2015ರಲ್ಲಿ ಇಂಟರ್ನೆಟ್‌ನಲ್ಲಾದ ಅತಿದೊಡ್ಡ ಫೇಕ್‌ನ್ಯೂಸ್‌ಗಳು

By Suneel
|

ಇಂಟರ್ನೆಟ್‌ ಆಕ್ಸೆಸ್‌ ಎಂಬುದು ದಿನನಿತ್ಯ ಮಾಹಿತಿಯನ್ನು ತಿಳಿಯಲು ಹಾಗೂ ಉತ್ತಮ ಕೆಲಸಗಳಿಗಾಗಿ ಬಳಸಿಕೊಳ್ಳುವುದಾಗಿದೆ. ಅಲ್ಲದೇ ಇಂದು ಮಾಹಿತಿಯನ್ನು ಅತಿಶೀಘ್ರದಲ್ಲಿ ಹುಡುಕಲು ಇರುವ ಅತ್ಯಮೂಲ್ಯ ಮಾಧ್ಯಮ ಇಂಟರ್ನೆಟ್‌ ಆಗಿದೆ. ಆದರೆ ಇಂತಹ ಮಾಧ್ಯಮದಲ್ಲೂ ಕೆಲವು ವೇಳೆ ನಕಲಿ ಮಾಹಿತಿಗಳನ್ನು ಅಪ್‌ಲೋಡ್‌ ಮಾಡಿ ದೊಡ್ಡ ಕೀಟಲೆಗಳನ್ನು ಮಾಡಲಾಗುತ್ತಿದೆ.

ಇಂಟರ್ನೆಟ್‌ನಲ್ಲಿ ಕೀಟಲೆ ಮಾಹಿತಿಗಳು, ನಕಲಿ ಮಾಹಿತಿಗಳು ಸಹ ಕೆಲವೊಮ್ಮೆ ಶೀಘ್ರವಾಗಿ ಪ್ರಪಂಚದಾದ್ಯಂತ ಬಹುಬೇಗ ತಲುಪುತ್ತವೆ. 2015ರಲ್ಲಿ ಇಂಟರ್ನೆಟ್‌ನಲ್ಲಿ ಕೆಲವು ದೊಡ್ಡ ಕೀಟಲೆ ಮಾಹಿತಿಗಳು ಪ್ರಪಂಚದಾದ್ಯಂತ ಹಬ್ಬಿಬಿಟ್ಟಿವೆ. ಹಾಗೂ ಅವುಗಳು ನಕಲಿ ಮಾಹಿತಿಗಳಾಗಿವೆ. ಅವುಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ಓದಿ ತಿಳಿಯಿರಿ.

ಇಂಟರ್ನೆಟ್‌ನಲ್ಲಿ ಹಬ್ಬಿದ ನಕಲಿ ಮಾಹಿತಿ

ಇಂಟರ್ನೆಟ್‌ನಲ್ಲಿ ಹಬ್ಬಿದ ನಕಲಿ ಮಾಹಿತಿ

ಈ ಚಿತ್ರವನ್ನು ಮಾರ್ಕ್‌ ಜುಕರ್‌ಬರ್ಗ್ ಫೇಸ್‌ಬುಕ್‌ ಪೇಜ್‌ನಿಂದ ಶೇರ್‌ಮಾಡಿದರೆ ಬಳಕೆದಾರರಿಗೆ ಮಿಲಿಯನ್‌ ಹಣ ಕೊಡುವ ಬಗ್ಗೆ ಸುದ್ದಿಯಾಗಿತ್ತು. ಅದರೆ ಇದು ನಕಲಿ ಸುದ್ದಿ ಆಗಿದೆ.

ಫುಚ್‌ ದತ್‌ ಬಿಚ್‌

ಫುಚ್‌ ದತ್‌ ಬಿಚ್‌

ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬನು ತನ್ನ ಹೆಸರನ್ನು ಅಪರಾಧವೆಸಗಿದ ವಿಯೆಟ್ನಾಮೀಸ್‌ ಹೆಸರು ಎಂದು ಫೇಸ್‌ಬುಕ್‌ ಬ್ಯಾನ್‌ಮಾಡಿತ್ತು ಎಂದು ಹೇಳಿದ್ದನು. ಇದು ಪ್ರಪಂಚದಾದ್ಯಂತ ಮಿಡಿಯಾಗಳಲ್ಲಿ ಪ್ರಸಾರ ಪಡೆದಿತ್ತು. ಆದರೆ ವ್ಯಕ್ತಿಯೊಬ್ಬರು ಬಿಚ್‌ ಎಂಬುವವರು ಇದು ಸರ್‌ ನೇಮ್‌ ಅಲ್ಲಾ. ಆತನು ಮಿಡಿಯಾದವರನ್ನು ಫೂಲ್‌ ಮಾಡಲು ಯತ್ನಿಸಿದ್ದಾನೆ ಎಂದು ಹೇಳಲಾಗಿದೆ.

