ಟ್ವಿಟರ್ ಖರೀದಿ: ಎಲಾನ್‌ ಮಸ್ಕ್‌ ಮಾಡಿದ ಮೊದಲ 'ಟ್ವೀಟ್' ವೈರಲ್‌ ಆಗಿದ್ದೇಕೆ?

|

ವಿಶ್ವದ ಜನಪ್ರಿಯ ಮೈಕ್ರೋಬ್ಲಾಗಿಂಗ್ ಸಾಮಾಜಿಕ ಜಾಲತಾಣ ಟ್ವಿಟರ್ ಸಂಸ್ಥೆಯನ್ನು, ಶ್ರೀಮಂತ ಉದ್ಯಮಿ ಹಾಗೂ ಅಮೆರಿಕದ ಟೆಸ್ಲಾ ಎಲೆಕ್ಟ್ರಿಕ್ ಕಾರ್ ಕಂಪನಿ ಮುಖ್ಯಸ್ಥ ಎಲಾನ್ ಮಸ್ಕ್ ಖರೀದಿಸುವ ಪ್ರಕ್ರಿಯೇ ಪೂರ್ಣ ಮಾಡಿದ ನಂತರ ಮೊದಲ ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್ ಈಗ ಸೋಶಿಯಲ್‌ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದ್ದೆ.

ಟ್ವಿಟರ್‌ (twitter)

ಹೌದು, ಎಲಾನ್‌ ಮಸ್ಕ್‌ ಅವರು 44 ಶತಕೋಟಿ ಡಾಲರ್ ಗೆ (ಸುಮಾರು 3.62 ಲಕ್ಷ ಕೋಟಿಗೆ) ಜನಪ್ರಿಯ ಸಾಮಾಜಿಕ ಜಾಲತಾಣವಾದ ಟ್ವಿಟರ್‌ (twitter) ಅನ್ನು ತಮ್ಮ ತೆಕ್ಕೆಗೆ ಪಡೆದುಕೊಂಡಿದ್ದಾರೆ. ಆ ಬಳಿಕ ಅವರು ಮಾಡಿರುವ ಕಿರು ಪದಗಳನ್ನು ಒಳಗೊಂಡ ಆ ಒಂದು ಟ್ವೀಟ್ ಈಗ ಭಿನ್ನ ಅರ್ಥಗಳಿಗೆ ನಾಂದಿಯಾಗಿದೆ.

the bird is freed

ಎಲಾನ್‌ ಮಸ್ಕ್‌ ಅವರು ಟ್ವಿಟರ್ ಖರೀದಿ ಮಾಡಿದ ಬಳಿಕ 'the bird is freed' (ಹಕ್ಕಿ ಈಗ ಮುಕ್ತವಾಗಿದೆ) ಎಂದು ಮೊದಲ ಟ್ವೀಟ್ ಮಾಡಿದ್ದು, ಈ ಟ್ವೀಟ್ ವೈರಲ್ ಆಗಿದೆ. ಇನ್ನು ಟ್ವಿಟ್ಟರ್ ಅನ್ನು ತಮ್ಮ ತೆಕ್ಕೆಗೆ ಪಡೆಯುವ ಮುನ್ನ ಎಲಾನ್ ಮಸ್ಕ್ ಬುಧವಾರ ಟ್ವಿಟರ್‌ನ ಪ್ರಧಾನ ಕಛೇರಿಗೆ ನಗುವಿನೊಂದಿಗೆ ಮತ್ತು ಪಿಂಗಾಣಿ ಸಿಂಕ್ ಅನ್ನು ಹೊತ್ತೊಯ್ದರು, ತರುವಾಯ 'ಅದು ಮುಳುಗಲು ಬಿಡಿ' (let that sink in) ಎಂದು ಟ್ವೀಟ್ ಮಾಡಿದರು. ಅವರು ತಮ್ಮ ಟ್ವಿಟ್ಟರ್ ಪ್ರೊಫೈಲ್‌ನಲ್ಲಿ ತಮ್ಮ ವಿವರಣೆಯನ್ನು 'ಚೀಫ್ ಟ್ವಿಟ್' (Chief Twit) ಎಂದು ಬದಲಾಯಿಸಿದರು.

ಪರಾಗ್ ಅಗರವಾಲ್

ಎಲಾನ್‌ ಮಸ್ಕ್‌ ಟ್ವಿಟರ್ ಮಾಲೀಕರಾದ ಬಳಿಕ ಅವರು ಟ್ವಿಟರ್ ಮುಖ್ಯ ಕಾರ್ಯನಿರ್ವಾಹಕ ಪರಾಗ್ ಅಗರವಾಲ್, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಮತ್ತು ಕಾನೂನು ವ್ಯವಹಾರಗಳು ಮತ್ತು ನೀತಿ ಮುಖ್ಯಸ್ಥ ವಿಜಯ ಗಡ್ಡೆ ಅವರನ್ನು ವಜಾಗೊಳಿಸಿದ್ದಾರೆ ಎಂದು ಪ್ರಮುಖ ಮಾಧ್ಯಮಗಳು ವರದಿ ಮಾಡಿದೆ. ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ನಕಲಿ ಖಾತೆಗಳ ಸಂಖ್ಯೆಯ ಬಗ್ಗೆ ಇವರು ಮತ್ತು ಟ್ವಿಟರ್ ಹೂಡಿಕೆದಾರರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಟ್ವಿಟರ್ ಖರೀದಿಸಲು ಕಾರಣ ಏನು?

