ಅತಿ ಹೆಚ್ಚು ವೇಗದ ಡೇಟಾ ನೀಡುವ ದೇಶ ಯಾವುದು?..ಭಾರತಕ್ಕೆ ಎಷ್ಟನೇ ಸ್ಥಾನ ?

ಯಾವ ದೇಶಗಳು ಅತಿ ಹೆಚ್ಚು ವೇಗದ ಡೇಟಾವನ್ನು ನೀಡುತ್ತಿವೆ ನಿಮಗೆ ಗೊತ್ತಾ.?

|

ಇದು ಇಂಟರ್‌ನೆಟ್ ಪ್ರಪಂಚ. ಇಂಟರ್‌ನೆಟ್ ಇಲ್ಲದೆಯೇ ಯಾವ ಕಾರ್ಯವೂ ಇಂದು ನಡೆಯುವುದಿಲ್ಲ.! ಹಾಗಾಗಿ, ಯಾವ ದೇಶ ಎಷ್ಟು ಸ್ಪೀಡ್‌ನಲ್ಲಿ ಡೇಟಾ ನೀಡುತ್ತಿದೆ ಎನ್ನುವುದರ ಮೇಲೆಯೇ ಆ ದೇಶದ ಶ್ರೀಮಂತಿಕೆಯನ್ನೂ ಅಳೆಯುವ ಕಾಲ ಬಂದಿದೆ.!! ಹಾಗಾದರೆ, ಯಾವ ದೇಶಗಳು ಅತಿ ಹೆಚ್ಚು ವೇಗದ ಡೇಟಾವನ್ನು ನೀಡುತ್ತಿವೆ ನಿಮಗೆ ಗೊತ್ತಾ.?

ಡೇಟಾ ಸ್ಪೀಡ್‌ ಪರೀಕ್ಷೆಯಲ್ಲಿ ಜಾಗತಿಕ ನಾಯಕನ ಸ್ಥಾನ ಪಡೆದಿರುವ 'ಊಕ್ಲಾ' ಈ ಬಗ್ಗೆ ಸಮೀಕ್ಷೆ ಬಿಡುಗಡೆ ಮಾಡಿದ್ದು, ನಾರ್ವೇ ಪ್ರಪಂಚದಲ್ಲಿಯೇ ಅತ್ಯಂತ ಸ್ಪೀಡ್‌ ಡೇಟಾ ನೀಡುವ ದೇಶವಾಗಿದೆ ಎಂದು ಹೇಳಿದೆ.! ಹಾಗಾದರೆ, ಬೇರೆ ಯಾವ ದೇಶಗಳು ಅತಿ ಹೆಚ್ಚು ವೇಗದ ಡೇಟಾವನ್ನು ನೀಡುತ್ತಿವೆ? ಭಾರತದ್ದು ಎಷ್ಟನೇ ಸ್ಥಾನ? ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ನಾರ್ವೇ ಇಂಟರ್‌ನೆಟ್‌ ಸ್ಪೀಡ್‌ ಎಷ್ಟು?

ನಾರ್ವೇ ಇಂಟರ್‌ನೆಟ್‌ ಸ್ಪೀಡ್‌ ಎಷ್ಟು?

ಒಂದು ವರ್ಷದ ಹಿಂದಷ್ಟೆ 11 ನೇ ಸ್ಥಾನದಲ್ಲಿದ್ದ ನಾರ್ವೇ ದೇಶ ಈ ವರ್ಷ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.! ನಾರ್ವೆಯಲ್ಲಿ ಸೆಕೆಂಡ್‌ಗೆ 52.6MB ಸರಾಸರಿ ವೇಗದ ಡೇಟಾ ಸಾಮಾನ್ಯರಿಗೆ ಲಭ್ಯವಿದ್ದು, ಅತ್ಯಂತ ಸ್ಪೀಡ್‌ ಡೇಟಾ ನೀಡುವ ಮೊದಲ ದೇಶವಾಗಿದೆ ಎಂದು 'ಊಕ್ಲಾ' ಹೇಳಿದೆ.!!

ಸ್ಪೀಡ್‌ ಡೇಟಾ ನೀಡುವ ಟಾಪ್‌ 10 ದೇಶಗಳು?

