ಸ್ಮಾರ್ಟ್‌ಫೋನ್‌ ಸ್ಕ್ರೀನ್‌ಗಾರ್ಡ್‌ ಬಳಸುವ ಮುನ್ನ ನೀವು ತಿಳಿದಿರಲೇಬೇಕಾದ ಅಂಶಗಳು!

|

ಸ್ಮಾರ್ಟ್‌ಫೋನ್‌ ಬಳಕೆದಾರರು ತಮ್ಮ ಮೊಬೈಲ್‌ಗೊಂದು ಸೂಕ್ತವಾದ ಸ್ಕ್ರೀನ್‌ ಗಾರ್ಡ್‌ ಇರಬೇಕೆಂದು ಬಯಸೋದು ಸಾಮಾನ್ಯ. ಸ್ಕ್ರೀನ್‌ ಪ್ರೊಟೆಕ್ಟರ್‌ಗಳು ಫೋನ್‌ ಮೇಲೆ ಯಾವುದೇ ರೀತಿಯ ಡ್ಯಾಮೇಜ್‌ ಆಗದಂತೆ ಕಾಪಾಡುವಲ್ಲಿ ಸಹಕಾರಿಯಾಗಿವೆ. ಇದಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಕೂಡ ಹಲವು ವಿಧದ ಸ್ಕ್ರೀನ್‌ಗಾರ್ಡ್‌ಗಳು ಲಭ್ಯವಿದೆ. ಐಫೋನ್‌ಗಳಿಂದ ಹಿಡಿದ ಎಂಟ್ರಿ ಲೆವೆಲ್‌ ಸ್ಮಾರ್ಟ್‌ಫೋನ್‌ಗಳಿಗೂ ಸೂಕ್ತವಾಗುವ ಅನೇಕ ಸ್ಕ್ರೀನ್‌ ಗಾರ್ಡ್‌ಗಳನ್ನು ನಾವಿಂದು ಕಾಣಬಹುದಾಗಿದೆ.

ಸ್ಮಾರ್ಟ್‌ಫೋನ್‌ ಸ್ಕ್ರೀನ್‌ಗಾರ್ಡ್‌ ಬಳಸುವ ಮುನ್ನ ನೀವು ತಿಳಿದಿರಲೇಬೇಕಾದ ಅಂಶಗಳು

ಹೌದು, ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಪ್ರೊಟೆಕ್ಷನ್‌ಗಾಗಿ ಸ್ಕ್ರೀನ್‌ಗಾರ್ಡ್‌ಗಳನ್ನು ಬಳಸುತ್ತಾರೆ. ಆದರೆ ಸ್ಮಾರ್ಟ್‌ಫೋನ್‌ಗಳಿಗೆ ಸ್ಕ್ರೀನ್‌ಗಾರ್ಡ್‌ಗಳನ್ನು ಆಯ್ಕೆ ಮಾಡುವಾಗ ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ನೀವು ಸ್ಮಾರ್ಟ್‌ಫೋನ್‌ ಅನ್ನು ಬಳಸುವ ಆಧಾರದ ಮೇಲೆ ಸ್ಕ್ರೀನ್‌ಗಾರ್ಡ್‌ಗಳನ್ನು ಆಯ್ಕೆ ಮಾಡೋದು ಉಪಯುಕ್ತವೆನಿಸಲಿದೆ. ಹಾಗಾದ್ರೆ ನೀವು ನಿಮ್ಮ ಮೊಬೈಲ್‌ಗೆ ಸ್ಕ್ರೀನ್‌ಗಾರ್ಡ್‌ಗಳನ್ನು ಆಯ್ಕೆ ಮಾಡುವಾಗ ತಿಳಿದಿರಲೇಬೇಕಾದ ಕ್ರಮಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನೀವು ಫೋನ್‌ ಅನ್ನು ಹೇಗೆ ಬಳಸುತ್ತೀರಿ ಎಂಬುದರ ಆಧಾರದ ಮೇಲೆ ಸ್ಕ್ರೀನ್‌ ಗಾರ್ಡ್‌ ಅನ್ನು ಆಯ್ಕೆ ಮಾಡುವುದು ಸೂಕ್ತವಾಗಿದೆ. ನೀವು ಫೋನ್‌ ಬಳಸುವ ವಿಧಾನಕ್ಕೆ ತಕ್ಕಂತೆ ಸ್ಕ್ರೀನ್‌ಗಾರ್ಡ್‌ ಆಯ್ಕೆ ಮಾಡಿದರೆ ನಿಮ್ಮ ಫೋನ್‌ಗೆ ಸೂಕ್ತ ಸುರಕ್ಷತೆ ದೊರೆಯಲಿದೆ. ಇನ್ನು ಸ್ಕ್ರೀನ್ ಪ್ರೊಟೆಕ್ಟರ್‌ಗಳು ಪ್ಲಾಸ್ಟಿಕ್ ಮತ್ತು ಟೆಂಪರ್ಡ್ ಎಂಬ ಎರಡು ವಿಧದ ಆಯ್ಕೆಗಳಲ್ಲಿ ದೊರೆಯಲಿವೆ. ಪ್ಲಾಸ್ಟಿಕ್ ಸ್ಕ್ರೀನ್‌ ಗಾರ್ಡ್‌ಗಳು ಸೂಕ್ತವಾದ ಪ್ರೊಟೆಕ್ಷನ್‌ ನಿಡಲಿವೆ. ಹಾಗೆಯೇ ಟೆಂಪರ್ಡ್ ಸ್ಕ್ರೀನ್ ಗಾರ್ಡ್‌ ಸ್ವಲ್ಪ ಹೆಚ್ಚಿನ ಬೆಲೆಯಲ್ಲಿ ದೊರೆಯಲಿವೆ.

