ಘಟಾನುಘಟಿ ಸಾಧನಗಳನ್ನು ಮಣ್ಣುಮುಕ್ಕಿಸಿ ಕೋಟಿ ಗೆದ್ದ ಹ್ಯಾಕರ್ಸ್‌..!

By Gizbot Bureau
|

ಟೆಕ್ ಕಂಪನಿಗಳು ತಮ್ಮ ಸಾಧನಗಳಲ್ಲಿ ಅತ್ಯಂತ ಸುರಕ್ಷಿತ ವ್ಯವಸ್ಥೆಗಳನ್ನು ಹೊಂದಿದ್ದೇವೆ ಎಂಬ ಹೆಗ್ಗಳಿಕೆ ಹೊಂದಿರಬಹುದು. ಆದರೆ, ಹ್ಯಾಕರ್‌ಗಳು ಹೇಗಾದರೂ ಆ ಸುರಕ್ಷಿತ ವ್ಯವಸ್ಥೆಯನ್ನು ದಾಟಲು ಒಂದು ಮಾರ್ಗ ಕಂಡುಕೊಳ್ಳುತ್ತಾರೆ. ಹೌದು, ಇದು ಮತ್ತೊಂದು ಸಾಬೀತಾಗಿದೆ. ಹ್ಯಾಕಿಂಗ್‌ ಸ್ಪರ್ಧೆಯಲ್ಲಿ ಸೋನಿ, ಶಿಯೋಮಿ, ಸ್ಯಾಮ್‌ಸಂಗ್ ಮತ್ತು ಇತರ ಸಾಧನಗಳನ್ನು ಹ್ಯಾಕ್‌ ಮಾಡಿ ಇಬ್ಬರು ಹ್ಯಾಕರ್‌ಗಳು 145,000 ಡಾಲರ್‌ (ಸರಿಸುಮಾರು 1.02 ಕೋಟಿ ರೂ.) ಗಳನ್ನು ಗಳಿಸಿದ್ದಾರೆ.

Pwn2Own ಹ್ಯಾಕಿಂಗ್ ಸ್ಪರ್ಧೆ

Pwn2Own ಹ್ಯಾಕಿಂಗ್ ಸ್ಪರ್ಧೆ

ಆಂಡ್ರಾಯ್ಡ್ ಪೊಲೀಸ್ ನೀಡಿದ ವರದಿಯಂತೆ, ಟೋಕಿಯೊದಲ್ಲಿ ನಡೆದ Pwn2Own ಹ್ಯಾಕಿಂಗ್ ಸ್ಪರ್ಧೆಯಲ್ಲಿ ಅಮಾತ್ ಕ್ಯಾಮಾ ಮತ್ತು ರಿಚರ್ಡ್ ಜ್ಯೂ ಅವರನ್ನು ಒಳಗೊಂಡ ಟೀಮ್ ಫ್ಲೋರೋಸೆಟೇಟ್ ಹಲವಾರು ಸಾಧನಗಳಲ್ಲಿ ತಮ್ಮ ಪರಾಕ್ರಮವನ್ನು ತೋರಿಸಿ, ದೋಷಗಳನ್ನು ಎತ್ತಿ ಹಿಡಿದಿದ್ದಾರೆ. ಇಬ್ಬರು ‘ವೈಟ್-ಹ್ಯಾಟ್' ಹ್ಯಾಕರ್‌ಗಳು ಮೊದಲು ಸೋನಿಯ ಎಕ್ಸ್‌800 ಜಿ ಸ್ಮಾರ್ಟ್ ಟಿವಿಯನ್ನು ಗುರಿಯಾಗಿಸಿಕೊಂಡಿದ್ದರು ಎಂದು ವರದಿ ಹೇಳುತ್ತದೆ. ದೂರದರ್ಶನದ ಅಂತರ್ನಿರ್ಮಿತ ವೆಬ್ ಬ್ರೌಸರ್ ಅನ್ನು ಬಳಸಿಕೊಳ್ಳಲು ಜಾವಾಸ್ಕ್ರಿಪ್ಟ್ ಒಒಬಿ ರೀಡ್ ಬಗ್ ಅನ್ನು ಬಳಸುವುದರಿಂದ ಸಾಧನದ ಮೇಲೆ ನಿಯಂತ್ರಣ ಸಾಧಿಸಬಹುದು ಎಂದು ತಂಡ ತೋರಿಸಿಕೊಟ್ಟು 15 ಸಾವಿರ ಡಾಲರ್‌ ಬಹುಮಾನ ಗಳಿಸಿದ್ದಾರೆ.

