ಅಂತೂ ಸೋನಿ ಸ್ಮಾರ್ಟ್‌ಫೋನ್‌ಗಳು ಬದಲಾವಣೆಗೆ ಸಜ್ಜಾಗಿವೆ!

|

ಇತ್ತೀಚಿಗೆ ಗೂಗಲ್ ಸಂಸ್ಥೆಯು ಆಂಡ್ರಾಯ್ಡ್‌ 10 ಓಎಸ್ ಅನ್ನು ಪರಿಚಯಿಸಿದ್ದು, ಇತ್ತೀಚಿನ ಹಲವು ಸ್ಮಾರ್ಟ್‌ಫೋನ್‌ಗಳು ಬಿಲ್ಟ್‌ಇನ್‌ ಆಗಿ ಆಂಡ್ರಾಯ್ಡ್ 10 ಓಎಸ್‌ ಪಡೆಯುತ್ತಿವೆ. ಹಾಗೂ ಇತರೆ ಹಲವು ಸ್ಮಾರ್ಟ್‌ಫೋನ್‌ಗಳಿಗೆ ಕಂಪನಿಗಳು ಆಂಡ್ರಾಯ್ಡ್ 10 ಓಎಸ್ ಅಪ್‌ಡೇಟ್‌ ಲಭ್ಯ ಮಾಡುತ್ತಿವೆ. ಹಾಗೆಯೇ ಸೋನಿ ಕಂಪನಿಯು ಸಹ ತನ್ನ ಕೆಲವು ಜನಪ್ರಿಯ ಸ್ಮಾರ್ಟ್‌ಫೋನ್‌ಗಳಿಗೆ ಆಂಡ್ರಾಯ್ಡ್ 10 ಓಎಸ್‌ ಅಪ್‌ಡೇಟ್‌ ಘೋಷಿಸಿದೆ.

ಸ್ಮಾರ್ಟ್‌ಫೋನ್‌

ಹೌದು, ಸದ್ಯ ಶಿಯೋಮಿ, ಸ್ಯಾಮ್‌ಸಂಗ್ ಸೇರಿದಂತೆ ಹಲವು ಕಂಪನಿಗಳು ತಮ್ಮ ಪ್ರಮುಖ ಸ್ಮಾರ್ಟ್‌ಫೋನ್‌ಗಳಿಗೆ ಹೊಸ ಆಂಡ್ರಾಯ್ಡ್‌ 10 ಓಎಸ್‌ ಅನ್ನು ಅಪ್‌ಗ್ರೇಡ್‌ ಮಾಡುತ್ತಿವೆ. ಅದೇ ರೀತಿ ಜಪಾನ ಮೂಲಕ ಸೋನಿ ಸಂಸ್ಥೆಯು ತನ್ನ ಎಕ್ಸ್‌ಪಿರಿಯಾ ಸರಣಿಯ ಎಂಟು ಜನಪ್ರಿಯ ಸ್ಮಾರ್ಟ್‌ಫೋನ್‌ಗಳಿಗೆ ಆಂಡ್ರಾಯ್ಡ್ 10 ಓಎಸ್‌ ಅಪ್‌ಡೇಟ್‌ ಮಾಡಲು ಮುಂದಾಗಿದೆ. ಆಂಡ್ರಾಯ್ಡ್ 9 ಪೈ ಓಎಸ್‌ ಗಿಂತ ಸಾಕಷ್ಟು ನವೀನ ಫೀಚರ್ಸ್‌ಗಳು, ಸೆಟ್ಟಿಂಗ್ಸ್‌ಗಳು ಆಂಡ್ರಾಯ್ಡ್ 10 ಓಎಸ್‌ನಲ್ಲಿ ಸೇರಿವೆ. ಹಾಗದರೇ ಆಂಡ್ರಾಯ್ಡ್‌ 10 ಓಎಸ್‌ ಅಪ್‌ಡೇಟ್‌ಗೆ ಸಿದ್ಧವಾಗಿರುವ ಸೋನಿಯ ಸ್ಮಾರ್ಟ್‌ಫೋನ್‌ಗಳಿ ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಸೋನಿ ಎಕ್ಸ್‌ಪಿರಿಯಾ 1

ಸೋನಿ ಎಕ್ಸ್‌ಪಿರಿಯಾ 1

ಇತ್ತೀಚಿನ ಸೋನಿ ಎಕ್ಸ್‌ಪಿರಿಯಾ 1 ಸ್ಮಾರ್ಟ್‌ಫೋನ್ 6.5 ಇಂಚಿನ ಹೆಚ್‌ಡಿಆರ್‌ ಓಎಲ್‌ಡಿ ಮಾದರಿಯ ಡಿಸ್‌ಪ್ಲೇಯನ್ನು ಹೊಂದಿದೆ. ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಮಾದರಿಯನ್ನು ಸಹ ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ 3,300mAh ಬ್ಯಾಟರಿ ಬಾಳಿಕೆಯನ್ನು ಪಡೆದಿದೆ. ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ಈ ಫೋನ್ ಇದೇ ಡಿಸೆಂಬರ್‌ನಲ್ಲಿ ಆಂಡ್ರಾಯ್ಡ್ 10 ಓಎಸ್‌ ಅಪ್‌ಡೇಟ್ ಪಡೆಯಲಿದೆ.

