ಫೋನ್ ಮರೆತರೆ ನೆನಪು ಮಾಡುವ 25,000 ರುಪಾಯಿಯ ಬಟ್ಟೆ

|

ಧರಿಸಬಹುದಾಗಿರುವ ಸ್ಮಾರ್ಟ್ ವಸ್ತುಗಳ ಪಟ್ಟಿಯಲ್ಲಿ ಇದುವರೆಗೂ ಸ್ಮಾರ್ಟ್ ವಾಚ್ ಗಳು, ಫಿಟ್ನೆಸ್ ಬ್ಯಾಂಡ್ ಗಳು ಮಾತ್ರವೇ ಸದ್ದು ಮಾಡುತ್ತಿದೆ ಎಂಬುದೇನೋ ನಿಜ. ಆದರೆ ಆವಿಷ್ಕಾರಗಳ ಎಲ್ಲೆ ಮೀರುತ್ತಿದೆ. ನಂಬಲು ಅಸಾಧ್ಯವೆನಿಸುವಂತಹ ಕೆಲವು ವಸ್ತುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಸ್ಮಾರ್ಟ್ ಶೂಗಳನ್ನು ನೋಡಿದ್ದಾಗಿದೆ. ಇದೀಗ ಸ್ಮಾರ್ಟ್ ಬಟ್ಟೆಗಳ ಸರದಿ. ಎಸ್, ಕೇವಲ 3ಡಿ ಡ್ರೆಸ್ ಗಳಿಗೆ ಫಿದಾ ಆಗಿದ್ದ ನೀವು ಸ್ಮಾರ್ಟ್ ಬಟ್ಟೆಗಳನ್ನು ಧರಿಸಬಹುದು ಎಂದು ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು.

ಫೋನ್ ಮರೆತರೆ ನೆನಪು ಮಾಡುವ 25,000 ರುಪಾಯಿಯ ಬಟ್ಟೆ

ಏನಿದು ಸ್ಮಾರ್ಟ್ ಬಟ್ಟೆ? ಏನು ಮಾಡುತ್ತೆ? ಯಾರು ಬೇಕಿದ್ದರೂ ಕೊಂಡುಕೊಳ್ಳಬಹುದಾ? ಯಾರು ತಯಾರಿಸಿರುವುದು? ಸ್ಮಾರ್ಟ್ ಬಟ್ಟೆಯನ್ನು ನೀರಲ್ಲಿ ಹಾಕಿ ಸೋಪು ಹಚ್ಚಿ ಒಗೆಯೋಕೆ ಆಗುತ್ತಾ? ವಾಷಿಂಗ್ ಮಷೀನ್ ನಲ್ಲಿ ತೊಳೆಯಬಹುದಾ? ಯಾವ ಬಣ್ಣದ ಬಟ್ಟೆ ಇದು? ಹೀಗೆ ಪ್ರಶ್ನೆಗಳ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಆದರೆ ಮೇಲಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರ ತಿಳಿದಿಲ್ಲ. ಕೆಲವು ಪ್ರಶ್ನೆಗಳಿಗೆ ಮಾತ್ರ ಖಂಡಿತ ಈ ಕೆಳಗೆ ಉತ್ತರವಿದೆ. ಮುಂದೆ ಓದಿ..

ಆವಿಷ್ಕಾರಗೊಂಡ ಸ್ಮಾರ್ಟ್ ಜಾಕೆಟ್:

ಆವಿಷ್ಕಾರಗೊಂಡ ಸ್ಮಾರ್ಟ್ ಜಾಕೆಟ್:

ಗೂಗಲ್ ಮತ್ತು ಲಿವೀಸ್ ಜಾಕ್ವಾರ್ಡ್ ಸ್ಮಾರ್ಟ್ ಚಾಕೆಟ್ ನ್ನು ಆವಿಷ್ಕಾರಗೊಳಿಸಿದೆ. ಒಂದು ವೇಳೆ ನೀವು ನಿಮ್ಮ ಸ್ಮಾರ್ಟ್ ಫೋನ್ ನ್ನು ಮರೆತು ಹೊರಗಡೆ ಹೊರಟರೆ ಈ ಸ್ಮಾರ್ಟ್ ಜಾಕೆಟ್ ನಿಮಗೆ ಸ್ಮಾರ್ಟ್ ಫೋನ್ ಹಿಡಿದುಕೊಂಡು ಹೊರಡುವಂತೆ ನೆನಪು ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಹೌದು, ನೀವು ನಿಮ್ಮ ಸ್ಮಾರ್ಟ್ ಫೋನ್ ನ್ನು ಎಲ್ಲಾದರೂ ಮರೆತರೆ ಇದು ನಿಮಗೆ ಸ್ಮಾರ್ಟ್ ಫೋನ್ ತೆಗೆದುಕೊಂಡು ಹೊರಡಲು ಮರೆತಿರುವುದನ್ನು ನೆನಪು ಮಾಡುತ್ತದೆ.

