ನಿಮ್ಮ ಮೊಬೈಲ್‌ನಲ್ಲಿ ಈ ಅಪ್ಲಿಕೇಶನ್ ಇದ್ರೆ, ಕೂಡಲೇ ಡಿಲೀಟ್‌ ಮಾಡಿರಿ!

|

ಟೆಕ್‌ ಲೋಕದ ದಿಗ್ಗಜ ಗೂಗಲ್ ಸಂಸ್ಥೆಯು ತನ್ನ ಪ್ಲೇ ಸ್ಟೋರ್‌ನಿಂದ ಇದೀಗ ಮತ್ತೆ 17 ದುರುದ್ದೇಶಪೂರಿತ ಆಂಡ್ರಾಯ್ಡ್‌ ಅಪ್ಲಿಕೇಶನ್‌ಗಳನ್ನು ಕಿಕ್ ಔಟ್ ಮಾಡಿದೆ. ಗೂಗಲ್ ತೆಗೆದು ಹಾಕಿರುವ ಹದಿನೇಳು ಅಪ್ಲಿಕೇಶನ್‌ಗಳು ಡೇಟಾ ಮತ್ತು ಹಣ ಕದಿಯುವ ತಂತ್ರಗಳಲ್ಲಿ ತೊಡಗಿರುವ ಆಪ್‌ಗಳು ಎಂದು ಭದ್ರತಾ ಸಂಶೋಧಕರಿಂದ ತಿಳಿದುಬಂದಿದೆ ಎಂದು PhoneArena ವರದಿ ಮಾಡಿದೆ. ಹೀಗಾಗಿ ಆಂಡ್ರಾಯ್ಡ್‌ ಬಳಕೆದಾರರು ಇದೀಗ ಗೂಗಲ್‌ ಕಿಕ್ ಔಟ್ ಮಾಡಿದ ಆಪ್‌ಗಳನ್ನು ಫೋನಿನಲ್ಲಿ ಹೊಂದಿದ್ದರೇ, ಕೂಡಲೇ ತೆಗೆದು ಡಿಲೀಟ್ ಮಾಡುವುದು ಉತ್ತಮ.

ಕಿಕ್ಔಟ್

ಹೌದು, ಗೂಗಲ್ ಕಿಕ್ಔಟ್ ಮಾಡಿರುವ 17 ಅಪ್ಲಿಕೇಶನ್‌ಗಳಲ್ಲಿ ಹೆಚ್ಚಿನವುಗಳನ್ನು ಅಧಿಕೃತ ಗೂಗಲ್‌ ಪ್ಲೇ ಸ್ಟೋರ್‌ನಿಂದ (Google Play Store) ತೆಗೆದುಹಾಕಲಾಗಿದ್ದರೂ, ಬಳಕೆದಾರರು ಇನ್ನೂ ತಮ್ಮ ಫೋನ್‌ಗಳಿಂದ ಅವುಗಳನ್ನು ತೆಗೆದುಹಾಕಬೇಕಿದೆ. ಇನ್ನು ಬಳಕೆದಾರರು ಈ ದುರುದ್ದೇಶಪೂರಿತ ಆಂಡ್ರಾಯ್ಡ್‌ ಅಪ್ಲಿಕೇಶನ್‌ಗಳ ಬಗ್ಗೆ ಜಾಗರೂಕರಾಗಿರಬೇಕು ಏಕೆಂದರೆ ಈ ಕೆಲವು ಅಪ್ಲಿಕೇಶನ್‌ಗಳು ಜಾಗತಿಕವಾಗಿ 50,000 ಅಧಿಕ ಡೌನ್‌ಲೋಡ್‌ಗಳು ಮತ್ತು 4.8 ಸ್ಟಾರ್ ಬಳಕೆದಾರರ ರೇಟಿಂಗ್ ಅನ್ನು ಹೊಂದಿವೆ. ಹಾಗಾದರೇ ಗೂಗಲ್‌ ಕಿಕ್‌ಔಟ್‌ ಮಾಡಿರುವ ಅಪಾಯಕಾರಿ ಅಪ್ಲಿಕೇಶನ್‌ಗಳ ಪಟ್ಟಿ ಮುಂದೆ ನೋಡೋಣ ಬನ್ನಿರಿ.