ಸೋನಿ ಎಕ್ಸ್‌ಪಿರಿಯಾ 5

ಸೋನಿ ಎಕ್ಸ್‌ಪಿರಿಯಾ 5

ಸೋನಿ ಎಕ್ಸ್‌ಪಿರಿಯಾ 5 ಸ್ಮಾರ್ಟ್‌ಫೋನ್ 6.1 ಇಂಚಿನ ಓಎಲ್‌ಡಿ ಡಿಸ್‌ಪ್ಲೇ ಮಾದರಿಯನ್ನು ಒಳಗೊಂಡಿದ್ದು, ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಸದ್ಯ ಪ್ರೊಸೆಸರ್‌ಗೆ ಆಂಡ್ರಾಯ್ಡ್‌ 9 ಪೈ ಓಎಸ್‌ ಬೆಂಬಲವಿದ್ದು, ಇದೇ ಡಿಸೆಂಬರ್ ತಿಂಗಳಿನಲ್ಲಿ ಆಂಡ್ರಾಯ್ಡ್ 10 ಓಎಸ್‌ ಅಪ್‌ಡೇಟ್ ಪಡೆಯಲಿದೆ.

ಸೋನಿ ಎಕ್ಸ್‌ಪಿರಿಯಾ 10 ಪ್ಲಸ್‌

ಸೋನಿ ಎಕ್ಸ್‌ಪಿರಿಯಾ 10 ಪ್ಲಸ್‌

2019ರ ಆರಂಭದಲ್ಲಿ ಬಿಡುಗಡೆ ಆಗಿರುವ ಎಕ್ಸ್‌ಪಿರಿಯಾ 10 ಪ್ಲಸ್‌ ಸ್ಮಾರ್ಟ್‌ಫೋನ್ 6 ಇಂಚಿನ ಎಲ್‌ಸಿಡಿ ಮಾದರಿಯ ಡಿಸ್‌ಪ್ಲೇ ಪಡೆದಿದೆ. ಸ್ನ್ಯಾಪ್‌ಡ್ರಾಗನ್ 630 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆಂಡ್ರಾಯ್ಡ್ 9 ಪೈ ಓಎಸ್‌ ಸಫೋರ್ಟ್‌ ಹೊಂದಿದೆ. ಈ ಫೋನು ಆಂಡ್ರಾಯ್ಡ್‌ 10 ಓಎಸ್‌ ಅಪ್‌ಡೇಟ್‌ ಲಿಸ್ಟ್‌ನಲ್ಲಿದ್ದು, 2020ರ ಮೊದಲಾರ್ಧದಲ್ಲಿ ಅಪ್‌ಡೇಟ್‌ ಆಗಲಿದೆ.

ಅಪ್‌ಡೇಟ್‌ ಲಿಸ್ಟ್‌ನಲ್ಲಿನ ಇತರೆ ಫೋನ್‌ಗಳು

ಅಪ್‌ಡೇಟ್‌ ಲಿಸ್ಟ್‌ನಲ್ಲಿನ ಇತರೆ ಫೋನ್‌ಗಳು

ಸೋನಿ ಎಕ್ಸ್‌ಪಿರಿಯಾ 10-2020ರ ಮೊದಲಾರ್ಧದಲ್ಲಿ ಅಪ್‌ಡೇಟ್‌ ಆಗಲಿದೆ. ಎಕ್ಸ್‌ಪಿರಿಯಾ XZ2- 2020ರ ಆರಂಭದಲ್ಲಿ ಅಪ್‌ಡೇಟ್ ಆಗಲಿದೆ. ಎಕ್ಸ್‌ಪಿರಿಯಾ XZ2 ಕಂಪ್ಯಾಕ್ಟ್‌- 2020ರ ಆರಂಭದಲ್ಲಿ ಅಪ್‌ಡೇಟ್ ಸಾಧ್ಯತೆ. ಇನ್ನು ಎಕ್ಸ್‌ಪಿರಿಯಾ XZ2 ಪ್ರೀಮಿಯಂ-2020ರ ಫಸ್ಟ್‌ಹಾಫ್‌ನಲ್ಲಿ ಹಾಗೂ ಎಕ್ಸ್‌ಪಿರಿಯಾ XZ3 ಈ ಫೋನ್‌ ಸಹ 2020ರ ಮೊದಲ ಭಾಗದಲ್ಲಿ ಅಪ್‌ಡೇಟ್ ಆಗಲಿದೆ.

Best Mobiles in India

English summary
Sony which has seen a slump in the smartphone market has announced Android 10 update for eight of its smartphones. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X