ಟ್ವಿಟರ್ ಖರೀದಿಸಲು ಕಾರಣ ಏನು?

ಎಲಾನ್‌ ಮಸ್ಕ್ ಟ್ವಿಟ್ಟರ್ ಅನ್ನು ಖರೀದಿಸುವ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಅವರು, 'ನಾನು ಟ್ವಿಟರ್ ಅನ್ನು ಏಕೆ ಖರೀದಿಸಿದೆ ಎಂಬುದರ ಕುರಿತು ಅನೇಕ ಊಹಾಪೋಹಗಳಿವೆ, ಆದರೆ ಅವುಗಳಲ್ಲಿ ಹೆಚ್ಚಿನವು ತಪ್ಪು ಎಂದು ಸಾಬೀತಾಗಿದೆ. ನಮ್ಮ ಭವಿಷ್ಯದ ನಾಗರಿಕತೆಯು ವಿಭಿನ್ನ ಸಿದ್ಧಾಂತಗಳು ಮತ್ತು ನಂಬಿಕೆಗಳ ಜನರು ಯಾವುದೇ ರೀತಿಯ ಹಿಂಸೆಯಿಲ್ಲದೆ ಆರೋಗ್ಯಕರ ಚರ್ಚೆಯನ್ನು ನಡೆಸುವ ಸಾಮಾನ್ಯ ಡಿಜಿಟಲ್ ಜಾಗವನ್ನು ಹೊಂದಲು ತಾನು ಟ್ವಿಟರ್ ಅನ್ನು ಖರೀದಿಸಿರುವುದಾಗಿ ಮಸ್ಕ್ ಬಹಿರಂಗಪಡಿಸಿದ್ದಾರೆ.

ಅತ್ಯಂತ

ಎಲಾನ್‌ ಮಸ್ಕ್ ಅವರು ಟ್ವಿಟರ್ ಜೊತೆಗಿನ ಒಪ್ಪಂದವನ್ನು ಹಣ ಗಳಿಸಲು ಮಾಡಿಲ್ಲ ಎಂದು ಬರೆದಿದ್ದಾರೆ. ನಾನು ಪ್ರೀತಿಸುವ ಮಾನವೀಯತೆಗಾಗಿ ನಾನು ಈ ಒಪ್ಪಂದವನ್ನು ಮಾಡಿದ್ದೇನೆ. ನಾನು ಇದನ್ನು ನಮ್ರತೆಯಿಂದ ಮಾಡುತ್ತಿದ್ದೇನೆ ಏಕೆಂದರೆ ಅಂತಹ ಗುರಿಯನ್ನು ಸಾಧಿಸುವಲ್ಲಿ ವಿಫಲತೆ ಎದುರಾಗುವ ಸಾಧ್ಯತೆ ಇದೆ ಎಂಬುವುದನ್ನು ನೆನಪಿಟ್ಟುಕೊಂಡು ಮುಂದೆ ಸಾಗಬೇಕು ಎಂದು ಹೇಳಿದ್ದಾರೆ.

ಮಿಮ್ಸ್‌ ಜೋರಾಗಿವೆ!

ಮಿಮ್ಸ್‌ ಜೋರಾಗಿವೆ!

ಟ್ವಿಟರ್ ಮುಖ್ಯ ಕಾರ್ಯನಿರ್ವಾಹಕ ಪರಾಗ್ ಅಗರವಾಲ್, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಮತ್ತು ಕಾನೂನು ವ್ಯವಹಾರಗಳು ಮತ್ತು ನೀತಿ ಮುಖ್ಯಸ್ಥ ವಿಜಯ ಗಡ್ಡೆ ಅವರನ್ನು ವಜಾಗೊಳಿಸಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರು, ಮುಖ್ಯವಾಗಿ ಭಾರತದಲ್ಲಿ ಪರಾಗ್‌ ಅಗರವಾಲ್‌ ಅವರ ಬಗ್ಗೆ ಟ್ರೋಲ್‌, ಮಿಮ್ಸ್‌ ಟ್ರೆಂಡ್ ಆಗುತ್ತಿವೆ. ಈ ಕುರಿತಂತೆ ಕೆಲವೊಂದು ಮಿಮ್ಸ್‌ಗಳನ್ನು ಈ ಲೇಖನದಲ್ಲಿ ಲಗತ್ತಿಸಲಾಗಿದೆ ಮುಂದೆ ನೋಡಿರಿ.

Best Mobiles in India

English summary
The Bird Is Freed: Elon musk first tweet after buying twitter.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X