ಡಿ.31ರ ಒಳಗೆ ನೀವಿದನ್ನು ಮಾಡದಿದ್ದರೆ ನಿಮ್ಮ ಡೆಬಿಟ್/ಕ್ರೆಡಿಟ್ ಕಾರ್ಡ್ ಕೆಲಸ ಮಾಡುವುದಿಲ್ಲ!

|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2015 ರಲ್ಲಿ ಭಾರತಾದ್ಯಂತ ಎಲ್ಲಾ ಬ್ಯಾಂಕ್ ಗಳಿಗೆ ಹಳೆಯ ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡ್ ಗಳನ್ನು ತೆಗೆದುಹಾಕಲು ಸೂಚನೆ ನೀಡಿದೆ. ಯಾಕೆಂದರೆ ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡ್ ಗಳನ್ನು ಸುಲಭವಾಗಿ ತೆಗೆಯಬಹುದು ಮತ್ತು ಕಳ್ಳರಿಗೆ ಸುಲಭದ ದಾರಿ ಮಾಡಿಕೊಡುತ್ತದೆ. ಆರ್ ಬಿಐ ನಿರ್ದೇಶನದಂತೆ ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡ್ ಗಳು ಇಎಂವಿ ಚಿಪ್ ಕಾರ್ಡ್ ಗಳಾಗಿ ಡಿಸೆಂಬರ್ 31 ರ ಒಳಗೆ ಬದಲಾಯಿಸಿಕೊಳ್ಳಬೇಕು.

ಇಲ್ಲದೇ ಇದ್ದಲ್ಲಿ ಹಳೆಯ ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡ್ ಗಳು ಜನವರಿ 1,2019 ರಿಂದ ಕೆಲಸ ಮಾಡುವುದನ್ನು ನಿಲ್ಲಿಸಿಬಿಡುವ ಸಾಧ್ಯತೆ ಇದೆ. ಈ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ ಕೆಲವು ಅಂಶಗಳು ಇಲ್ಲಿವೆ ನೋಡಿ.

EMV ಕಾರ್ಡ್ ಗಳು ಬ್ಯಾಂಕಿಂಗ್ ಮಾಹಿತಿಗಳನ್ನು ಹೆಚ್ಚು ಭದ್ರವಾಗಿಡುತ್ತವೆ.

EMV ಕಾರ್ಡ್ ಗಳು ಬ್ಯಾಂಕಿಂಗ್ ಮಾಹಿತಿಗಳನ್ನು ಹೆಚ್ಚು ಭದ್ರವಾಗಿಡುತ್ತವೆ.

ಇಎಂಇ ಕಾರ್ಡ್ ಗಳು ಸ್ಮಾರ್ಟ್ ಪೇಮೆಂಟ್ ಕಾರ್ಡ್ ಗಳಾಗಿರುತ್ತದೆ ಮತ್ತು ಇವುಗಳು ಡಾಟಾಗಳನ್ನು ಮ್ಯಾಗ್ನೆಟಿಕ್ ಸ್ಟ್ರೈಪ್ ಗಳ ಬದಲಾಗಿ ಇಂಟಿಗ್ರೇಟೆಡ್ ಸರ್ಕ್ಯೂಟ್ ಗಳಲ್ಲಿ ಸಂಗ್ರಹಿಸಿಡುತ್ತದೆ. ಇದನ್ನು ಚಿಪ್ ಕಾರ್ಡ್ಸ್ ಅಥವಾ ಐಸಿ ಕಾರ್ಡ್ಸ್ ಎಂದು ಕೂಡ ಕರೆಯಲಾಗುತ್ತದೆ. ಬಳಕೆದಾರರು ಈ ಕಾರ್ಡ್ ಗಳನ್ನು ಬಳಸಿ ಪ್ರತಿ ಬಾರಿ ಟ್ರಾನ್ಸ್ಯಾಕ್ಷನ್ ಮಾಡಿದಾಗಲೂ ಕೂಡ ಇವು ಡೈನಾಮಿಕ್ ಡಾಟಾಗಳನ್ನು ಕ್ರಿಯೇಟ್ ಮಾಡುತ್ತದೆ. ಹಾಗಾಗಿ ಈ ಕಾರ್ಡ್ ಗಳನ್ನು ಡುಪ್ಲಿಕೇಟ್ ಮಾಡುವುದು ಅಥವಾ ಕಳ್ಳತನ ಮಾಡಿ ಹಣ ಕದಿಯುವುದಕ್ಕೆ ಕಳ್ಳರಿಗೆ ಅಸಾಧ್ಯವಾಗುತ್ತದೆ.

