2018 ರಲ್ಲಿ ಗೂಗಲ್, ಆಪಲ್, ಮೈಕ್ರೋಸಾಫ್ಟ್ ಏನೇನು ಮಾಡಿದವು ಗೊತ್ತಾ?

|

ಒಂದು ವೇಳೆ ಟೆಕ್ನಾಲಜಿ ಕ್ಷೇತ್ರದಲ್ಲಿ ಪ್ರತಿ ಹೆಜ್ಜೆಯಲ್ಲೂ ನಿರೀಕ್ಷೆ ಮತ್ತು ಸ್ಪರ್ಧೆ ಸೇರಿದಂತೆ ಅದರ ಆಕ್ಟಿವಿಟಿಯ ಬಗ್ಗೆ ಕುತೂಹಲವಿದೆ ಎಂದಾದರೆ ಅದು ಮೂರು ಕಂಪೆನಿಗಳ ನಡುವೆ ಇರುತ್ತದೆ- ಅದುವೇ ಗೂಗಲ್,ಆಪಲ್ ಮತ್ತು ಮೈಕ್ರೋಸಾಫ್ಟ್. ಅದು ಸಾಫ್ಟ್ ವೇರೇ ಇರಲಿ ಅಥವಾ ಹಾರ್ಡ್ ವೇರೇ ಆಗಿರಲಿ. ಈ ಮೂರು ಸಿಲಿಕಾನ್ ವ್ಯಾಲಿಯ ಬಗ್ಗೆ ಯಾವಾಗಲೂ ಒಂದು ಕಣ್ಣೋಟ ಇದ್ದೇ ಇರುತ್ತದೆ.

2018 ರಲ್ಲಿ ಗೂಗಲ್, ಆಪಲ್, ಮೈಕ್ರೋಸಾಫ್ಟ್ ಏನೇನು ಮಾಡಿದವು ಗೊತ್ತಾ?

ಗೂಗಲ್ ಯಾಕೆಂದರೆ ಅದರ ವಿಭಿನ್ನವಾಗಿರುವ ಆಪ್ ಗಳು ಮತ್ತು ಸೇವೆಗಳು ಮತ್ತು ಪಿಕ್ಸಲ್ ಸ್ಮಾರ್ಟ್ ಫೋನ್ ಗಳು. ಆಪಲ್ ಯಾಕೆಂದರೆ ಎಲ್ಲಾ ವಿಚಾರದಲ್ಲೂ ಹೊಸತನ್ನು ರಚನೆ ಮಾಡುವ ಸಾಮರ್ಥ್ಯ ಹೊಂದಿದೆ.ಮತ್ತೊಂದೆಡೆ ಮೈಕ್ರೋಸಾಫ್ಟ್ ಮಾರುಕಟ್ಟೆಯ ಬಂಡವಾಳಿಕರಣದಲ್ಲಿ ಹೊಸ ಎತ್ತರವನ್ನು ಇದು ತಲುಪಿದೆ.

ನಾವಿಲ್ಲಿ ಈ ಮೂರು ಸಂಸ್ಥೆಗಳು 2018 ರಲ್ಲಿ ಕಂಡ ದೊಡ್ಡ ಯಶಸ್ಸು ಮತ್ತು ಅದರ ತಪ್ಪುಗಳ ಬಗೆಗಿನ ಒಂದು ಪಟ್ಟಿಯನ್ನು ಮಾಡಿದ್ದೇವೆ. ನಿಮಗೇನನ್ನಿಸುತ್ತದೆ ಎಂಬುದನ್ನು ತಿಳಿಸಿ.

ಯಶಸ್ಸು: ಆಪಲ್ ನ ಹೊಸ ಮೂರು ಐಫೋನ್ ಗಳು

ಯಶಸ್ಸು: ಆಪಲ್ ನ ಹೊಸ ಮೂರು ಐಫೋನ್ ಗಳು

ಸಾಕಷ್ಟು ಚರ್ಚೆಗಳು ಮತ್ತು ಕುತೂಹಲದ ನಡುವೆಯು ಆಪಲ್ ನ ಮೂರು ಅತ್ಯದ್ಭುತ ಫೋನ್ ಗಳು ಮಾರುಕಟ್ಟೆಗೆ ಕಾಲಿಟ್ಟವು.

ತಪ್ಪು: ಹೊಸ ಐಫೋನ್ ಗಳ ಬೆಲೆ

ಕೆಲವು ಗ್ರಾಹಕರಿಗೆ ಹೊಸ ಐಫೋನ್ ಗಳ ಬೆಲೆ ಆಕರ್ಷಣೀಯವಾಗಿರಲಿಲ್ಲ.

