ಗೂಗಲ್‌ನ ಈ ಸಂಗತಿಗಳ ಬಗ್ಗೆ ತಿಳಿದರೇ, ನೀವು ಹುಬ್ಬೇರಿಸುವುದು ಗ್ಯಾರಂಟಿ!

|

ಪ್ರಸ್ತುತ ಯಾವುದೇ ಮಾಹಿತಿ ಬೇಕಿದ್ದರೂ ಅನೇಕರಿಗೆ ತಕ್ಷಣಕ್ಕೆ ನೆನಪಿಗೆ ಬರುವುದೇ ಸರ್ಚ್ ಇಂಜಿನ್ ದೈತ್ಯ ಗೂಗಲ್. ಗೂಗಲ್ ಸರ್ಚ್‌ನಲ್ಲಿ ಬಳಕೆದಾರರು ಯಾವುದೇ ಪ್ರಶ್ನೆ ಕೇಳಿದರೂ, ಕಣ್ಣು ಪಿಳುಕಿಸುವುದರೊಳಗಾಗಿ ಅದಕ್ಕೆ ಸಂಬಂಧಿಸಿದ ಫಲಿತಾಂಶಗಳ ಪಟ್ಟಿಯನ್ನೆ ಒದಗಿಸಿ ಬಿಡುತ್ತದೆ. ಗೂಗಲ್ ಸರ್ಚ್ ಆಯ್ಕೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಅಳವಡಿಸಿದ್ದು, ಈಗ ಮಾಹಿತಿ ಹುಡುಕಾಟವನ್ನು ಮತ್ತಷ್ಟು ಸುಲಭವಾಗಿಸಿದೆ.

ವಾಯಿಸ್

ಹಾಗೆಯೇ ಈಗ ಗೂಗಲ್ ಅಸಿಸ್ಟಂಟ್ ವಾಯಿಸ್ ಸರ್ಚ್ ಸೌಲಭ್ಯವು ಬಳಕೆದಾರರನ್ನು ಸೆಳೆದಿದೆ. ಟೈಪ್ ಮಾಡದೇ ಜಸ್ಟ್‌ ವಾಯಿಸ್ ಕಮಾಂಡ್ ಮೂಲಕ ಬೇಕಾದ ಮಾಹಿತಿ ಸರ್ಚ್ ಮಾಡಬಹುದಾಗಿದೆ. ಈ ಸೌಲಭ್ಯಗಳೊಂದಿಗೆ ಗೂಗಲ್‌ ಕೆಲವು ಕ್ರೇಜಿ ಸರ್ಚ್ ವಿಧಾನಗಳನ್ನು ಹೊಂದಿದ್ದು, ಅವುಗಳ ಬಗ್ಗೆ ಗೂಗಲ್‌ ಪ್ರಿಯರು ಬಗ್ಗೆ ಒಮ್ಮೆ ತಿಳಿಯಲೇಬೇಕು.

ಕುತೂಹಲಕಾರಿ

ಟೆಕ್ ದೈತ್ಯ ಗೂಗಲ್ ಹಲವು ಅಪ್‌ಡೇಟ್ ಆವೃತ್ತಿಗಳನ್ನು ಕಂಡಿದೆ. ಪ್ರತಿ ಅಪ್‌ಡೇಟ್‌ನಲ್ಲಿಯೂ ವಿಶೇಷ ಫೀಚರ್ಸ್‌ಗಳನ್ನು ಬಳಕೆದಾರರಿಗೆ ಪರಿಚಯಿಸುತ್ತಲೆ ಬಂದಿದೆ. ಆದ್ರೆ ಕೆಲವು ಕ್ರೇಜಿ ಮತ್ತು ಕುತೂಹಲಕಾರಿ ಸರ್ಚ್ ಲುಕ್‌ನಲ್ಲಿ ಗೂಗಲ್ ಡ್ಯೂಡಲ್ ಕಾಣಿಸುತ್ತದೆ. ಹಾಗೆಯೇ ಗೂಗಲ್ ಕೆಲವು ಮಾಹಿತಿಗಳ ಸರ್ಚ್ ರೀಜಲ್ಟ್‌ನಲ್ಲಿ ಬಳಕೆದಾರರಿಗೆ ವಂಡರ್ ಅನಿಸುವಂತಹ ಚಟುವಟಿಕೆಗಳನ್ನು ಪ್ರದರ್ಶಿಸುತ್ತದೆ. ಆ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಪ್ಲೇ ಸ್ನೇಕ್- play snake

