2018ರಲ್ಲಿ ನಮ್ಮಿಂದ ಮರೆಯಾದ ಜನಪ್ರಿಯ 5 ತಂತ್ರಜ್ಞಾನ ಸೇವೆಗಳಿವು!!

|

ಈ ತಂತ್ರಜ್ಞಾನ ಪ್ರಪಂಚದಲ್ಲಿ ಪ್ರತಿದಿನ ಹುಟ್ಟುವ ಹೊಸ ಹೊಸ ತಂತ್ರಜ್ಞಾನಗಳು ಜನರನ್ನು ತಲುಪುತ್ತಿವೆ. ಇದೇ ವೇಳೆಯಲ್ಲಿ ಹಲವು ತಂತ್ರಜ್ಞಾನ ಸೇವೆಗಳು ಜನರಿಂದ ಮರೆಯಾಗುತ್ತಿವೆ. ಒಂದು ಕಾಲದಲ್ಲಿ ಅತ್ಯಂತ ಹೆಚ್ಚು ಜನಪ್ರಿಯ ಸೇವೆಗಳಾಗಿ ಕಾಣಿಸಿಕೊಂಡಿದ್ದ ಕೆಲವು ತಂತ್ರಜ್ಞಾನಗಳು ಕಳೆದ ವರ್ಷದಲ್ಲೇ ಮರೆಯಾಗಿವೆ ಎಂದರೆ ಖಂಡಿತವಾಗಿ ಆಶ್ಚರ್ಯ ಕೂಡ ಆಗುತ್ತದೆ.

2018ರಲ್ಲಿ ನಮ್ಮಿಂದ ಮರೆಯಾದ ಜನಪ್ರಿಯ 5 ತಂತ್ರಜ್ಞಾನ ಸೇವೆಗಳಿವು!!

ಹೌದು, ತಂತ್ರಜ್ಞಾನ ಪ್ರಪಂಚವೇ ಹಾಗೇ ದಿನ ದಿನಕ್ಕೂ ಹೊಸ ಬೆಳವಣಿಗೆಗಳು, ಹೊಸ ಸಾಧ್ಯತೆಗಳು ತೆರೆದುಕೊಳ್ಳುತ್ತಲೇ ಇರುತ್ತವೆ. ಅದೇ ರೀತಿ ಎಷ್ಟೋ ವಿಷಯಗಳು ಹೆಸರೇ ಇಲ್ಲದಂತೆ ಮರೆಯಾಗುತ್ತವೆ. ಹಾಗಾಗಿ, ಇಂದಿನ ಲೇಖನದಲ್ಲಿ ಕಳೆದ ವರ್ಷ ನಮ್ಮಿಂದ ಮರೆಯಾದ ಪ್ರಮುಖ ತಂತ್ರಜ್ಞಾನ ಸೇವೆಗಳು ಯಾವುವು ಎಂಬ ಸಂಪೂರ್ಣ ಡೀಟೇಲ್ಸ್ ಅನ್ನು ನಾವು ನೀಡಿದ್ದೇವೆ.

ಗೂಗಲ್ ಯುಆರ್ಎಲ್ ಶಾರ್ಟರ್

ಗೂಗಲ್ ಯುಆರ್ಎಲ್ ಶಾರ್ಟರ್

ದೊಡ್ಡ ಯುಆರ್‌ಎಲ್ ಅಡ್ರೆಸ್‌ಗಳನ್ನು ಸಣ್ಣದು ಮಾಡಲು ಅಪ್ಲಿಕೇಷನ್ ಆಗಿ ಕಾರ್ಯನಿರ್ವಹಿಸುವ ಈಆಪ್ ಅನ್ನು ಗೂಗಲ್ ಸಿದ್ಧಪಡಿಸಿತ್ತು. ಇದರಲ್ಲಿ ಯಾವುದೇ ಅಡ್ರೆಸ್ ಟೈಪ್ ಮಾಡಿದರೂ ಅದನ್ನು ಸಣ್ಣದು ಮಾಡಿ ಕೊಡುತ್ತದೆ. ಬೇರೆ ಕಡೆಗಳಲ್ಲಿ ಅದನ್ನು ಪೇಸ್ಟ್ ಮಾಡಲು ಅಥವಾ ಷೇರ್ ಮಾಡಲು ಅವಕಾಶಗಳಿವೆ. ಇದೊಂದು ಸಣ್ಣ ಆಪ್. ಗೂಗಲ್ ಈಪ್ ಸೇವೆಯನ್ನು ಸದ್ಯದಲ್ಲೇ ಸ್ಥಗಿತಗೊಳಿಸಲಿದ್ದು ಮುಂದಿನ ದಿನಗಳಲ್ಲಿ ಬೇರೆ ರೂಪದಲ್ಲಿ ಜನರ ಮುಂದಿಡಲಿದೆ.

