ಐಫೋನ್‌ ಬಳಕೆದಾರರೇ ಈ ಅಪ್ಲಿಕೇಶನ್‌ಗಳನ್ನು ಕೂಡಲೇ ಡಿಲೀಟ್‌ ಮಾಡಿ!

|

ಆಪಲ್‌ ಐಫೋನ್‌ ಬಳಕೆದಾರರು ಈ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದರೆ ಕೂಡಲೇ ಡಿಲೀಟ್‌ ಮಾಡುವುದು ಉತ್ತಮ. ಆಪ್‌ ಸ್ಟೋರ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಂಡಿರುವ ಅಪ್ಲಿಕೇಶನ್‌ಗಳಲ್ಲಿ ಮೋಸದ ಅಪ್ಲಿಕೇಶನ್‌ಗಳು ಕೂಡ ಸೇರಿಕೊಂಡಿವೆ ಎಂದು ವರದಿಯಾಗಿದೆ. ಕಳೆದ ವರ್ಷದ ಮಾರ್ಚ್‌ 2021 ರಲ್ಲಿ ಅವಾಸ್ಟ್ ಒಟ್ಟು 500 ಮಿಲಿಯನ್ ಡೌನ್‌ಲೋಡ್‌ ಪಡೆದುಕೊಂಡಿರುವ 133 ಫ್ರಾಡ್‌ ಅಪ್ಲಿಕೇಶನ್‌ಗಳ ಲಿಸ್ಟ್‌ ಅನ್ನು ಬಹಿರಂಗಪಡಿಸಿದೆ. ಒಂದು ವರ್ಷದ ನಂತರವೂ ಕೂಡ ಈ ಮೋಸದ ಅಪ್ಲಿಕೇಶನ್‌ಗಳಲ್ಲಿ ಇನ್ನು 84 ಅಪ್ಲಿಕೇಶನ್‌ಗಳು ಆಪ್‌ಸ್ಟೋರ್‌ನಲ್ಲಿ ಉಳಿದುಕೊಂಡಿವೆ ಎನ್ನಲಾಗಿದೆ.

ಆಪಲ್‌

ಹೌದು, ಆಪಲ್‌ ಕಂಪೆನಿಯ ಆಪ್‌ಸ್ಟೋರ್‌ನಲ್ಲಿ ನಕಲಿ ಅಪ್ಲಿಕೇಶನ್‌ಗಳ ಹಾವಳಿ ಶುರುವಾಗಿದೆ. VPNCheck ವರದಿಯ ಪ್ರಕಾರ ನಕಲಿ ಅಪ್ಲಿಕೇಶನ್‌ಗಳಿಂದ ವಾರ್ಷಿಕವಾಗಿ 10 ಕೋಟಿಗೂ ಅಧಿಕ ಬಳಕೆದಾರರಿಗೆ ಮೋಸವಾಗಿದೆ ಎನ್ನಲಾಗಿದೆ. ಇನ್ನು ಐಒಎಸ್‌ ಬಳಕೆದಾರರು ತಮ್ಮ ಡಿವೈಸ್‌ನಲ್ಲಿ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳನ್ನು ಬಳಸುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಆಪ್ ಸ್ಟೋರ್‌ನಿಂದ ಮಾತ್ರ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಆಪಲ್ ಸ್ಟೋರ್‌ನಲ್ಲಿ ಯಾವ ಅಪ್ಲಿಕೇಶನ್‌ಗಳನ್ನು ಪ್ರಕಟಿಸಲು ಅನುಮತಿಸಲಾಗಿದೆ ಎನ್ನುವುದರ ಮೇಲೆ ಬಿಗಿಯಾದ ಕಂಟ್ರೋಲ್‌ ಅನ್ನು ನೀಡಲಾಗಿದೆ. ಆದರೂ ಕೂಡ ಈ ರೀತಿಯ ಫ್ರಾಡ್‌ ಅಪ್ಲಿಕೇಶನ್‌ಗಳು ಬಳಕೆದಾರರನ್ನು ಮೋಸಗೊಳಿಸುತ್ತಿವೆ.

