ಐಫೋನ್‌ 15 ಪ್ರೊ ಬಗ್ಗೆ ತಿಳಿದುಕೊಳ್ಳಬೇಕಾದ 5 ವಿಷಯಗಳು ಇವು!

|

ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಐಫೋನ್‌ ವಿಶೇ‍ಷ ಗ್ರಾಹಕರನ್ನು ಪಡೆದುಕೊಂಡಿದೆ. ಹಾಗೆಯೇ ಇದರ ಫೀಚರ್ಸ್‌ ಹಾಗೂ ಸೇವೆಗೆ ಯಾವುದೇ ಸ್ಮಾರ್ಟ್‌ಫೋನ್ ಸಾಟಿ ಇಲ್ಲ ಎಂಬಂತೆ ಕಾಲಕಾಲಕ್ಕೆ ಹೊಸ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿಕೊಂಡು ಬರುತ್ತಿದೆ. ಸದ್ಯಕ್ಕೆ ಆಪಲ್‌ನ ಐಫೋನ್‌ 14, ಐಫೋನ್ 13 ಫೋನ್‌ಗಳು ಮಾರುಕಟ್ಟೆಯಲ್ಲಿ ಡಿಸ್ಕೌಂಟ್‌ ಬೆಲೆಗೆ ಲಭ್ಯವಾಗುತ್ತಿದ್ದು, ಭಾರೀ ಬೇಡಿಕೆಯನ್ನೇ ಸೃಷ್ಟಿ ಮಾಡಿವೆ. ಇದರ ಬೆನ್ನಲ್ಲೇ ಈಗ ಐಫೋನ್‌ 15 ಪ್ರೊ ಬಗ್ಗೆ ಕೆಲವು ಮಾಹಿತಿ ಲೀಕ್‌ ಆಗಿವೆ.

ಐಫೋನ್‌

ಹೌದು, ಸದ್ಯಕ್ಕೆ ಐಫೋನ್‌ 14 ಪ್ರೊ ಹಾಗೂ 14 ಪ್ರೊ ಮ್ಯಾಕ್ಸ್‌ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು, ಇವು ಖರೀದಿಸಬಹುದಾದ ಅತ್ಯುತ್ತಮ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಾಗಿವೆ. ಇದರ ನಡುವೆ 2023 ರ ವೇಳೆಗೆ ಸದ್ದು ಮಾಡಬೇಕಿದ್ದ ಐಫೋನ್‌ 15 ಪ್ರೊ ಫೋನ್‌ ಈಗಲೇ ಜನಪ್ರಿಯವಾಗುತ್ತಿದೆ. ಈ ಫೋನ್‌ ಐಫೋನ್‌ 14 ಪ್ರೊಗಿಂತ ಸಾಕಷ್ಟು ಭಿನ್ನತೆಯಿಂದ ಕೂಡಿರಲಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ ಹೊಸ ಐಫೋನ್‌ಬಗ್ಗೆ ಕೇಳಿ ಬರುತ್ತಿರುವ ಕೆಲವು ಪ್ರಮುಖ ಫೀಚರ್ಸ್‌ಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಪ್ರೊ ಮ್ಯಾಕ್ಸ್ ಮಾಡೆಲ್‌ ಅನ್ನು ಬದಲಾಯಿಸಬಹುದು!

ಪ್ರೊ ಮ್ಯಾಕ್ಸ್ ಮಾಡೆಲ್‌ ಅನ್ನು ಬದಲಾಯಿಸಬಹುದು!

ಆಪಲ್‌ನ ಮುಂಬರುವ ಪ್ರೊ ಮ್ಯಾಕ್ಸ್ ಮಾಡೆಲ್‌ ಫೋನ್‌ ಪೀಳಿಗೆಯನ್ನು ಇದು ಬದಲಾಯಿಸಬಹುದು ಎಂದು ನಂಬಲಾಗಿದೆ. ಈ ಕಾರಣಕ್ಕೆ ಇದನ್ನು ಐಫೋನ್ 15 ಅಲ್ಟ್ರಾ ಎಂದು ಸಹ ಕರೆಯಲಾಗುತ್ತದೆ ಎಂದು ಹಲವರು ಊಹಿಸುತ್ತಿದ್ದಾರೆ. ಈ ರೀತಿ ಊಹಿಸಲು ಕಾರಣ ಈ ಹಿಂದೆ ಆಪಲ್‌ ಬಿಡುಗಡೆ ಮಾಡಿದ ವಾಚ್ ಅಲ್ಟ್ರಾ. ಐಫೋನ್ ಪ್ರೊ ಮ್ಯಾಕ್ಸ್ ಪ್ರೀಮಿಯಂ ಗ್ರಾಹಕರಲ್ಲಿ ಆಕರ್ಷಣೆಗೆ ಉಂಟುಮಾಡುತ್ತದೆಯಾದರೂ ಅಲ್ಟ್ರಾ ಎಂಬ ಹೆಸರು ಗ್ರಾಹಕರಲ್ಲಿ ಪ್ರೀಮಿಯಂ ನೋಟ ಕಣ್ಣಮುಂದೆ ಬರುವಂತೆ ಮಾಡುತ್ತದೆ.

