ಲಭ್ಯವಿರುವ ಐದು ಅತ್ಯುತ್ತಮ ಆಂಡ್ರಾಯ್ಡ್‌ ಆಪ್‌ಗಳು!

|

ಇದು ಟೆಕ್ನಾಲಜಿ ಜಮಾನ. ಇಲ್ಲಿ ಎಲ್ಲವೂ ಟೆಕ್ನಾಲಜಿ ಆದಾರಿತವಾಗಿವೆ. ಸದ್ಯ ಯಾವುದು ಅಸಾಧ್ಯ ಇಲ್ಲ ಅನ್ನುವಷ್ಟರ ಮಟ್ಟಿಗೆ ಆಪ್‌ ಆಧಾರಿತ ಸೇವೆಗಳು ಲಭ್ಯವಿವೆ. ಅಂಗೈ ಅಗಲದ ಸ್ಮಾರ್ಟ್‌ಫೋನ್‌ನಲ್ಲಿ ಇಡೀ ಜಗತ್ತಿನ ವಿಚಾರಗಳು ಈ ಅಪ್ಲಿಕೇಶನ್‌ ಮೂಲಕ ತಿಳಿಯಬಹುದಾಗಿದೆ. ಅಷ್ಟೇ ಅಲ್ಲ ಪ್ರತಿಯೊಂದಕ್ಕೂ ವಿಷಯಕ್ಕೂ, ಕ್ಷೇತ್ರಕ್ಕೂ ಸಂಬಂಧಿಸಿದ ಆಪ್‌ಗಳನ್ನ ಇಂದಿನ ದಿನಗಳಲ್ಲಿ ಅಭಿವೃದ್ದಿ ಪಡಿಸಲಾಗಿದ್ದು, ಎಲ್ಲವೂ ಆಪ್‌ ಆಧಾರಿತವಾಗುತ್ತಿದೆ.

ಆಪ್ಲಿಕೇಶನ್

ಹೌದು, ಇಂದು ಎಲ್ಲಾ ವಲಯದಲ್ಲೂ ಆಪ್‌ ಆಧಾರಿತ ಸೇವೆಯನ್ನ ಕಾಣಬಹುದಾಗಿದೆ. ಶಿಕ್ಷಣ, ಆರೋಗ್ಯ, ಮನರಂಜನೆ, ಬ್ಯುಸಿನೆಸ್‌ ಎಲ್ಲಾ ವಲಯದಲ್ಲೂ ಕೂಡ ಇಂದು ಆಪ್‌ ಆಧಾರಿತ ಸೇವೆ ಲಭ್ಯವಾಗುತ್ತಿದೆ. ಪ್ರಸ್ತುತ ದಿನಗಳಲ್ಲಿ ಪರಸ್ಪರರ ನಡುವಿನ ಸಂವಹನ ಕಡಿಮೆ ಆಗುತ್ತಿದೆಯಾದರೂ ಆಪ್‌ಗಳಲ್ಲಿ ಮನುಜ ಪಡೆಯುತ್ತಿರುವ ಸಲಹೆ ಸೂಚನೆಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಂತಹ ಸನ್ನಿವೇಶದಲ್ಲಿ ನಮಗೆ ನಿಮಗೆಲ್ಲಾ ಸಹಜವಾಗಿ ಒಂದು ಕುತೂಹಲ ಇದ್ದೇ ಇರುತ್ತದೆ. ಅದು ಏನೆಂದರೆ ಲಭ್ಯವಿರುವ ಆಪ್‌ಗಳಲ್ಲಿ ಪ್ರಸ್ತುತ ಅತ್ಯುತ್ತಮ ಆಪ್ಲಿಕೇಶನ್‌ಗಳು ಯಾವುವು ಅಂತಾ. ಸದ್ಯ ಈ ಲೇಖನದಲ್ಲಿ ಪ್ರಸ್ತುತ ಲಭ್ಯವಿರುವ ಅತ್ಯುತ್ತಮ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳ ಬಗ್ಗೆ ತಿಳಿಸಲಾಗಿದೆ.

