ಅಮೆರಿಕಗೆ ಹೋಗ್ತಿರಾ..? ಹಾಗಿದ್ರೆ ಆನ್‌ಲೈನ್‌ನಲ್ಲಿ ಎಚ್ಚರವಿರಲಿ..!

By Gizbot Bureau
|

ನೀವು ಅಮೆರಿಕ ಅಂದ್ರೆ ಯುಎಸ್‌ಗೆ ಹೋಗಲು ಪ್ಲಾನ್‌ ಹಾಕಿದ್ದಿರಾ..? ಆಗಾದ್ರೆ ಇಲ್ಲಿ ನಾವೇಳೋ ಮಾಹಿತಿ ನಿಮಗೆ ಉಪಯುಕ್ತ ಆಗೇ ಆಗುತ್ತದೆ. ಯುಎಸ್‌ಗೆ ತೆರಳಬೇಕೆಂದರೆ ಒಂದಿಷ್ಟು ನಿಯಮಗಳಿದ್ದು, ಸಾಮಾಜಿಕ ಜಾಲತಾಣಗಳ ಬಳಕೆ ಬಗ್ಗೆಯೂ ಅಮೆರಿಕ ಬಹಳ ಕಟ್ಟು ನಿಟ್ಟಾಗಿದೆ. ಹೌದು, ಅಮೆರಿಕಕ್ಕೆ ತೆರಳುವ ಪ್ರವಾಸಿಗರು, ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಸೇರಿ ವೀಸಾಗೆ ಅರ್ಜಿ ಸಲ್ಲಿಸುವವವರು, ಕಳೆದ ಐದು ವರ್ಷಗಳಿಂದ ಅವರು ಬಳಸುತ್ತಿರುವ ಸಾಮಾಜಿಕ ಮಾಧ್ಯಮ ಖಾತೆಗಳ ವಿವರಗಳನ್ನು ನೀಡಬೇಕಾಗಿರುವುದು ಕಡ್ಡಾಯವಾಗಿದೆ.

ಅಮೆರಿಕಗೆ ಹೋಗ್ತಿರಾ..? ಹಾಗಿದ್ರೆ ಆನ್‌ಲೈನ್‌ನಲ್ಲಿ ಎಚ್ಚರವಿರಲಿ..!

D-160 ಮತ್ತು D-260 ಇ-ಫಾರ್ಮ್‌ಗಳನ್ನು ವೀಸಾ ಅರ್ಜಿದಾರರು ಭರ್ತಿ ಮಾಡಬೇಕಾಗಿದೆ. ಇಲ್ಲಿ ಅರ್ಜಿ ಸಲ್ಲಿಸುವ ದಿನಾಂಕದ ಹಿಂದಿನ 5 ವರ್ಷಗಳಲ್ಲಿ ಬಳಸಿದ ಸಾಮಾಜಿಕ ಜಾಲತಾಣಗಳ ಮಾಹಿತಿಯನ್ನು ನೀಡಬೇಕಾಗಿರುತ್ತದೆ. ಈ ಡ್ರಾಪ್-ಡೌನ್ ಮೆನುವಿನಲ್ಲಿ ಫೇಸ್‌ಬುಕ್, ಫ್ಲಿಕರ್, Google+, ಟ್ವಿಟರ್, ಇನ್‌ಸ್ಟಾಗ್ರಾಮ್, ಲಿಂಕ್ಡ್‌ಇನ್ ಮತ್ತು ಯೂಟ್ಯೂಬ್ ಒಳಗೊಂಡಿವೆ.