ರೌಂಡೆಡ್‌ ಎಡ್ಜ್‌, ಹೊಸ ಟೈಟಾನಿಯಂ ವಿನ್ಯಾಸ

ರೌಂಡೆಡ್‌ ಎಡ್ಜ್‌, ಹೊಸ ಟೈಟಾನಿಯಂ ವಿನ್ಯಾಸ

ಇನ್ನು ಆಪಲ್ ವಾಚ್ ಅಲ್ಟ್ರಾ ಟೈಟಾನಿಯಂ ಕೇಸ್ ಅನ್ನು ಪಡೆದುಕೊಂಡಿದ್ದು, ಅದೇ ಶೈಲಿಯಲ್ಲಿ ಈ ಹೊಸ ಐಫೋನ್ 15 ಪ್ರೊ ಸಹ ಬಾಳಿಕೆ ಬರುವ ಟೈಟಾನಿಯಂ ಬಾಡಿಯನ್ನು ಪಡೆಯಬಹುದು ಎಂದು ನಂಬಲಾಗಿದೆ. ಹಾಗೆಯೇ ಬಜೆಟ್‌ ಬೆಲೆಯ ಐಫೋನ್ 5C ತನ್ನ ಬಾಡಿಯ ಹಿಂಭಾಗದಲ್ಲಿ ಬಾಗಿದ ಎಡ್ಜ್‌ ಹೊಂದಿತ್ತು. ಅದರಂತೆಯೇ ಈ ಐಫೋನ್ 15 ಪ್ರೊ ಮ್ಯಾಕ್ಸ್ ದೊಡ್ಡ ಫೋನ್ ಆಗಿರಲಿದ್ದು, ಬಾಗಿದ ಎಡ್ಜ್‌ ಆಯ್ಕೆಯನ್ನು ಪಡೆದಿರಲಿದೆ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಬಳಕೆದಾರರಿಗೆ ತಮ್ಮ ಫೋನ್‌ಗಳನ್ನು ಹೆಚ್ಚು ಆರಾಮವಾಗಿ ಹಿಡಿದುಕೊಳ್ಳಲು ಈ ಶೈಲಿ ಅನುವು ಮಾಡಿಕೊಡುತ್ತದೆ.

ವೇಗವಾದ ಡೇಟಾ ವರ್ಗಾವಣೆಗೆ USB-C

ವೇಗವಾದ ಡೇಟಾ ವರ್ಗಾವಣೆಗೆ USB-C

2024 ರಿಂದ ಯುಎಸ್‌ಬಿ-ಸಿ ಆಯ್ಕೆಯೊಂದಿಗೆ ಐಫೋನ್ ಮಾಡೆಲ್‌ ಅನ್ನು ಉತ್ಪಾದಿಸಲು ಆಪಲ್‌ ಮುಂದಾಗಿದ್ದು, ಅದರಂತೆ ಈ ಹೊಸ ಐಫೋನ್‌ ಸಹ ಐಫೋನ್ ಯುಎಸ್‌ಬಿ-ಸಿ ಪೋರ್ಟ್ ಅನ್ನು ಹೊಂದಿರಬಹುದು ಎನ್ನಲಾಗಿದೆ. ಈ ಹಿಂದೆ ಖ್ಯಾತ ಆಪಲ್ ವಿಶ್ಲೇಷಕರು ಕೆಲವು ಮಾಹಿತಿ ನೀಡಿದ್ದು, ಅದರಂತೆ ಎಲ್ಲಾ 2023 ಐಫೋನ್ 15 ಮಾಡೆಲ್‌ಗಳು USB-C ಕನೆಕ್ಟಿವಿಟಿ ಗುಣಮಟ್ಟವನ್ನು ಅಳವಡಿಸಿಕೊಳ್ಳುತ್ತವೆ ಎಂದು ಟ್ವೀಟ್ ಮಾಡಿದ್ದರು. ಅದರಂತೆ ಹೊಸ ಫೋನ್ ಕನಿಷ್ಠ USB 3.2 ಅಥವಾ ಥಂಡರ್ಬೋಲ್ಟ್ 3 ಆಯ್ಕೆಯನ್ನು ಪಡೆದುಕೊಳ್ಳಲಿವೆ. ಇನ್ನು ಐಫೋನ್‌ 15 ಸರಣಿಯಲ್ಲಿ ಮೊದಲ ಬಾರಿಗೆ ಹೊಸ ಫೋನ್‌ ಈ ಫೀಚರ್ಸ್‌ ಪಡೆಯಲಿದ್ದು, ಡೇಟಾ ವರ್ಗಾವಣೆಯಲ್ಲಿ ಉತ್ತಮ ಅನುಭವ ನೀಡಲಿದೆ ಎಂದು ಹೇಳಲಾಗುತ್ತಿದೆ.