ಗೂಗಲ್​ ಬ್ಲಾಬ್​ ಇಮೋಜೀಸ್

ಗೂಗಲ್​ ಬ್ಲಾಬ್​ ಇಮೋಜೀಸ್

ಈ ವರ್ಷದಲ್ಲಿ ಗೂಗಲ್​ ಅನೌನ್ಸ್​ ಮಾಡಿರುವ ಕ್ಲೋಸಿಂಗ್ ಆಪ್‌ಗಳಲ್ಲಿ ಗೂಗಲ್​ನವರ ಬ್ಲಾಬ್​ ಇಮೋಜೀಸ್​ ಕೂಡ ಒಂದು. ವಾಟ್ಸ್​ಆಪ್​ ಲಾಂಚ್​ ಆದಾಗ ನಾವು ಹೊಸದಾಗಿ ಇಮೋಜೀಸ್​ ಬಂದಿದ್ದ ರೀತಿಯಲ್ಲಿ ಬಂದಂತಹ ಆಪ್ ಈ ಗೂಗಲ್​ ಬ್ಲಾಬ್​ ಇಮೋಜೀಸ್​. ಇದನ್ನ ಗೂಗಲ್​ನವರು ವರ್ಲ್ಡ್​ ಇಮೋಜಿ ಡೇ ದಿನ ಬಿಟ್ಟಿದ್ರು. ಆದ್ರೆ ಇದೀಗ ಈ ಇಮೋಜೀಸ್​ ಅಪ್​ಗ್ರೇಡ್​ ಮಾಡಿರೋ ಕಾರಣ ಬ್ಲಾಬ್​ ಇಮೋಜಿಸ್​ನ ಕ್ಲೋಸ್​ ಮಾಡಿದ್ದಾರೆ.

ಯಾಹೂ ಮೆಸ್ಸೆಂಜರ್​

ಯಾಹೂ ಮೆಸ್ಸೆಂಜರ್​

ಗೂಗಲ್​ನಂತೆಯೇ ಮಿಂಚುತ್ತಿದ್ದ ಯಾಹೂವಿನ ಮೆಸೇಂಜರ್ ಆಪ್ 2018ರಲ್ಲಿ ಕೊನೆಯಾಯಿತು. ಯಾಹೂ ಟೆಕ್‌ಸ್ಟ್ ಮೆಸೇಜ್‌ಗಳು ಮಾತ್ರ ಇದ್ದ ಕಾಲದಲ್ಲಿ ಈ ಯಾಹೂ ಮೆಸೇಂಜರ್ ಮೆಸೇಂಜಿಗ್ ಆ್ಯಪ್ ಪರಿಕಲ್ಪನೆಯನ್ನು ಹುಟ್ಟು ಹಾಕಿತ್ತು. ಸಾಕಷ್ಟು ಬಳಕೆದಾರನ್ನೂ ಹೊಂದಿದ್ದ ನಂತರದ ಸ್ಪರ್ಧೆಯಲ್ಲಿ ಪೈಪೋಟಿ ನೀಡಲಾಗದೆ ಹಿಂದೆ ಉಳಿಯಿತು.ಇದು ಬಹುಶಃ 90 ರ ದಶಕದಲ್ಲಿ ಹೆಚ್ಚು ಯೂಸ್​ ಮಾಡಿದಂತಹ ಈ ವೆಬ್​ಸೈಟ್​ ಈಗ ಕ್ಲೋಸ್ ಆಗಿದೆ.