ಸದ್ಯದ ಮ್ಯಾಗ್ನೆಟಿಕ್ ಕಾರ್ಡ್ ಗಳಿಗಿಂತ ಈ ಕಾರ್ಡ್ ಗಳು ಭಿನ್ನವಾಗಿರುತ್ತದೆ.

ಸದ್ಯದ ಮ್ಯಾಗ್ನೆಟಿಕ್ ಕಾರ್ಡ್ ಗಳಿಗಿಂತ ಈ ಕಾರ್ಡ್ ಗಳು ಭಿನ್ನವಾಗಿರುತ್ತದೆ.

ಇಎಂವಿ ಕಾರ್ಡ್ ಗಳಲ್ಲಿ, ಪೇಮೆಂಟ್ ಡಾಟಾಗಳು ಚಿಪ್ ಅನೇಬಲ್ಡ್ ಆಗಿರುವ ಪೇಮೆಂಟ್ ಕಾರ್ಡ್ ಗಳಲ್ಲಿ ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡ್ ಗಳಿಗಿಂತ ಹೆಚ್ಚು ಭದ್ರವಾಗಿರುತ್ತದೆ. ದೊಡ್ಡ ವ್ಯತ್ಯಾಸವೇನೆಂದರೆ ಇದು ಕ್ರಿಯಾತ್ಮಕ ದೃಢೀಕರಣವನ್ನು ಕೇಳುತ್ತದೆ ಆದರೆ ಮ್ಯಾಗ್ನೆಟಿಕ್ ಕಾರ್ಡ್ ನಲ್ಲಿ ಡಾಟಾ ಸ್ಟ್ಯಾಟಿಕ್ ಆಗಿರುತ್ತದೆ. ಹಾಗಾಗಿ ಕಳ್ಳರಿಗೆ ಹಳೆಯ ಕಾರ್ಡ್ ಗಳಲ್ಲಿ ಡಾಟಾ ಕದಿಯುವುದಕ್ಕೆ ಸುಲಭವಾಗುತ್ತಿತ್ತು.ಈ ಹೊಸ ಇಎಂವಿ ಕಾರ್ಡ್ ಗಳು ಕ್ರಿಯಾತ್ಮಕ ದೃಢೀಕರಣವನ್ನು ಕೇಳುವುದರಿಂದಾಗಿ ನಕಲಿ ವಂಚನೆಯನ್ನು ಪರಿಣಾಮಕಾರಿಯಾಗಿ ತಡೆಯುವುದಕ್ಕೆ ಸಾಧ್ಯವಾಗುತ್ತದೆ. ಹಾಗಾಗಿ ಆದಷ್ಟು ಆನ್ ಲೈನ್ ವಂಚನೆಯನ್ನು ಕಡಿಮೆ ಮಾಡುವುದಕ್ಕೆ ಈ ಕಾರ್ಡ್ ಗಳು ನೆರವು ನೀಡುತ್ತದೆ ಎಂದು ಹೇಳಲಾಗುತ್ತಿದೆ.

ನಿಮ್ಮ ಕಾರ್ಡ್ ಬ್ಲಾಕ್ ಆಗಿದೆಯೇ ಅಥವಾ ಇಲ್ಲವೇ ಎಂದು ತಿಳಿಯಲು ನಿಮ್ಮ ಚಿಪ್ ನ್ನು ಪರಿಶೀಲನೆ ಮಾಡಿ.

