TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಈ ಅಪ್ಲಿಕೇಶನ್‌ಗಳು ನಿಮ್ಮ ಆಂಡ್ರಾಯ್ಡ್ ಫೋನ್‌ಗೆ ಮಾರಕ
ಸ್ಮಾರ್ಟ್‌ಫೋನ್‌ನಲ್ಲಿ ಅಪ್ಲಿಕೇಶನ್‌ಗಳು ಇಲ್ಲ ಎಂದಾದಲ್ಲಿ ಅದೊಂದು ತುಂಬಲಾರದ ನಷ್ಟವಾಗಿದೆ ಎಂದೇ ನಾವು ಅಂದುಕೊಳ್ಳುತ್ತೇವೆ. ಬೇರೆ ಬೇರೆ ಕೆಲಸ ಕಾರ್ಯಗಳನ್ನು ಮಾಡಲು, ಸಾಮಾಜಿಕ ತಾಣಗಳ ಮಾಹಿತಿಗಾಗಿ ಅಪ್ಲಿಕೇಶನ್‌ಗಳು ನಮಗೆ ಅಗತ್ಯವಿದೆ. ಆದರೆ ಇವುಗಳೇ ನಮ್ಮ ಫೋನ್‌ಗೆ ಮಾರಕವಾದರೆ ನಮಗೆ ಸಂಕಷ್ಟ ಖಂಡಿತ. ನೀವು ಹೆಚ್ಚು ಬಳಸುವ ಜನಪ್ರಿಯ ಅಪ್ಲಿಕೇಶನ್‌ಗಳೇ ನಿಮ್ಮ ಫೋನ್‌ನ ಡೇಟಾವನ್ನು ನುಂಗಿ ಹಾಕುತ್ತಿವೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ.
ಡೇಟಾ ಮ್ಯಾನೇಜ್‌ಮೆಂಟ್ ಮತ್ತು ಡೇಟಾ ಸೇವಿಂಗ್ ಅಪ್ಲಿಕೇಶನ್ ಆದ ಒಪೇರಾ ಮ್ಯಾಕ್ಸ್ ಪ್ರಕಾರ ಹೇಳುವಂತೆ ಫೇಸ್‌ಬುಕ್ ಮೆಸೆಂಜರ್, ಜಿಮೇಲ್ ಮತ್ತು ವಾಟ್ಸಾಪ್ ನಿಮ್ಮ ಡೇಟಾವನ್ನು ಮುಗಿಸುವ ಸಂಚುಕೋರ ಅಪ್ಲಿಕೇಶನ್‌ಗಳಾಗಿವೆ ಎಂಬುದಾಗಿದೆ. ಅದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ವಿಷದವಾಗಿ ತಿಳಿಸುತ್ತಿದ್ದೇವೆ.
#1
ನೀವು ಇವುಗಳನ್ನು ಬಳಸದೇ ಇದ್ದರೂ ಹಿನ್ನಲೆಯಲ್ಲಿ ಚಾಲನೆಯಾದ ಸಂದರ್ಭದಲ್ಲಿ ಈ ಅಪ್ಲಿಕೇಶನ್‌ಗಳು 30% ದಷ್ಟು ಡೇಟಾವನ್ನು ಮುಗಿಸಿಬಿಡುತ್ತವೆ ಎಂದಾಗಿದೆ.
#2
50% ದಷ್ಟು ಡೇಟಾವನ್ನು ವಾಟ್ಸಾಪ್ ಬಳಕೆದಾರರು ಹಿನ್ನಲೆಯಲ್ಲಿ ಈ ಅಪ್ಲಿಕೇಶನ್ ಚಾಲನೆಯಾದ ಸಂದರ್ಭದಲ್ಲಿಯೇ ಕಳೆದುಕೊಳ್ಳುತ್ತಾರೆ.
#3
ಇನ್ನುಳಿದಂತೆ ಉಳಿದ ಡೇಟಾ ಪ್ರಮಾಣವನ್ನು ಫೇಸ್‌ಬುಕ್ ಮೆಸೆಂಜರ್ ಮತ್ತು ಜಿಮೇಲ್ ಬಳಕೆಯ ಸಂದರ್ಭದಲ್ಲಿ ಮುಗಿದು ಹೋಗುತ್ತದೆ. ಅದೂ ಅವುಗಳು ಸಕ್ರಿಯಗೊಂಡಿರದೇ ಇರುವಂತಹ ಸಂದರ್ಭದಲ್ಲಿ ಡೇಟಾ ಇಳಿಕೆಯಾಗುತ್ತದೆ.
#4
ಅಪ್ಲಿಕೇಶನ್‌ಗಳನ್ನು ನೀವು ಬಳಸದೇ ಇದ್ದ ಸಂದರ್ಭದಲ್ಲಿ ಡೇಟಾ ವಿನಿಯೋಗವಾಗುತ್ತದೆ ಎಂಬ ಸತ್ಯ ಕಹಿಯಾದರೂ ನೀವು ಅದನ್ನು ಅರಗಿಸಿಕೊಳ್ಳಲೇಬೇಕು.
#5
ವಾಟ್ಸಾಪ್‌ನಲ್ಲಿ ನಿಮಗೆ ಬರುವ ಇನ್‌ಕಮಿಂಗ್ ಸಂದೇಶಗಳು, ಜಿಮೇಲ್‌ಗೆ ಬರುವ ಇಮೇಲ್‌ಗಳು ಇದೆಲ್ಲಾ ನೀವು ಅಪ್ಲಿಕೇಶನ್ ತೆರೆಯುವುದಕ್ಕಾಗಿಯೇ ಕಾದುಕೊಂಡಿರುತ್ತವೆ.