ಫೇಸ್‌ಬುಕ್ ಮೆಸೆಂಜರ್

ಫೇಸ್‌ಬುಕ್ ಮೆಸೆಂಜರ್

ಸದ್ಯ ಲಭ್ಯವಿರುವ ಅತ್ಯುತ್ತಮ ಅಪ್ಲಿಕೇಶನ್‌ಗಳಲ್ಲಿ ಫೇಸ್‌ಬುಕ್‌ ಮೆಸೆಂಜರ್‌ ಕೂಡ ಒಂದಾಗಿದೆ. ಫೇಸ್‌ಬುಕ್ ಮೆಸೆಂಜರ್ ಅಪ್ಲಿಕೇಶನ್ ಬಳಕೆ ಸಾಕಷ್ಟು ಸುಲಭವಾಗಿದ್ದು, ಫೇಸ್‌ಬುಕ್‌ ಖಾತೆ ಒಂದಿದ್ದರೆ ಸಹಜವಾಗಿಯೇ ಮೆಸೆಂಜರ್‌ ಖಾತೆಯನ್ನು ಬಳಸಬಹುದಾಗಿದೆ. ಈ ಅಪ್ಲಿಕೇಶನ್‌ ಸರಳವಾಗಿದ್ದು, ಧ್ವನಿ ಮತ್ತು ವೀಡಿಯೊ ಕರೆಗಳನ್ನು ಸುಲಭವಾಗಿ ನಿರ್ವಹಿಸುತ್ತದೆ.

ಲಿಂಕ್ಡ್‌ಇನ್

ಲಿಂಕ್ಡ್‌ಇನ್

ಫ್ರೋಫೇಷನಲ್ ನೆಟ್‌ವರ್ಕಿಂಗ್‌ ದೈತ್ಯ ಲಿಂಕ್ಡ್‌ಇನ್‌ ಬಳಕೆದಾರರಿಗೆ ಜಾಬ್‌ ಸರ್ಚಿಂಗ್‌ ಸೇರಿದಂತೆ ಅನೇಕ ವಿಚಾರಗಳಲ್ಲಿ ಸಹಾಯಕವಾಗಿದೆ. ನೌಕರಿಯನ್ನು ಹುಡುಕುವ ಯುವಕರಿಗೆ ಇದು ನೆಚ್ಚಿನ ಅಪ್ಲಿಕೇಶನ್‌ ಆಗಿದೆ. ಅಲ್ಲದೆ ಇದು ಫ್ರೋಫೇಷನಲ್ ನೆಟ್‌ವರ್ಕಿಂಗ್ ಅಪ್ಲಿಕೇಶನ್‌ ಆಗಿರುವುದರಿಂದ ಯುವಜನತೆಗೆ ಇದು ಒಂದು ರೀತಿಯ ಆತ್ಮಿಯ ಸ್ನೇಹಿತನಂತೆ ಕಾರ್ಯನಿರ್ವಹಿಸುತ್ತದೆ.

ನೋವಾ ಲಾಂಚರ್

ನೋವಾ ಲಾಂಚರ್

ಇದು ನಿಮ್ಮ ಸ್ಮಾರ್ಟ್‌ಫೋನ್‌ನ ಹೋಮ್ ಸ್ಕ್ರೀನ್ ಸೆಟ್‌ಅಪ್‌ಗಳನ್ನು ಬ್ಯಾಕಪ್ ಮಾಡುವ ಮತ್ತು ಪುನಃ ಸ್ಥಾಪಿಸುವ ಸಾಮರ್ಥ್ಯ,ವನ್ನು ಹೊಂದಿದೆ. ಅಲ್ಲದೆ ನಿಮ್ಮ ಎಲ್ಲಾ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳಿಗೆ ಐಕಾನ್ ಥೆಮಿಂಗ್, ಹೋಮ್ ಸ್ಕ್ರೀನ್ ಮತ್ತು ಅಪ್ಲಿಕೇಶನ್ ಡ್ರಾಯರ್‌ಗಾಗಿ ಟನ್ ಕಸ್ಟಮೈಸ್ ಮಾಡುವ ಫೀಚರ್ಸ್‌ಗಳನ್ನ ಈ ಆಪ್ಲಿಕೇಶನ್‌ ಹೊಂದಿದೆ. ಅಲ್ಲದೆ ಇದರ ಮೂಲಕ ನೀವು ಗೆಸ್ಚರ್ ಕಂಟ್ರೋಲ್‌, ಅಪ್ಲಿಕೇಶನ್‌ಗಳಳು, ಬ್ಯಾಡ್ಜ್‌ಗಳು ಮತ್ತು ಐಕಾನ್ ಸ್ವೈಪ್ ಕ್ರಿಯೆಗಳನ್ನು ಸಹ ಇದರ ಮೂಲಕ ನಿಭಾಯಿಸಬಹುದಾಗಿದೆ.