ದುರುದ್ದೇಶಪೂರಿತ ಆಂಡ್ರಾಯ್ಡ್‌ ಅಪ್ಲಿಕೇಶನ್‌ ಇಲ್ಲಿದೆ:

ದುರುದ್ದೇಶಪೂರಿತ ಆಂಡ್ರಾಯ್ಡ್‌ ಅಪ್ಲಿಕೇಶನ್‌ ಇಲ್ಲಿದೆ:

ದುರುದ್ದೇಶಪೂರಿತ ಆಂಡ್ರಾಯ್ಡ್‌ ಅಪ್ಲಿಕೇಶನ್‌ ಇಲ್ಲಿದೆ:
ಡಾಕ್ಯುಮೆಂಟ್ ಮ್ಯಾನೇಜರ್ (Document Manager)
ಕಾಯಿನ್ ಟ್ರ್ಯಾಕ್ ಲೋನ್ - ಆನ್‌ಲೈನ್ ಲೋನ್ (Coin track Loan - Online loan)
ಕೂಲ್ ಕಾಲರ್ ಸ್ಕ್ರೀನ್ (Cool Caller Screen)
PSD Auth Protector
RGB ಎಮೋಜಿ ಕೀಬೋರ್ಡ್ (RGB Emoji Keyboard)

ವಾಲ್‌ಪೇಪರ್

ಕ್ಯಾಮರಾ ಟ್ರಾನ್ಸ್‌ಲೇಟರ್ ಪ್ರೊ (Camera Translator Pro)
ಫಾಸ್ಟ್‌ PDF ಸ್ಕ್ಯಾನರ್ (Fast PDF Scanner)
ಏರ್ ಬಲೂನ್ ವಾಲ್‌ಪೇಪರ್ (Air Balloon Wallpaper)
ಕಲರ್‌ಫುಲ್‌ ಮೆಸೆಂಒಜರ್ (Colorful Messenger)
ಥಗ್ ಫೋಟೋ ಎಡಿಟರ್ (Thug Photo Editor)

ಕೊಲಾಜ್

ಅನಿಮೆ ವಾಲ್‌ಪೇಪರ್ (Anime Wallpaper)
ಪೀಸ್‌ ಎಸ್‌ಎಮ್‌ಎಸ್‌ (Peace SMS)
ಹ್ಯಾಪಿ ಫೋಟೋ ಕೊಲಾಜ್ (Happy Photo Collage)
ಪೆಲೆಟ್ ಮೆಸೆಂಜರ್‌ (Pellet Messages)
ಸ್ಮಾರ್ಟ್ ಕೀ ಬೋರ್ಡ್ (Smart Keyboard)
4K ವಾಲ್‌ಪೇಪರ್ಸ್‌ (4K Wallpapers)
ಓರಿಜಿನಲ್‌ ಮೆಸೆಂಜರ್‌ (Original Messenger)

ಅಪ್ಲಿಕೇಶನ್ ಇನ್‌ಸ್ಟಾಲ್‌ ಮಾಡುವ ಮುನ್ನ ಈ ಅಂಶ ಗಮನಿಸಿ:

ಅಪ್ಲಿಕೇಶನ್ ಇನ್‌ಸ್ಟಾಲ್‌ ಮಾಡುವ ಮುನ್ನ ಈ ಅಂಶ ಗಮನಿಸಿ:

ಅಧಿಕೃತ ಅಪ್ಲಿಕೇಶನ್ ಸ್ಟೋರ್‌ ಬಳಕೆ
ಬಳಕೆದಾರರು ತಮ್ಮ ಸ್ಮಾರ್ಟ್‌ಫೋನಿಗೆ ಹೊಸ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ಅಧಿಕೃತ ಅಪ್ಲಿಕೇಶನ್ ಸ್ಟೋರ್‌ಗಳನ್ನು (ಗೂಗಲ್ ಪ್ಲೇ ಸ್ಟೋರ್) ಮಾತ್ರ ಬಳಸುವುದು ಅತೀ ಮುಖ್ಯವಾಗಿದೆ.