ಸ್ಮಾರ್ಟ್‌ಫೋನ್‌ ಸ್ಕ್ರೀನ್‌ಗಾರ್ಡ್‌ ಬಳಸುವ ಮುನ್ನ ನೀವು ತಿಳಿದಿರಲೇಬೇಕಾದ ಅಂಶಗಳು

ಇನ್ನು ಸ್ಕ್ರೀನ್‌ಗಾರ್ಡ್‌ಗಳ ಬೆಲೆ ಹೆಚ್ಚಿನ ಬೆಲೆ ಹೊಂದಿದೆ ಎಂದು ಮಾತ್ರಕ್ಕೆ ಅವು ಸೂಕ್ತವಾದ ಸ್ಕ್ರೀನ್ ಗಾರ್ಡ್‌ಗಳು ಎಂದು ಭಾವಿಸಬೇಡಿ. ಬೆಲೆಯ ಆಯ್ಕೆಯನ್ನು ನೋಡುವುದಕ್ಕಿಂತ ನೀವು ಆಯ್ಕೆ ಮಾಡುವ ಸ್ಕ್ರೀನ್‌ಗಾರ್ಡ್‌ ಫಿಂಗರ್‌ಪ್ರಿಂಟ್ ಸೆನ್ಸಾರ್‌, ಸೇರಿದಂತೆ ನಿಮಗೆ ಸರಿ ಹೊಂದುವ ಫೀಚರ್ಸ್‌ಗಳನ್ನು ಬೆಂಬಲಿಸುವ ಸಾಮರ್ಥ್ಯ ಹೊಂದಿದೆಯಾ ಎಂದು ಪರಿಶೀಲಿಸಿ. ಎಲ್ಲದಕ್ಕಿಂತ ಮುಖ್ಯ ವಾಗಿ ಕವರ್ ಫ್ರೆಂಡ್ಲಿಯಾಗಿರುವ ಸ್ಕ್ರೀನ್ ಪ್ರೊಟೆಕ್ಟರ್ ಅನ್ನು ಆಯ್ಕೆಮಾಡಿ.

ಒಂದು ವೇಳೆ ನೀವು ಆನ್‌ಲೈನ್‌ ಪ್ಲಾಟ್‌ಫಾರ್ಮ್‌ ಮೂಲಕ ಸ್ಕ್ರೀನ್‌ ಗಾರ್ಡ್‌ ಖರೀದಿಸಲು ಬಯಸಿದರೆ ಮೊದಲಿಗೆ ರಿವ್ಯೂಗಳನ್ನು ನೋಡುವುದು ಸೂಕ್ತ. ಈಗಾಗಲೇ ಖರೀದಿಸಿರುವ ಗ್ರಾಹಕರು ನೀಡಿರುವ ಅನುಭವದ ಆಧಾರದ ಮೇಲೆ ಆಯ್ಕೆ ಮಾಡಿದರೆ ಉತ್ತಮ. ಇಲ್ಲದಿದ್ದರೆ ಖರೀದಿಸಿದ ನಂತರ ಅದು ಸೂಕ್ತವಾಗಿಲ್ಲದಿದ್ದರೆ ಅದು ನಿಮಗೆ ಅನುಪಯುಕ್ತವಾಗಲಿದೆ. ಇದರೊಂದಿಗೆ ನೀವು ಸ್ಕ್ರೀನ್‌ಗಾರ್ಡ್‌ಗಳನ್ನು ಆಯ್ಕೆ ಮಾಡುವಾಗ ಸೆಲ್ಫಿ ಕ್ಯಾಮೆರಾ ಕಟೌಟ್‌ಗಳನ್ನು ಹೊಂದಿರುವ ಸ್ಕ್ರೀನ್ ಪ್ರೊಟೆಕ್ಟರ್ ಅನ್ನು ಆಯ್ಕೆ ಮಾಡೋದು ಸೂಕ್ತ.

