ಐಫೋನ್‌ನಲ್ಲಿರುವ ಈ ಟ್ರಿಕ್ಸ್‌ಗೆ ಖಂಡಿತಾ ನೀವು 'ವಾವ್‌' ಅಂತೀರಾ!?

|

ವಿಶ್ವದ ಅತ್ಯಂತ ಜನಪ್ರಿಯ ಡಿವೈಸ್‌ಗಳಲ್ಲಿ ಆಪಲ್‌ ಸಂಸ್ಥೆಯ ಐಫೋನ್‌ ಒಂದಾಗಿದೆ. ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಐಫೋನ್‌ 14 ಸದ್ದು ಮಾಡುತ್ತಿದೆ. ಅದೇ ರೀತಿ ಹಿಂದಿನ ಐಫೋನ್ 13 (iPhone 13) ಸರಣಿಯ ಫೋನ್‌ಗಳು ಇನ್ನು ಜನಪ್ರಿಯತೆ ಉಳಿಸಿಕೊಂಡು ಮುನ್ನಡೆದಿವೆ. ಹಾಗೆಯೇ ಐಫೋನ್‌ನಲ್ಲಿತುವ ಕೆಲವು ಫೀಚರ್ಸ್‌ಗಳು ಬಳಕೆದಾರರಿಗೆ ಅಚ್ಚರಿ ಮೂಡಿಸುವಂತಿದ್ದು, ಅವುಗಳು ಹೆಚ್ಚು ಉಪಯುಕ್ತ ಎನಿಸಿವೆ.

ಐಫೋನ್‌ 13 (iPhone 13)

ಹೌದು, ಆಪಲ್‌ ಸಂಸ್ಥೆಯ ಐಫೋನ್‌ 13 (iPhone 13) ಸರಣಿಯ ಫೋನಿನಲ್ಲಿ ಕೆಲವೊಂದು ಉಪಯುಕ್ತ ಫೀಚರ್ಸ್‌ಗಳಿವೆ. ಟೆಕ್ಸ್ಟ್‌, ಕರೆ, ನೋಟಿಫೀಕೇಶನ್‌, ಹೈಡ್‌ ಪ್ರೈವೆಟ್‌ ಫೋಟೊ ಸೇರಿದಂತೆ ಕೆಲವು ಅಗತ್ಯ ಮತ್ತು ಉಪಯುಕ್ತ ಆಯ್ಕೆಗಳಲ್ಲಿ ಬಳಕೆದಾರರಿಗೆ ನೆರವಾಗುವಂತಹ ಟ್ರಿಕ್ಸ್‌ ಮತ್ತು ಟಿಪ್ಸ್‌ಗಳಿವೆ. ಹಾಗಾದರೇ ಐಫೋನ್‌ 13 ನಲ್ಲಿನ ಕೆಲವು ಪ್ರಮುಖ ಟಿಪ್‌ ಹಾಗೂ ಟ್ರಿಕ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಟೆಕ್ಸ್ಟ್‌ ಮೆಸೆಜ್‌ ಮೂಲಕ ಉತ್ತರಿಸುವ ಆಯ್ಕೆ