ಬಳಸದ ಆಪ್‌ ಅನ್‌ಇನ್‌ಸ್ಟಾಲ್ ಮಾಡಿ

ಬಳಸದ ಆಪ್‌ ಅನ್‌ಇನ್‌ಸ್ಟಾಲ್ ಮಾಡಿ

ಕೆಲವೊಮ್ಮೆ ಬಳಕೆದಾರರ ಸ್ಮಾರ್ಟ್‌ಫೋನ್‌ನಲ್ಲಿ ಮೇಲಿಂದ ಮೇಲೆ ಬಳಸದೆ ಇರುವ ಆಪ್‌ಗಳು ಹೆಚ್ಚಾಗಿರುತ್ತವೆ. ಹೀಗೆ ತುಂಬಾ ದಿನಗಳಿಂದ ಬಳಸದೇ ಇರುವ ಆಪ್‌ಗಳನ್ನು ನಿಮ್ಮ ಫೋನಿನಿಂದ ಗೇಟ್‌ಪಾಸ್‌ ನೀಡಿ. ಸುರಕ್ಷತೆಯ ದೃಷ್ಠಿಯಿಂದ ಇದು ಉತ್ತಮ.

ಆಪ್‌ ಡೌನ್‌ಲೋಡ್‌ಗೂ ಮುನ್ನ ರಿವ್ಯೂವ್‌ಗಳನ್ನು ಓದಿರಿ

ಆಪ್‌ ಡೌನ್‌ಲೋಡ್‌ಗೂ ಮುನ್ನ ರಿವ್ಯೂವ್‌ಗಳನ್ನು ಓದಿರಿ

ಗೂಗಲ್‌ ಪ್ಲೇ ಸ್ಟೋರ್‌ನಿಂದ ಹೊಸ ಆಪ್‌ ಅನ್ನು ಸ್ಮಾರ್ಟ್‌ಫೋನಿಗೆ ಡೌನ್‌ಲೋಡ್ ಮಾಡುವಾಗ ಆ ಬಗ್ಗೆ ಇತರೆ ಬಳಕೆದಾರರು ಬರೆದಿರುವ ವಿಮರ್ಶೆಗಳನ್ನು ಓದಿರಿ. ಹಾಗೂ ಆಪ್‌ ಡೆವಲಪರ್‌ಗಳ ಬಗ್ಗೆ ತಿಳಿಯಿರಿ.

ಡಿಸ್ಕೌಂಟ್‌ ನೀಡುವ ಆಪ್‌ಗಳಿಂದ ದೂರ ಇರಿ

ಡಿಸ್ಕೌಂಟ್‌ ನೀಡುವ ಆಪ್‌ಗಳಿಂದ ದೂರ ಇರಿ

ಬಹುತೇಕ ಆಪ್‌ಗಳಲ್ಲಿ ಆನ್‌ಲೈನ್ ಶಾಪಿಂಗ್ ರಿಯಾಯಿತಿಗಳನ್ನು ನೀಡುವ ಜಾಹಿರಾತು ತೋರಿಸುತ್ತಿರುತ್ತಾರೆ. ಇಂತಹ ಭರವಸೆ ನೀಡುವ ಅಪ್ಲಿಕೇಶನ್‌ಗಳ ಬಗ್ಗೆ ಬಳಕೆದಾರರು ಎಚ್ಚರದಿಂದಿರಬೇಕು.

ಲಿಂಕ್‌ ಮೂಲಕ ಆಪ್‌ ಡೌನ್‌ಲೋಡ್ ಬೇಡ

ಲಿಂಕ್‌ ಮೂಲಕ ಆಪ್‌ ಡೌನ್‌ಲೋಡ್ ಬೇಡ

ಇ ಮೇಲ್‌ಗಳು, ಸಾಮಾಜಿಕ ಮಾಧ್ಯಮ ಇತ್ಯಾದಿಗಳಲ್ಲಿನ ಲಿಂಕ್‌ಗಳನ್ನು ಕ್ಲಿಕ್ ಮಾಡುವುದರ ಮೂಲಕ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್‌ ಮಾಡುವುದನ್ನು ತಪ್ಪಿಸಿ.