ಸ್ಟ್ಯಾನ್ಲಿ ಕುಬ್ರಿಕ್‌ ಚಂದ್ರನ ಮೇಲೆ ಇಳಿದಿರುವ ನಕಲಿ ಮಾಹಿತಿ

ಸ್ಟ್ಯಾನ್ಲಿ ಕುಬ್ರಿಕ್‌ ಚಂದ್ರನ ಮೇಲೆ ಇಳಿದಿರುವ ನಕಲಿ ಮಾಹಿತಿ

ಸ್ಟ್ಯಾನ್ಲಿ ಕುಬ್ರಿಕ್‌ ಚಂದ್ರನಲ್ಲಿ ಹೋಗಿರುವ ಒಂದು ವೀಡಿಯೋ 2015 ರಲ್ಲಿ ಆನ್‌ಲೈನ್‌ನಲ್ಲಿ ಹರಿದಾಡಿತ್ತು. ಆದರೆ ಅದು ನಕಲಿ ವಿಷಯವಾಗಿದೆ.

 ಟಿಂಡರ್ ಫಾರ್‌ ಫೈಟಿಂಗ್‌

ಟಿಂಡರ್ ಫಾರ್‌ ಫೈಟಿಂಗ್‌

ಕಳೆದ ವರ್ಷ ಟಿಂಡರ್‌ ಫಾರ್ ಫೈಟಿಂಗ್‌ ಎಂದು ಆಪ್‌ ಒಂದನ್ನು ಲಾಂಚ್‌ ಮಾಡುವ ಬಗೆಗೆ ಮಾಧ್ಯಮ ಬರಹಗಾರರು ವರದಿ ಮಾಡಿದ್ದರು. ಆದರೆ ಲಾಂಚ್‌ ಮಾಡುವ ದಿನಾಂಕ ಯಾವುದೇ ರೀತಿಯ ಆಪ್‌ ಲಾಂಚ್‌ ಆಗಲಿಲ್ಲ. ಅದು ಫೇಕ್‌ ನ್ಯೂಸ್ ಆಗಿತ್ತು. ಆಪ್‌ ಅನ್ನು Rumblr ಎಂದು ಕರೆಯಲಾಗಿತ್ತು.

ಮಾನವನವರ ಮಲವನ್ನು ಆಹಾರವಾಗಿ ಬದಲಿಸುವ ಸಂಶೋಧನೆ

ಮಾನವನವರ ಮಲವನ್ನು ಆಹಾರವಾಗಿ ಬದಲಿಸುವ ಸಂಶೋಧನೆ

ನಾಸಾ ಮಾನವನವರ ಮಲವನ್ನು ಆಹಾರವಾಗಿ ಬದಲಿಸುವ ಸಂಶೋಧನೆಯನ್ನು ಕೈಗೊಳ್ಳಲು $200,೦೦೦ ಹಣವನ್ನು ಅನುದಾನ ಮಾಡಿದೆ ಎಂದು ಹೇಳಲಾಗಿತ್ತು. ಆದರೆ ನಾಸಾ ಹೇಳಿದ್ದು, 'ಮಾನವನ ಮೂತ್ರ ಮತ್ತು ಉಸಿರನ್ನು ಸ್ಪೇಸ್‌ಗೆ ಹೋಗುವಾಗ ಹೇಗೆ ಪುನರ್‌ ಆಹಾರವಾಗಿ ಬದಲಿಸಬಹುದು ಎಂಬುದನ್ನು ಮಾತ್ರ ಹೇಳಿತ್ತು'.

ನವೆಂಬರ್‌ ತಿಂಗಳಲ್ಲಿ 15 ದಿನಗಳು ಸಂಪೂರ್ಣ ಕತ್ತಲೆ

ನವೆಂಬರ್‌ ತಿಂಗಳಲ್ಲಿ 15 ದಿನಗಳು ಸಂಪೂರ್ಣ ಕತ್ತಲೆ

ನವೆಂಬರ್‌ ತಿಂಗಳಲ್ಲಿ 15 ದಿನಗಳು ಸಂಪೂರ್ಣ ಕತ್ತಲೆಯಾಗಿರುತ್ತದೆ ಎಂದು ಹೇಳಿತ್ತು ಎಂಬುದು ಸುದ್ದಿಯಾಗಿತ್ತು. ಆದರೆ ನಾಸಾ ಈ ಭವಿಷ್ಯವನ್ನು ಸಂಪೂರ್ಣವಾಗಿ ಹೀಗೆ ಹೇಳಿರಲಿಲ್ಲ. ಆದರೆ ನಕಲಿ ಸುದ್ದಿಯಾಗಿ ಇಂಟರ್ನೆಟ್‌ನಲ್ಲಿ ಹರಿದಾಡಿತ್ತು.