ಎಕೋ ಕೂಡ ಕಂಗಾಲು

ಎಕೋ ಕೂಡ ಕಂಗಾಲು

ಮುಂದಿನ ಸಾಧನವಾಗಿ ಅಮೆಜಾನ್ ಎಕೋ ಶೋ 5 ಆಯ್ದುಕೊಂಡ ಹ್ಯಾಕರ್‌ಗಳು, ಅಮೆಜಾನ್ ಸ್ಮಾರ್ಟ್ ಸ್ಪೀಕರ್ ಅನ್ನು ‘ರಾಜಿ ಮಾಡಿಕೊಳ್ಳಲು' ಒಂದು ಪೂರ್ಣಾಂಕದ ಉಕ್ಕಿ ಬಳಸಿದರು. ಇದರಿಂದ ಹ್ಯಾಕರ್‌ಗಳು ಗಳಿಸಿದ್ದು ಬರೋಬ್ಬರಿ 60,000 ಡಾಲರ್‌.

ಸ್ಯಾಮ್‌ಸಂಗ್‌ ಹ್ಯಾಕ್‌

ಸ್ಯಾಮ್‌ಸಂಗ್‌ ಹ್ಯಾಕ್‌

ಸ್ಯಾಮ್‌ಸಂಗ್‌ನ ಗೆಲಾಕ್ಸಿ ಎಸ್ 10 ಸ್ಮಾರ್ಟ್‌ಫೋನ್ ಮತ್ತು ಕ್ಯೂ 60 ಸ್ಮಾರ್ಟ್ ಟಿವಿಗಳನ್ನು ಹ್ಯಾಕ್‌ ಮಾಡಿದ್ದಕ್ಕೆ 45,000 ಡಾಲರ್‌ ಸಿಕ್ಕಿದೆ. ಇನ್ನು, ಶಿಯೋಮಿಯ ಎಂಐ 9 ನಲ್ಲಿರುವ ದೋಷ ಕಂಡುಹಿಡಿದು 20,000 ಡಾಲರ್‌ ಬಹುಮಾನ ಪಡೆದರು.

ಪ್ರತಿ ವರ್ಷ ಸ್ಪರ್ಧೆ

ಪ್ರತಿ ವರ್ಷ ಸ್ಪರ್ಧೆ

ಹ್ಯಾಕಿಂಗ್‌ ಸ್ಪರ್ಧೆಯು 2007ರಿಂದ ಪ್ರತಿ ವರ್ಷ ನಡೆಯುತ್ತಿದೆ. ಸಾಧನಗಳು ಅಥವಾ ಸಾಫ್ಟ್‌ವೇರ್‌ಗಳಲ್ಲಿನ ದೋಷಗಳನ್ನು ತೋರಿಸುವುದು ಸ್ಪರ್ಧೆಯ ಹಿಂದಿನ ಆಲೋಚನೆಯಾಗಿದೆ. ಸ್ಪರ್ಧೆಯ ಸಮಯದಲ್ಲಿ ಕಂಡುಬರುವ ದೋಷಗಳು ಮತ್ತು ನ್ಯೂನತೆಗಳನ್ನು ಆಯಾ ಕಂಪನಿಗಳಿಗೆ ಹಸ್ತಾಂತರಿಸಲಾಗುವುದು. ಸಾಧನಗಳನ್ನು ಯಶಸ್ವಿಯಾಗಿ ಹ್ಯಾಕ್‌ ಮಾಡುವ ಸ್ಪರ್ಧಿಗಳು ಹಣ ಸಂಪಾದಿಸುತ್ತಾರೆ. ಹಾಗೂ ಸ್ಪರ್ಧೆಯ ಕೊನೆಯಲ್ಲಿ ವಿಜೇತರನ್ನು ಘೋಷಿಸಲಾಗುತ್ತದೆ.

ಬಗ್‌ ಬೌಂಟಿ ಪ್ಲಾನ್‌

ಬಗ್‌ ಬೌಂಟಿ ಪ್ಲಾನ್‌

ಮೈಕ್ರೋಸಾಫ್ಟ್, ಸ್ಯಾಮ್‌ಸಂಗ್, ಆಪಲ್, ಅಮೆಜಾನ್‌ನಂತಹ ದೊಡ್ಡ ಟೆಕ್ ಕಂಪನಿಗಳು ಬಗ್ ಬೌಂಟಿ ಯೋಜನೆಯನ್ನು ಹೊಂದಿವೆ. ಅದರ ಅಡಿಯಲ್ಲಿ ತಮ್ಮ ಉತ್ಪನ್ನಗಳು ಮತ್ತು ಸೇವೆಗಳಲ್ಲಿನ ದೋಷಗಳನ್ನು ಹ್ಯಾಕ್‌ ಮಾಡಿ, ವರದಿ ನೀಡಲು ಹ್ಯಾಕರ್‌ಗಳಿಗೆ ರೀವಾರ್ಡ್‌ ನೀಡುತ್ತವೆ.

Best Mobiles in India

Read more about:
English summary
Thanks To Xiaomi, Samsung, And Amazon Hackers Won Rs 1 Crore

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X