ಫೋನಿನಲ್ಲಿ ಗೂಗಲ್‌ ಪ್ಲೇ ಸ್ಟೋರ್‌ ಸರಿಯಾಗಿ ಕೆಲಸ ಮಾಡದಿದ್ದರೇ, ಈ ಕ್ರಮಗಳನ್ನು ಫಾಲೋ ಮಾಡಿ:

ಫೋನಿನಲ್ಲಿ ಗೂಗಲ್‌ ಪ್ಲೇ ಸ್ಟೋರ್‌ ಸರಿಯಾಗಿ ಕೆಲಸ ಮಾಡದಿದ್ದರೇ, ಈ ಕ್ರಮಗಳನ್ನು ಫಾಲೋ ಮಾಡಿ:

ವೈ-ಫೈ ಅಥವಾ ಮೊಬೈಲ್ ಡೇಟಾ ಚೆಕ್‌ ಮಾಡಿ:
* ನೀವು ಬಲವಾದ ಇಂಟರ್ನೆಟ್ ಸಂಪರ್ಕವನ್ನು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ
* ನೀವು ವೈ-ಫೈ ನೆಟ್‌ವರ್ಕ್‌ಗೆ ಸಂಪರ್ಕಿಸಬಹುದಾದರೆ ಅದು ಉತ್ತಮವಾಗಿದೆ
* ನೀವು Wi-Fi ಗೆ ಪ್ರವೇಶವನ್ನು ಹೊಂದಿಲ್ಲದಿದ್ದರೆ, ನೀವು ಬಲವಾದ ಮೊಬೈಲ್ ಡೇಟಾ ಸಂಪರ್ಕ ವನ್ನು ಹೊಂದಿರುವಿರಿ ಎಂದು ಖಚಿತಪಡಿಸಿಕೊಳ್ಳಿ.

ಸ್ಟೋರೇಜ್‌ ಸ್ಪೇಸ್‌ ಚೆಕ್‌ ಮಾಡಿ:

ಸ್ಟೋರೇಜ್‌ ಸ್ಪೇಸ್‌ ಚೆಕ್‌ ಮಾಡಿ:

ನಿಮ್ಮ ಫೋನ್‌ನ ಸ್ಟೋರೇಜ್‌ ತುಂಬಿದ್ದರೆ, ಗೂಗಲ್‌ ಪ್ಲೇ ಸ್ಟೋರ್‌ ಯಾವುದೇ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಅಥವಾ ಅಸ್ತಿತ್ವದಲ್ಲಿರುವ ಆಪ್‌ಗಳನ್ನು ನವೀಕರಿಸಲು ಸಾಧ್ಯವಾಗುವುದಿಲ್ಲ. ಶೇಖರಣಾ ಸ್ಥಳ ಕಡಿಮೆಯಿದ್ದರೆ, ಅದು ಆಪ್‌ಗಳನ್ನು ಡೌನ್‌ಲೋಡ್ ಮಾಡುವುದನ್ನು ಮತ್ತು ಇನ್‌ಸ್ಟಾಲ್‌ ಮಾಡುವುದನ್ನು ನಿಲ್ಲಿಸಬಹುದು. ಅನಗತ್ಯ ಅಪ್ಲಿಕೇಶನ್‌ ಗಳು, ಫೋಟೋಗಳು, ವೀಡಿಯೊಗಳು ಮತ್ತು ಇತರ ಫೈಲ್‌ಗಳು ಮತ್ತು ಮೀಡಿಯಾ ವನ್ನು ಡಿಲೀಟ್ ಮಾಡುವ ಮೂಲಕ ನೀವು ಫೋನ್‌ನಲ್ಲಿ ಜಾಗವನ್ನು ಮುಕ್ತಗೊಳಿಸಬಹುದು.

