಲ್ಲ.

ನಿಜಕ್ಕೂ 2 ದಿನ ಇಂಟರ್‌ನೆಟ್ ಸ್ಥಗಿತವಾಗಲಿದೆಯಾ?..ಏನಿದು ಕುತೋಹಲ ಸುದ್ದಿ?!

ಇಂಟರ್‌ನೆಟ್ ವ್ಯವಸ್ಥೆಯಲ್ಲಿ ಸ್ವಲ್ಪ ವ್ಯತ್ಯಯ ಕಾಣಲಿದೆಯಾದರೂ, ಇಂಟರ್‌ನೆಟ್‌ ಸ್ಥಗಿತದ ಸಮಸ್ಯೆ ಎಲ್ಲರಿಗೂ ಬಾಧಿಸುವುದಿಲ್ಲ. ಶೇ.99ಕ್ಕೂ ಹೆಚ್ಚು ಇಂಟರ್‌ನೆಟ್‌ ಬಳಕೆದಾರರಿಗೆ ಈ ನವೀಕರಣದಿಂದ ತೊಂದರೆಯಾಗದು ಎಂದು ಐಸಿಎಎನ್‌ಎನ್‌ ಹೇಳಿದೆ. ಒಂದು ವೇಳೆ ಅಕಸ್ಮಿಕವಾಗಿ ಇಂಟರ್ನೆಟ್​ ಸೇವೆ ಸ್ಥಗಿತಗೊಂಡರೆ ಏನೆಲ್ಲಾ ಸಮಸ್ಯೆಗಳು ಎದುರಾಗಬಹುದು ಎಂಬ ವಿಶೇಷ ಮಾಹಿತಿಗಳನ್ನು ಮುಂದೆ ಓದಿ ತಿಳಿಯಿರಿ.

ಜನರಿಂದ ಕಡಿತಗೊಳ್ಳಲಿದೆ ಸಂಪರ್ಕ

ಜನರಿಂದ ಕಡಿತಗೊಳ್ಳಲಿದೆ ಸಂಪರ್ಕ

ಇಂಟರ್‌ನೆಟ್‌ನ ಮೂಲ ಆಶಯವೇ ಸಂಪರ್ಕ. ಒಂದು ವೇಳೆ ಇಂಟರ್‌ನೆಟ್ ಸೇವೆ ಬಂದ್ ಆದರೆ, ಈಗಿನ ಡಿಜಿಟಲ್ ಸಂಪರ್ಕ ತಪ್ಪಿಹೋಗಲಿದೆ. ಸೋಷಲ್​ ನೆಟ್ವರ್ಕಿಂಗ್​ ಸೈಟ್​ಗಳಾದ ಫೇಸ್​ಬುಕ್​, ಟ್ವಿಟರ್​ಗೂ ಲಾಗಿನ್​ ಆಗಲು ಸಾಧ್ಯವಿಲ್ಲ. ಈ ಮೂಲಕ ನೀವು ದೂರದಲ್ಲಿರುವ ಗೆಳೆಯರು ಹಾಗೂ ಕುಟುಂಬದವರೊಂದಿಗೂ ಸಂಪರ್ಕ ಸಾಧಿಸಲು ಸಾಧ್ಯವಿಲ್ಲ.ಇದೆಲ್ಲಾ ಬಿಡಿಕೆಲ ಕೇಬಲ್​ ಹಾಗೂ ಕೆಲ ಸ್ಯಾಟಲೈಟ್​ ಸೇವೆಗಳೂ ಲಭ್ಯವಿರುವುದಿಲ್ಲ.

ಕೋಟ್ಯಾನುಗಟ್ಟಲೆ ಡಾಲರ್​ ನಷ್ಟವಾಗಬಹುದು

ಕೋಟ್ಯಾನುಗಟ್ಟಲೆ ಡಾಲರ್​ ನಷ್ಟವಾಗಬಹುದು

ಇಂಡಿಯನ್​ ಕೌನ್ಸಿಲ್​ ಫಾರ್​ ರಿಸರ್ಚ್​ ಆನ್​ ಇಂಟರ್​ನ್ಯಾಷನಲ್ ಇಕನಾಮಿಕ್ಸ್​ರಿಲೇಷನ್ಸ್​(ICRIER) ವರದಿಯನ್ವಯ 2012-17ರ ನಡುವೆ ಅಂತರ್ಜಾಲ ಸೇವೆ ಸ್ಥಗಿತಗೊಂಡ ಪರಿಣಾಮ ಭಾರತಕ್ಕೆ ಸುಮಾರು 300 ಕೋಟಿ ನಷ್ಟವಾಗಿದೆ ಎಂದು ತಿಳಿದು ಬಂದಿದೆ. ಹೀಗಿರುವಾಗ ಮುಂದಿನ ಎರಡು ದಿನ ಇಂಟರ್ನೆಟ್​ ಸೇವೆ ಸ್ಥಗಿತಗೊಂಡರೆ, ಜಗತ್ತಿನಾದ್ಯಂತ ಕೋಟ್ಯಾನುಗಟ್ಟಲೆ ಡಾಲರ್​ ನಷ್ಟವಾಗಬಹುದು.