ಯಶಸ್ಸು: ಗೂಗಲ್ ಪಿಕ್ಸಲ್ 3 ಕ್ಯಾಮರಾ ಫೋನ್ ಗಳಿಗೆ ಭರ್ಜರಿ ಪ್ರತಿಕ್ರಿಯೆ

ಯಶಸ್ಸು: ಗೂಗಲ್ ಪಿಕ್ಸಲ್ 3 ಕ್ಯಾಮರಾ ಫೋನ್ ಗಳಿಗೆ ಭರ್ಜರಿ ಪ್ರತಿಕ್ರಿಯೆ

ಗೂಗಲ್ ತನ್ನ ಮುಂದಿನ ಜನರೇಷನ್ನಿನ ಪಿಕ್ಸಲ್ ಸ್ಮಾರ್ಟ್ ಫೋನ್ ನ್ನು ಬಿಡುಗಡೆಗೊಳಿಸಿತು ಮತ್ತು ಅದರ ಕ್ಯಾಮರಾಕ್ಕಾಗಿ ಉತ್ತಮ ಪ್ರತಿಕ್ರಿಯೆ ಬಂದಿದೆ.ಪಿಕ್ಸಲ್ ಫೋನಿನ ಕ್ಯಾಮರಾಗಳು ಇಂಡಸ್ಟ್ರಿಯಲ್ಲಿ ಒಂದು ಹವಾ ಸೃಷ್ಟಿ ಮಾಡಿದೆ.

ತಪ್ಪು: ಫೋನ್ ಗಳು ಕೆಲವು ಸಣ್ಣ ಬಗ್ ಗಳಿಂದ ಕೂಡಿದ್ದವು

ಕ್ಯಾಮರಾಗಳು ಎಷ್ಟೇ ಅಧ್ಬುತವಾಗಿದ್ದರೂ ಕೂಡ ಪಿಕ್ಸಲ್ ಫೋನ್ ಗಳು ಅಲ್ಲಲ್ಲಿ ಕೆಲವು ಬಗ್ ಗಳಿಂದ ಕೂಡಿದ್ದವು.

ಯಶಸ್ಸು: ಮೈಕ್ರೋಸಾಫ್ಟ್ ಸರ್ಫೇಸ್ ಸರಣಿಯ ಲ್ಯಾಪ್ ಟಾಪ್ ಗಳು

ಯಶಸ್ಸು: ಮೈಕ್ರೋಸಾಫ್ಟ್ ಸರ್ಫೇಸ್ ಸರಣಿಯ ಲ್ಯಾಪ್ ಟಾಪ್ ಗಳು

ಬಹಳ ದಿನಗಳ ನಂತರ ಮೈಕ್ರೋಸಾಫ್ಟ್ ನ ಯಂತ್ರಾಂಶವು ವಿಮರ್ಷಕರಿಂದ ಮತ್ತು ಬಳಕೆದಾರರಿಂದ ಪ್ರಶಂಸೆಗೆ ಪಾತ್ರವಾಯಿತು.

ತಪ್ಪು: ಈ ಲ್ಯಾಪ್ ಗಳ ಬೆಲೆ

ಸರ್ಫೇಸ್ ಲ್ಯಾಪ್ ಟ್ಯಾಪ್ ಗಳ ಬೆಲೆಯು ಸ್ವಲ್ಪ ಅಧಿಕವಾಯ್ತು ಆದರೆ ನಂತರದ ದಿನಗಳಲ್ಲಿ ಸ್ವಲ್ಪ ಇಳಿದವು.

ಯಶಸ್ಸು: ಐಫೋನ್, ಮ್ಯಾಕ್ ಬುಕ್ ಮತ್ತು ಆಪಲ್ ವಾಚ್ ಗೆ ಹೊಸ ಸಾಫ್ಟ್ ವೇರ್

ಯಶಸ್ಸು: ಐಫೋನ್, ಮ್ಯಾಕ್ ಬುಕ್ ಮತ್ತು ಆಪಲ್ ವಾಚ್ ಗೆ ಹೊಸ ಸಾಫ್ಟ್ ವೇರ್

ಆಪಲ್ ತನ್ನ ಹೆಚ್ಚಿನ ಪ್ರೊಡಕ್ಟ್ ಗಳಿಗೆ ಹೊಸ ಸಾಫ್ಟ್ ವೇರ್ ನ್ನು ಪರಿಚಯಿಸಿತು. iOS 12, ಮ್ಯಾಕ್ ಗಾಗಿ ಮೊಜಾವೆ ಓಎಸ್ ಮತ್ತು ವಾಚ್ ಓಎಸ್ ಗೆ ಹೊಸ ವರ್ಷನ್ ಪರಿಚಯಿಸಲಾಯಿತು. ಮೊಜಾವೆಯಲ್ಲಿ ಡಾರ್ಕ್ ಮೋಡ್ ಇದೆ ಮತ್ತು ಸ್ಮಾರ್ಟ್ ಫೋನ್ ಎಡಿಕ್ಷನ್ ನ್ನು ತಡೆಯಲು ಕೆಲವು ಹೊಸ ಫೀಚರ್ ಗಳನ್ನು ಕೂಡ ಅಳವಡಿಸಲಾಗಿದೆ.