ಟೆಕ್ಸ್ಟ್‌ ಮೆಸೆಜ್‌ ಮೂಲಕ ಉತ್ತರಿಸುವ ಆಯ್ಕೆ

ವಾಹನ ಚಾಲನೆ ಮಾಡುವಾಗ ಆಗಾಗ್ಗೆ ಕರೆಗಳನ್ನು ಸ್ವೀಕರಿಸುತ್ತೀರಾ? ಇಂತಹ ಸಂದರ್ಭಗಳಲ್ಲಿ ಬಳಕೆದಾರರು ಪೂರ್ವನಿರ್ಧರಿತ Reply with Text () ಪ್ರತ್ಯುತ್ತರಗಳನ್ನು ಬಳಸಿಕೊಂಡು ಕರೆ ಮಾಡಿದವರಿಗೆ ಕಳುಹಿಸಬಹುದು. ಆದಾಗ್ಯೂ, ಕೇವಲ 3 ಆಯ್ಕೆಗಳಿದ್ದು, ಅಗತ್ಯ ಯಾವುದೇ ಸಂದರ್ಭಕ್ಕೂ ಅನುಗುಣವಾಗಿ ಕಸ್ಟಮ್ ರಿಪ್ಲೈಗಳನ್ನು ಸೆಟ್ ಮಾಡಬಹುದು. ಸೆಟ್ಟಿಂಗ್‌ಗಳಿಗೆ ಹೋಗಿ ನಂತರ ಫೋನ್ ಅನ್ನು ಟ್ಯಾಪ್ ಮಾಡಿ. ಟೆಕ್ಸ್ಟ್‌ ಮೂಲಕ ಪ್ರತ್ಯುತ್ತರ ಆಯ್ಕೆಯನ್ನು ಆಯ್ಕೆಮಾಡಿ ಮತ್ತು ನಿಮ್ಮ ಕಸ್ಟಮ್ ಪ್ರತ್ಯುತ್ತರಗಳನ್ನು ಹೊಂದಿಸಿ.

ಐಫೋನ್ ಮೂಲಕ ಅಳತೆ ಮಾಡಬಹುದು

ಐಫೋನ್ ಮೂಲಕ ಅಳತೆ ಮಾಡಬಹುದು

ಐಫೋನ್ 13 ಬಳಕೆದಾರರಿಗೆ ಹಿಂಬದಿಯ ಕ್ಯಾಮೆರಾವನ್ನು ಬಳಸಿಕೊಂಡು ವಸ್ತುಗಳನ್ನು ಅಳೆಯಲು ಅನುಮತಿಸುತ್ತದೆ. ವಸ್ತುವಿನ ಮೇಲ್ಮೈ ಕೋನವನ್ನು ಪರಿಶೀಲಿಸಲು ನೀವು ಮಟ್ಟದ ಉಪಕರಣವನ್ನು ಸಹ ಬಳಸಬಹುದು.

ಪ್ರೈವಸಿ ಫೋಟೋಗಳನ್ನು ಹೈಡ್‌ ಮಾಡಬಹುದು

ಪ್ರೈವಸಿ ಫೋಟೋಗಳನ್ನು ಹೈಡ್‌ ಮಾಡಬಹುದು

ಐಫೋನ್‌ 13 ನಲ್ಲಿ ಬಳಕೆದಾರರು ಖಾಸಗಿ ಅಥವಾ ಪ್ರೈವಸಿ ಫೋಟೋಗಳನ್ನು ಹೈಡ್‌ ಮಾಡಬಹುದಾಗಿದೆ. ಹಿಡೆನ್‌ ಫೋಲ್ಡರ್‌ನಲ್ಲಿ ನಿಮ್ಮ ಖಾಸಗಿ ಫೋಟೋಗಳ ಅಪ್ಲಿಕೇಶನ್‌ನಿಂದ ಫೋಟೋಗಳನ್ನು ಹೈಡ್ ಮಾಡಬಹುದು. ಹೈಡ್ ಮಾಡಲು ಬಯಸುವ ಫೋಟೊಗಳನ್ನು ಆಯ್ಕೆ ಮಾಡಿ, ಶೇರ್ ಬಟನ್ ಒತ್ತಿ ಮತ್ತು ಹೈಡ್ ಮಾಡು ಆಯ್ಕೆ ಮಾಡಿ. ಫೇಸ್‌ಐಡಿ ಲಾಕ್‌ನಿಂದ ಸುರಕ್ಷಿತವಾಗಿರುವ ಹಿಡೆನ್ ಫೋಲ್ಡರ್‌ನಲ್ಲಿ ಖಾಸಗಿ ಫೋಟೊಗಳನ್ನು ಕಾಣಬಹುದು.

