ಉಚಿತ ಅಮೆಜಾನ್ ಪ್ರೈಮ್‌ ಚಂದಾದಾರಿಕೆಗಾಗಿ ಈ ಪ್ಲ್ಯಾನ್‌ ರೀಚಾರ್ಜ್‌ ಮಾಡಿರಿ!

|

ದೇಶದ ಟೆಲಿಕಾಂ ದೈತ್ಯ ಆಗಿ ಗುರುತಿಸಿಕೊಂಡಿರುವ ಜಿಯೋ ತನ್ನ ಚಂದಾದಾರರಿಗೆ ವಿವಿಧ ಬೆಲೆಯಲ್ಲಿ ಹಲವು ಆಕರ್ಷಕ ಪ್ಲ್ಯಾನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಪೋಸ್ಟ್‌ಪೇಯ್ಡ್ ಮತ್ತು ಪ್ರಿಪೇಯ್ಡ್ ಪ್ಲ್ಯಾನ್‌ಗಳ ಚಂದಾದಾರಿಕೆಯಲ್ಲಿ ಹೆಚ್ಚುವರಿ ಪ್ರಯೋಜನಗಳೊಂದಿಗೆ ಬರುವ ಹಲವಾರು ಯೋಜನೆಗಳನ್ನು ಹೊಂದಿದೆ. ಇನ್ನು ಈ ಪ್ಲ್ಯಾನ್‌ಗಳು ಹೆಚ್ಚಿನ ವೇಗದ ಡೇಟಾ ಮತ್ತು ಒಟಿಟಿ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಉಚಿತವಾಗಿ ಪ್ರವೇಶವನ್ನು ಹೊಂದಿವೆ.

ಉಚಿತವಾಗಿ

ಉಚಿತವಾಗಿ

ಹೌದು, ಜನಪ್ರಿಯ ಜಿಯೋ ಕಂಪೆನಿ ಪರಿಚಯಿಸಿರುವ ಹಲವು ಪ್ಲ್ಯಾನ್‌ಗಳು ಹೆಚ್ಚುವರಿಯಾಗಿ ಒಟಿಟಿ ಚಂದಾದಾರಿಕೆಯ ಸೌಲಭ್ಯವನ್ನು ಒಳಗೊಂಡಿವೆ. ಈ ನಿಟ್ಟಿನಲ್ಲಿ ನೀವೇನಾದರೂ ಉಚಿತವಾಗಿ OTT ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರರಾಗ ಬಯಸಿದರೇ ಜಿಯೋದ ಯೋಜನೆಗಳಲ್ಲಿ ಅವಕಾಶವಿದೆ. ಜಿಯೋದ ಕೆಲವು ಪ್ಲ್ಯಾನ್‌ಗಳು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ+ ಹಾಟ್‌ಸ್ಟಾರ್ ಅನ್ನು ಉಚಿತವಾಗಿ ನೀಡುವ ರಿಲಯನ್ಸ್‌ ಜಿಯೋ ಕೆಲವು ಪ್ಲ್ಯಾನ್‌ಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ ಮುಂದೆ ಓದಿರಿ.

ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ 399ರೂ ಪ್ಲ್ಯಾನ್‌

ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ 399ರೂ ಪ್ಲ್ಯಾನ್‌

ಈ ಯೋಜನೆಯು ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ಯೋಜನೆಯಾಗಿದೆ. ಇದು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ + ಹಾಟ್‌ಸ್ಟಾರ್ ಎಂಬ ಮೂರು ಸ್ಟ್ರೀಮಿಂಗ್ ಸೇವೆಗಳಿಗೆ ಚಂದಾದಾರಿಕೆಯನ್ನು ಒದಗಿಸುತ್ತದೆ. ಈ ಪ್ಲಾನ್ 75GB ಡೇಟಾವನ್ನು ಗರಿಷ್ಠ 200GB ಡೇಟಾ ರೋಲ್‌ಓವರ್‌ನೊಂದಿಗೆ ನೀಡುತ್ತದೆ. 75GB ಡೇಟಾ ಮಿತಿಯನ್ನು ದಾಟಿದ ನಂತರ, ಬಳಕೆದಾರರು 10/GB ದರದಲ್ಲಿ ಡೇಟಾವನ್ನು ಖರೀದಿಸಬೇಕಾಗುತ್ತದೆ. ಈ ಯೋಜನೆಯು ಅನಿಯಮಿತ ವಾಯಿಸ್ ಕರೆಗಳು ಮತ್ತು ದಿನಕ್ಕೆ 100 ಎಸ್‌ಎಂಎಸ್ ಸಹ ನೀಡುತ್ತದೆ. ಈ ಎಲ್ಲದರ ಜೊತೆಗೆ, ಅಮೆಜಾನ್ ಪ್ರೈಮ್ ವೀಡಿಯೋ ಚಂದಾದಾರಿಕೆಗೆ ಸೇವೆಯು 1 ವರ್ಷದ ವರೆಗೂ ಮಾನ್ಯವಾಗಿರುತ್ತದೆ.

ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ 599ರೂ. ಪ್ಲ್ಯಾನ್‌

ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ 599ರೂ. ಪ್ಲ್ಯಾನ್‌

ಈ ಯೋಜನೆಯು ಗರಿಷ್ಠ 100GB ಡೇಟಾವನ್ನು ಮತ್ತು ಗರಿಷ್ಠ 200GB ಡೇಟಾ ರೋಲ್‌ಓವರ್ ಅನ್ನು ನೀಡುತ್ತದೆ. 100GB ಮಿತಿ ಮುಗಿದ ನಂತರ ಬಳಕೆದಾರರಿಗೆ ಪ್ರತಿ GBಗೆ 10ರೂ ಶುಲ್ಕ ವಿಧಿಸಲಾಗುತ್ತದೆ. ಅಲ್ಲದೆ, ಈ ಯೋಜನೆಯನ್ನು ಹೆಚ್ಚುವರಿ ಕುಟುಂಬ ಸದಸ್ಯರೊಂದಿಗೆ ಜಿಯೋ ಫೋಸ್ಟ್‌ಪೇಯ್ಡ್‌ ಸಂಪರ್ಕವನ್ನು ಬಳಸಿಕೊಂಡು ಶೇರ್‌ ಮಾಡಿಕೊಳ್ಳಬಹುದು. ಈ ಯೋಜನೆಯು OTT ಪ್ಲಾಟ್‌ಫಾರ್ಮ್‌ಗಳಿಗೆ ಆಕ್ಸಸ್‌ನೊಂದಿಗೆ ಬರುತ್ತದೆ.

ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ 799ರೂ. ಪ್ಲ್ಯಾನ್‌

ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ 799ರೂ. ಪ್ಲ್ಯಾನ್‌

ಜಿಯೋ 799ರೂ ಯೋಜನೆಯು ಪ್ರತಿ ಬಿಲ್ಲಿಂಗ್ ಸೈಕಲ್‌ಗೆ ಗರಿಷ್ಠ 150GB ಡೇಟಾ ಮತ್ತು 200GB ಡೇಟಾ ರೋಲ್‌ಓವರ್ ಅನ್ನು ಒದಗಿಸುತ್ತದೆ. ಯೋಜನೆಯ ಲಾಭವನ್ನು ಕುಟುಂಬ ಯೋಜನೆಯಡಿಯಲ್ಲಿ ಎರಡು ಹೆಚ್ಚುವರಿ ಪೋಸ್ಟ್‌ಪೇಯ್ಡ್ ಸಂಪರ್ಕಗಳೊಂದಿಗೆ ಹಂಚಿಕೊಳ್ಳಬಹುದು. ಹೆಚ್ಚುವರಿಯಾಗಿ ಈ ಪ್ಲ್ಯಾನ್ ಅಮೆಜಾನ್ ಪ್ರೈಮ್‌ ವಿಡಿಯೋ ಸೇವೆ ಒಳಗೊಂಡಿದೆ.

ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ 999ರೂ, ಪ್ಲ್ಯಾನ್‌

ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ 999ರೂ, ಪ್ಲ್ಯಾನ್‌

ಈ ಯೋಜನೆಯು ಗರಿಷ್ಠ 200GB ನೀಡುತ್ತದೆ ಮತ್ತು ಕುಟುಂಬ ಯೋಜನೆಯಡಿ ಮೂರು ಹೆಚ್ಚುವರಿ ಸಿಮ್ ಕಾರ್ಡ್‌ಗಳನ್ನು ನೀಡುತ್ತದೆ. ಈ ಪ್ಲಾನ್ ಅಡಿಯಲ್ಲಿ ಗರಿಷ್ಠ ಡೇಟಾ ರೋಲ್ ಓವರ್ 500GB ಆಗಿದೆ. ಇತರ ಅಗ್ಗದ ಯೋಜನೆಗಳಲ್ಲಿ 200GB ಯಿಂದ ಹೆಚ್ಚಾಗಿದೆ. ಹೆಚ್ಚುವರಿಯಾಗಿ ಈ ಪ್ಲ್ಯಾನ್ ಅಮೆಜಾನ್ ಪ್ರೈಮ್‌ ವಿಡಿಯೋ ಸೇವೆ ಒಳಗೊಂಡಿದೆ.

Best Mobiles in India

English summary
These Jio Postpaid Plans Offers Free Access To Amazon Prime Video.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X