ನಿಮ್ಮ ಡೆಬಿಟ್/ಕ್ರೆಡಿಟ್ ಕಾರ್ಡಿನ ಮುಂಭಾಗದ ಎಡ ಬದಿಯಲ್ಲಿ ಇಎಂವಿ ಚಿಪ್ ನ್ನು ಗಮನಿಸಿ. ಒಂದು ವೇಳೆ ಸಿಮ್ ಕಾರ್ಡ್ ರೀತಿಯ ಚಿಪ್ ಗಮನಿಸಿದಲ್ಲಿ ಅದು ಇಎಂವಿ ಕಾರ್ಡ್, ಒಂದು ವೇಳೆ ಇಲ್ಲದೇ ಇದ್ದಲ್ಲಿ ಅದು ಹಳೆಯ ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡ್ ಆಗಿರುತ್ತದೆ.

ನಿಮ್ಮ ಬ್ಯಾಂಕ್ ಸ್ವಯಂಚಾಲಿತವಾಗಿ ಇಎಂವಿ ಕಾರ್ಡ್ ಆಗಿ ನಿಮ್ಮ ಕಾರ್ಡ್ ನ್ನು ರಿಪ್ಲೇಸ್ ಮಾಡಲಿದೆ.

ಒಂದು ವೇಳೆ ಈ ಬಗ್ಗೆ ನೀವು ಯಾವುದೇ ಮಾಹಿತಿಯನ್ನು ಇದುವರೆಗೂ ಪಡೆಯದಿದ್ದಲ್ಲಿ ಕೂಡಲೇ ನಿಮ್ಮ ಬ್ಯಾಂಕಿನ ಶಾಖೆಯನ್ನು ಸಂಪರ್ಕಿಸಿ.

ಇಂಟರ್ನೆಟ್ ಬ್ಯಾಂಕಿಂಗ

ಇಂಟರ್ನೆಟ್ ಬ್ಯಾಂಕಿಂಗ

ಇಂಟರ್ನೆಟ್ ಬ್ಯಾಂಕಿಂಗ್ ಬಳಸಿ ಕೂಡ ನೀವು ಉಚಿತವಾಗಿ ಹೊಸ ಇಎಂವಿ ಕಾರ್ಡ್ ಗಳನ್ನು ಪಡೆಯುವುದಕ್ಕೆ ಮನವಿ ಸಲ್ಲಿಸಬಹುದು.

ನೀವು ರಿಜಿಸ್ಟರ್ ಮಾಡಿರುವ ವಿಳಾಸಕ್ಕೆ ಅಥವಾ ನೀವು ಬ್ಯಾಂಕಿ ಶಾಖೆಯಲ್ಲಿ ಅಪ್ಲೈ ಮಾಡಿರುವ ವಿಳಾಸಕ್ಕೆ ನಿಮ್ಮ ಇಎಂವಿ ಕಾರ್ಡ್ ನ್ನು ಕಳುಹಿಸಿಕೊಡಲಾಗುತ್ತದೆ.

ಹಳೆಯ ಕಾರ್ಡ್ ನ್ನು ಇಎಂವಿ ಕಾರ್ಡ್ ಗಳಾಗಿ ಬದಲಾಯಿಸಿಕೊಳ್ಳುವುದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ

2008 ಕ್ಕಿಂತ ಮುಂಚೆ ನಿಮ್ಮ ಒದಗಿಸಿರುವ ಯಾವುದೇ ಡೆಬಿಟ್ ಕಾರ್ಡ್ ನಿಮ್ಮ ಬಳಿ ಇದ್ದಲ್ಲಿ ಅದು ಹೆಚ್ಚಾಗಿ ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡ್ ಆಗಿರುತ್ತದೆ.

Best Mobiles in India

Read more about:
English summary
These debit/credit cards may stop working if you don’t do this before December 31

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X