ಗೂಗಲ್​ ಇನ್​ಬಾಕ್ಸ್​

ಗೂಗಲ್​ ಇನ್​ಬಾಕ್ಸ್​

ನಮ್ಮಲ್ಲಿ ಎಷ್ಟೋ ಜನ ಇ-ಮೇಲ್ ಎಂದರೆ ಜಿ-ಮೇಲ್ ಎಂದುಕೊಂಡಿದ್ದಾರೆ, ಅಷ್ಟೊಂದು ಪ್ರಸಿದ್ಧಿ ಇದೆ ಜಿಮೇಲ್. ಇದೇ ಜಿ-ಮೇಲ್ ನಿತ್ಯ ಸಾಕಷ್ಟು ಮೇಲ್ ವಿನಿಮಯ ಮಾಡಿಕೊಳ್ಳುವವರಾಗಿ ಇನ್‌ಬಾಕ್‌ಸ್ ಆಪ್ ಬಿಡುಗಡೆ ಮಾಡಿತ್ತು. ಮೇಲ್‌ನಲ್ಲಿನ ಇನ್‌ಬಾಕ್ಸ್ ನಂತೆಯೇ ಕಾರ್ಯನಿರ್ವಹಿಸುತ್ತಿದ್ದರೂ, ಇದೊಂದು ಪ್ರತ್ಯೇಕ ಆಪ್ ಆಗಿತ್ತು. ಇದೀದ ಗೂಗಲ್​ ಈಮೇಲ್​ ಇನ್​ಬಾಕ್ಸ್​ನ ಕ್ಲೋಸ್​ ಮಾಡ್ತಾಯಿದೆ ಅನ್ನೋದನ್ನ ಗೂಗಲ್​ ಅನೌನ್ಸ್​ ಮಾಡಿದೆ

ಗೂಗಲ್ ಪ್ಲಸ್

ಗೂಗಲ್ ಪ್ಲಸ್

ಗೂಗಲ್ ಯಾವುದೇ ಹೊಸ ಆಪ್ ಬಿಡುಗಡೆ ಮಾಡಿದರು ನಂತರದಲ್ಲಿ ಅದೊಂದು ಅವಶ್ಯಕತೆಯೇ ಆಗಿ ಬಿಡುತ್ತದೆ. ಆ ಮಟ್ಟದಲ್ಲಿ ಗೂಗಲ್ ಉತ್ಪನ್ನಗಳು ಯೂಸರ್ ಫ್ರೆಂಡ್ಲಿಯಾಗಿರುತ್ತವೆ. ಆದರೆ ಫೇಸ್‌ಬುಕ್ ಅಣ್ಣ ತಮ್ಮನ ಹೋಲಿಕೆಯಿದ್ದ ಗೂಗಲ್ ಪ್ಲಸ್ ಕೂಡಾ ನಮ್ಮನ್ನು ಅಗಲಿದೆ. 2011ರಲ್ಲಿ ಆರಂಭವಾಗಿ ಸಾಕಷ್ಟು ವಿಶೇಷತೆಗಳನ್ನು ಹೊಂದಿದ್ದರೂ, ಬೇರೆ ಸೋಷಿಯಲ್ ನೆಟ್‌ವರ್ಕ್‌ಗಳ ಜನಪ್ರಿಯತೆ ಮುಂದೆ ಇದು ಮಂಕಾಗಿದೆ. ಒಂದು ಮಾಹಿತಿ ಪ್ರಕಾರ ಸರಾಸರಿ ಬಳಕೆದಾರನೊಬ್ಬ ಐದು ಸೆಕೆಂಡ್‌ಗಿಂತ ಹೆಚ್ಚಿನ ಕಾಲ ಗೂಗಲ್ ಪ್ಲಸ್ ನೋಡುವುದಿಲ್ಲ.

Best Mobiles in India

English summary
these 5 tech you can't be see in future. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X