ಇನ್ನು ನೀವು ಯಾವುದೇ ಕಾರಣಕ್ಕೂ ಫೋಲ್ಡಬಲ್ ಡಿಸ್‌ಪ್ಲೇಗೆ ಸ್ಕ್ರೀನ್ ಗಾರ್ಡ್‌ಗಳನ್ನು ಹಾಕುವ ಪ್ರಯತನ್ ಮಾಡಬೇಡಿ. ಯಾಕೆಂದರೆ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ಗಳಿಗೆ ಸ್ಕ್ರೀನ್‌ಗಾರ್ಡ್‌ ಹಾಕಿದರೆ ಪ್ರೊಟೆಕ್ಷನ್ ಫಿಲ್ಮ್ ಅನ್ನು ಹರಿದು ಹೋಗುವ ಸಾದ್ಯತೆಯಿರುತ್ತದೆ. ಇದೇ ಕಾರಣಕ್ಕೆ ಯಾವುದೇ ಥರ್ಡ್-ಪಾರ್ಟಿ ಸ್ಕ್ರೀನ್ ಪ್ರೊಟೆಕ್ಟರ್‌ಗಳನ್ನು ಅನ್ವಯಿಸದಂತೆ ಡ್ಯುಯಲ್‌ ಡಿಸ್‌ಪ್ಲೇ ಸ್ಮಾರ್ಟ್‌ಫೋನ್‌ ತಯಾರಕರು ಹೇಳುತ್ತಾರೆ.

ಸ್ಮಾರ್ಟ್‌ಫೋನ್‌ ಸ್ಕ್ರೀನ್‌ಗಾರ್ಡ್‌ ಬಳಸುವ ಮುನ್ನ ನೀವು ತಿಳಿದಿರಲೇಬೇಕಾದ ಅಂಶಗಳು

ಇದಲ್ಲದೆ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇಯಲ್ಲಿ ಪ್ರೈವೆಸಿಯ ಬಗ್ಗೆ ಕಾಳಜಿ ಹೊಂದಿದ್ದರೆ ಪ್ರೈವೆಸಿ ಸ್ಕ್ರೀನ್‌ ಗಾರ್ಡ್‌ ಆಯ್ಕೆ ಮಾಡೋದು ಉತ್ತಮವಾಗಿದೆ. ಇದಕ್ಕಾಗಿ ಆಂಟಿ-ಗ್ಲೇರ್ ಸ್ಕ್ರೀನ್ ಪ್ರೊಟೆಕ್ಟರ್ ಅನ್ನು ಆಯ್ಕೆಮಾಡಿ. ಇದರಲ್ಲಿ ನೀವು ಸ್ಕ್ರೀನ್‌ ಬ್ರೈಟ್‌ನೆಸ್‌ ಮತ್ತು ಕಲರ್‌ ಅನ್ನು ಹೆಚ್ಚಿನ ಮಟ್ಟದಲ್ಲಿ ಇರಬೇಕು ಎಂದು ಬಯಸಿದರೆ ಕ್ಲಿಯರ್ ಆಗಿರುವ ಸ್ಕ್ರೀನ್ ಪ್ರೊಟೆಕ್ಟರ್ ಆಯ್ಕೆ ಮಾಡಬೇಕಾಗುತ್ತದೆ.

ಇನ್ನು ನಿಮ್ಮ ಸ್ಮಾರ್ಟ್‌ಫೋನ್ ಡಿಸ್‌ಪ್ಲೇಯ ಸ್ಕ್ರೀನ್ ವರ್ಕ್ ಮಾಡುತ್ತಿಲ್ಲವಾದಾಗ ಮೊದಲು ಫಸ್ಟ್‌ ಏಡ್‌ ತರಹ, ಫೋನ್‌ ರೋಸ್ಟಾರ್ಟ್‌ ಮತ್ತು ರೀಬೂಟ್ ಮಾಡಿ ನೋಡಿ. ಒಮ್ಮೊಮ್ಮೆ ಹ್ಯಾಂಗ್ ಆಗಿಯೂ ಸ್ಕ್ರೀನ್ ವರ್ಕ್ ಮಾಡುವುದಿಲ್ಲ. ಹೀಗಾಗಿ ಪವರ್‌ ಬಟನ್‌ ಮತ್ತು ವ್ಯಾಲ್ಯೂಮ್ ಬಟನ್ ಒತ್ತಿ ರೀಬೂಟ್ ಆಯ್ಕೆಯನ್ನು ಸೆಲೆಕ್ಟ್ ಮಾಡಿರಿ. ರೀಬೂಟ್ ಮಾಡಿದಾಗ ಸ್ಕ್ರೀನ್ ಹ್ಯಾಂಗ್ ಆಗಿದ್ದರೇ ಸರಿಯಾವ ಚಾನ್ಸ್ ಇರುತ್ತೆ.

Best Mobiles in India

English summary
These things should keep in mind before buying Smartphone screen guard

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X