ಇಲ್ಲಿಯವರೆಗೆ, ಕೇವಲ ಆಯ್ದ ವೀಸಾ ಅರ್ಜಿದಾರರಿಗೆ ಮಾತ್ರ ಅವರ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳ ವಿವರಗಳನ್ನು ಒದಗಿಸಲು ಕೇಳಲಾಗುತ್ತಿತು. ಆದರೆ, ಈಗ ಪರಿಷ್ಕೃತ ಯುಎಸ್ ವೀಸಾ ಫಾರ್ಮ್‌ಗಳನ್ನು ನೀವು ಭರ್ತಿ ಮಾಡುವುದರಿಂದ ಫೇಸ್‌ಬುಕ್ ಮತ್ತು ಟ್ವಿಟರ್ ಸೇರಿ ನಿಮ್ಮ ಸಾಮಾಜಿಕ ಮಾಧ್ಯಮ ನಿರ್ವಹಣೆಯ ಬಗ್ಗೆ ಹೆಚ್ಚು ಜಾಗರೂಕರಾಗಿರುವುದು ಅವಶ್ಯಕ. ಹಾಗಾದ್ರೆ, ನೀವು ಯುಎಸ್‌ಗೆ ಪ್ರಯಾಣ ಬೆಳೆಸಿದರೆ ಈ ಕೆಳಗಿನ 6 ಸಂಗತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಮಾಡಲೇಬಾರದು.. ಅವ್ಯಾವು ಅಂತೀರಾ..? ಮುಂದೆ ನೋಡಿ..

ರಾಜಕೀಯದಿಂದ ದೂರವಿರಿ

ರಾಜಕೀಯದಿಂದ ದೂರವಿರಿ

ನೀವು ಯುಎಸ್‌ನಲ್ಲಿದ್ದಾಗ ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ವಿಚಾರಗಳಿಂದ ದೂರವಿರಿ. ರಾಜಕೀಯಕ್ಕೆ ಸಂಬಂಧಿಸಿದ ಪೋಸ್ಟ್‌, ರೀಟ್ವೀಟ್, ಮೆಮ್ಸ್‌ಗಳನ್ನು ನೀವು ಪೋಸ್ಟ್‌ ಮಾಡಲೇಬಾರದು. ಅಮೆರಿಕ ವಿರೋಧಿ ರಾಜಕೀಯ ವಿಷಯಗಳನ್ನು ಮಾತನಾಡಲೇಬೇಡಿ.

ಹಿಂಸೆ ಬೇಡವೇ ಬೇಡ

ಹಿಂಸೆ ಬೇಡವೇ ಬೇಡ

ನೀವೇನಾದ್ರೂ ಹಿಂಸೆಯನ್ನು ಪ್ರಚೋದಿಸಿ ಅಥವಾ ಘರ್ಷಣೆಗೆ ಕುಮ್ಮಕ್ಕು ನೀಡುವ ವಿಷಯಗಳನ್ನು ನಿಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರೆ ನಿಮಗೆ ಯುಎಸ್‌ ಸಿಗುವುದು ಬಲು ಕಷ್ಟವೆಂದರೇ ಕಷ್ಟ. ಆದ್ದರಿಂದ ಯಾವುದೇ ಹಿಂಸಾತ್ಮಕ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಬೇಡಿ.

ಪಾರ್ಟಿ ಫೋಟೋಗಳು ಬೇಡ

ಪಾರ್ಟಿ ಫೋಟೋಗಳು ಬೇಡ

ನೀವು ನಿಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಪಾರ್ಟಿ ಫೋಟೋಗಳನ್ನು ಹಾಕುವುದು ಹೆಚ್ಚು ಸಮಂಜಸವಲ್ಲ. ಮದ್ಯ, ಮಾದಕ ದ್ರವ್ಯ, ಧೂಮಪಾನ ಮಾಡಿರುವ ಫೋಟೋಗಲಿದ್ದರೆ ನಿಮ್ಮ ಕನಸಿನ ವಿಶ್ವವಿದ್ಯಾಲಯ ಅಥವಾ ಕಂಪನಿಯಲ್ಲಿ ಸ್ಥಾನ ಸಿಗೋದು ಕಷ್ಟವಾಗುತ್ತದೆ.

