ಐಫೋನ್‌ 14 ಬಿಡುಗಡೆ ಮುನ್ನವೇ ಅಮೆಜಾನ್‌ನಿಂದ ಈ ಐಫೋನ್‌ಗೆ ಭರ್ಜರಿ ಡಿಸ್ಕೌಂಟ್‌!

|

ಮುಂದಿನ ತಿಂಗಳು (ಸೆಪ್ಟೆಂಬರ್) ಬಹುನಿರೀಕ್ಷಿತ ಆಪಲ್‌ ಐಫೋನ್‌ 14 ಸರಣಿ ಬಿಡುಗಡೆ ಆಗಲಿದ್ದು, ಅಧಿಕೃತ ದಿನಾಂಕ ಪ್ರಕಟವಾಗಬೇಕಿದೆ. ಆಪಲ್‌ ಪ್ರಿಯರಲ್ಲಿ ಐಫೋನ್‌ 14 ಸರಣಿಯ ಫೋನ್‌ಗಳ ಬಗ್ಗೆ ಈಗಾಗಲೇ ಸಾಕಷ್ಟು ಕುತೂಹಲ ಮನೆಮಾಡಿವೆ. ಐಫೋನ್‌ 14 ಸರಣಿ ಲಾಂಚ್‌ ಮುನ್ನವೇ ಜನಪ್ರಿಯ ದೈತ್ಯ ಇ ಕಾಮರ್ಸ್‌ ತಾಣ ಅಮೆಜಾನ್ ಐಫೋನ್‌ ಪ್ರಿಯರಿಗೆ ಗುಡ್‌ನ್ಯೂಸ್‌ ನೀಡಿದೆ.

ಡಿಸ್ಕೌಂಟ್‌

ಹೌದು, ಅಮೆಜಾನ್‌ ಇ ಕಾಮರ್ಸ್ ತಾಣವು ಐಫೋನ್‌ 13 ಮತ್ತು ಐಫೋನ್‌ 12 ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್‌ ತಿಳಿಸಿದೆ. ಐಫೋನ್‌ 13, 128 GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 70,900ರೂ. ಆಗಿದ್ದು, ಕೊಡುಗೆಯಲ್ಲಿ 69,900ರೂ.ಗಳಿಗೆ ಲಭ್ಯವಾಗಲಿದೆ. ಹಾಗೆಯೇ ಕಂಪನಿಯು 24,400ರೂ. ಗಳ ವರಗೆ ಎಕ್ಸ್‌ಚೇಂಜ್ ಕೊಡುಗೆಯನ್ನು ಘೋಷಿಸಿದೆ. ಅದೇ ರೀತಿ ಆಪಲ್‌ ಐಫೋನ್ 12 (64 GB) ಫೋನ್‌ ಸಹ 53,999ರೂ. ಗಳ ರಿಯಾಯಿತಿ ದರದಲ್ಲಿ ಸಿಗಲಿದೆ.

ರಿಯಾಯಿತಿ

ಐಫೋನ್ 12 ಫೋನ್‌ (64 GB) ಬೆಲೆಯು 65,900ರೂ. ಗಳು ಆಗಿದ್ದು, ಅಮೆಜಾನ್ 18% ವರೆಗೂ ರಿಯಾಯಿತಿ ತಿಳಿಸಿದೆ. ಇದರೊಂದಿಗೆ 24,400ರೂ. ಗಳ ವರೆಗೂ ವಿನಿಮಯ ರಿಯಾಯಿತಿ ಸಹ ಲಭ್ಯ ಮಾಡಿದೆ. ಹಾಗಾದರೆ ಆಪಲ್‌ ಐಫೋನ್‌ 13 ಮತ್ತು ಐಫೋನ್ 12 ಫೋನ್‌ಗಳ ಫೀಚರ್ಸ್‌ಗಳೆನು ಹಾಗೂ ಲೀಕ್ ಮಾಹಿತಿ ಪ್ರಕಾರ ಸದ್ಯದಲ್ಲೇ ಎಂಟ್ರಿ ಕೊಡಲಿರುವ ಐಫೋನ್‌ 14 ಫೋನಿನ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ತಿಳಿಯೋಣ.

ಐಫೋನ್ 13 ಫೋನ್‌ ಫೀಚರ್ಸ್‌

ಐಫೋನ್ 13 ಫೋನ್‌ ಫೀಚರ್ಸ್‌

ಐಫೋನ್ 13 ಫೋನ್‌ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. 1200nits ಬ್ರೈಟ್ನೆಸ್‌ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 13 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್‌ ಆಂಗಲ್ ಲೆನ್ಸ್‌ ಪಡೆದಿದೆ.

