ಪಾಸ್‌ವರ್ಡ್‌ಗಳ ಸುರಕ್ಷತೆ ಹೇಗಿರಬೇಕು?..ಇಲ್ಲಿವೆ ಬೆಸ್ಟ್ ಟಿಪ್ಸ್!!

|

ಅತಿ ದುರ್ಬಲ ಪಾಸ್‌ವರ್ಡ್‌ಗಳು ಎಷ್ಟು ಅಪಾಯಕಾರಿ ಎಂಬುದನ್ನು ಪಾಸ್‌ವರ್ಡ್ ಎಂಬ ಕಲ್ಪನೆ ಹಟ್ಟಿದಾಗಿನಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಆದರೆ, ನಾವು ಮಾತ್ರ ಸುಲಭವಾದ ಪಾಸ್‌ವರ್ಡ್‌ಗಳನ್ನೇ ಎಲ್ಲೆಡೆ ಇಡುವ ಮೂಲಕ ಅದೇ ತಪ್ಪನ್ನು ಮತ್ತೆ ಮತ್ತೆ ಮಾಡುತ್ತಿದ್ದೇವೆ. ಇದರಿಂದಾಗಿ ನಮ್ಮ ಖಾಸಾಗಿ ಮಾಹಿತಿ ಮಾತ್ರವಲ್ಲದೆ ಹಣವನ್ನು ಸಹ ಕಳೆದುಕೊಳ್ಳುತ್ತಿದ್ದೇವೆ.

ಹೌದು, ಸುಲಭವಾಗಿ ನೆನಪಿಟ್ಟುಕೊಳ್ಳಬಹುದಾದ ಹಾಗೂ ಒಂದೇ ಪಾಸ್‌ವರ್ಡ್‌ನಿಂದ ಎಲ್ಲಾ ಖಾತೆಗೂ ಲಾಗಿನ್‌ ಮಾಡುವ ಅಪಾಯಕಾರಿ ಕೆಲಸವನ್ನು ಪ್ರಪಂಚದಲ್ಲಿ ಶೇ.70 ಕ್ಕಿಂತ ಅಧಿಕ ಇಂಟರ್‌ನೆಟ್ ಬಳಕೆದಾರರು ಮಾಡುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಆ ದುರ್ಬಲ ಪಾಸ್‌ವರ್ಡ್‌ಗಳು ಯಾವುವು ಎಂಬ ಪಟ್ಟಿಯನ್ನು ಸಹ ಪ್ರತಿವರ್ಷವೂ ಬಿಡುಗಡೆ ಮಾಡುತ್ತಿವೆ.

ಪಾಸ್‌ವರ್ಡ್‌ಗಳ ಸುರಕ್ಷತೆ ಹೇಗಿರಬೇಕು?..ಇಲ್ಲಿವೆ ಬೆಸ್ಟ್ ಟಿಪ್ಸ್!!

2018ರ ಅತಿ ದುರ್ಬಲ ಪಾಸ್‌ವರ್ಡ್‌ಗಳು ಯಾವುವು ಎಂಬ ಪಟ್ಟಿ ಇತ್ತೀಚಿಗಷ್ಟೇ ಬಿಡುಗಡೆಯಾಗಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ಪಾಸ್‌ವರ್ಡ್ ಸುರಕ್ಷತೆ ಹೇಗಿರಬೇಕು?, ಅತ್ಯುತ್ತಮವಾಗಿ ಪಾಸ್‌ವರ್ಡ್‌ಗಳನ್ನು ಇಡುವುದು ಹೇಗೆ?, ಅಂತರ್ಜಾಲದಲ್ಲಿ ಪಾಸ್‌ವರ್ಡ್‌ ಬಳಕೆ ಹೇಗಿದ್ದರೆ ಚೆನ್ನ? ಎಂಬ ಅತ್ಯಗತ್ಯ ಉಪಯುಕ್ತಕಾರಿ ಮಾಹಿತಿಗಳನ್ನು ನಾವು ತಿಳಿದುಕೊಳ್ಳೋಣ.

ದುರ್ಬಲ ಪಾಸ್‌ವರ್ಡ್‌ ಬೇಡವೇ ಬೇಡ.

ದುರ್ಬಲ ಪಾಸ್‌ವರ್ಡ್‌ ಬೇಡವೇ ಬೇಡ.

ದುರ್ಬಲ ಪಾಸ್‌ವರ್ಡ್‌ ಅಂದರೆ, 12345, 0000, ನಿಮ್ಮ ಹೆಸರು, ನಿಮ್ಮ ಮೊಬೈಲ್‌ ನಂಬರ್‌ ಇತ್ಯಾದಿಗಳನ್ನು ಪಾಸ್‌ವರ್ಡ್‌ ಆಗಿ ಬಳಸದಿರಿ. ಇಂತಹ ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಪಾಸ್‌ವರ್ಡ್‌ ಬಳಕೆ ಬೇಡವೇ ಬೇಡ. ಹಾಗೆಂದು ಹೆಸರಿಗೆ ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ ಜೋಡಿಸಿ ಪಾಸ್‌ವರ್ಡ್‌ ರೂಪಿಸಿದರೆ ಅದನ್ನು ಯಾರು ಬೇಕಾದರೂ ಸುಲಭವಾಗಿ ಕಂಡುಕೊಳ್ಳಬಹುದು ಎಂಬುದನ್ನು ತಿಳಿದಿರಿ.