ಸ್ಪೀಡ್‌ ಡೇಟಾ ನೀಡುವ ಟಾಪ್‌ 10 ದೇಶಗಳು?

ಅತ್ಯಂತ ಸ್ಪೀಡ್‌ ಡೇಟಾ ನೀಡುವ ಮೊದಲ ದೇಶ ನಾರ್ವೆ ಆದರೆ, ನೆದೆರ್‌ಲೆಂಡ್ ದೇಶ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.!! ನಂತರದ ಸ್ಥಾನದಲ್ಲಿ ಕ್ರಮವಾಗಿ, ಹಂಗೇರಿ, ಸಿಂಗಾಪೂರ್, ಮಾಲ್ಟ, ಆಸ್ಟ್ರೇಲಿಯಾ, ಯುಎಇ, ಸೌತ್ ಕೋರಿಯಾ, ಬೆಲ್ಜಿಯಂ ಮತ್ತು ಐಸ್‌ಲ್ಯಾಂಡ್ ನಂತರದ ಸ್ಥಾನದಲ್ಲಿವೆ.!!

ನೀವು ಹೊಂದಿರುವ ಇಂಟರ್‌ನೆಟ್ ಸ್ಪೀಡ್ ಎಷ್ಟು?

ನೀವು ಹೊಂದಿರುವ ಇಂಟರ್‌ನೆಟ್ ಸ್ಪೀಡ್ ಎಷ್ಟು?

'ಊಕ್ಲಾ' ವೆಬ್‌ಸೈಟ್ ಮೂಲಕ ನೀವು ಬಳಸುತ್ತಿರುವ ಇಂಟರ್‌ನೆಟ್ ಸ್ಪೀಡ್ ಸಹ ಚೆಕ್ ಮಾಡಬಹುದಾಗಿದ್ದು, Speedtest.net ಲಿಂಕ್ ಕ್ಲಿಕ್ಕಿಸಿದರೆ ನಿಮ್ಮ ಇಂಟರ್‌ನೆಟ್‌ ಸ್ಪೀಡ್‌ ಎಷ್ಟಿದೆ ಎಂದು ಕ್ಷಣಮಾತ್ರದಲ್ಲಿ ತಿಳಿಯಬಹುದು.!!

Xiaomi Redmi 4 Features !! ರೆಡ್‌ಮಿ 4 ಫೀಚರ್ಸ್ ಏನೇನಿದೆ? ಇಲ್ಲಿದೆ ಡಿಟೇಲ್ಸ್!!
ಭಾರತಕ್ಕೆ ಎಷ್ಟನೇ ಸ್ಥಾನ?

ಭಾರತಕ್ಕೆ ಎಷ್ಟನೇ ಸ್ಥಾನ?

'ಊಕ್ಲಾ' ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಭಾರತವು ಸ್ಪೀಡ್ ಇಂಟರ್‌ನೆಟ್ ನೀಡುವುದರಲ್ಲಿ 89 ನೇ ಸ್ಥಾನವನ್ನು ಪಡೆದುಕೊಂಡಿದೆ.!! ಭಾರತದಲ್ಲಿ ಸರಾಸರಿ ಡೇಟಾ ವೇಗ 28 MBPS ವೇಗದಲ್ಲಿದೆ.!!

<strong>ಫೇಸ್‌ಬುಕ್‌ನಲ್ಲಿ 1 ಸಾವಿರ ಲೈಕ್ ಪಡೆದರೆ 1.ಲಕ್ಷ ನೀಡಲಿದೆ ಟಾಟಾ ಕಂಪೆನಿ!!..ಹೇಗೆ ಗೊತ್ತಾ?</strong>ಫೇಸ್‌ಬುಕ್‌ನಲ್ಲಿ 1 ಸಾವಿರ ಲೈಕ್ ಪಡೆದರೆ 1.ಲಕ್ಷ ನೀಡಲಿದೆ ಟಾಟಾ ಕಂಪೆನಿ!!..ಹೇಗೆ ಗೊತ್ತಾ?

Best Mobiles in India

English summary
According to a global leader in connection testing, Norway has the fastest mobile internet in the world.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X