ಒಂದು ನಿಮಿಷದಲ್ಲಿ ಇಂಟರ್‌ನೆಟ್‌ನಲ್ಲಿ ಏನೆಲ್ಲಾ ಆಗುತ್ತೆ ಗೊತ್ತಾ..?

By Gizbot Bureau
|

ಆಹಾರ, ಬಟ್ಟೆ, ವಸತಿ ಸೇರಿ ಸದ್ಯ ಆಧುನಿಕ ಮಾನವನ ಮತ್ತೊಂದು ಮೂಲಭೂತ ಅಂಶದಂತೆ ಸೃಷ್ಟಿಯಾಗಿರುವುದು ಇಂಟರ್‌ನೆಟ್‌. ಹೌದು, ಇಂಟರ್‌ನೆಟ್‌ ಇಲ್ಲದ ಜಗತ್ತನ್ನು ಊಹಿಸಿಕೊಳ್ಳಲು ಸಾಧ್ಯವಾಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ವರ್ಷದ 365 ದಿನವೂ ಅಂತರ್ಜಾಲ ಕಾರ್ಯನಿರ್ವಹಿಸುತ್ತಲೆ ಇರುತ್ತದೆ. ಎಲ್ಲದಕ್ಕೂ ಇಂಟರ್‌ನೆಟ್‌ ಮೇಲೆ ಅವಲಂಬಿತರಾಗಿದ್ದೇವೆ. ಜಗತ್ತನ್ನೇ ತನ್ನ ಮುಷ್ಠಿಯಲ್ಲಿ ಇಟ್ಟುಕೊಂಡಿರುವ ಇಂಟರ್‌ನೆಟ್‌ನಲ್ಲಿ ನಿಮಿಷ ಅಂದ್ರೆ 60 ಸೆಕೆಂಡ್‌ಗಳಲ್ಲಿ ಏನೆಲ್ಲಾ ಆಗುತ್ತೆ..? ಎಂಬುದೇ ಕುತೂಹಲ.

ಗೂಗಲ್‌ನಂತಹ ಪ್ರಮುಖ ಇಂಟರ್‌ನೆಟ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಮಿಷಕ್ಕೆ ಏನೆಲ್ಲಾ ಆಗುತ್ತೆ ಎಂಬುದನ್ನು ನೋಡಿದ್ರೆ, ನಿಮಗೆ ಖಂಡಿತ ಅಚ್ಚರಿ ಕಾದಿರುತ್ತೆ. ಅದೇನು ಅಂತೀರಾ ಮುಂದೆ ನೋಡಿ.

38 ಲಕ್ಷ ಹುಡುಕಾಟ

38 ಲಕ್ಷ ಹುಡುಕಾಟ

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ನಲ್ಲಿ ನಿಮಿಷಕ್ಕೆ ಬರೋಬ್ಬರಿ 38,00,000 ಮಾಹಿತಿ ಶೋಧ ದಾಖಲಾಗುತ್ತದೆ. ಅಂದ್ರೆ ಪ್ರತಿ ಸೆಕೆಂಡ್‌ಗೆ 63,333 ಗ್ರಾಹಕರು ಮಾಹಿತಿಯನ್ನು ಹುಡುಕುತ್ತಾರೆ ಎಂಬುದು ಗಮನಾರ್ಹ.

1 ಲಕ್ಷ ಲಾಗಿನ್‌

1 ಲಕ್ಷ ಲಾಗಿನ್‌

ಸಾಮಾಜಿಕ ಜಾಲತಾಣದಲ್ಲಿ ಪ್ರಭುತ್ವ ಸಾಧಿಸಿದ ಫೇಸ್‌ಬುಕ್‌ನಲ್ಲಿ ನಿಮಿಷಕ್ಕೆ 1,00,000 ಮಂದಿ ಲಾಗಿನ್ ಆಗುತ್ತಾರೆ ಎಂದರೆ ನಂಬಲೇಬೇಕು.

1 ಕೋಟಿ 81 ಲಕ್ಷ ಮೆಸೇಜ್‌

1 ಕೋಟಿ 81 ಲಕ್ಷ ಮೆಸೇಜ್‌

ಇಂಟರ್‌ನೆಟ್ ಜಗತ್ತಿನಲ್ಲಿ ಪ್ರತಿ ನಿಮಿಷಕ್ಕೆ 1,81,00,000 ಸಾಂಪ್ರದಾಯಿಕ ಟೆಕ್ಸ್ಟ್ ಮೆಸೇಜ್‌ಗಳು ರವಾನೆಯಾಗುತ್ತವೆ.

ಯುಟ್ಯೂಬ್‌ನ ಹೆಚ್ಚು ಬಳಕೆ

ಯುಟ್ಯೂಬ್‌ನ ಹೆಚ್ಚು ಬಳಕೆ

ಅಂತರ್ಜಾಲ ಪ್ರಪಂಚದಲ್ಲಿ ಯುಟ್ಯೂಬ್‌ಗೆ ಬಹಳ ಅಂದ್ರೆ ಬಹಳ ಬೇಡಿಕೆಯಿದೆ. ಒಂದು ನಿಮಿಷದಲ್ಲಿ 4,05,00,000 ವಿಡಿಯೋಗಳನ್ನು ಯುಟ್ಯೂಬ್‌ನಲ್ಲಿ ವೀಕ್ಷಿಸುತ್ತಾರೆ.