#6
ಇದನ್ನು ನಿಲ್ಲಿಸಲು ಆದಷ್ಟು ಫೋನ್‌ನ ಬಳಕೆ ಇಲ್ಲದ ಸಂದರ್ಭದಲ್ಲಿ ಏರ್‌ಪ್ಲೇನ್ ಮೋಡ್‌ನಲ್ಲಿರಿಸುವುದು ಮುಂತಾಗಿ ಮಾಡಿ.
#7
ಭದ್ರತೆಯುಳ್ಳ ವೈಫೈ ನೆಟ್‌ವರ್ಕ್‌ಗೆ ನೀವು ಸಂಪರ್ಕವನ್ನು ಹೊಂದುವಂತೆ ಸೆಟ್ಟಿಂಗ್ಸ್ ಇದೆಯೇ ಎಂಬುದನ್ನು ಕಂಡುಕೊಳ್ಳಿ. ಡಿವೈಸ್ ಸೆಟ್ಟಿಂಗ್ಸ್‌ಗೆ ಹೋಗಿ. ನಿಮ್ಮ ವೈಫೈ ಆನ್ ಆಗಿದೆಯೇ ಎಂಬುದನ್ನು ನೋಡಿಕೊಳ್ಳಿ
#8
ವೈಫೈನ ಪ್ರಯೋಜನವನ್ನು ಪಡೆದುಕೊಳ್ಳಲು ದೊಡ್ಡ ಫೈಲ್‌ಗಳನ್ನು ಡೌನ್‌ಲೋಡ್ ಮಾಡುವ ಸಂದರ್ಭದಲ್ಲಿ ವೈಫೈ ಬಳಕೆ ಮಾಡಿ. ನೆಟ್‌ವರ್ಕ್ ಸಂಪರ್ಕದಲ್ಲಿ ಡೌನ್‌ಲೋಡ್ ಮಾಡುವುದು ಇಂಟರ್ನೆಟ್ ಅನ್ನು ಬೇಗನೇ ಮುಗಿಸಬಹುದು.
#9
ನಿಮ್ಮ ಫೋನ್ ಅಥವಾ ಟ್ಯಾಬ್ಲೇಟ್‌ನಲ್ಲಿ ಹೆಚ್ಚಿನ ಅಧಿಸೂಚನೆಗಳನ್ನು ನಿಮಗೆ ಕಂಡುಕೊಳ್ಳಬಹುದು. ಇದು ಕೂಡ ಡೇಟಾವನ್ನು ಮುಗಿಸಿಬಿಡುತ್ತದೆ. ಇಮೇಲ್ ಪುಶ್ ನೋಟಿಫಿಕೇಶನ್, ಸ್ವಯಂಚಾಲಿತ ಅಪ್ಲಿಕೇಶನ್ ಅಪ್‌ಡೇಟ್‌ಗಳನ್ನು ನಿಷ್ಕ್ರಿಯಗೊಳಿಸಿ.
#10
ಬಳಕೆಯಲ್ಲಿ ಇಲ್ಲದ ಸಂದರ್ಭದಲ್ಲಿ ಅಪ್ಲಿಕೇಶನ್ ಆಫ್ ಮಾಡಿಟ್ಟುಕೊಳ್ಳಿ. ಹೆಚ್ಚಿನ ತೆರೆದ ಅಪ್ಲಿಕೇಶನ್‌ಗಳು ಸ್ಥಳ ಸೇವೆಯನ್ನು ಒದಗಿಸುತ್ತವೆ ಇದೂ ನಿರಂತರವಾಗಿ ಡೇಟಾವನ್ನು ಬಳಸಿಕೊಂಡು ಅವುಗಳ ಕೆಲಸಗಳನ್ನು ಮಾಡುತ್ತವೆ.
#11
ಕೆಲವೊಂದು ಅಪ್ಲಿಕೇಶನ್‌ಗಳು ನಿಮ್ಮ ಡೇಟಾ ಬಳಕೆಯ ಬಗ್ಗೆ ಮುನ್ನೆಚ್ಚರಿಕೆಗಳನ್ನು ನೀಡುವ ವ್ಯವಸ್ಥೆಯನ್ನು ಹೊಂದಿದ್ದು ಅವುಗಳನ್ನು ಡಿವೈಸ್‌ಗಳಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಿ.
ಗಿಜ್‌ಬಾಟ್ ಲೇಖನಗಳು
ಸ್ಟೀವ್ ಜಾಬ್ಸ್ ಹುಟ್ಟುಹಬ್ಬ: ಆಪಲ್ ದಿಗ್ಗಜನ ರಹಸ್ಯ ಮಾಹಿತಿಗಳು
ಮೊಬೈಲ್ ಕಳೆದುಹೋದಾಗ ಮಾಡಲೇಬೇಕಾದ 6 ಚಟುವಟಿಕೆಗಳು
ವೈಫೈ ಆಂಟೆನಾ ನೀವೇ ಸಿದ್ಧಪಡಿಸಿ
ಚಂದ್ರನ ಮೇಲೆ ಯಾರೋ ಇದ್ದಾರೆ: ನಾಸಾ ವಿಜ್ಞಾನಿಗಳು