ಪ್ಯಾರಿಸ್‌ನದಾಳಿಗೆ 4 ಪ್ಲೇಸ್ಟೇಷನ್‌ ಉಪಕರಣ

ಪ್ಯಾರಿಸ್‌ನದಾಳಿಗೆ 4 ಪ್ಲೇಸ್ಟೇಷನ್‌ ಉಪಕರಣ

ಐಎಸ್‌ಐಎಸ್, ‌ಪ್ಯಾರಿಸ್‌ನದಾಳಿಗೆ 4 ಪ್ಲೇಸ್ಟೇಷನ್‌ ಉಪಕರಣಗಳ ಬಳಕೆ ಮಾಡುಲಾಗುತ್ತದೆ ಎಂದು ಕೆಲವು ದಿನಗಳ ಹಿಂದೆ ಬೆಲ್ಜಿಯಂ ಪ್ರಧಾನ ಮಂತ್ರಿ ಜಾನ್‌ ಜಾಂಬಾನ್‌ ಹೇಳಿದ್ದರು. ಆದರೆ ಕನ್ಸೋಲ್‌ಗಳನ್ನು ಪ್ಯಾರಿಸ್‌ ದಾಳಿಗೆ ಬಳಸಿರುವುದಕ್ಕೆ ಸಾಕ್ಷಿ ಯಾವುದು ಇರಲಿಲ್ಲ. ಇದು ಫೇಕ್‌ ನ್ಯೂಸ್‌ ಆಗಿದೆ.

ಸೆಲ್ಫೀ ಫೋಟೋ

ಸೆಲ್ಫೀ ಫೋಟೋ

2015ರ ಅತ್ಯಂತ ಪ್ರಖ್ಯಾತ ಫೇಕ್‌ ನ್ಯೂಸ್‌ ಎಂದರೆ ದುಷ್ಕರ್ಮಿಗಳು ಕೆನಡಾ ಸಿಖ್ಖ್ ವ್ಯಕ್ತಿಯೊಬ್ಬನನ್ನು ಫೋಟೋ ಶಾಪ್‌ನಲ್ಲಿ ಐಫ್ಯಾಡ್‌ ಇಡಿದುಕೊಂಡಿರುವುದನ್ನು ಕುರಾನ್‌ ಎಂದು ತೋರ್ಪಡಿಸಿ, ಹಾಗೂ ಆತ್ಮಹತ್ಯೆ ಬಾಂಬ್‌ ಧರಸಿರುವ ರೀತಿ ಮಾಡಿ ಸೆಲ್ಫೀ ತೆಗೆದುಕೊಳ್ಳುತ್ತಿರುವ ದಾಳಿಕೋರ ಎಂದು ಬಿಂಬಿಸಲಾಗಿತ್ತು. ಆದರೆ ಇದು ಫೇಕ್ ನ್ಯೂಸ್‌ ಎಂದು ನಂತರದಲ್ಲಿ ತಿಳಿಯಿತು.

ಗಿಜ್‌ಬಾಟ್‌ನ ಇತ್ತೀಚಿನ ಲೇಖನಗಳು

ಗಿಜ್‌ಬಾಟ್‌ನ ಇತ್ತೀಚಿನ ಲೇಖನಗಳು

ವ್ಯಕ್ತಿಯ ನೆರಳಿನಿಂದ ಟೈಮ್‌ ಹೇಳುವ ವ್ಯಕ್ತಿಯ ನೆರಳಿನಿಂದ ಟೈಮ್‌ ಹೇಳುವ "ಶಾಡೊಪ್ಲೇ ಗಡಿಯಾರ"

ಭೂಮಿಗೆ ಕಾದಿದೆ ಗಂಡಾಂತರ!!!ಭೂಮಿಗೆ ಕಾದಿದೆ ಗಂಡಾಂತರ!!!

ಬೆಳಕಿನಿಂದ ಡೇಟಾ ವರ್ಗಾಯಿಸುವ ಹೊಸ ಚಿಪ್ಬೆಳಕಿನಿಂದ ಡೇಟಾ ವರ್ಗಾಯಿಸುವ ಹೊಸ ಚಿಪ್

ಗಿಜ್‌ಬಾಟ್‌

ಗಿಜ್‌ಬಾಟ್‌

https://www.facebook.com/GizBotKannada/?fref=ts

Best Mobiles in India

English summary
The biggest viral hoaxes of 2015. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X