ಉದ್ಯಮದ ಮೇಲೆ ಬೀಳಲಿದೆ ಪರಿಣಾಮ

ಉದ್ಯಮದ ಮೇಲೆ ಬೀಳಲಿದೆ ಪರಿಣಾಮ

ಒಂದು ವೇಳೆ ಇಂಟರ್ನೆಟ್​ ಸ್ಥಗಿತಗೊಂಡರೆ, ಅದು ಆನ್​ಲೈನ್​ ಹಾಗೂ ಆಫ್​ಲೈನ್​ ಸೇವೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಇ-ಕಾಮರ್ಸ್​ ಕಂಪೆನಿಗಳಾದ ಅಮೆಜಾನ್​, ಫ್ಲಿಪ್​ ಕಾರ್ಟ್​, ಪೇಟಿಎಂ ಹಾಗೂ ಆನ್​ಲೈನ್​ ಕಂಪೆನಿಗಳು ಎಲ್ಲಕ್ಕಿಂತ ಹೆಚ್ಚು ನಷ್ಟ ಅನುಭವಿಸಲಿವೆ. ಸಾಂಪ್ರದಾಯಿಕ ಉದ್ಯಮಗಳು ಕೂಡ ಈಗ ಆನ್‌ಲೈನಿಗೆ ತೆರೆದುಕೊಂಡಿರುವುದರಿಂದ ಅವುಗಳಿಗೂ ಭಾರೀ ಹೊಡೆತ ಬೀಳುತ್ತದೆ. ಇದರ ಬಿಸಿ ಜನಸಾಮಾನ್ಯರ ಮೇಲೆ ತಟ್ಟಲಿದೆ.

ಹಣದ ಸಮಸ್ಯೆ ಎದುರಾಗಲಿದೆ!

ಹಣದ ಸಮಸ್ಯೆ ಎದುರಾಗಲಿದೆ!

ಈಗ ಬ್ಯಾಂಕಿಂಗ್ ವ್ಯವಸ್ಥೆ ಆನ್‌ಲೈನಿಗೆ ತೆರೆದುಕೊಂಡಿದೆ. ಮೊಬೈಲ್ ವಾಲೆಟ್‌ಗಳು ಮೂಲಕವೇ ವ್ಯವಹಾರಗಳೆಲ್ಲವೂ ನಡೆಯುತ್ತಿವೆ. ಹೀಗಿರುವಾಗ ಅಂತರ್ಜಾಲ ಸ್ಥಗಿತಗೊಳ್ಳುತ್ತಿದ್ದಂತೆಯೇ ಆನ್​ಲೈನ್​ ಬ್ಯಾಂಕಿಂಗ್ ವ್ಯವಾಹ ಸಹ ನಿಂತುಹೋಗಲಿದೆ. ಎಟಿಎಂ ಸೇರಿ ಎಲ್ಲಿಯೂ ಹಣ ಪಡೆಯಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಲಿದೆ. ಈ ಪರಿಸ್ಥಿತಿ ಎಂದುರಾದರೆ, ಕೇವಲ 2 ದಿನಗಳಲ್ಲಿ ಭಯಾನಕ ಸಮಸ್ಯೆಯೊಂದು ಹುಟ್ಟಿಕೊಳ್ಳುತ್ತದೆ.

ಊಹಿಸಲು ಸಾಧ್ಯವಿಲ್ಲ.

ಊಹಿಸಲು ಸಾಧ್ಯವಿಲ್ಲ.

ಮೇಲೆ ಹೇಳಿದ ಎಲ್ಲಾ ಎಲ್ಲಾ ಸಮಸ್ಯೆಗಳು ಕೇವಲ ಉದಾಹರಣೆ ಮಾತ್ರ. ಒಂದು ವೇಳೆ ನಿಜವಾಗಿಯೂ ಸಂಪೂರ್ಣ ಪ್ರಮಾಣದಲ್ಲಿ ಇಂಟರ್‌ನೆಟ್ ಸ್ಥಗಿತವಾದರೆ ಆ ಸ್ವರೂಪವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲಾ. ಪ್ರತಿಯೋರ್ವ ವ್ಯಕ್ತಿಯ ಖಾಸಾಗಿ ಜೀವನ ಕೂಡ ಈಗ ಸ್ಮಾರ್ಟ್​ಫೋನ್​ ಹಾಗೂ ಇಂಟರ್ನೆಟ್​ ಮೇಲೆ ಅವಲಂಭಿಸಿರುವುದರಿಂದ ಎಲ್ಲರೂ ವಿಲಿವಿಲಿ ಒದ್ದಾಡಬೇಕಾಗುತ್ತದೆ. ವಿಶ್ವದ ಸುಮಾರು ಅರ್ಧದಷ್ಟು ಜನ(3.5 ಬಿಲಿಯನ್) ಇಂಟರ್ನೆಟ್​ ಸಂಪರ್ಕಕ್ಕೆ ಈಗಾಗಲೇ ಮಾರುಹೋಗಿದ್ದಾರೆ.

Best Mobiles in India

English summary
More than 36 million users may lose internet connection for 48 hours. The next 48 hours may be tough for internet users as domain servers and other networkinfrastructure is shutdown for maintenance.to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X