ಅತ್ಯುತ್ತಮ

ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಸಿನಿಮ್ಯಾಟಿಕ್ ಮೋಡ್ ಆಯ್ಕೆ ಪಡೆದಿದೆ. ಇನ್ನು ಈ ಫೋನ್ ಪಿಂಕ್, ರೆಡ್, ಬ್ಲ್ಯಾಕ್, ವೈಟ್ ಸೇರಿದಂತೆ ಐದು ಬಣ್ಣಗಳಲ್ಲಿ ಲಭ್ಯವಾಗಲಿದೆ. ಹಾಗೆಯೇ ಈ ಫೋನ್ ಬ್ಯಾಟರಿ ಹಿಂದಿನ ಐಫೋನ್ 12 ಗಿಂತ ಉತ್ತಮವಾಗಿದೆ.

ಐಫೋನ್ 12 ಫೋನ್‌ ಫೀಚರ್ಸ್‌

ಐಫೋನ್ 12 ಫೋನ್‌ ಫೀಚರ್ಸ್‌

ಐಫೋನ್ 12 ಫೋನ್‌ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, OLED ಡಿಸ್‌ಪ್ಲೇ ಹೊಂದಿದೆ. ಈ ಫೋನ್ A14 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 12 ಫೋನ್ ಎರಡು ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ವೈಡ್-ಆಂಗಲ್ ಸಂವೇದಕಗಳನ್ನು ಹೊಂದಿವೆ. ಮುಂಭಾಗದಲ್ಲಿ ಸೆಲ್ಫಿ ಕ್ಯಾಮೆರಾವು ಸಹ 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ನೈಟ್‌ ಮೋಡ್‌ ಆಯ್ಕೆ ಇದ್ದು ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಇದು 64GB + 4GB RAM, 128GB + 4GB RAM ಮತ್ತು 256GB + 4GB RAM ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ. ಈ ಫೋನ್‌ IP68 ಧೂಳು ಹಾಗೂ ನೀರಿನ ರೆಸಿಸ್ಟೆನ್ಸ್‌ ಪಡೆದಿದೆ.

ಆಪಲ್‌ ಐಫೋನ್‌ 14 ಸರಣಿ

ಆಪಲ್‌ ಐಫೋನ್‌ 14 ಸರಣಿ

ಆಪಲ್‌ ಸಂಸ್ಥೆಯು ಇದೇ ಸೆಪ್ಟೆಂಬರ್‌ನಲ್ಲಿ ತನ್ನ ಐಫೋನ್ 14 ಸರಣಿಯನ್ನು ಬಿಡುಗಡೆ ಮಾಡಲಿದೆ. ಈ ಸರಣಿಯು ಐಫೋನ್ 14, ಐಫೋನ್ 14 ಪ್ರೊ, ಐಫೋನ್ 14 ಪ್ರೊ ಮ್ಯಾಕ್ಸ್‌ ಮಾದರಿಗಳನ್ನು ಒಳಗೊಂಡಿರಲಿದೆ ಎಂದು ಹೇಳಲಾಗುತ್ತಿದೆ. ಅವುಗಳ ಪೈಕಿ ಐಫೋನ್ 14 ಫೋನ್ 6.1 ಇಂಚಿನ ಡಿಸ್‌ಪ್ಲೇ ಒಳಗೊಂಡಿರಲಿದೆ. ಐಫೋನ್ 14 ಪ್ರೊ ಮತ್ತು ಐಫೋನ್‌ 14 ಪ್ರೊ ಮ್ಯಾಕ್ಸ್‌ ಫೋನ್‌ಗಳು 6.7 ಇಂಚಿನ ಡಿಸ್‌ಪ್ಲೇ ಹೊಂದಿರಲಿವೆ. ಈ ಹಿಂದಿನ ಸರಣಿಗೆ ಹೋಲಿಸಿದರೆ ಐಫೋನ್‌ 14 ಸರಣಿಯ ಬೆಲೆಗಳು ಹೆಚ್ಚಿರಲಿವೆ ಎಂದು ಎಂದು ಆಪಲ್ ವಿಶ್ಲೇಷಕ ಮಿಂಗ್-ಚಿ ಕುವೊ ಹೇಳಿದ್ದಾರೆ.

Best Mobiles in India

English summary
These Two iPhone receives a price cut on Amazon ahead of iPhone 14 launch: Details here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X