ಪೆರಿಸ್ಕೋಪ್ ಲೆನ್ಸ್ ತಂತ್ರಜ್ಞಾನ

ಪೆರಿಸ್ಕೋಪ್ ಲೆನ್ಸ್ ತಂತ್ರಜ್ಞಾನ

ಇನ್ನು ಮುಂಬರುವ ಹೊಸ ಐಫೋನ್ 15 ಪ್ರೊ ಪೆರಿಸ್ಕೋಪ್ ಲೆನ್ಸ್ ಅನ್ನು ಹೊಂದಿರಬಹುದು ಎಂದೂ ಸಹ ಹೇಳಲಾಗುತ್ತಿದೆ. ಈ ಪೆರಿಸ್ಕೋಪ್ ಕ್ಯಾಮೆರಾವು ಉತ್ತಮವಾದ ಫೋಟೋಗಳನ್ನು ಸೆರೆಹಿಡಿಯಲು ಸಹಾಯ ಮಾಡಲಾಗಿದೆ. ಅದರಂತೆ ಈಗಾಗಲೇ ಸ್ಯಾಮ್‌ಸಂಗ್‌ ಮತ್ತು ಹುವಾಯ್‌ ನಂತಹ ಸ್ಮಾರ್ಟ್‌ಫೋನ್ ತಯಾರಕರು ತಮ್ಮ ಝೂಮಿಂಗ್ ಶ್ರೇಣಿಯನ್ನು ಸುಧಾರಿಸಿಕೊಳ್ಳುವ ಉದ್ದೇಶದಿಂದ ಕ್ಯಾಮೆರಾಗಳಿಗಾಗಿ ಪೆರಿಸ್ಕೋಪ್ ಮಾಡ್ಯೂಲ್‌ಗಳನ್ನು ಬಳಕೆ ಮಾಡುತ್ತಿದ್ದಾರೆ. ಇನ್ನು ಹೊಸ ಫೋನ್‌ ಸಹ ಈ ತಂತ್ರಜ್ಞಾನ ಪಡೆಯಲಿದೆ ಎಂದು ಊಹಿಸಲಾಗಿದೆ.

ಐಫೋನ್ 14 ಪ್ರೊ ಮ್ಯಾಕ್ಸ್‌ ಗಿಂತ ಹೆಚ್ಚು ದುಬಾರಿ

ಐಫೋನ್ 14 ಪ್ರೊ ಮ್ಯಾಕ್ಸ್‌ ಗಿಂತ ಹೆಚ್ಚು ದುಬಾರಿ

ಭಾರತವೂ ಒಳಗೊಂಡಂತೆ ವಿಶ್ವದ ಹಲವು ಭಾಗಗಳಲ್ಲಿ ಐಫೋನ್ 14 ಪ್ರೊ ಶ್ರೇಣಿಯು ಹೆಚ್ಚು ದುಬಾರಿಯಾಗಲಿದೆ, ಅದರಂತೆ ಈ ಪ್ರವೃತ್ತಿ ಮುಂದಿನ ವರ್ಷವೂ ಮುಂದುವರಿಯಬಹುದು ಎಂದು ಹೇಳಲಾಗುತ್ತಿದ್ದು, ಐಫೋನ್ 14 ಪ್ರೊ ಮ್ಯಾಕ್ಸ್‌ಗಿಂತ ಈ ಫೋನ್‌ ಉತ್ಪಾದನೆ ವೆಚ್ಚ ಗಣನೀಯವಾಗಿ ಹೆಚ್ಚಾಗಲಿದೆ. ಆದರೆ ನಿಖರವಾಗಿ ಹೊಸ ಪ್ರೊ ಮಾದರಿಯ ಬೆಲೆ ಎಷ್ಟು ಎಂದು ತಿಳಿದುಬಂದಿಲ್ಲ.

Best Mobiles in India

Read more about:
English summary
These are 5 things to know about iPhone 15 Pro

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X