ಜೆಡ್ಜ್(Zedge)

ಜೆಡ್ಜ್(Zedge)

ಇದು ವಾಲ್‌ಪೇಪರ್‌ಗಳು, ರಿಂಗ್‌ಟೋನ್‌ಗಳು, ಅಧಿಸೂಚನೆ ಆಲರ್ಟ್‌ಮ್ಯೂಸಿಕ್‌ ಮತ್ತು ಅಲಾರಂ ಟ್ಯೂನ್‌ ಅಪ್ಲಿಕೇಶನ್‌ ಆಗಿದೆ. ಇದು ನಿಮ್ಮ ಡಿವೈಸ್‌ನ ಬೇಸಿಕ್‌ ಪಾರ್ಟ್‌ಗಳನ್ನ ಕಸ್ಟಮೈಸ್ ಮಾಡಲು ಕೆಲವು ಆಯ್ಕೆಗಳನ್ನು ನೀಡುತ್ತದೆ. ಅಲ್ಲದೆ ನಿಮಗೆ ನೆನಪಿನಲ್ಲಿಡಬೇಕಾದ ದಿನಗಳನ್ನ ನೀವು ಒಮ್ಮೆ ನೋಡ್‌ ಮಾಡಿದರೆ ಆ ದಿನದ ಥೀಮ್ ಅನ್ನು ಮಾಡುತ್ತದೆ. ಅಲ್ಲದೆ ನಿಮಗೆ ಬೇಕಾದ ವಾಲ್‌ಪೇಪರ್‌ಗಳನ್ನ ಇದರಲ್ಲಿ ಆಯ್ಕೆ ಮಾಡಬಹುದಾಗಿದೆ. ಈ ಆಪ್‌ ಉಚಿತವಾಗಿ ಲಭ್ಯವಾಗಲಿದೆ.

ಸಿಗ್ನಲ್ ಪ್ರೈವೇಟ್ ಮೆಸೆಂಜರ್

ಸಿಗ್ನಲ್ ಪ್ರೈವೇಟ್ ಮೆಸೆಂಜರ್

ಸುರಕ್ಷತೆ ಮತ್ತು ಗೌಪ್ಯತೆಗೆ ಸಂಬಂಧಿಸಿದ ಸೇವೆಯನ್ನು ನೀಡುವ ಅಪ್ಲಿಕೇಶನ್‌ ಇದಾಗಿದೆ. ಜನರು ಸುಲಭವಾಗಿ ಸಂವಹನ ನಡೆಸಲು ಅವಕಾಶ ನೀಡುವುದಕ್ಕೆ ಈ ಅಪ್ಲಿಕೇಶನ್‌ ಸಾಕಷ್ಟು ಸಹಾಯಕವಾಗಿದೆ. ಎನ್‌ಕ್ರಿಪ್ಟ್ ಮಾಡಿದ ಕರೆಗಳು ಮತ್ತು ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಿಗ್ನಲ್ ಅಪ್ಲಿಕೇಶನ್ ಸಾಕಷ್ಟು ಉಪಯುಕ್ತವಾಗಿದೆ.

Most Read Articles
Best Mobiles in India

English summary
here are the best five Android apps currently available.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X