ಪಾಸ್‌ವರ್ಡ್ ಅನ್ನು ಹೀಗಿಡಿ!

ಪಾಸ್‌ವರ್ಡ್ ಅನ್ನು ಹೀಗಿಡಿ!

ಪಾಸ್‌ವರ್ಡ್‌ನಲ್ಲಿ ಕನಿಷ್ಠ 8ಕ್ಕಿಂತ ಹೆಚ್ಚು ಅಕ್ಷರ ಅಥವಾ ಅಂಕೆಗಳು ಇರುವಂತೆ ನೋಡಿಕೊಳ್ಳಿ. ಅಟ್‌, ಆಷ್, ಕೊಶ್ಚನ್ ಮಾರ್ಕ್‌, ಪರ್ಸಂಟೇಜ್ ಇತ್ಯಾದಿ ಸಿಂಬಲ್‌ಗಳನ್ನು ನಿಮ್ಮ ಪಾಸ್‌ವರ್ಡ್‌ನೊಳಗೆ ಬಳಸಿದರೆ ಪಾಸ್‌ವರ್ಡ್‌ ಅನ್ನು ಸುಲಭವಾಗಿ ಊಹಿಸಲು ಯಾರಿಗೂ ಸಾಧ್ಯವಿಲ್ಲ. ಅಕ್ಷರ, ಚಿಹ್ನೆ , ಸಂಖ್ಯೆಗಳ ಮಿಶ್ರ ರೂಪದ ಪಾಸ್‌ವರ್ಡ್‌ ಗರಿಷ್ಠ ಸುರಕ್ಷತೆ ನೀಡಬಲ್ಲದು.ಆದಷ್ಟೂ ಬೇರೆಯವರಿಗೆ (ಆಪ್ತರಿಗೂ) ಗೊತ್ತಿರದ ಕ್ಲಿಷ್ಟ ಪಾಸ್‌ವರ್ಡ್ ಬಳಸಿ.

ಒನ್‌ಟೈಂ ಪಾಸ್‌ವರ್ಡ್‌ ಸೌಲಭ್ಯ

ಒನ್‌ಟೈಂ ಪಾಸ್‌ವರ್ಡ್‌ ಸೌಲಭ್ಯ

ಬ್ಯಾಂಕ್‌ ಅಕೌಂಟ್‌ ಇತ್ಯಾದಿಗಳಿಗೆ ಪಾಸ್‌ವರ್ಡ್‌ ಬರೆಯುವಾಗ ಹೆಚ್ಚಿನ ಎಚ್ಚರಿಕೆ ವಹಿಸಿ. ಹಣದ ವಹಿವಾಟು ನಡೆಸುವಾಗ ಒಟಿಪಿ ಅಥವಾ ಒನ್‌ಟೈಂ ಪಾಸ್‌ವರ್ಡ್‌ ಸೌಲಭ್ಯ ಇಲ್ಲದ ಬ್ಯಾಂಕ್ ತಾಣಗಳನ್ನು ಸಹ ಬಳಸಬೇಡಿ. ಆನ್‌ಲೈನ್‌ನಲ್ಲಿ ಖರೀದಿಸುವಾಗ ಕಾರ್ಡ್‌ ಮೂಲಕ ಹಣ ಪಾವತಿಸುವುದಾದಲ್ಲಿ ಕಾರ್ಡ್‌ ಮಾಹಿತಿಗಳನ್ನು ನೀಡಿದ ಬಳಕ ಕಾರ್ಡ್ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಸೇವ್ ಮಾಡಬೇಡಿ.