ಯಶಸ್ಸು: ಗೂಗಲ್ ಆಂಡ್ರಾಯ್ಡ್ ಗಾಗಿ ಹೊಸ “ಪೈ” ನ್ನು ಹೊರಹಾಕಿದೆ

ಯಶಸ್ಸು: ಗೂಗಲ್ ಆಂಡ್ರಾಯ್ಡ್ ಗಾಗಿ ಹೊಸ “ಪೈ” ನ್ನು ಹೊರಹಾಕಿದೆ

ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ತಯಾರಕರು ಹೊಸ ಓಎಸ್ ಅಪ್ ಗ್ರೇಡ್ ನ್ನು ಗೂಗಲ್ ನಿಂದ ಪಡೆಯಲಿದ್ದಾರೆ. ಅದುವೇ ಆಂಡ್ರಾಯ್ಡ್ ಪೈ. ಗೂಗಲ್ ಕೂಡ ಈ ಆಂಡ್ರಾಯ್ಡ್ ಪೈ 9.0 ಹೊಸ ಫೀಚರ್ ಗಳನ್ನು ಹೊಂದಿದ್ದು ನಿಮ್ಮ ಡಿಜಿಟಲ್ ಬದುಕನ್ನು ಕೇರ್ ಮಾಡುತ್ತದೆ ಎಂಬ ಭರವಸೆ ನೀಡಿದೆ.

ತಪ್ಪು: ಆಪಲ್ ನ ಪವರ್ ಮ್ಯಾಟ್

ಪ್ರತಿಯೊಬ್ಬರೂ ಕೂಡ ಕಳೆದ ವರ್ಷ ಆಪಲ್ ತೋರಿಸಿದ್ದ ಪ್ರೊಡಕ್ಟ್ ನ್ನು ಬಿಡುಗಡೆಗೊಳಿಸಲು ಕಾಯುತ್ತಿದ್ದರು.ಆದರೆ 2018 ಬಂದೂ ಆಯ್ತೂ ಮುಗಿಯುತ್ತಲೂ ಬಂತು. ಆದರೆ ಆಪಲ್ ಇದುವರೆಗೂ ವಯರ್ ಲೆಸ್ ಚಾರ್ಜಿಂಗ್ ಮ್ಯಾಟ್ ಬಿಡುಗಡೆಗೊಳಿಸುವ ಬಗ್ಗೆ ಯಾವುದೇ ಸುದ್ದಿ ಇಲ್ಲ.

ತಪ್ಪು: ಆಂಡ್ರಾಯ್ಡ್ ನ ಇತ್ತೀಚೆಗಿನ ದತ್ತು ಸಂಖ್ಯೆಗಳು ಕಳಪೆಯಾಗಿದೆ

ಆಂಡ್ರಾಯ್ಡ್ 9.0 ಬಂತು ಆದರೂ ಕೆಲವು ಸ್ಮಾರ್ಟ್ ಫೋನ್ ಗಳು ಹಳೆಯ ವರ್ಷನ್ ನ ಆಂಡ್ರಾಯ್ಡ್ ನಲ್ಲೇ ರನ್ ಆಗುತ್ತದೆ.

ಯಶಸ್ಸು: ಮೈಕ್ರೋಸಾಫ್ಟ್ ವಿಂಡೋಸ್ 10 ಗೆ ಹೊಸ ಫೀಚರ್ ಗಳು

ಯಶಸ್ಸು: ಮೈಕ್ರೋಸಾಫ್ಟ್ ವಿಂಡೋಸ್ 10 ಗೆ ಹೊಸ ಫೀಚರ್ ಗಳು

ಮೈಕ್ರೋಸಾಫ್ಟ್ ನ ಫ್ಲ್ಯಾಗ್ ಶಿಪ್ ಓಎಸ್ ಕೆಲವು ಹೊಸ ಫೀಚರ್ ಗಳನ್ನು ಪಡೆದಿದ್ದು ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡುತ್ತದೆ.