ಯುಎಸ್‌ನಲ್ಲಿ ಉಳಿಯುತ್ತೇವೆ ಎನ್ನಬೇಡಿ

ಯುಎಸ್‌ನಲ್ಲಿ ಉಳಿಯುತ್ತೇವೆ ಎನ್ನಬೇಡಿ

ವಿದ್ಯಾಭ್ಯಾಸ ಮುಗಿದ ನಂತರ ವಿದೇಶಿ ವಿದ್ಯಾರ್ಥಿಗಳು ಅಮೆರಿಕದಲ್ಲಿಯೇ ಉಳಿದುಕೊಳ್ಳುವುದನ್ನು ಅಮೆರಿಕ ಸರ್ಕಾರ ಹೆಚ್ಚು ನಿರ್ಬಂಧಿಸುತ್ತದೆ. ಆದ್ದರಿಂದ, ಯಾವುದೇ ಕಾರಣಕ್ಕು ಯುಎಸ್‌ನಲ್ಲಿ ಉಳಿಯುತ್ತೇವೆ ಎಂದು ಪೋಸ್ಟ್‌ ಹಾಕಬೇಡಿ.

ಸಿಟ್ಟು ಮತ್ತು ಅಶ್ಲೀಲ ಅಂಶಗಳಿಂದ ದೂರವಿರಿ

ಸಿಟ್ಟು ಮತ್ತು ಅಶ್ಲೀಲ ಅಂಶಗಳಿಂದ ದೂರವಿರಿ

ನೀವು ಸಾಮಾಜಿಕ ಜಾಲತಾಣಗಳಲ್ಲಿ ಸಿಟ್ಟು ಮತ್ತು ಅಶ್ಲೀಲ ಅಂಶಗಳಿಂದ ದೂರವಿರಿ. ಈ ಅಂಶಗಳಿಗೆ ಸಂಬಂಧಿಸಿದಂತೆ ಯಾವುದೇ ಪೋಸ್ಟ್‌ಗಳನ್ನು ಮಾಡದಿರುವುದು ಒಳಿತು. ಏಕೆಂದರೆ, ಅಮೆರಿಕ ವಲಸೆ ಪ್ರಾಧಿಕಾರಗಳು ಇಂತಹ ಪೋಸ್ಟ್‌ಗಳನ್ನು ಸಹಿಸಿಕೊಳ್ಳುವುದಿಲ್ಲ. ಅದಕ್ಕಾಗಿಯೇ ಉತ್ತಮ ಪೋಸ್ಟ್‌ಗಳನ್ನು ಮಾಡಿ ಉತ್ತಮ ವ್ಯಕ್ತಿ ಎಂದು ಕಾಣಿಸಿಕೊಳ್ಳುವುದು ಸೂಕ್ತ.

ಪೋಸ್ಟ್‌ಗಳನ್ನು ಡಿಲೀಟ್‌ ಮಾಡಬೇಡಿ

ಪೋಸ್ಟ್‌ಗಳನ್ನು ಡಿಲೀಟ್‌ ಮಾಡಬೇಡಿ

ನೀವು ತಪ್ಪು ಮಾಡಿದ ಪೋಸ್ಟ್‌ಗಳನ್ನು ಡಿಲೀಟ್ ಮಾಡುವುದು ಮತ್ತು ನಿಮ್ಮ ಸಾಮಾಜಿಕ ಜಾಲತಾಣದ ಹ್ಯಾಂಡಲ್‌ನ್ನು ಹೆಚ್ಚು ಖಾಸಗಿಯಾಗಿ ಹೊಂದಿಸಿದರೆ ನಿಮ್ಮ ಅಕೌಂಟ್‌ನ್ನು ಹೆಚ್ಚು ಅನುಮಾನದಿಂದ ನೋಡುವಂತಾಗುತ್ತದೆ. ಆದ್ದರಿಂದ ಈ ಅಂಶದಿಂದ ದೂರವಿದ್ದಷ್ಟು ನಿಮಗೆ ಅಮೆರಿಕದ ದಾರಿ ಸುಗಮ.

Best Mobiles in India

Read more about:
English summary
Things That You Should Never Do On Facebook Or Twitter Prior To US Travel

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X