ವಿಪಿಎನ್‌

ಇನ್ನು ವಿಪಿಎನ್‌ ಚೆಕ್‌ ಅವಾಸ್ಟ್‌ ಶೇರ್‌ ಮಾಡಿರುವ ಲಿಸ್ಟ್‌ ಪ್ರಕಾರ ಆಪ್‌ ಸ್ಟೋರ್‌ನಲ್ಲಿ ಇನ್ನು ಕೂಡ ಫ್ರಾಡ್‌ ಅಪ್ಲಿಕೇಶನ್‌ಗಳು ಲಭ್ಯವಿದೆ. ಅದರಲ್ಲೂ ಜೂನ್ 2022 ರಲ್ಲಿ, ಸಕ್ರಿಯ "ಫ್ಲೀಸ್‌ವೇರ್" ಅಪ್ಲಿಕೇಶನ್‌ಗಳು 7.2 ಮಿಲಿಯನ್ ಅನನ್ಯ ಡೌನ್‌ಲೋಡ್‌ಗಳನ್ನು ಹೊಂದಿದ್ದು, ಒಂದು ತಿಂಗಳಲ್ಲಿ $8.6 ಮಿಲಿಯನ್ ಒಟ್ಟು ನಿವ್ವಳ ಆದಾಯವನ್ನು ಗಳಿಸಿವೆ. ಇದೇ ಅಂಕಿಅಂಶಗಳ ಆಧಾರದ ಮೇಲೆ ಹೇಳುವುದಾದರೆ ಆಪ್‌ಸ್ಟೋರ್‌ನಲ್ಲಿ $103.2 ಮಿಲಿಯನ್ ಸ್ಕ್ಯಾಮ್‌ ಅನ್ನು ನಕಲಿ ಅಪ್ಲಿಕೇಶನ್‌ಗಳು ನಡೆಸಿವೆ ಎಂದು ಲೆಕ್ಕಾಚಾರ ಮಾಡಲಾಗಿದೆ. ಈ ಅಪ್ಲಿಕೇಶನ್‌ಗಳು ಸಾಮಾನ್ಯವಾಗಿ ಚಂದಾದಾರಿಕೆಗಳನ್ನು ಹೇಗೆ ರದ್ದುಗೊಳಿಸಬೇಕೆಂದು ತಿಳಿದಿಲ್ಲದ ಬಳಕೆದಾರರನ್ನೇ ಟಾರ್ಗೆಟ್‌ ಮಾಡಿವೆ ಎಂದು ಹೇಳಲಾಗಿದೆ.

ಆಪ್‌ಸ್ಟೋರ್‌ನಲ್ಲಿ

ಆಪ್‌ಸ್ಟೋರ್‌ನಲ್ಲಿ ಪತ್ತೆಯಾಗಿರುವ ಸ್ಕ್ಯಾಮ್‌ ಅಪ್ಲಿಕೇಶನ್‌ಗಳ ಲಿಸ್ಟ್‌ನಲ್ಲಿ ಹೆಚ್ಚಿನ ಅಪ್ಲಿಕೇಶನ್‌ಗಳು ವರ್ಚುವಲ್ ಮ್ಯೂಸಿಕ್‌ ಟೂಲ್ಸ್‌ ಮತ್ತು ಕ್ಯಾಲ್ಕುಲೇಟರ್‌ ಅಪ್ಲಿಕೇಶನ್‌ಗಳಾಗಿವೆ. ಅಲ್ಲದೆ ಜ್ಯೋತಿಷ್ಯ ಹೇಳುವ, ಫೋಟೋ ಎಡಿಟ್‌ ಅಪ್ಲಿಕೇಶನ್‌ಗಳು, ಕ್ವಿಜ್‌ ಅಪ್ಲಿಕೇಶನ್‌ಗಳು, ಟ್ಯೂನರ್‌ಗಳು, ವಾಲ್ಯೂಮ್ ಬೂಸ್ಟರ್‌ಗಳು, ಸ್ಕ್ಯಾನರ್‌ಗಳು, ಟೆಂಪ್ಲೇಟ್‌ಗಳು ಅಥವಾ ವಾಲ್‌ಪೇಪರ್‌ಗಳಿಗೆ ಸಂಬಂಧಿಸಿದ ಅಪ್ಲಿಕೇಶನ್‌ಗಳು ಸೇರಿವೆ.