ತಪ್ಪು: ಗೂಗಲ್ ನ ಡಾಟಾ ಉಲ್ಲಂಘನೆ

ವರ್ಷದಲ್ಲಿ ಎರಡು ಬಾರಿ ಗೂಗಲ್ + ನಲ್ಲಿ ಮಿಲಿಯನ್ ಬಳಕೆದಾರರ ಡಾಟಾ ಸೋರಿಕೆಯಾಯ್ತು. ಇದು ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು.

ತಪ್ಪು: ಹೊಸ ಆಪಲ್ ಐಪ್ಯಾಡ್ ಗಳ ಬೆಲೆ

ಆಪಲ್ ಐಪ್ಯಾಡ್ ಗಳನ್ನು ಅತ್ಯುತ್ತಮವಾಗಿ ತಯಾರಿಸಿತ್ತು ಎಂಬುದೇನೋ ನಿಜ. ಆದರೆ ಅದರ ಬೆಲೆ ಭಾರೀ ಆಶ್ಚರ್ಯಕ್ಕೆ ಕಾರಣವಾಗಿತ್ತು. ದುಬಾರಿ ಐಪ್ಯಾಡ್ ಅಂದರೆ ಅದು 1.71 ಲಕ್ಷದ್ದಾಗಿತ್ತು.

ಯಶಸ್ಸು: ಆಪಲ್ $1- ಟ್ರಿಲಿಯನ್ ಮಾರ್ಕ್ ನ್ನು ದಾಟಿದ್ದು

ಯಶಸ್ಸು: ಆಪಲ್ $1- ಟ್ರಿಲಿಯನ್ ಮಾರ್ಕ್ ನ್ನು ದಾಟಿದ್ದು

ಖಂಡಿತ ಇದು ಅಲ್ವಾವಧಿಯಲ್ಲಿ ಮಾಡಿದ ಆಪಲ್ ನ ಸಾಧನೆ. ಹೌದು 1 ಟ್ರಿಲಿಯನ್ ಮಾರ್ಕ್ ನ್ನು ಮಾರುಕಟ್ಟೆಯಲ್ಲಿ ಒಂದು ಟೆಕ್ ಕಂಪೆನಿ ದಾಟಿದ್ದು ಸಾಧನೆಯ ಗರಿಯನ್ನು ಆಪಲ್ ಗೆ ಸೇರಿಸಿದೆ.

ಯಶಸ್ಸು: ಮಾರುಕಟ್ಟೆಯಲ್ಲಿ ಮೈಕ್ರೋಸಾಫ್ಟ್ ನ ಅಭಿವೃದ್ಧಿ

ಯಶಸ್ಸು: ಮಾರುಕಟ್ಟೆಯಲ್ಲಿ ಮೈಕ್ರೋಸಾಫ್ಟ್ ನ ಅಭಿವೃದ್ಧಿ

ಮಾರುಕಟ್ಟೆಯ ಅಭಿವೃದ್ಧಿ ವಿಚಾರದಲ್ಲಿ 2018 ರಲ್ಲಿ ಮೈಕ್ರೋಸಾಫ್ಟ್ ಆಪಲ್ ನ ಸಮೀಪಕ್ಕೆ ಬಂದಿದೆ. ಮೈಕ್ರೋಸಾಫ್ಟ್ ನ ಸತ್ಯ ನಡೆಲ್ಲಾ ಸರಿಯಾದ ಟ್ರ್ಯಾಕ್ ನಲ್ಲಿ ಸಾಗುತ್ತಿದ್ದಾರೆ ಎಂಬುದನ್ನು ಇದು ಸಾಧಿಸಿ ತೋರಿಸಿತ್ತು.

ತಪ್ಪು: ಆಪಲ್ ನ ಹೋಮ್ ಪಾಡ್ ಗಳು

ಬೆಳೆಯುತ್ತಿರುವ ವರ್ಗದಲ್ಲಿ ಆಪಲ್ ಅಮೇಜಾನ್ ಮತ್ತು ಗೂಗಲ್ ಗಿಂತ ಬಹಳ ಹಿಂದೆ ಉಳಿದಿದೆ. ಸ್ಮಾರ್ಟ್ ಸ್ಪೀಕರ್ ಮಾರುಕಟ್ಟೆಯಲ್ಲಿ ನಿರೀಕ್ಷೆ ಹುಟ್ಟಿಸಿದ್ದ ಮಟ್ಟಕ್ಕೆ ಆಪಲ್ ಹೋಮ್ ಪಾಡ್ ಗಳು ಯಾವುದೇ ಪರಿಣಾಮವನ್ನೂ ಮಾಡಲಿಲ್ಲ.

Best Mobiles in India

English summary
The biggest hits and misses from Google, Apple and Microsoft in 2018

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X