ಪ್ಲೇ ಸ್ನೇಕ್- play snake

ನೋಕಿಯಾದ ಫೀಚರ್ ಫೋನ್‌ ಜನಪ್ರಿಯ ಸ್ನೇಕ್ ಗೇಮ್ ಮಿಸ್‌ ಮಾಡಿಕೊಳ್ಳುವವರಿಗೆ ಗೂಗಲ್‌ ಗೇಮ್ ಆಡಲು ಅವಕಾಶ ಮಾಡಿದೆ. ಹೌದು, ಗೂಗಲ್‌ ಸರ್ಚ್‌ನಲ್ಲಿ play snake ಕೀ ಸರ್ಚ್ ಮಾಡಿದರೇ ಸ್ನೇಕ್ ಗೇಮ್ ನಿಮ್ಮ ಕಣ್ಣೆದುರಿಗೆ ಬರಲಿದೆ. ಸರಳವಾಗಿ ಈ ಗೇಮ್ ಆಡಬಹುದಾಗಿದೆ. ಸೆಟ್ಟಿಂಗ್ ಆಯ್ಕೆ ಸಹ ನೀಡಿದೆ.

ಫ್ಲಿಪ್‌ ಎ ಕಾಯಿನ್

ಫ್ಲಿಪ್‌ ಎ ಕಾಯಿನ್

ಗೂಗಲ್‌ ಸರ್ಚ್‌ನಲ್ಲಿ ಫ್ಲಿಪ್‌ ಎ ಕಾಯಿನ್- Flip a coin ಕೀ ವರ್ಡ್‌ ಟೈಪ್ ಮಾಡಿದರೇ, ಸರ್ಚ್ ಫಲಿತಾಂಶದಲ್ಲಿ ಅನಿಮೇಟೆಡ್ ಕಾಯಿನ್ ತಿರುಗುವುದು. ತಿರುಗಿದ ನಂತರ ಹೆಡ್‌ ಆಂಡ್ ಟೈಲ್ ತಿಳಿಸುತ್ತದೆ.

ರೋಲ್ ಎ ಡೈಸ್‌ - Roll a Dice

ರೋಲ್ ಎ ಡೈಸ್‌ - Roll a Dice

ಗೂಗಲ್‌ ಸರ್ಚ್‌ನಲ್ಲಿ ರೋಲ್ ಎ ಡೈಸ್‌ - Roll a Dice ಕೀ ವರ್ಡ್‌ ಟೈಪ್‌ ಮಾಡಿ ಸರ್ಚ್ ಮಾಡಿದರೇ ಖಂಡಿತಾ ನಿಮ್ಮ ಕಣ್ಣುಗಳ ಮುಂದೆ ಮ್ಯಾಜಿಕ್ ನಡೆಯಲಿದೆ. ಏಕೆಂದರೇ ಈ ಕೀ ವರ್ಡ್‌ ಸರ್ಚ್ ಮಾಡಿದಾಗ ಕಾಣಿಸುವ ಫಲಿತಾಂಶದಲ್ಲಿ ಡೈಸ್‌ ತಿರುಗಿ ಯಾವುದಾದರೊಂದು ನಂಬರ್‌ನಲ್ಲಿ ಕಾಣಿಸಿಕೊಳ್ಳಲಿದೆ.

IP ವಿಳಾಸ ತಿಳಿಸುತ್ತದೆ - What is my IP

IP ವಿಳಾಸ ತಿಳಿಸುತ್ತದೆ - What is my IP

ಗೂಗಲ್‌ ಸರ್ಚ್‌ನಲ್ಲಿ What is my IP ಕೀ ವರ್ಡ್‌ ಸರ್ಚ್ ಮಾಡಿದರೇ, ಕಾಣಿಸುವ ಫಲಿತಾಂಶದಲ್ಲಿ ನಿಮ್ಮ IP ವಿಳಾಸ ಲಭ್ಯವಾಗಿರುತ್ತದೆ. ಅನೇಕ ಸಂದರ್ಭಗಳಲ್ಲಿ ಈ ಆಯ್ಕೆ ಬಳಕೆದಾರರಿಗೆ ಉಪಯುಕ್ತ ಆಗಲಿದೆ.