ಯಾವಾಗಲೂ ಒಟ್ಟಿಗೆ ಇರಬೇಕು!

ಯಾವಾಗಲೂ ಒಟ್ಟಿಗೆ ಇರಬೇಕು!

ಆಂಡ್ರಾಯ್ಡ್ ಪೋಲೀಸರು ತಿಳಿಸುವಂತೆ ಈ ವೈಶಿಷ್ಟ್ಯತೆಯನ್ನು ಆಲ್ವೇಸ್ ಟುಗೆದರ್( ಯಾವಾಗಲೂ ಒಟ್ಟಿಗೆ) ಎಂದು ಕರೆಯಲ್ಪಡುತ್ತದೆ. ಜಾಕೆಟ್ ನಿಂದ ನಿಮ್ಮ ಸ್ಮಾರ್ಟ್ ಫೋನ್ ತುಂಬಾ ದೂರವಿದ್ದರೆ ಕೂಡಲೇ ಈ ವೈಶಿಷ್ಟ್ಯತೆಯು ಟ್ರಿಗ್ಗರ್ ಆಗುತ್ತದೆ ಮತ್ತು ನಿಮಗೆ ಸೂಚನೆ ನೀಡುತ್ತದೆ.

ಅಣ್ತಮ್ಮ ಬಾಂಧವ್ಯ ಮೆರೆಯೋ ಜಾಕೆಟ್!

ಅಣ್ತಮ್ಮ ಬಾಂಧವ್ಯ ಮೆರೆಯೋ ಜಾಕೆಟ್!

ನಿಮ್ಮ ಜಾಕೆಟ್ ನ್ನಾಗಲೀ ಅಥವಾ ಸ್ಮಾರ್ಟ್ ಫೋನ್ ನ್ನಾಗಲೀ ನೀವು ಒಂದನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಂಡು ಹೋಗುವಂತಿಲ್ಲ. ಇದ್ದರೆ ಇಬ್ಬರೂ ಜೊತೆಯಲ್ಲೇ ಇರಬೇಕು, ಜಾಕೆಟ್ ಬಿಟ್ಟು ಫೋನ್ ದೂರ ಹೋಗುವಂತಿಲ್ಲ, ಫೋನ್ ಬಿಟ್ಟು ಜಾಕೆಟ್ ದೂರ ಹೋಗುವಂತಿಲ್ಲ. ನಿಮ್ಮ ಫೋನ್ ಮತ್ತು ಜಾಕೆಟ್ ಸಪರೇಟ್ ಆದರೆ ನಿಮ್ಮ ಫೋನಿಗೆ ಅಲರ್ಟ್ ಬರುತ್ತದೆ. ಜಾಕೆಟ್ ನಲ್ಲಿ ವೈಬ್ರೇಷನ್ ಮತ್ತು ಲೈಟ್ ಬರುತ್ತದೆ. ಇಂತಹ ವಿಶೇಷ ಫೀಚರ್ ಒಳಗೊಂಡಿರುವ ಜಾಕೆಟ್ ಇದಾಗಿದೆ. ಒಂದು ರೀತಿಯಲ್ಲಿ ಅಣ್ತಮ್ಮ ಬಾಂಧವ್ಯ ಎನ್ನಬಹದು. ಖಾಸಾಖಾಸಾ!