ಹೀಗೆ

ಇನ್ನು ಹೀಗೆ ವಂಚನೆ ಮಾಡುತ್ತಿರುವ ನಕಲಿ ಅಪ್ಲಿಕೇಶ್‌ಗಳು 5 ಸ್ಟಾರ್ ರೇಟಿಂಗ್‌ ಅನ್ನು ಪಡೆದುಕೊಂಡಿವೆ. ಅಲ್ಲದೆ ನಿಜವಾದ ಬಳಕೆದಾರರು ಒದಗಿಸಿದ ಅನೇಕ ಕಾನೂನುಬದ್ಧ ಕಡಿಮೆ-ರೇಟಿಂಗ್ ವಿಮರ್ಶೆಗಳನ್ನು ಮರೆಮಾಡುವ ಗುರಿಯನ್ನು ಹೊಂದಿವೆ. ಇದರಿಂದ ಬಳಕೆದಾರರು ಸುಲಭವಾಗಿ ವಂಚನೆಗೆ ಒಳಗಾಗುತ್ತಿದ್ದಾರೆ ಎನ್ನಲಾಗಿದೆ. ಸದ್ಯ VPNCheck ಶೇರ್‌ ಮಾಡಿರುವ ಈ ಅಪ್ಲಿಕೇಶನ್‌ಗಳನ್ನು ನೀವು ಬಳಕೆ ಮಾಡುತ್ತಿದ್ದರೆ ಕೂಡಲೇ ಡಿಲೀಟ್‌ ಮಾಡುವುದು ಒಳ್ಳೆಯದು. ವಿಪಿಎನ್‌ಚೆಕ್‌ ಅವಾಸ್ಟ್‌ ಹಂಚಿಕೊಂಡಿರುವ ನಕಲಿ ಅಪ್ಲಿಕೇಶನ್‌ ಲಿಸ್ಟ್‌ ಈ ಕೆಳಗಿನಂತಿದೆ:

ಎಡಿಟರ್‌

aipic - ಮ್ಯಾಜಿಕ್ ಫೋಟೋ ಎಡಿಟರ್‌
ಆಸ್ಟ್ರೋ+ ಹಾರೋಸ್ಕೋಪ್ & ಅಸ್ಟ್ರಾಲಜಿ
ಆಸ್ಟ್ರೋಲಿನ್: ದ ಡೈಲಿ ಹಾರೋಸ್ಕೋಪ್
ಆಟೋ ಸ್ಟಿಕ್ಕರ್ ಮೇಕರ್ ಸ್ಟುಡಿಯೋ
ಅವತಾರ್ ಮೇಕರ್ ಕ್ಯಾರೆಕ್ಟರ್ ಕ್ರಿಯೇಟರ್
ಬೇಬಿ ಸ್ಟಿಕ್ಕರ್- ಟ್ರ್ಯಾಕ್‌ ಮೈಲ್‌ಸ್ಟೋನ್‌
ಬಾಸ್ ಬೂಸ್ಟರ್ ವಾಲ್ಯೂಮ್ ಪವರ್ ಆಂಪ್
ಬೀಟ್ ಮೇಕರ್ ಪ್ರೊ - ಡಿಜೆ ಡ್ರಮ್ ಪ್ಯಾಡ್
Beat.ly ಮ್ಯೂಸಿಕ್‌ ವೀಡಿಯೊ ಮೇಕರ್
ಕಾರ್ಟೂನ್ಸ್ ಮಿ - ಫೋಟೋ ಆರ್ಟ್ ಎಡಿಟರ್
Dazz Cam- D3D ಫೋಟೋ ಎಫೆಕ್ಟ್
Dazzle - ಇನ್‌ಸ್ಟಾ ಸ್ಟೋರೀಸ್‌ ಎಡಿಟರ್‌
ಡಿಜ್ಜಿ - ಫೋಟೋ ಮತ್ತು ವೀಡಿಯೊ ಎಫೆಕ್ಟ್ಸ್‌
ಡಿಜೆ ಇಟ್‌! - ಮ್ಯೂಸಿಕ್‌ ಮಿಕ್ಸರ್ ಪ್ಯಾಡ್
ಡ್ರಿಂಕ್‌ ವಾಟರ್‌ ಡೈಲಿ ರಿಮೈಂಡರ್‌
ಡ್ರಮ್ಸ್: ಪ್ಲೇ ಬೀಟ್ಸ್ ಮತ್ತು ಡ್ರಮ್ಸ್‌ ಗೇಮ್ಸ್‌
ಎಡ್ಜಿಂಗ್ ಮಿಕ್ಸ್ - ಡಿಜೆ ಅಪ್ಲಿಕೇಶನ್
ಎಡ್ಜಿಂಗ್ ಪ್ರೊ - ಮ್ಯೂಸಿಕ್‌ ರೀಮಿಕ್ಸ್ ಮೇಕರ್‌
ಈಕ್ವಲೈಜರ್ ಎಫ್ಎಕ್ಸ್: ಬಾಸ್ ಬೂಸ್ಟರ್ ಅಪ್ಲಿಕೇಶನ್