ಸಿಸ್ಟಮ್ ಅಪ್‌ಡೇಟ್‌ ಚೆಕ್‌ ಮಾಡಿರಿ:

ಸಿಸ್ಟಮ್ ಅಪ್‌ಡೇಟ್‌ ಚೆಕ್‌ ಮಾಡಿರಿ:

* ನಿಮ್ಮ ಆಂಡ್ರಾಯ್ಡ್ ಫೋನ್ ಅಥವಾ ಟ್ಯಾಬ್ಲೆಟ್‌ ನಲ್ಲಿ, ನಿಮ್ಮ ಸೆಟ್ಟಿಂಗ್‌ಗಳ ಅಪ್ಲಿಕೇಶನ್ ತೆರೆಯಿರಿ
* ಸಿಸ್ಟಮ್ ಅನ್ನು ಟ್ಯಾಪ್ ಮಾಡಿ ಮತ್ತು ನಂತರ ಸುಧಾರಿತ ಮತ್ತು ನಂತರ ಸಿಸ್ಟಮ್ ನವೀಕರಣ ವನ್ನು ಟ್ಯಾಪ್ ಮಾಡಿ.
* ನಿಮ್ಮ ನವೀಕರಣ ಸ್ಥಿತಿ ಕಾಣಿಸಿಕೊಳ್ಳುತ್ತದೆ.
* ನವೀಕರಣಗಳನ್ನು ಡೌನ್‌ಲೋಡ್ ಮಾಡಲು ಅಥವಾ ಇನ್‌ಸ್ಟಾಲ್‌ ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ.

ಪ್ಲೇ ಸ್ಟೋರ್ ಅನ್ನು ಕ್ಲೋಸ್‌ ಮಾಡಿ, ಮತ್ತೆ ತೆರೆಯಿರಿ:

ಪ್ಲೇ ಸ್ಟೋರ್ ಅನ್ನು ಕ್ಲೋಸ್‌ ಮಾಡಿ, ಮತ್ತೆ ತೆರೆಯಿರಿ:

* ನಿಮ್ಮ ಆಂಡ್ರಾಯ್ಡ್ ಸಾಧನದಲ್ಲಿ, ಕೆಳಗಿನಿಂದ ಮೇಲಕ್ಕೆ ಸ್ವೈಪ್ ಮಾಡಿ, ಹಿಡಿದುಕೊಳ್ಳಿ ಮತ್ತು ನಂತರ ಬಿಟ್ಟುಬಿಡಿ
* ಪ್ಲೇ ಸ್ಟೋರ್ ಅಪ್ಲಿಕೇಶನ್ ಅನ್ನು ಕ್ಲೋಸ್‌ ಮಾಡಲು, ಅದರ ಮೇಲೆ ಸ್ವೈಪ್ ಮಾಡಿ
* ಪ್ಲೇ ಸ್ಟೋರ್ ಅನ್ನು ಮತ್ತೆ ತೆರೆಯಿರಿ.

ಮೊಬೈಲ್‌ ಅನ್ನು ರೀಸ್ಟಾರ್ಟ್‌ ಮಾಡಿ:

ಮೊಬೈಲ್‌ ಅನ್ನು ರೀಸ್ಟಾರ್ಟ್‌ ಮಾಡಿ:

* ಪವರ್ ಬಟನ್ ಅನ್ನು ಒತ್ತಿ ಹಿಡಿದುಕೊಳ್ಳಿ
* ಪವರ್ ಆಫ್ ಅಥವಾ ರೀಸ್ಟಾರ್ಟ್‌ ಟ್ಯಾಪ್ ಮಾಡಿ
* ಅಗತ್ಯವಿದ್ದರೆ, ನಿಮ್ಮ ಸಾಧನವು ಮತ್ತೆ ಆನ್ ಆಗುವವರೆಗೆ ಪವರ್ ಬಟನ್ ಅನ್ನು ಒತ್ತಿ ಹಿಡಿದುಕೊಳ್ಳಿ.

Best Mobiles in India

English summary
These 17 dangerous Android apps you should delete from your Mobile.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X