ಸಿನ್ಕ್ರನೈಜೇಷನ್ ಬಹಳ ಮುಖ್ಯ:

ಸಿನ್ಕ್ರನೈಜೇಷನ್ ಬಹಳ ಮುಖ್ಯ:

ಇದು ಕೇವಲ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಮಾತ್ರವೇ ಅಲರ್ಟ್ ನೀಡುವುದಿಲ್ಲ. ಬದಲಾಗಿ ಜಾಕೆಟ್ ನಲ್ಲೂ ಕೂಡ ಲೈಟ್ ಬ್ಲಿಂಕ್ ಆಗುತ್ತದೆ ಮತ್ತು ವೈಬ್ರೇಟ್ ಆಗುತ್ತದೆ. ಜಾಕೆಟ್ ನಲ್ಲೂ ಕೂಡ ಫೈಂಡ್ ಮೈ ಫೋನ್ ಫೀಚರ್ ಇರುತ್ತದೆ. ಆದರೆ ಜಾಕೆಟ್ ಮತ್ತು ಸ್ಮಾರ್ಟ್ ಫೋನ್ ಎರಡೂ ಕೂಡ ಲಿಂಕ್ ಆಗಬೇಕು ಎಂದರೆ ನೀವು ಜಾಕ್ವರ್ಡ್ ಆಪ್ ನ್ನು ಡೌನ್ ಲೋಡ್ ಮಾಡಿಕೊಂಡು ಅದನ್ನು ಸಿನ್ಕ್ರನೈಜ್ ಮಾಡಬೇಕಾಗುತ್ತದೆ.

 ಬೆಲೆ ಎಷ್ಟು ಗೊತ್ತಾ?

ಬೆಲೆ ಎಷ್ಟು ಗೊತ್ತಾ?

ಇದರ ಬೆಲೆ $350 (ಅಂದಾಜು Rs 25,000). ಜಾಕ್ವರ್ಡ್ ಜಾಕೆಟ್ ಕೇವಲ ಟ್ರ್ಯಾಕರ್ ಆಗಿ ಮಾತ್ರವೇ ಕೆಲಸ ಮಾಡುತ್ತದೆ ಎಂದು ಭಾವಿಸಬೇಡಿ. ಇದು ಮ್ಯೂಸಿಕ್ ಪ್ಲೇ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಇನ್ ಕಮ್ಮಿಂಗ್ ಕರೆಗಳು ಬಂದಾಗ ನಿಮಗೆ ನೋಟಿಫೈ ಮಾಡುತ್ತದೆ, ಟೆಕ್ಸ್ಟ್ ಮಾಡುವಿಕೆ ಸೇರಿದಂತೆ ಇನ್ನೂ ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಯಾರು ಎಲ್ಲವೂ ಸ್ಮಾರ್ಟ್ ಆಗಿರಬೇಕು ಎಂದು ಬಯಸುತ್ತಾರೋ ಅವರಿಗೆ ಖಂಡಿತ ಇದು ಬೆಸ್ಟ್ ಪ್ರೊಡಕ್ಟ್ ಎಂದೇ ಹೇಳಬಹುದು?

ಒಗೆಯಲು ಸಾಧ್ಯವೇ?

ಒಗೆಯಲು ಸಾಧ್ಯವೇ?

2017 ರಲ್ಲಿ ಈ ಜಾಕೆಟ್ ಮೊದಲ ಬಾರಿ ಬಿಡುಗಡೆಗೊಂಡಾಗ 10 ಬಾರಿ ಮಾತ್ರವೇ ಇದನ್ನು ತೊಳೆಯಬಹುದು ಎಂದು ಹೇಳಲಾಗಿತ್ತು. ಶುಚಿತ್ವವು ಶುಚಿತ್ವದ ವೆಚ್ಚದಲ್ಲಿ ಬರುತ್ತದೆ ಎಂಬುದಾಗಿ ಭಾವಿಸುವವರಿಗೆ ಖಂಡಿತ ಇದು ಓಕೆ. ಆದರೆ ಸ್ಮಾರ್ಟ್ ಫೋನ್ ಕಳೆದುಕೊಳ್ಳುವವರಿಗೆ ಇದು ಹೇಳಿ ಮಾಡಿಸಿದೆ. ಆದರೆ ಜಾಕೆಟನ್ನೇ ಕಳೆದುಕೊಂಡರೆ ಏನು ಮಾಡುವುದು ಎಂಬುದಕ್ಕೆ ಉತ್ತರವಿಲ್ಲ.

Most Read Articles
Best Mobiles in India

Read more about:
English summary
The Rs 25,000 Google jacket which tells you if you’ve forgotten your phone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X