ಪ್ರತಿಯೊಂದಕ್ಕೂ ಪ್ರತ್ಯೇಕ ಪಾಸ್‌ವರ್ಡ್‌

ಪ್ರತಿಯೊಂದಕ್ಕೂ ಪ್ರತ್ಯೇಕ ಪಾಸ್‌ವರ್ಡ್‌

ಒಂದೇ ಪಾಸ್‌ವರ್ಡ್‌ನಿಂದ ಎಲ್ಲಾ ಖಾತೆಗೂ ಲಾಗಿನ್‌ ಆಗುವ ಆಯ್ಕೆ ಬಳಸಬೇಡಿ. ಪ್ರತಿಯೊಂದಕ್ಕೂ ಪ್ರತ್ಯೇಕ ಪಾಸ್‌ವರ್ಡ್‌ ಕಡ್ಡಾಯವಾಗಿ ಬಳಸಿ. ಜಿಮೇಲ್, ಫೇಸ್‌ಬುಕ್‌, ಟ್ವಿಟ್ಟರ್‌, ಬ್ಯಾಂಕ್‌ ಖಾತೆಗಳಿಗೆ ಬೇರೆ ಬೇರೆಯದಾದ ಪಾಸ್‌ವರ್ಡ್‌ ಇಡಿ. ಅದರಲ್ಲೂ ಬ್ಯಾಂಕ್ ಖಾತೆಗಳ ಮೇಲೆ ಎಚ್ಚರಿಕೆ ಇರಲಿ. ಹೀಗೆ ಮಾಡಿದಾಗ ಯಾವುದಾದರೂ ಒಂದು ವೇಳೆ ಒಂದು ಖಾತೆ ಹ್ಯಾಕ್ ಆದರೆ ಇತರೆ ಖಾತೆಗಳ ಸುರಕ್ಷತೆ ಬಗ್ಗೆ ಖಾತ್ರಿ ಇರುತ್ತದೆ.

ಪಾಸ್‌ವರ್ಡ್ ಸೇವ್ ಮಾಡಬೇಡಿ!

ಪಾಸ್‌ವರ್ಡ್ ಸೇವ್ ಮಾಡಬೇಡಿ!

ಆನ್‌ಲೈನ್‌ನಲ್ಲಿ ಏನಾದರೂ ಖರೀದಿಸುವಾಗ ಕಾರ್ಡ್‌ ಮೂಲಕ ಹಣ ಪಾವತಿ ಮಾಡಿದ ನಂತರ ಅಲ್ಲಿ ನಿಮ್ಮ ಕಾರ್ಡ್ ಮಾಹಿತಿಯನ್ನು ಸೇವ್ ಮಾಡಬೇಡಿ. ಏಕೆಂದರೆ, ಹೀಗೆ ಮಾಡುವುದರಿಂದ ಆ ನಿರ್ದಿಷ್ಟ ಜಾಲತಾಣದಲ್ಲಿ ನಿಮ್ಮ ಕಾರ್ಡ್ ಮಾಹಿತಿ ಉಳಿದುಬಿಡುತ್ತದೆ. ನಿಮ್ಮ ಮೊಬೈಲ್‌ ಅಥವಾ ಕಂಪ್ಯೂಟರ್ ಬೇರೆಯವರು ಬಳಸಿದಾಗ ಸುಲಭವಾಗಿ ನಿಮ್ಮ ಹಣದಿಂದ ಖರೀದಿ ನಡೆಸಬಹುದು. ಹಾಗಾಗಿ, ಈ ಬಗ್ಗೆ ಎಚ್ಚರಿಕೆ ಅಗತ್ಯ.

ಪಾಸ್‌ವರ್ಡ್ ಬರೆದಿಡಬೇಡಿ!

ಪಾಸ್‌ವರ್ಡ್ ಬರೆದಿಡಬೇಡಿ!

ಯಾವುದೇ ಕಾರಣಕ್ಕೂ ಪಾಸ್‌ವರ್ಡ್‌ಗಳನ್ನು ಬರೆದಿಡಬೇಡಿ. ಒಂದು ವೇಳೆ ಪಾಸ್‌ವರ್ಡ್ ನೆನಪಿನಲ್ಲಿ ಉಳಿಯುವುದಿಲ್ಲ ಎಂದಾದರೆ ವಿಭಿನ್ನ ಹೆಸರುಗಳಲ್ಲಿ ಹಿಂದೆ ಅಥವಾ ಮುಂದೆ ಬೇರೆ ಅಕ್ಷರಗಳನ್ನು ಜೋಡಿಸಿ ಪಾಸ್‌ವರ್ಡ್‌ಗಳನ್ನು ಬರೆದಿರಿ. ಉದಾಹರಣೆಗೆ ನಿಮ್ಮ ಎಟಿಎಂ ಪಾಸ್‌ವರ್ಡ್‌ 1345 ಎಂದಿದ್ದಲ್ಲಿ ಈ ಅಕ್ಷರದ ಹಿಂದೆ ಅಥವಾ ಮುಂದೆ 0011 ಇತ್ಯಾದಿ ಅಂಕೆ ಸೇರಿಸಿಡಿ. ಕೆಲವರು ಎಟಿಎಂ ಕಾರ್ಡ್‌ನ ಹಿಂಬದಿಯಲ್ಲೇ ಬರೆದಿಡುವುದುಂಟು. ಇದರಿಂದ ಎಟಿಎಂ ಕಾರ್ಡ್‌ ಕಳೆದುಕೊಂಡಾಗ ಅದರ ಹಣವು ಸುಲಭವಾಗಿ ಕಳ್ಳರ ಪಾಲಾಗಬಹುದು.

Most Read Articles
Best Mobiles in India

English summary
If these people know you well, they might be able to guess your e-mail password anduse password recovery options to access your other. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X