ಸ್ಪಿನ್ನರ್ - Spinner

ಸ್ಪಿನ್ನರ್ - Spinner

ಗೂಗಲ್‌ ಸರ್ಚ್‌ನಲ್ಲಿ ಸ್ಪಿನ್ನರ್ - Spinner ಕೀ ವರ್ಡ್‌ ಟೈಪ್‌ ಮಾಡಿ ಸರ್ಚ್ ಮಾಡಿದರೇ ಸ್ಪಿನ್ನರ್ ಕಾಣಿಸುತ್ತದೆ. ಕಾಣಿಸುವ ಫಲಿತಾಂಶದಲ್ಲಿ ಸ್ಪಿನ್ನರ್ ಅನ್ನು ನೀವು ತಿರುಗಿಸಬಹುದಾಗಿದೆ. ಹಾಗೆಯೇ ಸ್ಪಿನ್ನರ್ ನಂಬರ್‌ಗಳ ಸಂಖ್ಯೆ ಹೆಚ್ಚಿಸಿಕೊಳ್ಳಬಹುದಾಗಿದೆ. ತಿರುಗಿದ ಬಳಿಕ ಒಂದಂಕಿಗೆ ಬಂದು ನಿಲ್ಲುವುದು.

ನಿಮ್ಮ ಲೊಕೇಶನ್ ಮಾಹಿತಿ ತಿಳಿಯಿರಿ

ನಿಮ್ಮ ಲೊಕೇಶನ್ ಮಾಹಿತಿ ತಿಳಿಯಿರಿ

ಗೂಗಲ್‌ ಸರ್ಚ್‌ನಲ್ಲಿ what's my location ಎಂದು ಸರ್ಚ್ ಮಾಡಿದರೇ, ನೀವಿರುವ ಸ್ಥಳದ ಮ್ಯಾಪ್ ತಿಳಿಸುತ್ತದೆ. ಕೆಲವೊಮ್ಮೆ ಹೊಸ ಸ್ಥಳಗಳಿಗೆ ಭೇಟಿ ನೀಡಿದಾಗ ಈ ರೀತಿಯ ಆಯ್ಕೆ ನೆರವಿಗೆ ಬರುತ್ತದೆ.

ಕರೆನ್ಸಿ ಕನ್ವರ್ಟ್‌ ಮಾಹಿತಿ

ಕರೆನ್ಸಿ ಕನ್ವರ್ಟ್‌ ಮಾಹಿತಿ

ಗೂಗಲ್‌ ಕರೆನ್ಸಿ ಕನ್ವರ್ಟ್‌ ಮಾಹಿತಿಯನ್ನು ತಿಳಿಸುತ್ತದೆ. ಯಾವುದೇ ದೇಶದ ಕರೆನ್ಸಿ ನಮೂದಿಸಿ ಮತ್ತು ಅದನ್ನು ಭಾರತೀಯ ರೂಪಾಯಿ ಮೊತ್ತಕ್ಕೆ ಕನ್ವರ್ಟ್‌ ಮಾಡಿ ನೋಡಬಹುದಾಗಿದೆ. ಕರೆನ್ಸಿಗಳ ಮೊತ್ತದ ಬಗ್ಗೆ ತಿಳಿಯಲು ಉಪಯುಕ್ತ ಎನಿಸಲಿದೆ.

ಫ್ಲೈಟ್‌ ಮಾಹಿತಿ ಲಭ್ಯ

ಫ್ಲೈಟ್‌ ಮಾಹಿತಿ ಲಭ್ಯ

ವಿಮಾನ ಸ್ಥಿತಿಯನ್ನು ಪರಿಶೀಲಿಸಲು ಗೂಗಲ್ ನಿಮಗೆ ಸಹಾಯ ಮಾಡಬಹುದು. ಗೂಗಲ್ ಸರ್ಚ್ ಬಾಕ್ಸ್‌ನಲ್ಲಿ ವಿಮಾನದ ಹೆಸರು ಕೋಡ್ ಅನ್ನು ನಮೂದಿಸಿ ಸರ್ಚ್ ಮಾಡಿದರೇ ಪೂರ್ಣ ಮಾಹಿತಿ ಲಭ್ಯವಾಗಲಿದೆ.

ಟಿಕ್ ಟಾಕ್ ಟೈ - tic tac toe

ಟಿಕ್ ಟಾಕ್ ಟೈ - tic tac toe

ಗೂಗಲ್‌ ಸರ್ಚ್‌ನಲ್ಲಿ tic tac toe ಕೀ ಟೈಪ್ ಮಾಡಿ ಸರ್ಚ್ ಮಾಡಿದರೇ, ವಿಶೇಷ ಗೇಮ್‌ ಒಂದು ಕಾಣಿಸುತ್ತದೆ. ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವಾಗ ಬೇಸರವಾದಾಗ ಗೇಮ್‌ ಆಡಯಿಸುವವರು ಈ ಗೇಮ್ ಪ್ಲೇ ಮಾಡಬಹುದು.

Best Mobiles in India

English summary
These Very Amazing Google Search Tricks You Should Try In 2021.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X