ಆಪ್‌ ಡೌನ್‌ಲೋಡ್‌ ಮಳೆ

ಆಪ್‌ ಡೌನ್‌ಲೋಡ್‌ ಮಳೆ

ಆಪಲ್‌ ಆಪ್‌ ಸ್ಟೋರ್ ಮತ್ತು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಪ್ರತಿ ನಿಮಿಷಕ್ಕೆ ಬಳಕೆದಾರರು 3,90,030 ಆಪ್‌ಗಳನ್ನು ಡೌನಲೋಡ್ ಮಾಡುತ್ತಾರೆ.

3 ಲಕ್ಷಕ್ಕೂ ಅಧಿಕ ಪೋಸ್ಟ್

3 ಲಕ್ಷಕ್ಕೂ ಅಧಿಕ ಪೋಸ್ಟ್

ಇನ್ನು, ಇನ್ಸ್ಟಾಗ್ರಾಂ ನೋಡಿದ್ರೆ ಒಂದು ನಿಮಿಷಕ್ಕೆ 3,47,222 ಪೋಸ್ಟ್‌ಗಳು ಶೇರ್‌ ಆಗುತ್ತವೆ.

87 ಸಾವಿರ ಟ್ವೀಟ್

87 ಸಾವಿರ ಟ್ವೀಟ್

ಪ್ರತಿ ನಿಮಿಷಕ್ಕೆ ಟ್ವಿಟ್ಟರ್‌ನಲ್ಲಿ 87,500 ಜನ ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ.

ಆನ್‌ಲೈನ್‌ನಲ್ಲಿಯೇ ಹೆಚ್ಚು ಹಣ ವಿನಿಯೋಗ

ಆನ್‌ಲೈನ್‌ನಲ್ಲಿಯೇ ಹೆಚ್ಚು ಹಣ ವಿನಿಯೋಗ

ಪ್ರತಿ ನಿಮಿಷಕ್ಕೆ ಆನ್‌ಲೈನ್‌ನಲ್ಲಿ 9,96,956 ಮಿಲಿಯನ್‌ ಡಾಲರ್‌ ಹಣವನ್ನು ಜನ ಖರ್ಚು ಮಾಡುತ್ತಾರೆ.

2 ಕೋಟಿಗೂ ಹೆಚ್ಚು ಸ್ನಾಪ್

2 ಕೋಟಿಗೂ ಹೆಚ್ಚು ಸ್ನಾಪ್

ಪ್ರತಿ ನಿಮಿಷಕ್ಕೆ ಸ್ನಾಪ್‌ಚಾಟ್‌ನಲ್ಲಿ 2,04,00,000 ಸ್ನಾಪ್‌ಗಳು ಸೃಷ್ಟಿಯಾಗುತ್ತವೆ.

41 ಕೋಟಿ ಮಿಲಿಯನ್ ಗೂ ಹೆಚ್ಚು ಮೆಸೇಜ್

41 ಕೋಟಿ ಮಿಲಿಯನ್ ಗೂ ಹೆಚ್ಚು ಮೆಸೇಜ್

ಒಂದು ನಿಮಿಷಕ್ಕೆ ವಾಟ್ಸ್‌ಆಪ್ ಮತ್ತು ಫೇಸ್‌ಬುಕ್ ಮೆಸೇಂಜರ್‌ನಲ್ಲಿ 41,06,00,000 ಮಿಲಿಯನ್ ಮೆಸೇಜ್‌ಗಳು ರವಾನೆಯಾಗುತ್ತವೆ ಎಂದರೆ ನಂಬಲೇಬೇಕು.

18 ಕೋಟಿಗೂ ಹೆಚ್ಚು ಇಮೇಲ್

18 ಕೋಟಿಗೂ ಹೆಚ್ಚು ಇಮೇಲ್

ಇನ್ನು, ಇಮೇಲ್ ಗಮನಿಸುವುದಾದ್ರೆ ಒಂದು ನಿಮಿಷಕ್ಕೆ 18,80,00,000 ಇಮೇಲ್‌ಗಳು ರವಾನೆಯಾಗುತ್ತವೆ.

ಟಿಂಡರ್‌ನಲ್ಲೂ ಮುಂದು

ಟಿಂಡರ್‌ನಲ್ಲೂ ಮುಂದು

ಪ್ರಸಿದ್ಧ ಡೇಟಿಂಗ್ ಸೈಟ್ ಟಿಂಡರ್‌ ಆಪ್‌ನ್ನು ಗಮನಿಸಿದ್ರೆ, ಇಲ್ಲೂ ಕೂಡ ಜನ ಮುಂದಿದ್ದಾರೆ. ಹೌದು ಪ್ರತಿ ನಿಮಿಷಕ್ಕೆ 14,00,000 ಸ್ವೈಪ್‌ಗಳನ್ನು ಜನ ಮಾಡುತ್ತಾರೆ.

Best Mobiles in India

Read more about:
English summary
Things Happen On Internet In Just 60 Seconds

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X