ಪ್ಲೇಯರ್

ಈಕ್ವಲೈಜರ್+ ಎಚ್‌ಡಿ ಮ್ಯೂಸಿಕ್ ಪ್ಲೇಯರ್
ಫೇಸ್‌ಲ್ಯಾಬ್ - ಫೇಸ್ ಎಡಿಟರ್ ಮತ್ತು ಬ್ಯೂಟಿ
FaceMe - ಫನ್‌ ಪರ್ಸನಾಲಿಟಿ ಟೆಸ್ಟ್‌
ಫೇಸ್‌ಟಾರಿ: ಫೇಸ್‌ ಯೋಗ ಮತ್ತು ಎಕ್ಸರ್ಸೈಜ್
FLMX - ವೀಡಿಯೊ ಎಡಿಟರ್‌
ಫ್ರೇಮ್ - ಸ್ಲೈಡ್‌ಶೋ ವೀಡಿಯೊ ಮೇಕರ್
ಫ್ರೇಮ್ಸ್‌ - ಪಿಕ್ಚರ್‌ ಕೊಲಾಜ್ ಮೇಕರ್
ಗರ್ಲ್ ಗೇಮ್ಸ್‌: ಯುನಿಕಾರ್ನ್ ಸ್ಲಿಮ್‌
ಗಿಟಾರ್ - ಕೋರ್ಡ್ಸ್‌, ಟ್ಯಾಬ್ಸ್‌ ಮತ್ತು ಗೇಮ್ಸ್‌
ಗಿಟಾರ್ - ರಿಯಲ್‌ ಗೇಮ್ಸ್‌ ಮತ್ತು ಲೆಸನ್ಸ್‌
ಗಿಟಾರ್ ಪ್ಲೇ - ಗೇಮ್ಸ್‌ ಆಂಡ್‌ ಸಾಂಗ್ಸ್‌
ಗಿಟಾರ್ ಟ್ಯೂನರ್ - ಉಕುಲೆಲೆ ಆಂಡ್‌ ಬಾಸ್
ಹ್ಯಾಂಡ್ಸೆಟ್ - ಸೆಂಕೆಂಡ್‌ ಫೋನ್‌ ನಂಬರ್‌
ಹೈಲೈಟ್‌ ಸ್ಟೋರಿ ಕವರ್ ಮೇಕರ್
ಹಾರೋಸ್ಕೋಪ್‌ 2019 ಆಂಡ್‌ ಪಾಮ್ ರೀಡರ್
ಹಬ್ - ಸ್ಟೋರಿ ಟೆಂಪ್ಲೇಟ್ ಮೇಕರ್
ಹೈಪರ್ ಕ್ಲೀನರ್: ಕ್ಲೀನ್ ಫೋನ್
ಐಕಾನ್ಸ್ - ಐಕಾನ್ ಚೇಂಜರ್ ಅಪ್ಲಿಕೇಶನ್ +
ಇಂಪ್ರೆಸೊ - ಇನ್‌ಸ್ಟಾ ಸ್ಟೋರಿ ಎಡಿಟರ್
iWidget Pro: ಕಸ್ಟಮ್ ವಿಜೆಟ್ಸ್‌
Jambl: DJ ಬ್ಯಾಂಡ್ ಮತ್ತು ಬೀಟ್ ಮೇಕರ್
ಜಿಗ್ಸಾ ಪಜಲ್ - ಬ್ರೈನ್ ಗೇಮ್ಸ್
ಕರೋಕೆ ಸಾಂಗ್ಸ್‌ - ವಾಯ್ಸ್‌ ಸಿಂಗಿಂಗ್‌
ಲೈಫ್ ಪಲ್ಮಿಸ್ತ್ರಿ - AI ಪಾಮ್ ಮತ್ತು ಟ್ಯಾಗ್
ಲಿಫ್ಟ್: ಸ್ಟೋರಿ ಮೇಕರ್
ಲೈವ್ ವಾಲ್‌ಪೇಪರ್ ಮೇಕರ್: 4K ಥೀಮ್
ಲೂಪ್ ಮೇಕರ್ ಪ್ರೊ - ಮ್ಯೂಸಿಕ್‌ ಮೇಕರ್
ಲಕ್ಕಿ ಲೈಫ್ - ಫ್ಯೂಚರ್‌ ಸೀರ್‌
ಮ್ಯಾಜಿಕ್‌ಎಫ್‌ಎಕ್ಸ್‌- ಮ್ಯಾಜಿಕ್ ವೀಡಿಯೊ ಎಫೆಕ್ಟ್ಸ್‌
ಮೆಮೊರಿಸ್ಟೋ: ಬ್ರೈನ್ ಟೆಸ್ಟ್, ಐಕ್ಯೂ ಗೇಮ್
ಮೆನು ಮೇಕರ್!
ಮೆಟ್ರೋನಮ್ - ಟ್ಯಾಪ್ ಟೆಂಪೋ ಮತ್ತು ರಿದಮ್
ಮೆಟ್ರೊನೊಮ್ ಪ್ರೊ - ಬೀಟ್ ಮತ್ತು ಟೆಂಪೋ
ಮೂಡ್ ಬ್ಯಾಲೆನ್ಸ್: ಸೆಲ್ಫ್ ಕೇರ್ ಟ್ರ್ಯಾಕರ್

ಇನ್ನು ಅನೇಕ ಅಪ್ಲಿಕೇಶನ್‌ಗಳನ್ನು ವಿಪಿಎನ್‌ಚೆಕ್‌ ಅವೆಸ್ಟಾ ಪತ್ತೆ ಹಚ್ಚಿ ವರದಿ ಮಾಡಿದೆ.

Best Mobiles in India

Read more about:
English summary
These 84 apps stealing millions of money from iOS users

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X