ನೋಟಿಫಿಕೇಶನ್‌ಗಳಿಗೆ ಫ್ಲ್ಯಾಶ್ ಅಲರ್ಟ್‌

ನೋಟಿಫಿಕೇಶನ್‌ಗಳಿಗೆ ಫ್ಲ್ಯಾಶ್ ಅಲರ್ಟ್‌

ಐಫೋನ್‌ಗಳು ಇತರ ಸ್ಮಾರ್ಟ್‌ಫೋನ್‌ಗಳಿಗಿಂತ ವಿಭಿನ್ನವಾದ ಫೀಚರ್ಸ್‌ಗಳನ್ನು ಹೊಂದಿವೆ. ನೋಟಿಫಿಕೇಶನ್‌ಗಳಿಗಾಗಿ ಫ್ಲ್ಯಾಶ್ ಅಲರ್ಟ್‌ಗಳನ್ನು ಸಕ್ರಿಯಗೊಳಿಸುವ ಸಾಮರ್ಥ್ಯ ಆಯ್ಕ ಸಹ ಅವುಗಳಲ್ಲಿ ಒಂದು. ಫ್ಲ್ಯಾಶ್ ಅಲರ್ಟ್‌ ಗಳನ್ನು ಸಕ್ರಿಯಗೊಳಿಸಲು, ಸೆಟ್ಟಿಂಗ್‌ಗಳು, Accessibility ಆಯ್ಕೆಗೆ ಹೋಗಿ ಮತ್ತು ಆಡಿಯೋ/ ವಿಷುಯಲ್ ಟ್ಯಾಪ್ ಮಾಡಿ. ಅಲರ್ಟ್‌ ಗಳಿಗಾಗಿ ಫ್ಲ್ಯಾಶ್ (Flash) LED ಆಯ್ಕೆ ಯನ್ನು ಆಕ್ಟಿವ್ ಮಾಡಿ.

ಲೈವ್ ಫೋಟೋಗಳನ್ನು ಎಡಿಟ್‌ ಮಾಡಿ

ಲೈವ್ ಫೋಟೋಗಳನ್ನು ಎಡಿಟ್‌ ಮಾಡಿ

ಲೈವ್ ಫೋಟೋಗಳು ಬಳಕೆದಾರರಿಗೆ ಜೀವನದ ಪರಿಪೂರ್ಣ ಕ್ಷಣಗಳನ್ನು 2 ಸೆಕೆಂಡ್ ವೀಡಿಯೊದೊಂದಿಗೆ ಸ್ಥಿರ ಫೋಟೊ ಸೆರೆಹಿಡಿಯಲು ಅನುಮತಿಸುತ್ತದೆ. ಈ ಫೀಚರ್‌ ಬಳಕೆದಾರರಿಗೆ ಲೈವ್ ಫೋಟೋ ಎಫೆಕ್ಟ್‌ ಬೂಮರಾಂಗ್ ಮಾಡಲು ಎಡಿಟ್ ಮಾಡಲು ಅನುಮತಿಸುತ್ತದೆ.

ಫೋಟೋಗಳ

ಈ ಆಯ್ಕೆ ಬಳಕೆಗೆ ಮೊದಲು ಫೋಟೋಗಳ ಅಪ್ಲಿಕೇಶನ್‌ಗೆ ಹೋಗಿ ಮತ್ತು ಲೈವ್ ಫೋಟೋವನ್ನು ತೆರೆಯಿರಿ. ನಂತರ ಮೇಲಿನ ಎಡಭಾಗದಲ್ಲಿರುವ ಬಾಣವನ್ನು ಒತ್ತಿರಿ. ಲೈವ್, ಲೂಪ್, ಬೌನ್ಸ್, ಲಾಂಗ್ ಎಕ್ಸ್‌ಪೋಸರ್ ಮತ್ತು ಆಫ್‌ನಂತಹ ಆಯ್ಕೆಗಳ ಲಿಸ್ಟ್ ಅನ್ನು ಪಡೆಯುತ್ತೀರಿ. ನಿಮ್ಮ ಆಯ್ಕೆಯ ಪ್ರಕಾರದ ಎಫೆಕ್ಟ್‌ ಅನ್ನು ಆಯ್ಕೆ ಮಾಡಿ ಮತ್ತು ಅಪ್ಲೈ ಮಾಡಿ.

Best Mobiles in India

English summary
These 5 iPhone 13 Tips and Tricks will wow you and your friends.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X